Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಏರ್ಪೋಡ್ ನುಂಗಿಬಿಟ್ಟ ವ್ಯಕ್ತಿ ಮಾಡಿದ್ದೇನು ಗೊತ್ತಾ? ಕೇಳಿದರೆ ದಂಗಾಗುವಿರಿ!!
ಕೆಲವೊಂದು ಸಲ ಆಕಸ್ಮಿಕವಾಗಿ ಮನೆಯ ಸಾಕು ಪ್ರಾಣಿಗಳು ನಮಗೆ ಬೇಕಾಗಿರುವಂತಹ ಬಂಗಾರದ ಸರವೋ ಅಥವಾ ಮೊಬೈಲ್ ನ್ನು ತಪ್ಪಿ ನುಂಗಿ ಬಿಟ್ಟರೆ ಆಗ ನಾವು ಏನು ಮಾಡುತ್ತೇವೆ? ಮರುದಿನ ಅವುಗಳು ಮಲ ವಿಸರ್ಜನೆ ಮಾಡುವ ತನಕ ಕಾಯುತ್ತೇವೆ. ಅತೀ ಅಗತ್ಯವೆಂದಿದ್ದರೆ ಮಾತ್ರ ನಾವು ಕಾಯುತ್ತೇವೆ. ಇಲ್ಲವಾದಲ್ಲಿ ಅದರ ಕಡೆ ನಾವು ಗಮನವನ್ನೇ ಹರಿಸಲ್ಲ.

ಆದರೆ ಇಲ್ಲೊಬ್ಬ ವ್ಯಕ್ತಿ ಆಕಸ್ಮಿಕವಾಗಿ ಏರ್ ಪಾಡ್ ನ್ನು ನುಂಗಿಬಿಟ್ಟಿದ್ದಾನೆ ಮತ್ತು ಮಲದಲ್ಲಿ ಅದು ಹಾಗೆ ಬಂದಿದೆ. ಅದನ್ನು ಎತ್ತಿ, ಶುಚಿಗೊಳಿಸಿದ ಬಳಿಕ ಮತ್ತೆ ಬಳಸಲು ಆರಂಭಿಸಿದ್ದಾನೆ. ಇದು ತುಂಬಾ ಛೀ ಎನ್ನುವಂತಹ ವಿಷಯ. ಆದರೆ ಬಳಸುವಾತ ಆತ ನಮಗೇನು? ನಾವು ಈ ಬಗ್ಗೆ ಮುಂದಕ್ಕೆ ಓದುವ...

ಆತ ಆಕಸ್ಮಿಕವಾಗಿ ಇದನ್ನು ನುಂಗಿಬಿಟ್ಟ
ಕ್ಸು ಎಂದು ಹೆಸರಿನ ವ್ಯಕ್ತಿಯು ಒಂದು ರಾತ್ರಿ ಮಲಗಿದ್ದ ವೇಳೆ ಆಕಸ್ಮಿಕವಾಗಿ ಏರ್ ಪಾಡ್ ನ್ನು ನುಂಗಿಬಿಟ್ಟ. ಈ ಘಟನೆಯು ತೈವಾನ್ ನ ಕೊಹಸಿಯುಂಗ್ ನಗರದಲ್ಲಿ ನಡೆದಿದೆ.

ಆತನಿಗೆ ಬೆಳಗ್ಗೆ ಎದ್ದಾಗ ಏರ್ ಪಾಡ್ ಕಾಣಸಲಿಲ್ಲ
ಮರುದಿನ ಆತ ಬೆಳಗ್ಗೆ ಎದ್ದ ಬಳಿಕ ಏರ್ ಪಾಡ್ ನ್ನು ಹುಡುಕಾಡಿದ. ಆದರೆ ಅದು ಆತನಿಗೆ ಸಿಗಲೇ ಇಲ್ಲ. ಆತನಿಗೆ ಏರ್ ಪಾಡ್ ಸಿಗದೇ ಇದ್ದಾಗ ಅದನ್ನು ಫೈಂಡ್ ಮೈ ಐಫೋನ್ ಆ್ಯಪ್ ಬಳಸಿಕೊಂಡು ಹುಡುಕಲು ನಿರ್ಧಾರ ಮಾಡಿದ ಮತ್ತು ಆತನಿಗೆ ಅದರ ಸದ್ದು ಕೇಳಿಸಿತು. ಆದರೆ ಆ ಸದ್ದು ಎಲ್ಲಿಂದ ಬರುತ್ತಿದೆ ಎಂದು ತಿಳಿಯಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ತುಂಬಾ ತಮಾಷೆಯ ವಿಚಾರ.

ನಿದ್ರಿಸುವ ವೇಳೆ ಏರ್ ಪಾಡ್ ನುಂಗಿದ್ದೇನೆ ಎಂದು ಆತನಿಗೆ ಮನವರಿಕೆ ಆಯಿತು
ಆತ ಬರುತ್ತಿರುವ ಸದ್ದನ್ನು ತುಂಬಾ ಎಚ್ಚರಿಕೆಯಿಂದ ಕೇಳಿದಾಗ ಅದು ತನ್ನ ದೇಹದ ಒಳಗಿನಿಂದಲೇ ಬರುತ್ತಿದೆ ಎಂದು ಆತನಿಗೆ ತಿಳಿಯಿತು. ನಿದ್ರಿಸುವ ವೇಳೆ ಏರ್ ಪಾಡ್ ನ್ನು ನುಂಗಿರುವುದು ಆತನಿಗೆ ಮನವರಿಕೆ ಆಯಿತು. ಒಂದು ಕ್ಷಣ ಆತ ದಂಗಾಗಿ ಹೋದ.

ಆತನಿಗೆ ಯಾವುದೇ ಸಮಸ್ಯೆಯಾಗಲಿಲ್ಲ
ಏರ್ ಪಾಡ್ ನ್ನು ನುಂಗಿದ ಪರಿಣಾಮ ಕ್ಸುಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಆತನಿಗೆ ಚಿಂತೆಯಾಗಿತ್ತು ಎಂದು ಮಾಧ್ಯಮಗಳಿಗೆ ಹೇಳಿದ್ದಾನೆ. ಆತ ವೈದ್ಯರ ಬಳಿಗೆ ತೆರಳಿದ ಮತ್ತು ವೈದ್ಯರು ಎಕ್ಸ್ ರೇ ಮಾಡಿದರು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಏರ್ ಪಾಡ್ ಇದೆ ಎಂದು ಅವರು ಹೇಳಿದರು.

ವೈದ್ಯರು ಕೆಲವು ವಿರೇಚಕ ಬರೆದುಕೊಟ್ಟರು
ವೈದ್ಯರು ಕೆಲವು ವಿರೇಚಕ ಬರೆದುಕೊಟ್ಟರು ಮತ್ತು ಮಲ ವಿಸರ್ಜನೆ ವೇಳೆ ಗಮನಹರಿಸುವಂತೆ ಅವರು ಸೂಚಿಸಿದರು. ಮರುದಿನ ಮಲವಿಸರ್ಜನೆ ಮಾಡುತ್ತಿರುವ ವೇಳೆ ಏರ್ ಪಾಡ್ ಹೊರಬಂದಿದೆ. ವಿಚಿತ್ರವೆಂದರೆ ಆತ ಅದನ್ನು ಬಿಸಾಡದೆ, ಶುಚಿಗೊಳಿಸಿ, ಬಳಸಲು ಆರಂಭಿಸಿದ್ದಾನೆ.



Click it and Unblock the Notifications