Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 10 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಎಟಿಎಂ ಒಳಗಡೆ, ಮಹಿಳೆಯ ಎದುರು ಜನನೇಂದ್ರಿಯ ಹೊರತೆಗೆದ ವ್ಯಕ್ತಿ!
ಕೆಲವೊಮ್ಮೆ ವಿಕೃತ ಕಾಮುಕರು ನಡೆಸುವಂತಹ ಕೃತ್ಯವು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡುವುದು. ಯಾಕೆಂದರೆ ಕೆಲವು ಪುರುಷರಿಂದಾಗಿ ಇಡೀ ಪುರುಷ ಸಮಾಜವನ್ನೇ ದೂಷಿಸುವಂತೆ ಮಾಡಿದೆ. ಮಹಿಳೆಯರು ರಾತ್ರಿ ವೇಳೆ ಅಥವಾ ಒಬ್ಬಂಟಿಯಾಗಿ ಇರುವ ವೇಳೆ ಕೆಲವು ಮಂದಿ ಅವರಿಗೆ ತುಂಬಾ ಲೈಂಗಿಕ ಕಿರುಕುಳ ನೀಡುವರು.
ಇಂದಿನ ಮುಂದುವರಿದಿರುವ ಸಮಾಜದಲ್ಲೂ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತದೆ. ಮುಂಬಯಿಯಲ್ಲಿ ಮಹಿಳೆಯೊಬ್ಬರು ಎಟಿಎಂನಲ್ಲಿ ಹಣ ತೆಗೆಯಲು ಹೋದ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಆಕೆಯ ಮೈಮುಟ್ಟಿ ತುಂಬಾ ಅಶ್ಲೀಲವಾಗಿ ವರ್ತಿಸಿರುವುದು ಮಾತ್ರವಲ್ಲದೆ, ತನ್ನ ಜನನಾಂಗವನ್ನು ಹೊರಗೆ ತೆಗೆದಿದ್ದಾನೆ. ಇದರ ಬಗ್ಗೆ ನೀವು ಮತ್ತಷ್ಟು ಓದಿಕೊಳ್ಳಿ.

ಅಂದು ಆಕೆಯ ಹುಟ್ಟುಹಬ್ಬ
ಶಿಬಾನಿ ಎನ್ನುವ ಯುವತಿ ಮುಂಜಾನೆ 3 ಗಂಟೆ ವೇಳೆಗೆ ಎಟಿಎಂ ಬಳಿಕ ಹಣ ತೆಗೆಯಲು ರಿಕ್ಷಾ ನಿಲ್ಲಿಸಿದಳು. ರಿಕ್ಷಾದವನಿಗೆ ಹಣ ನೀಡಲು ಆಕೆಗೆ ನಗದು ಬೇಕಿತ್ತು. ಅಂದು ಆಕೆಯ ಹುಟ್ಟುಹಬ್ಬ ಮತ್ತು ಈ ದಿನದಂದೇ ಇಂತಹ ಘಟನೆಯು ನಡೆದಿರುವುದು ಆಕೆಗೆ ತುಂಬಾ ಭೀತಿ ಮೂಡಿಸಿದೆ.

ಆ ವ್ಯಕ್ತಿ ನೆರವು ನೀಡಲು ಮುಂದೆ ಬಂದ
ಆಕೆ ಎಟಿಎಂ ಒಳಗೆ ಹಣ ತೆಗೆಯಲು ಪ್ರಯತ್ನಿಸುತ್ತಿದ್ದ ವೇಳೆ ಸಂದೀಪ್ ಖುಂಭರ್ಕಾರ್ ಎಂಬಾತ ಎಟಿಎಂ ಒಳಗೆ ನುಗ್ಗಿದ ಮತ್ತು ರಿಕ್ಷಾದವನಿಗೆ ಹಣ ನೀಡಲು ನೆರವಾಗಬೇಕೇ ಎಂದು ಕೇಳಿದ.
Most Read: ಇಂತಹ ಕನಸುಗಳು ಬೀಳುತ್ತಿದ್ದರೆ ನೀವು ಆತಂಕಕ್ಕೆ ಒಳಗಾಗಿರುವಿರಿ ಎಂದರ್ಥ
|
ಆಕೆಯನ್ನು ತುಂಬಾ ಅಶ್ಲೀಲವಾಗಿ ಸ್ಪರ್ಶಿಸಿದ
ಆರೋಪಿತ ಆಕೆಯ ಹತ್ತಿರಕ್ಕೆ ಬಂದ ಮತ್ತು ಆಕೆಯ ಭುಜ ಮತ್ತು ತೊಡೆಗಳನ್ನು ಮುಟ್ಟಿದ. ನೆರವು ಬೇಕೇ ಎಂದು ಮತ್ತೊಮ್ಮೆ ಕೇಳಿದ. ಆಕೆ ಎಟಿಎಂನಲ್ಲಿ ಹಣ ತೆಗೆಯಲು ಪ್ರಯತ್ನಿಸುತ್ತಿದ್ದ ವೇಳೆ ಆತ ಎಟಿಎಂ ಹೊರಗೆ ಆಕೆಯನ್ನು ಕರೆದು, ತನ್ನ ಶಿಶ್ನ ನೋಡುವಂತೆ ತಿಳಿಸಿದೆ. ಆಕೆ ಈ ಎಲ್ಲಾ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಳು.
|
ಪೊಲೀಸರು ಕೆಲವೇ ನಿಮಿಷಗಳಲ್ಲಿ ಆ ವ್ಯಕ್ತಿಯನ್ನು ಬಂಧಿಸಿದರು
ಆ ಪ್ರದೇಶದಲ್ಲಿ ಪೊಲೀಸ್ ವಾಹನವಿದ್ದ ಕಾರಣದಿಂದಾಗಿ ಕೆಲವೇ ನಿಮಿಷದಲ್ಲಿ ಆತನನ್ನು ಬಂಧಿಸಲಾಯಿತು. ಘಟನೆ ವೇಳೆ ತಾನು ಕುಡಿದಿದ್ದೆ ಮತ್ತು ಇದಕ್ಕೆ ತಾನು ಕ್ಷಮೆ ಕೇಳುತ್ತೇನೆ ಎಂದು ಆತ ಹೇಳಿದ್ದಾನೆ. ಆದರೆ ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಇಂತಹ ಕೃತ್ಯಗಳಿಗೆ ಮದ್ಯಪಾನ ಮಾಡಿರುವುದು ಕ್ಷಮೆಯೇ? ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.