For Quick Alerts
ALLOW NOTIFICATIONS  
For Daily Alerts

ಕಲ್ಲು, ಮುಚ್ಚಳ, ನಾಣ್ಯ ನುಂಗಿ ತನ್ನ ಆತಂಕ ನಿವಾರಿಸಿಕೊಳ್ಳುತಿದ್ದ ವ್ಯಕ್ತಿ!

|

ನಾವು ನಮ್ಮ ಸುತ್ತಮುತ್ತಲು ಚಿತ್ರವಿಚಿತ್ರವಾಗಿರುವ ಜನರನ್ನು ಕಾಣುತ್ತೇವೆ. ಇಂತಹ ವ್ಯಕ್ತಿಗಳು ಮಾನಸಿಕವಾಗಿ ಸ್ಥಿಮಿತದಲ್ಲಿರುವುದಿಲ್ಲ. ಈ ಕಾರಣದಿಂದಾಗಿ ಅವರ ವರ್ತನೆಯಲ್ಲಿಯೂ ಬದಲಾವಣೆಗಳು ಕಂಡುಬರುವುದು. ಮಣ್ಣು ತಿನ್ನುವುದು, ಪೆಟ್ರೋಲ್ ಕುಡಿಯುವುದು, ಹುಲ್ಲು ತಿನ್ನುವುದು ಇತ್ಯಾದಿಗಳ ಬಗ್ಗೆ ನಾವು ಕೇಳಿದ್ದೇವೆ. ಇಂತಹ ವ್ಯಕ್ತಿಗಳು ನಿಜವಾಗಿಯೂ ಮಾನಸಿಕವಾಗಿ ಏನೋ ಸಮಸ್ಯೆಯನ್ನು ಎದುರಿಸುತ್ತಾ ಇರುವರು. ಈ ಲೇಖನದಲ್ಲಿ ಇಂತಹ ಒಬ್ಬ ವ್ಯಕ್ತಿಯ ಬಗ್ಗೆ ನಾವು ತಿಳಿಸಿಕೊಡಲಿದ್ದೇವೆ.

ಇಲ್ಲೊಬ್ಬ ವ್ಯಕ್ತಿಯು ತನ್ನ ಆತಂಕ ನಿವಾರಣೆ ಮಾಡಲು ಕಲ್ಲು, ಬಾಟಲಿಯ ಮುಚ್ಚಳ ಮತ್ತು ನಾಣ್ಯಗಳನ್ನು ತಿಂದಿದ್ದಾನೆ. ಈತನ ಹೊಟ್ಟೆಯಲ್ಲಿ ಸುಮಾರು 2 ಕೆಜಿಯಷ್ಟು ಕಲ್ಲು, ಬಾಟಲಿ ಮುಚ್ಚಳ, ನಾಣ್ಯ ಇತ್ಯಾದಿ ಪತ್ತೆಯಾಗಿದೆ. ಇದನ್ನು ಕಂಡು ವೈದ್ಯರು ಕೂಡ ಬೆಚ್ಚಿ ಬಿದ್ದಿದ್ದಾರೆ. ಕಲ್ಲು, ನಾಣ್ಯ, ಬಾಟಲಿ ಮುಚ್ಚಳ ಇತ್ಯಾದಿಗಳನ್ನು ತಿನ್ನುವಂತಹ ವ್ಯಕ್ತಿಯ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ಓದುತ್ತಾ ಸಾಗಿ...

ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದೆ

ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದೆ

ಹೊಟ್ಟೆ ನೋವಿನ ಸಮಸ್ಯೆಯಿದ್ದ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗುತ್ತಾನೆ. ಆದರೆ ಈ ವ್ಯಕ್ತಿಯನ್ನು ಪರಿಶೀಲಿಸಿದ ವೇಳೆ ವೈದ್ಯರೇ ದಂಗಾದರು.

Most Read: ನಿಮಗೆ ನೀಲಿಚಿತ್ರಗಳ ಚಟ ಅಂಟಿಕೊಂಡಿದೆ ಎನ್ನುವುದಕ್ಕೆ ಇದೇ ಸಾಕ್ಷಿ!!

ಪರಿಶೀಲನೆ ವೇಳೆ ಕಂಡುಬಂದಿರುವುದು

ಪರಿಶೀಲನೆ ವೇಳೆ ಕಂಡುಬಂದಿರುವುದು

ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ವ್ಯಕ್ತಿಯ ಹೊಟ್ಟೆಯು ಉಬ್ಬರಗೊಂಡಿತ್ತು ಮತ್ತು ಹೊಟ್ಟೆಯನ್ನು ವೈದ್ಯರು ಮುಟ್ಟಿ ನೋಡಿದ ವೇಳೆ ಸಣ್ಣ ಸಣ್ಣ ಕಲ್ಲುಗಳು ಪತ್ತೆಯಾಗಿದೆ. ಮತ್ತಷ್ಟು ಪರಿಶೀಲನೆ ನಡೆಸಿದ ವೇಳೆ ವೈದ್ಯರಿಗೆ ಆಘಾತ ಉಂಟಾಯಿತು. ಯಾಕೆಂದರೆ ಆ ವ್ಯಕ್ತಿಯ ಹೊಟ್ಟೆಯೊಳಗಡೆ ಸಣ್ಣ ಸಣ್ಣ ಕಲ್ಲುಗಳು, ಬಾಟಲಿಯ ಮುಚ್ಚಳ ಇತ್ಯಾದಿಗಳು ಕಂಡುಬಂದವು. ಇದು ಸಂಪೂರ್ಣ ಹೊಟ್ಟೆಯನ್ನು ವ್ಯಾಪಿಸಿತ್ತು.

ಈ ಬಗ್ಗೆ ಆ ವ್ಯಕ್ತಿಯು ಏನು ಹೇಳಿದ

ಈ ಬಗ್ಗೆ ಆ ವ್ಯಕ್ತಿಯು ಏನು ಹೇಳಿದ

ತನ್ನ ಹೊಟ್ಟೆಯಲ್ಲಿದ್ದ ಕಲ್ಲುಗಳು, ಬಾಟಲಿ ಮುಚ್ಚಳ ಇತ್ಯಾದಿಗಳನ್ನು ಕಂಡು ವೈದ್ಯರು ಅಚ್ಚರಿಗೊಂಡರು. ಈ ಬಗ್ಗೆ ಆ ವ್ಯಕ್ತಿಯಲ್ಲಿ ಕೇಳಿದಾಗ, ತನಗೆ ಆತಂಕ ಉಂಟಾದ ವೇಳೆ ನಾನು ಶಾಂತವಾಗಲು ಔಷಧಿ ತೆಗೆದುಕೊಳ್ಳುತ್ತಾ ಇದ್ದೆ. ಇದರೊಂದಿಗೆ ನಾಣ್ಯ, ಮುಚ್ಚಳ ಮತ್ತು ಸಣ್ಣ ಸಣ್ಣ ಕಲ್ಲುಗಳನ್ನು ಕೂಡ ನುಂಗುತ್ತಲಿದ್ದೆ ಎಂದು ಹೇಳಿದ್ದಾನೆ.

Most Read: ಪಾಪ 90ರ ಹರೆಯದ ಈ ಅಜ್ಜ ಮೊಸರು ಎಂದು ಭಾವಿಸಿ ಪೈಂಟ್‌ನ್ನೇ ತಿಂದು ಬಿಟ್ಟರಂತೆ!

ತಕ್ಷಣವೇ ಆತನ ಶಸ್ತ್ರಚಿಕಿತ್ಸೆ ಮಾಡಲಾಯಿತು

ತಕ್ಷಣವೇ ಆತನ ಶಸ್ತ್ರಚಿಕಿತ್ಸೆ ಮಾಡಲಾಯಿತು

ಈ ವ್ಯಕ್ತಿಯನ್ನು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಲಾಯಿತು ಮತ್ತು ವೈದ್ಯರ ಪ್ರಕಾರ ಇದು ತುಂಬಾ ಕಠಿಣ ಶಸ್ತ್ರಚಿಕಿತ್ಸೆಯಾಗಿತ್ತು. ಯಾಕೆಂದರೆ ಇಂತಹ ಶಸ್ತ್ರಚಿಕಿತ್ಸೆಯು ತುಂಬಾ ಕಠಿಣವಾಗಿರುವುದು ಮತ್ತು ಗ್ಯಾಸ್ಟ್ರೋಸ್ಕೋಪಿ ಮೂಲಕವಾಗಿ ಇದನ್ನು ತೆಗೆಯಬೇಕಾಯಿತು. ಬಾಯಿಯ ಮೂಲಕವಾಗಿ ತುಂಬಾ ತೆಳುವಾದ ಟ್ಯೂಬ್ ನ್ನು ಹಾಕಲಾಯಿತು. ಇದರ ಬಳಿಕ ತುಂಬಾ ಭಿನ್ನವಾಗಿರುವಂತಹ ಶಸ್ತ್ರಚಿಕಿತ್ಸೆ ವಿಧಾನದ ಮೂಲಕ ಹೊಟ್ಟೆಯಲ್ಲಿ ಇದ್ದ ಕಲ್ಲುಗಳು ಹಾಗೂ ಇತರ ಸಾಮಗ್ರಿಗಳನ್ನು ಹೊರಗೆ ತೆಗೆಯಲಾಯಿತು.

ಆ ವ್ಯಕ್ತಿ ಚೇತರಿಸಿಕೊಂಡ

ಆ ವ್ಯಕ್ತಿ ಚೇತರಿಸಿಕೊಂಡ

ಸುಮಾರು 2 ಕೆಜಿಯಷ್ಟು ಕಲ್ಲು, ಮುಚ್ಚಳ, ನಾಣ್ಯವನ್ನು ಆತ ನುಂಗಿ ಕೊಂಡಿದ್ದ. ವೈದ್ಯರು ತುಂಬಾ ಕಠಿಣವಾಗಿರುವಂತಹ ಶಸ್ತ್ರಚಿಕಿತ್ಸೆ ಮಾಡಿ ಅದರಲ್ಲಿ ಯಶಸ್ವಿ ಕೂಡ ಆದರು. ಆತನ ಹೊಟ್ಟೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊರಗೆ ತೆಗೆಯಲಾಯಿತು. ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಸುಮಾರು 9 ದಿನಗಳ ಕಾಲ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇದರ ಬಳಿಕ ಆತ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಮರಳಿದ್ದಾನೆ. ಆತಂಕ ನಿವಾರಣೆ ಮಾಡಲು ಈಗ ಆತನಿಗೆ ಚಿಕಿತ್ಸೆ ಕೂಡ ನೀಡಲಾಗುತ್ತಿದೆ. ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ಬರೆದು ತಿಳಿಸಿ.

English summary

He Ate 2 Kg Stones, Bottle Caps And Coins To Calm His Anxiety

A 54-year-old man complained of pain in his stomach and he sought help. The medic noticed that the man was bloated and he could feel something in his abdomen. The scan reports showed a massive build-up of objects that have been 'occupying the whole stomach'. The man later confessed that he consumed coins and pebbles!
X
Desktop Bottom Promotion