For Quick Alerts
ALLOW NOTIFICATIONS  
For Daily Alerts

ಈತ ಹಲ್ಲುಜ್ಜುವಾಗ ಬ್ರಷ್‌ನ್ನು ನುಂಗಿಬಿಟ್ಟ! ಕೊನೆಗೆ ಏನಾಯಿತು ಗೊತ್ತೇ?

|

ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಆದ್ಯತೆಯಾಗಿರುವುದು. ಇದಕ್ಕಾಗಿ ನಾವು ಇನ್ನಿಲ್ಲದಂತೆ ಪ್ರಯತ್ನ ಪಡುತ್ತೇವೆ. ಆದರೆ ಕೆಲವೊಂದು ಸಲ ನಮ್ಮ ಕೈಮೀರಿ ಕೆಲವೊಂದು ಅನಾಹುತಗಳು ಆಗುವುದು ಇದೆ. ಇದನ್ನು ತಪ್ಪಿಸಲು ಆಗಲ್ಲ. ಅತಿಯಾಗಿ ನಾವು ಯಾವುದನ್ನೂ ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ. ಆರೋಗ್ಯದ ವಿಚಾರದಲ್ಲೂ ಹೀಗೆ. ನಾವು ಅತಿಯಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಅದು ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು.

Toothbrush

ಇದಕ್ಕಾಗಿ ಆರೋಗ್ಯದ ದೃಷ್ಟಿಯಿಂದ ಎಷ್ಟು ಬೇಕೋ ಅಷ್ಟು ಕೆಲಸ ಮಾಡಬೇಕು. ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಹಲ್ಲಿನ ಬಗ್ಗೆ ಅತಿಯಾದ ಕಾಳಜಿ ಇದ್ದಂತೆ ತೋರುವ ವ್ಯಕ್ತಿಯೊಬ್ಬ 12 ಇಂಚಿನ ಹಲ್ಲುಜ್ಜುವ ವೇಳೆ ಬ್ರಷ್ ನ್ನೇ ನುಂಗಿದ್ದಾನೆ. ಹೀಗೆ ನುಂಗಿದರೆ ಪರವಾಗಿಲ್ಲ. ಆದರೆ ಈ ಬಗ್ಗೆ ವೈದ್ಯರಿಗೂ ಹೇಳಲಿಲ್ಲ. ಈತನ ಕಥೆ ಮುಂದೇನಾಯಿತು ಎಂದು ನೀವೇ ತಿಳಿದುಕೊಳ್ಳಿ.

ಆಕಸ್ಮಿಕವಾಗಿ ಬ್ರಷ್ ನ್ನು ನುಂಗಿಬಿಟ್ಟ!

ಆಕಸ್ಮಿಕವಾಗಿ ಬ್ರಷ್ ನ್ನು ನುಂಗಿಬಿಟ್ಟ!

ಹೆಸರನ್ನು ಗೌಪ್ಯವಾಗಿಡಲಾಗಿರುವಂತಹ ವ್ಯಕ್ತಿಯೊಬ್ಬ ಎಂದಿನಂತೆ ಬೆಳಗ್ಗೆ ಎದ್ದು ಹಲ್ಲುಜ್ಜುತ್ತಿದ್ದ. ಆದರೆ ಆಕಸ್ಮಿಕವಾಗಿ ಬ್ರಷ್ ನ್ನು ನುಂಗಿಬಿಟ್ಟ. ಈ ಘಟನೆ ಬಗ್ಗೆ ಹೇಳಿಕೊಳ್ಳಲು ಆತನಿಗೆ ತುಂಬಾ ಮುಜುಗರವಾಯಿತು ಮತ್ತು ಇದರಿಂದಾಗಿ ಅದನ್ನು ಹೇಗಾದರೂ ಮಾಡಿ ಹೊರಗೆ ಹಾಕಬೇಕೆಂಬ ದೃಷ್ಟಿಯಿಂದ ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸಿದ.

ಮರುದಿನ ಹೊಟ್ಟೆ ನೋವು ಕಾಣಿಸಿಕೊಂಡಿತು

ಮರುದಿನ ಹೊಟ್ಟೆ ನೋವು ಕಾಣಿಸಿಕೊಂಡಿತು

ವರದಿಗಳು ಹೇಳಿರುವ ಪ್ರಕಾರ ಆತನಿಗೆ ಮರುದಿನ ಹೊಟ್ಟೆನೋವು ಕಾಣಿಸಿಕೊಂಡಿತು. ಹೊಟ್ಟೆ ನೋವು ಎಷ್ಟಿತ್ತೆಂದರೆ ಆತನಿಗೆ ನಡೆದಾಡಲು ಸಾಧ್ಯವಿರಲಿಲ್ಲ. ವೈದ್ಯರು ಸ್ಕ್ಯಾನಿಂಗ್ ಮಾಡಿ ನೋಡುವ ತನಕ ಆತ ಏನು ನುಂಗಿದ್ದಾನೆ ಎಂದು ಹೇಳಲೇ ಇಲ್ಲ.

Most Read: ಸುಮಾರು 3 ಗಂಟೆಯಿಂದ ಡೋರ್ ಬೆಲ್ ನೆಕ್ಕಿದ ವ್ಯಕ್ತಿ! ಇಲ್ಲಿದೆ ನೋಡಿ ವಿಡಿಯೋ!

ಸ್ಕ್ಯಾನಿಂಗ್ ವರದಿಯು ಎಲ್ಲವನ್ನು ಹೇಳಿತು…

ಸ್ಕ್ಯಾನಿಂಗ್ ವರದಿಯು ಎಲ್ಲವನ್ನು ಹೇಳಿತು…

ಎಂಡೋಸ್ಕೋಪಿ ವರದಿಯಲ್ಲಿ 12 ಇಂಚಿನ ಬ್ರಷ್ ಹೇಗೆ ಸ್ಥಾನ ಪಡೆಯಿತು ಎಂದು ವೈದ್ಯರಿಗೆ ತುಂಬಾ ಗೊಂದಲವಾಯಿತು. ಇದರ ಬಳಿಕ ವ್ಯಕ್ತಿಯು ತಾನು ಬ್ರಷ್ ನುಂಗಿರುವುದಾಗಿ ಬಾಯಿಬಿಟ್ಟ. ತಕ್ಷಣ ವೈದ್ಯರು ಬ್ರಷ್ ನ್ನು ಹೊರಗೆ ತೆಗೆಯುವಂತಹ ಶಸ್ತ್ರಚಿಕಿತ್ಸೆ ಆರಂಭಿಸಿದರು ಮತ್ತು ಬ್ರಷ್ ನ್ನು ಹೊರಗೆ ತೆಗೆಯಲಾಯಿತು.

ಅದೇ ದಿನ ಆ ವ್ಯಕ್ತಿಯನ್ನು ಡಿಸ್ಚಾರ್ಜ್ ಮಾಡಲಾಯಿತು

ಅದೇ ದಿನ ಆ ವ್ಯಕ್ತಿಯನ್ನು ಡಿಸ್ಚಾರ್ಜ್ ಮಾಡಲಾಯಿತು

ಹೊಟ್ಟೆಯ ಮೇಲ್ಭಾಗದಲ್ಲಿ ಬ್ರಷ್ ಇದೆಯೆಂದು ತಿಳಿದ ವೈದ್ಯರು ಎಂಡೋಸ್ಕೋಪಿ ಮಾಡಿದರು ಮತ್ತು ಇದರ ಬಳಿಕ ಬ್ರಷ್ ನ್ನು ಹೊರಗೆ ತೆಗೆಯಲಾಯಿತು. ಆ ವ್ಯಕ್ತಿಯು ನೋವಿನಿಂದ ಅದೇ ದಿನ ಚೇತರಿಸಿಕೊಂಡ. ಇದರ ಬಳಿಕ ಆತನನ್ನು ಡಿಸ್ಚಾರ್ಜ್ ಮಾಡಲಾಯಿತು ಮತ್ತು ನಾಲಗೆಯನ್ನು ಹೇಗೆ ಸ್ವಚ್ಛ ಮಾಡಬೇಕು ಎಂದು ಆತನಿಗೆ ಹೇಳಿಕೊಡಲಾಯಿತು. ಇದರಿಂದ ಮುಂದಿನ ಸಲ ಹಲ್ಲುಜ್ಜುವಾಗ ಬ್ರಷ್ ಹೊಟ್ಟೆಯೊಳಗೆ ಹೋಗುವುದನ್ನು ತಪ್ಪಿಸಬಹುದು.

Most Read: ಸುಮಾರು 14 ವರ್ಷ ಕಾಲ ಕೋಮಾ ಸ್ಥಿತಿಯಲ್ಲಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದಳು!

ಇದು ಮೊದಲ ಪ್ರಕರಣವಲ್ಲ

ಇದು ಮೊದಲ ಪ್ರಕರಣವಲ್ಲ

2016ರಲ್ಲಿ ವ್ಯಕ್ತಿಯೊಬ್ಬ ಸುಮಾರು 18 ಬ್ರಷ್‌ಗಳನ್ನು ನುಂಗಿರುವಂತಹ ವಿಚಿತ್ರ ಘಟನೆಯು ತುಂಬಾ ವೈರಲ್ ಆಗಿತ್ತು. ಆ ವ್ಯಕ್ತಿಯ ಹೊಟ್ಟೆಯಿಂದ ಒಂದು ಮಧ್ಯಮ ಗಾತ್ರದ ಸ್ಕ್ರೂ ಮತ್ತು ಚಿಮುಟಗಳನ್ನು ಹೊರಗೆ ತೆಗೆಯಲಾಗಿತ್ತು. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.

English summary

He Accidentally Swallowed A Toothbrush!

A bizarre incident was reported where a man had accidentally swallowed a 12-inch toothbrush while he was cleaning his tongue. The man did not disclose the incident to the doctor until it was revealed in a scan at the hospital. There are so many cases of accidental swallowing of toothbrushes reported according to medics.
X
Desktop Bottom Promotion