Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದಟ್ಟ ಮಂಜಿನಲ್ಲಿ ಆರು ಕಿ.ಮೀ. ನಡೆದು ಮದುವೆ ಮಂಟಪ ತಲುಪಿದ ವರ!!
ಮದುವೆಯಾಗುವ ವರ ಹಾಗೂ ವಧು ಹಲವಾರು ಹೊಸ ಹೊಸ ವಿಧಾನಗಳಿಂದ ಮದುವೆ ಮಂಟಪಗಳಿಗೆ ಆಗಮಿಸುತ್ತಿರುವಂತಹ ದೃಶ್ಯಗಳನ್ನು ನಾವು ನೋಡಿದ್ದೇವೆ ಮತ್ತು ಇದರ ಬಗ್ಗೆ ಓದಿದ್ದೇವೆ. ಆದರೆ ಇಲ್ಲಿ ನಾವು ಹೇಳಲು ಹೊರಟಿರುವುದು ಉತ್ತರಾಖಂಡದಲ್ಲಿ ವರನೊಬ್ಬ ಮದುವೆ ಸಂಭ್ರಮಕ್ಕೆ ತೆರಳಲು ಸುಮಾರು ಆರು ಕಿ.ಮೀ. ದಟ್ಟ ಮಂಜಿನಲ್ಲಿ ನಡೆದುಕೊಂಡು ಹೋಗಿರುವುದು. ಉತ್ತರಾಖಂಡದಲ್ಲಿ ನಡೆದಿರುವಂತಹ ತುಂಬಾ ಅಪರೂಪದ ಮದುವೆ ಇದು ಎನ್ನಬಹುದು. ಯಾಕೆಂದರೆ ಇಲ್ಲಿ 25 ಜನರಿಗಿಂತ ಕಡಿಮೆ ಜನರು ಇರುವಂತಹ ಮದುವೆ ನಡೆಯುವುದು ತುಂಬಾ ವಿರಳ.
ಆದರೆ ಇಂತಹ ಘಟನೆಯು ರುಧ್ರಪ್ರಯಾಗ್ ನ ಮಕ್ಕು ಮಠದಲ್ಲಿ ನಡೆದಿದೆ. ವರ ಹಾಗೂ ಆತನ ಸಂಬಂಧಿಗಳು ಸುಮಾರು 6 ಕಿ.ಮೀ. ದೂರದ ತನಕ ದಟ್ಟ ಮಂಜಿನಲ್ಲಿ ನಡೆದುಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾರೆ. ಮಕ್ಕು ಮಠದಲ್ಲಿ ನಡೆಯಲಿರುವಂತಹ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸುಮಾರು 80 ಜನರು ತ್ರಿಯುಗಿನಾರಾಯಣ ಗ್ರಾಮದಿಂದ ತೆರಳಿದ್ದರು. ಆದರೆ ದಟ್ಟ ಮಂಜಿನಿಂದಾಗಿ ವಾಹನವು ರಸ್ತೆಯಲ್ಲೇ ಬಾಕಿಯಾದ ಕಾರಣದಿಂದ ನಡುರಸ್ತೆಯಲ್ಲೇ ಸಿಲುಕಿಕೊಂಡರು. ಇದರಿಂದರಿಂದಾಗಿ ಕುಟುಂಬದವರು ಮದುವೆಗೆ ಅಗತ್ಯವಿರುವ ಜನರನ್ನು ಮಾತ್ರ ಮದುವೆಗೆ ಕಳುಹಿಸಿಕೊಡಲು ನಿರ್ಧರಿಸಿದರು. ವರದ ಸೋದರ ಮಾವ, ಸೋದರಿ ಮತ್ತು ಇತರ ಕೆಲವು ಮಂದಿ ಹಿರಿಯರು ಮದುವೆಗೆ ತೆರಳಿದರು. ಈ ವೇಳೆ ಆರು ಕಿ.ಮೀ. ತನಕ ಇವರು ದಟ್ಟ ಮಂಜಿನಲ್ಲಿ ದಿಬ್ಬಣದಲ್ಲಿ ಸಾಗಿದರು. ಈ ವೇಳೆ ಮಕ್ಕಳು ಮಾತ್ರ ಮಂಜಿನಲ್ಲಿ ಆಡುತ್ತಾ ಖುಷಿ ಪಟ್ಟರು.

2002ರಲ್ಲಿ ನಾವು ಇಂತಹ ಮದುವೆ ದಿಬ್ಬಣ ನೋಡಿದ್ದೇವೆ ಮತ್ತು ಈಗ ಮತ್ತೆ ನೋಡುತ್ತಿದ್ದೇವೆ. ಜನರು ಇಲ್ಲಿ ನಡೆದುಕೊಂಡು ಬರುತ್ತಿದ್ದಾರೆ ಮತ್ತು ಈ ಎರಡು ಮದುವೆಯ ವರರು ಸೇನೆಯಲ್ಲಿದ್ದವರು ಎಂದು ವರನ ಸೋದರ ಆಶೀಶ್ ಗೈರೊಲಾ ತಿಳಿಸಿದರು. ಈ ಪ್ರಯಾಣವು ತುಂಬಾ ಕಠಿಣವಾಗಿತ್ತೇ ಎಂದು ಕೇಳಿದಾಗ, ನೀವು ಚಿತ್ರಗಳನ್ನು ನೋಡಿದರೆ ಆಗ ಅವರ ಕಷ್ಟಗಳನ್ನು ಬದಿಗಿರಿಸಿ, ಚಳಿಯಾಗಿದೆಯಾ ಎಂದು ಕೇಳುವಿರಿ. ನನ್ನ ಎಂಟು ವರ್ಷದ ಮಗ ಹಾದಿಯಲ್ಲಿ ಸಂಪೂರ್ಣವಾಗಿ ಮಂಜಿನೊಂದಿಗೆ ಆಟವಾಡುತ್ತಲಿದ್ದ.
ಕಳೆದ ಏಳು ದಿನಗಳಿಂದ ಇಲ್ಲಿಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗದೆ ಇರುವ ಕಾರಣದಿಂದಾಗಿ ಸರಿಯಾಗಿ ದೈನಂದಿನ ಕಾರ್ಯಗಳನ್ನು ಕೂಡ ನಿರ್ವಹಿಸಲು ಆಗಿಲ್ಲ. ವಿದ್ಯುತ್ ಕೊರತೆಯಿಂದ ಜನರು ತಮ್ಮ ಮೊಬೈಲ್ ಫೋನ್ ಗಳನ್ನು ಕಾರಿನಲ್ಲಿ ಚಾರ್ಜ್ ಮಾಡುತ್ತಲಿದ್ದರು ಎಂದು ಅವರು ತಿಳಿಸಿದ್ದಾರೆ. ತ್ರಿಯುಗಿನಾರಾಯಣ ಗ್ರಾಮದ ಮುಖ್ಯಸ್ಥರು ಹೇಳುವ ಪ್ರಕಾರ, ನಾನು ಕೂಡ ಮದುವೆಗೆ ಹೋಗಿದ್ದೆ. ಆದರೆ ಮಧ್ಯದಲ್ಲೇ ಸಿಲುಕಿಕೊಂಡೆವು. ಆದರೆ ನಾವೆಲ್ಲರೂ ಈ ಪ್ರಯಾಣವನ್ನು ಆನಂದಿಸಿದೆವು ಮತ್ತು ಮದುವೆಯು ಯಾವುದೇ ಸಮಸ್ಯೆಯಿಲ್ಲದೆ ನಡೆಯಿತು.
ನಮಗೆ ಮದುವೆ ಬಗ್ಗೆ ಮಾಹಿತಿ ಸಿಕ್ಕಿತು ಮತ್ತು ಜನರು ನಡೆದುಕೊಂಡು ಬರುತ್ತಿದ್ದಾರೆ ಎಂದು ತಿಳಿಯಿತು. ಅವರು ನಡೆದುಕೊಂಡು ಬಂದಿರುವುದು ಒಳ್ಳೆಯದು. ಯಾಕೆಂದರೆ ಮಂಜು ತುಂಬಾ ದಟ್ಟವಾಗಿ ಉರುಳುತ್ತಿದ್ದ ಕಾರಣದಿಂದಾಗಿ ಕಾರ್ ಸ್ಕಿಡ್ ಆಗುವಂತಹ ಸಾಧ್ಯತೆಯು ಹೆಚ್ಚಿತ್ತು. ಗ್ರಾಮಗಳಲ್ಲಿ ಮಂಜನ್ನು ತೆಗೆಯಲು ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ ರಸ್ತೆಗಳು ಈಗಲೂ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ರುದ್ರಪ್ರಯಾಗ್ ನ ಜಿಲ್ಲಾಧಿಕಾರಿ ಮಗ್ನೇಶ್ ಗಿಲ್ಡಿಲ್ಯಾಲ್ ಹೇಳಿದ್ದಾರೆ.



Click it and Unblock the Notifications

