For Quick Alerts
ALLOW NOTIFICATIONS  
For Daily Alerts

ಇಂತಹ ಕನಸುಗಳು ಬೀಳುತ್ತಿದ್ದರೆ ನೀವು ಆತಂಕಕ್ಕೆ ಒಳಗಾಗಿರುವಿರಿ ಎಂದರ್ಥ

|
ಮಲಗಿದಾಗ ಈ ರೀತಿ ಕನಸುಗಳು ಬಿದ್ದರೆ ನೀವು ಆತಂಕದಲ್ಲಿ ಇದ್ದೀರಾ ಅಂತ ಅರ್ಥ

ಕನಸು ಯಾರಿಗೆ ಬೀಳುವುದಿಲ್ಲ ಹೇಳಿ? ಮಲಗಿದಾಗ ನಿದ್ರೆಯಲ್ಲಿ ಕನಸು ಕಾಣದ ವ್ಯಕ್ತಿ ಬಹುಶಃ ಈ ಜಗತ್ತಿನಲ್ಲಿಯೇ ಇರಲಾರ. ತಾಯಿಯ ಗರ್ಭದಲ್ಲಿರುವ ಕೂಸು ಸಹ ಕನಸು ಕಾಣುತ್ತದೆ ಎಂದರೆ ಕನಸಿನ ವ್ಯಾಪಕತೆ ನಿಮಗರ್ಥವಾಗಿರಬಹುದು. ಆದರೆ ದೊಡ್ಡವರಾದ ಮೇಲೆ ಮನುಷ್ಯರು ಹಲವಾರು ರೀತಿಯ ಕನಸುಗಳನ್ನು ಕಾಣುತ್ತಾರೆ. ಕೇವಲ ನಿದ್ರೆಯಲ್ಲಿ ಮಾತ್ರವಲ್ಲದೆ ಎಚ್ಚರವಾಗಿರುವಾಗಲೂ ಕನಸು ಕಾಣುತ್ತಾರೆ. ಇದಕ್ಕೆ ಹಗಲುಗನಸು ಎನ್ನುತ್ತಾರೆ.

Dreaming about THIS at night, you are suffering from anxiety

ಇನ್ನು ಮಲಗಿದಾಗ ಗಾಢ ನಿದ್ರೆಯಲ್ಲಿ ಬೀಳುವ ಕನಸುಗಳ ಮೇಲೆ ನಮ್ಮ ನಿಯಂತ್ರಣ ಇರುವುದಿಲ್ಲ ಎಂದೇ ಹೇಳಬಹುದು. ಇವು ಮನಸಿನೊಳಗಿನ ಯಾವುದೋ ಅವ್ಯಕ್ತ ಭಾವನೆಯ ಮೂರ್ತರೂಪದಂತಿರುತ್ತವೆ. ಆದರೆ ಕೆಲವು ರೀತಿಯ ಕನಸುಗಳು ನಮ್ಮ ವಿಶಿಷ್ಟ ಮಾನಸಿಕ ಸ್ಥಿತಿಯನ್ನು ಸಹ ಸೂಚಿಸುತ್ತವೆ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಕೆಲವು ರೀತಿಯ ಕನಸುಗಳು ಮಾನಸಿಕ ಉದ್ವೇಗದ ಲಕ್ಷಣಗಳೂ ಆಗಿರಬಹುದು. ಅಂಥ ಕನಸುಗಳು ಯಾವ ರೀತಿ ಇರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನೀವು ಕಾಣುವ ಕನಸುಗಳಿಗೆ ಏನಾದರೂ ಅರ್ಥವಿದೆಯೇ?

ನೀವು ಕಾಣುವ ಕನಸುಗಳಿಗೆ ಏನಾದರೂ ಅರ್ಥವಿದೆಯೇ?

ರಾತ್ರಿ ಗಾಢವಾಗಿ ನಿದ್ರೆ ಮಾಡುವುದು ನಮ್ಮ ಒಟ್ಟಾರೆ ಆರೋಗ್ಯ ಸ್ಥಿತಿಗೆ ಅತ್ಯಂತ ಅವಶ್ಯಕವಾಗಿದೆ. ಮರುದಿನ ಉಲ್ಲಾಸಕರವಾಗಿ ಎದ್ದು ದೈನಂದಿನ ಚಟುವಟಿಕೆಗಳಲ್ಲಿ ತೊಡಗಲು ರಾತ್ರಿಯ ಪ್ರಶಾಂತವಾದ ಹಾಗೂ ಗಾಢ ನಿದ್ರೆ ತುಂಬಾ ಸಹಕಾರಿ. ಆದರೆ ಕೆಲವೊಮ್ಮೆ ಗಾಢ ನಿದ್ರೆಯಲ್ಲಿ ಬೀಳುವ ಕನಸುಗಳು ನಮ್ಮ ನೆಮ್ಮದಿಯನ್ನು ಸಹ ಹಾಳು ಮಾಡಬಲ್ಲವು. ಇನ್ನು ಕೆಲವು ಕನಸುಗಳು ವಿಚಿತ್ರವಾಗಿ, ಭೀಕರವಾಗಿದ್ದು ಬೆಳಗ್ಗೆ ಏಳುವಷ್ಟರಲ್ಲಿ ಯಾವುದೋ ಒಂದು ರೀತಿಯ ಆತಂಕ ಮನೆ ಮಾಡಿದಂತಾಗಬಹುದು. ಹೀಗೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅವು ನಿಜವಾಗಿಯೂ ನಿಮ್ಮ ಜೀವನದ ನೆಮ್ಮದಿಯನ್ನು ಹಾಳು ಮಾಡಬಲ್ಲವು. ಒಂದು ವೇಳೆ ನೀವು ಉದ್ವೇಗದ ಮಾನಸಿಕ ಸ್ಥಿತಿಯಿಂದ ಬಳಲುತ್ತಿದ್ದರೆ ಈ ಕೆಳಗೆ ತಿಳಿಸಲಾದ ವಿಚಿತ್ರ ಕನಸುಗಳು ಬೀಳಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಅಬ್ಬಾ... ಎಂಥ ಕನಸು..

ಅಬ್ಬಾ... ಎಂಥ ಕನಸು..

ಕನಸಿನಲ್ಲಿ ಹಾವು, ಚೇಳು ಮುಂತಾದ ಕ್ರಿಮಿಕೀಟಗಳು ಬಹಳಷ್ಟು ಜನರಿಗೆ ಕಾಣಿಸಿಕೊಳ್ಳುತ್ತವೆಯಂತೆ. ಹೀಗೆ ಹಾವು, ಚೇಳು ಅಥವಾ ಇನ್ನಾವುದೋ ಭಯಂಕರ ಕೀಟ ಕನಸಿನಲ್ಲಿ ಕಾಣಿಸಿಕೊಂಡಾಗ ಎಷ್ಟೊಂದು ಆತಂಕವಾಗುತ್ತದೆ ಅಲ್ಲವೆ? ಇಂಥ ಕನಸುಗಳ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಕನಸುಗಳನ್ನು ತೀರಾ ನಿರ್ದಿಷ್ಟವಾಗಿ ಅರ್ಥೈಸುವುದು ಸಾಧ್ಯವಿಲ್ಲವಾದರೂ ಇಲ್ಲಿ ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದ್ದೇವೆ.

ಕನಸಿನಲ್ಲಿ ಕೀಟಗಳು ಕಾಣಿಸಿಕೊಂಡರೆ ಏನರ್ಥ?

ಕನಸಿನಲ್ಲಿ ಕೀಟಗಳು ಕಾಣಿಸಿಕೊಂಡರೆ ಏನರ್ಥ?

ಕನಸಿನಲ್ಲಿ ಬರುವ ಪ್ರತಿಯೊಂದು ಕೀಟಕ್ಕೂ ಅದರದೇ ಆದ ನಿರ್ದಿಷ್ಟ ಅರ್ಥವಿದೆ. ಆದಾಗ್ಯೂ ಓರ್ವ ವ್ಯಕ್ತಿಯು ತಾನು ಕನಸಿನಲ್ಲಿ ಕಾಣುವ ಕೀಟಗಳಿಂದ ಹೆದರುವನೋ ಅಥವಾ ಉತ್ತಮ ಭಾವನೆಯನ್ನು ಹೊಂದುವನೋ ಎಂಬುದರ ಮೇಲೆ ಇದನ್ನು ಅಳೆಯಬಹುದು. ಆದರೆ ಕೀಟಗಳು ಕನಸಿನಲ್ಲಿ ಬರುತ್ತಿವೆ ಎಂದರೆ ನಿಮ್ಮ ಮನಸ್ಸಿನಲ್ಲಿ ಯಾವುದರ ಬಗ್ಗೆಯೋ ಚಿಂತಿತರಾಗಿರುವಿರಿ ಎಂದರ್ಥ. ಅಂದರೆ ಈ ಕೀಟಗಳು ನಿಮ್ಮ ಮನಸ್ಸಿನಲ್ಲಿರುವ ಯಾವುದೋ ಹೆದರಿಕೆ, ಉದ್ವೇಗ ಅಥವಾ ತಲ್ಲಣಗಳ ಸಂಕೇತವಾಗಿರುತ್ತವೆಯಷ್ಟೆ. ಇಷ್ಟಲ್ಲದೆ ಕೆಲವು ಬಾರಿ ಕೀಟಗಳು ನಿಮ್ಮ ಮನಸ್ಸಿನಲ್ಲಿರುವ ಲೈಂಗಿಕ ಭಾವನೆಗಳನ್ನು ಸಹ ಸೂಚಿಸಬಹುದಂತೆ. ಕನಸಿನಲ್ಲಿ ಬಹಳಷ್ಟು ಸಂಖ್ಯೆಯ ಕೀಟಗಳು ಕಾಣಿಸಿಕೊಳ್ಳುತ್ತಿದ್ದಲ್ಲಿ ಅವು ನಿಮ್ಮ ಮನಸ್ಸಿನ ನಕಾರಾತ್ಮಕ ಭಾವನೆ, ಅಪರಾಧಿ ಭಾವನೆ ಮತ್ತು ಕಾಡುತ್ತಿರುವ ಇನ್ನಾವುದೋ ಉದ್ವೇಗದ ಸಂಕೇತಗಳಾಗಿರುತ್ತವೆ. ಅಂದರೆ ಈ ಎಲ್ಲ ಭಾವನೆಗಳು ನಿಮಗೆ ಅರಿವಿಲ್ಲದೆಯೇ ಸುಪ್ತವಾಗಿದ್ದುಕೊಂಡು ಕನಸಿನಲ್ಲಿ ರೂಪ ತಳೆಯುತ್ತವೆ.

Most Read: ದೇವರು ಕನಸಿನಲ್ಲಿ ಬಂದರೆ, ಇದರ ಅರ್ಥ ಏನು ಗೊತ್ತೇ?

ಒಳ್ಳೆಯ ಕಾಲ ಬಂದೇ ಬರುತ್ತದೆ

ಒಳ್ಳೆಯ ಕಾಲ ಬಂದೇ ಬರುತ್ತದೆ

ಹಿಂದಿನ ಕೆಟ್ಟ ಅನುಭವಗಳು ಸಾಮಾನ್ಯವಾಗಿ ನಮ್ಮ ಮನಸಿನಲ್ಲಿ ನಕಾರಾತ್ಮಕ ಭಾವನೆಗಳನ್ನು ಹುಟ್ಟು ಹಾಕುತ್ತವೆ. ಇವೇ ಭಾವನೆಗಳು ಕನಸಿನಲ್ಲಿ ಬಂದು ಕಾಡುತ್ತವೆ. ಅಂದರೆ ಈಗ ನೀವು ಜೀವನದ ಯಾವುದೋ ಕೆಟ್ಟ ಕಾಲಘಟ್ಟವೊಂದನ್ನು ಹಾದು ಹೋಗುತ್ತಿರುವಿರಿ ಎಂದರ್ಥ. ಆದರೆ ಎಂಥ ಕಾಲವಾದರೂ ಸರಿದು ಹೋಗಲೇಬೇಕು. ಹಾಗೆಯೇ ಈಗಿನ ಕೆಟ್ಟ ಕಾಲ ಸರಿದು ಮತ್ತೆ ಜೀವನದಲ್ಲಿ ಉತ್ತಮ ಕಾಲ ಬಂದೇ ಬರುತ್ತದೆ. ಆದರೆ ಇದರ ಬಗ್ಗೆ ಪ್ರತಿಯೊಬ್ಬರೂ ಆಶಾವಾದಿಯಾಗಿರಬೇಕು. ಒಳ್ಳೆಯ ಕಾಲ ಬಂದಾಗ ಇಂಥ ಕೆಟ್ಟ ಕನಸುಗಳು ಸಹ ತಾವಾಗಿಯೇ ಮಾಯವಾಗುತ್ತವೆ.

ನಿಮ್ಮ ಹೊಟ್ಟೆಯಲ್ಲಿ ಕೀಟಗಳಿದ್ದಂತೆ ಕನಸು ಬೀಳುತ್ತವೆಯೆ?

ನಿಮ್ಮ ಹೊಟ್ಟೆಯಲ್ಲಿ ಕೀಟಗಳಿದ್ದಂತೆ ಕನಸು ಬೀಳುತ್ತವೆಯೆ?

ಹೊಟ್ಟೆಯಲ್ಲಿ ಕೀಟಗಳಿದ್ದಂತೆ ಕನಸು ಬೀಳುವುದು ಅತಿ ನಕಾರಾತ್ಮಕ ಭಾವನೆಯ ಸಂಕೇತವಾಗಿದೆ. ಜೀವನದಲ್ಲಿ ಖಿನ್ನತೆ ಹೊಂದಿರುವವರು ಹಾಗೂ ತೀರಾ ಕುಗ್ಗಿ ಹೋಗಿರುವವರಿಗೆ ಈ ರೀತಿಯ ಕನಸುಗಳು ಬೀಳುತ್ತವೆಯಂತೆ. ಇನ್ನು ಜೀವನದಲ್ಲಿ ಉತ್ತಮ ಕಾಲ ಬರುವುದು ಸಾಧ್ಯವೇ ಇಲ್ಲ ಎಂದುಕೊಂಡಿರುವವರಿಗೆ ಹೀಗಾಗುತ್ತದೆಯಂತೆ.

ಕೀಟಗಳನ್ನು ಹಿಡಿದಂತೆ ಕನಸು ಬೀಳುತ್ತವಾ?

ಕೀಟಗಳನ್ನು ಹಿಡಿದಂತೆ ಕನಸು ಬೀಳುತ್ತವಾ?

ಕನಸಿನಲ್ಲಿ ಕೀಟಗಳನ್ನು ಹಿಡಿಯುತ್ತಿರುವಂತೆ ಕಂಡರೆ ನೀವು ನಿಮ್ಮ ಜೀವನದ ಅಮೂಲ್ಯವಾದ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿರುವಿರಿ ಎಂದರ್ಥ. ಆಲಸಿತನದ ಪರಿಧಿಯಿಂದ ಹೊರಬರಲಾಗದೆ ಅದರಲ್ಲೇ ಒದ್ದಾಡುತ್ತ ಯಾತಕ್ಕೂ ಉಪಯೋಗಕ್ಕೆ ಬಾರದ ಕೆಲಸಗಳನ್ನು ನೀವು ಮಾಡುತ್ತಿರುವಿರಿ. ಇಂಥ ಸಂದರ್ಭಗಳಲ್ಲಿ ಬೇರೆಯವರಿಂದ ಸಲಹೆಗಳನ್ನು ಪಡೆದು ಜೀವನವನ್ನು ಸರಿದಾರಿಯಲ್ಲಿ ಹೋಗುವಂತೆ ಮಾಡಿಕೊಳ್ಳುವುದು ಸೂಕ್ತ.

ಬೇರೆ ಬೇರೆ ರೀತಿಯ ಕೀಟಗಳು ಕಾಣಿಸುತ್ತಿವೆಯೆ?

ಬೇರೆ ಬೇರೆ ರೀತಿಯ ಕೀಟಗಳು ಕಾಣಿಸುತ್ತಿವೆಯೆ?

ಬೇರೆ ಬೇರೆ ರೀತಿಯ ವಿಚಿತ್ರ ಕೀಟಗಳನ್ನು ಕನಸಿನಲ್ಲಿ ಕಾಣುವುದು ಒಂದು ರೀತಿಯ ಹೆದರಿಕೆಯೇ ಆದರೂ ಇದಕ್ಕೊಂದು ಸಕಾರಾತ್ಮಕ ಅರ್ಥವಿದೆ ಎನ್ನಲಾಗಿದೆ. ನೀವೀಗ ನಿಮ್ಮ ಸಮಯವನ್ನು ಅತ್ಯಂತ ಸೂಕ್ತವಾಗಿ ಸದುಪಯೋಗಪಡಿಸಿಕೊಳ್ಳುತ್ತಿರುವಿರಿ ಎಂದರ್ಥ. ಹೀಗಿರುವಾಗ ಎಲ್ಲ ಸಂದರ್ಭಗಳನ್ನು ಸೂಕ್ತವಾಗಿ ಬಳಸಿಕೊಂಡು ಜೀವನದಲ್ಲಿ ಮುಂದೆ ಬರಲು ಯತ್ನಿಸಬೇಕು.

Most Read: ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ಕನಸಿನಲ್ಲಿ ಕೀಟವನ್ನು ಸಾಯಿಸಿದಿರಾ?

ಕನಸಿನಲ್ಲಿ ಕೀಟವನ್ನು ಸಾಯಿಸಿದಿರಾ?

ನೀವು ಕನಸಿನಲ್ಲಿ ಕೀಟವೊಂದನ್ನು ಸಾಯಿಸಿರುವಿರಾದರೆ ಅದು ಖುಷಿಯ ಸಂಗತಿಯಾಗಿದೆ. ಹೌದು .. ಇಂಥ ಕನಸು ಸಕಾರಾತ್ಮಕ ಜೀವನವನ್ನು ಬಿಂಬಿಸುತ್ತದೆಯಂತೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದಿದ್ದು ನಿಮ್ಮ ಪ್ರೀತಿಯ ಜೀವನ ಉತ್ತುಂಗದಲ್ಲಿದೆ ಎಂದರ್ಥ.

ಮೈಮೇಲೆಲ್ಲ ಕೀಟಗಳು ಬಂದಂತಾಗುತ್ತದೆಯೆ?

ಮೈಮೇಲೆಲ್ಲ ಕೀಟಗಳು ಬಂದಂತಾಗುತ್ತದೆಯೆ?

ಮೈತುಂಬಾ ಕೀಟಗಳಿದ್ದಂತೆ ಕನಸುಗಳು ಬೀಳುವುದು ಹೆದರಿಕೆಯ ಸಂಗತಿಯೇ ಆಗಿದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಿರುವುದನ್ನು ಈ ರೀತಿಯ ಕನಸುಗಳು ಸೂಚಿಸುತ್ತವೆಯಂತೆ. ಪ್ರಸ್ತುತ ನಿಮಗಿರುವ ಅನಾರೋಗ್ಯ ಅಥವಾ ಮುಂದೆ ಬರಬಹುದಾದ ಯಾವುದೋ ರೋಗದ ಬಗ್ಗೆ ನಿಮ್ಮ ಮನಸಿನಲ್ಲಿನ ಚಿಂತೆಯನ್ನು ಈ ರೀತಿಯ ಕನಸುಗಳು ಪ್ರತಿನಿಧಿಸುತ್ತವೆ.

ಕನಸಿನಲ್ಲಿ ಕಾಣಿಸುವ ವಿಷಕಾರಿ ಕೀಟಗಳು

ಕನಸಿನಲ್ಲಿ ಕಾಣಿಸುವ ವಿಷಕಾರಿ ಕೀಟಗಳು

ಕನಸಿನಲ್ಲಿ ವಿಷಕಾರಿ ಕೀಟಗಳು ಕಾಣಿಸಿಕೊಂಡರೆ ಅದು ಯಾವುದೋ ಕೆಟ್ಟ ಅರ್ಥವನ್ನು ಸೂಚಿಸುತ್ತದೆ. ನಿಮ್ಮ ಸುತ್ತಮುತ್ತಲಿನವರೊಂದಿಗೆ ನಿಮ್ಮ ಸಂಬಂಧ ಸರಿಯಾಗಿಲ್ಲದಿರಬಹುದು ಅಥವಾ ಅವರನ್ನು ಅರ್ಥ ಮಾಡಿಕೊಳ್ಳುವುದು ನಿಮಗೆ ಸಾಧ್ಯವಾಗುತ್ತಿಲ್ಲದಿರಬಹುದು. ಆದರೆ ಇಂಥ ಕನಸು ಬಂದಾಗ ನಿಮ್ಮ ಸುತ್ತಮುತ್ತಲಿನವರೊಂದಿಗೆ ಹುಷಾರಾಗಿರಿ. ಯಾವುದೇ ವೈಯಕ್ತಿಕ ಸೀಕ್ರೇಟ್ ಹಂಚಿಕೊಳ್ಳುವ ಮುನ್ನ ಸಾವಿರ ಬಾರಿ ಯೋಚನೆ ಮಾಡಿ.

ಕನಸಿನಲ್ಲಿ ಕೀಟವೊಂದು ಕಚ್ಚಿದರೆ?

ಕನಸಿನಲ್ಲಿ ಕೀಟವೊಂದು ಕಚ್ಚಿದರೆ?

ಕನಸಿನಲ್ಲಿ ಕೀಟವೊಂದು ನಿಮ್ಮನ್ನು ಕಚ್ಚಿದೆ ಎಂದರೆ ಜೀವನದಲ್ಲಿ ಕೆಟ್ಟ ಕಾಲ ಬರಲಿದೆ ಎಂದರ್ಥ. ಭವಿಷ್ಯದಲ್ಲಿ ಏನಾದರೂ ಸಮಸ್ಯೆಗಳು ಬರುತ್ತವೆ ಎಂಬುದನ್ನು ಇದು ಸೂಚಿಸುತ್ತದೆಯಂತೆ.

English summary

Dreaming about THIS at night, you are suffering from anxiety

A good night’s sleep is the most important thing that we all need to keep going and work at our optimal best. Apart from some obvious factors, our dreams can be a major reason for disrupting our sleep sometimes. Some dreams can be so scary and disturbing that they might make you feel drained after you get up in the morning.
X
Desktop Bottom Promotion