For Quick Alerts
ALLOW NOTIFICATIONS  
For Daily Alerts

ಜಪಾನ್‌ನ ಈ ಗ್ರಾಮದಲ್ಲಿ ಜನರಿಗಿಂತ ಗೊಂಬೆಗಳೇ ಹೆಚ್ಚು!

|

ಮಕ್ಕಳಿಗೆ ಆಟಕ್ಕಾಗಿ ಗೊಂಬೆಗಳನ್ನು ಖರೀದಿಸಿಕೊಡುವುದು ಇದೆ. ಗೊಂಬೆಗಳನ್ನು ಕೆಲವೊಂದು ಕಡೆಗಳಲ್ಲಿ ವಿಶೇಷ ಸಂದರ್ಭದಲ್ಲಿ ಶೃಂಗಾರ ಮಾಡಿ ಪ್ರದರ್ಶನಕ್ಕೆ ಕೂಡ ಇಡುತ್ತಾರೆ. ಇಂತಹ ಹಲವಾರು ಆಚರಣೆಗಳು ಭಾರತದಲ್ಲಿ ಇದೆ. ಆದರೆ ಜಪಾನ್ ನ ಒಂದು ಹಳ್ಳಿಯಲ್ಲಿ ಜನರಿಗಿಂತಲೂ ಹೆಚ್ಚು ಗೊಂಬೆಗಳು ಇವೆಯಂತೆ. ಇದಕ್ಕೆ ಮುಖ್ಯ ಕಾರಣ ಅಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಿಕೊಳ್ಳಲು ಹೇಳಿರುವುದು. ಮುಖ್ಯವಾಗಿ ಚೀನಾ ಮತ್ತು ಜಪಾನ್ ನಲ್ಲಿ ಈಗ ಒಂದು ಮಗು ಮಾತ್ರ ಎನ್ನುವ ಕಾನೂನು ಇದೆ. ಈ ಕಾರಣದಿಂದಾಗಿ ವಯಸ್ಸಾದ ಬಳಿಕವೂ ಕೆಲವು ಮಂದಿ ಉದ್ಯೋಗ ಮಾಡಬೇಕಾಗಿದೆ ಮತ್ತು ಪರ್ವತ ಪ್ರದೇಶಗಳಲ್ಲಿ ಜನಸಂಖ್ಯೆ ಕೂಡ ಇಳಿಮುಖ ವಾಗುತ್ತಿದೆ. ಜಪಾನ್‌ನ ಈ ಗ್ರಾಮದಲ್ಲಿ ಈಗ ಮನುಷ್ಯರಿಗಿಂತ ಹೆಚ್ಚು ಗೊಂಬೆಗಳು ಇವೆಯಂತೆ. ಈ ಬಗ್ಗೆ ನೀವು ಮುಂದಕ್ಕೆ ತಿಳಿಯಿರಿ.

Dolls Outnumber Humans

ಜಪಾನ್ ಪಶ್ಚಿಮ ಭಾಗದಲ್ಲಿ ಆವರಿಸಿರುವಂತಹ ಬೆಟ್ಟಗಳ ಮಧ್ಯೆ ಇರುವಂತಹ ಒಂದು ಸಣ್ಣ ಗ್ರಾಮವೇ ನಗೊರೊ ಎನ್ನುವುದು. ಇಲ್ಲಿ ಬೀದಿಗಳಲ್ಲಿ ಜನರಿಲ್ಲದೆ ಸ್ಮಶಾನದಂತೆ ಕಂಡುಬರುತ್ತದೆ. ಈ ಗ್ರಾಮದ ಜನಸಂಖ್ಯೆಯು ಹಿಂದೆ ಒಂದು ಸಲ 300 ಆಗಿತ್ತು. ಇದರ ಬಳಿಕ ಇದು ಈಗ ಕೇವಲ 27ಕ್ಕೆ ಕುಸಿದಿದೆ. ಇಲ್ಲಿನ ಜನರ ಏಕಾಂಗಿತನ ನಿವಾರಣೆ ಮಾಡಲು ಸುಕಿಮಿ ಅಯಾನೊ ಎಂಬವರು ಬೀದಿಗಳ ಬದಿಯಲ್ಲಿ ಮನುಷ್ಯರ ಗಾತ್ರದ ಗೊಂಬೆಗಳನ್ನು ಇಟ್ಟಿದ್ದಾರೆ. 69 ಹರೆಯದ ಗೊಂಬೆ ತಯಾರಕರು ಈಗಾಗಲೇ ಗ್ರಾಮದ ಜನಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚು ಗೊಂಬೆಗಳನ್ನು ತಯಾರಿಸಿಕೊಂಡಿದ್ದಾರೆ. ಕಳೆ 16 ವರ್ಷಗಳಿಂದ ಅವರು ಇದನ್ನು ಮಾಡಿಕೊಂಡು ಬರುತ್ತಿದ್ದಾರೆ.

16 ವರ್ಷಗಳ ಮೊದಲು ಮನುಷ್ಯ ಗಾತ್ರದ ಗೊಂಬೆಯನ್ನು ಮೊದಲ ಸಲ ಮಾಡಿದೆ ಮತ್ತು ಇದಕ್ಕೆ ತನ್ನ ತಂದೆಯ ಬಟ್ಟೆಯನ್ನು ಹಾಕಿದೆ ಎಂದು ಗೊಂಬೆ ತಯಾರಕಿಯು ಹೇಳುತ್ತಾರೆ. ತೋಟದಲ್ಲಿ ಬೆಳೆಸಿರುವಂತಹ ಧಾನ್ಯಗಳನ್ನು ಪಕ್ಷಿಗಳು ತಿನ್ನದೆ ಇರಲಿ ಎಂದು ಈ ರೀತಿಯ ದೊಡ್ಡ ಗಾತ್ರದ ಗೊಂಬೆಗಳನ್ನು ತಯಾರಿಸಿದ್ದಾರೆ.

ಮರದ ತುಂಡುಗಳು ಮತ್ತು ದಿನಪತ್ರಿಕೆಗಳನ್ನು ಬಳಸಿಕೊಂಡು ಅವರು ಈ ರೀತಿಯ ಗೊಂಬೆ ತಯಾರಿ ಮಾಡುತ್ತಾರೆ. ಚರ್ಮಕ್ಕಾಗಿ ಇಲಾಸ್ಟಿಕ್ ಫ್ಯಾಬ್ರಿಕ್ಸ್ ಮತ್ತು ಕೂದಲಿಗೆ ಹತ್ತಿಯ ಸಾಮಗ್ರಿ ಬಳಸುವರು. ಈ ಗೊಂಬೆಗಳೂ ಸಾಮಾನ್ಯ ಮನುಷ್ಯರಂತೆ ಕಾಣಿಸುತ್ತದೆ. ಇದಕ್ಕೆ ಶೃಂಗಾರ ಮಾಡಿ ಅವರು ತುಟಿಗಳು ಹಾಗೂ ಗಲ್ಲಕ್ಕೆ ಗುಲಾಬಿ ಬಣ್ಣವನ್ನು ಹಚ್ಚಿದ್ದಾರೆ.

ಈ ಗ್ರಾಮಕ್ಕೆ ಭೇಟಿ ನೀಡುವ ಜನರು ಇಂತಹ ದೊಡ್ಡ ಗಾತ್ರದ ಬೊಂಬೆಗಳನ್ನು ನೋಡಿ ಅಚ್ಚರಿಗೀಡಾಗುವರು. ಯಾಕೆಂದರೆ ಗ್ರಾಮದ ಪ್ರತಿಯೊಂದು ಮೂಲೆಯಲ್ಲೂ ಈ ಗೊಂಬೆಗಳು ಕಾಣಿಸುವುದು. ಈ ಗ್ರಾಮದಲ್ಲಿ ಯಾವ ಮಕ್ಕಳು ಕೂಡ ಈಗ ಇಲ್ಲ ಮತ್ತು ಇಲ್ಲಿ ಇರುವ ಕಿರಿಯ ವ್ಯಕ್ತಿಯ ವಯಸ್ಸು 55 ವಯಸ್ಸು. ಈ ಸಣ್ಣ ಗ್ರಾಮದಲ್ಲಿ ಜನಸಂಖ್ಯೆಯು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರವು ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

English summary

Dolls Outnumber Humans In A Village In Japan

The small village of Nagoro, is located deep in the mountains of Western Japan. Here the streets bare a deserted look with not a living soul to be seen. It is said that there are just over 27 humans who live in this town! To remove the loneliness amongst the villagers, a local named Tsukimi Ayano decided to place a few human-sized dolls on the streets.
X
Desktop Bottom Promotion