Just In
- 7 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 11 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಮಾಲಕನ ಜೀವನ ನಿರ್ವಹಣೆಗೆ ನೆರವಾಗುತ್ತಿರುವ ನಾಯಿ
ಮನುಷ್ಯನಿಗೆ ಅತೀ ಹೆಚ್ಚು ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಇರುವಂತಹ ಪ್ರಾಣಿಯೆಂದರೆ ಅದು ನಾಯಿ ಎಂದು ಹೇಳಬಹುದು. ನಾಯಿ ಎಲ್ಲರಿಗೂ ತುಂಬಾ ಪ್ರಿಯವಾಗಿರುವ ಪ್ರಾಣಿ ಮತ್ತು ಹೆಚ್ಚಾಗಿ ಇದು ಮನುಷ್ಯನ ರಕ್ಷಣೆಯಲ್ಲಿ ತೊಡಗುತ್ತದೆ. ಇದು ಕೂಡ ಕೆಲವೊಂದು ಸಲ ಭಾವನಾತ್ಮಕವಾಗಿ ಸ್ಪಂದಿಸುತ್ತದೆ. ನಾಯಿಯನ್ನು ಮನುಷ್ಯನ ಅತೀ ಆಪ್ತ ಸ್ನೇಹಿತ ಎಂದು ಕರೆಯಲಾಗುತ್ತದೆ. ಮನುಷ್ಯ ಯಾವ ರೀತಿಯಾಗಿ ಅದಕ್ಕೆ ಬುದ್ಧಿ ಕಲಿಸುತ್ತಾನೋ ಅದೇ ರೀತಿಯಲ್ಲಿ ಅದು ವರ್ತಿಸುವುದು. ಏನೇ ಅಪಾಯ ಬಂದರೂ ಅದು ಮಾಲಕನ ರಕ್ಷಿಸುವುದು.
ಈ ಲೇಖನದಲ್ಲಿ ನಾಯಿಯೊಂದು ತನ್ನ ಮಾಲಕನಿಗಾಗಿ ಪ್ರತಿಮೆಯಂತೆ ನಿಂತು ಆತನ ಜೀವನ ನಿರ್ವಹಣೆಗೆ ನೆರವಾಗುತ್ತಿರುವ ಘಟನೆಯ ಬಗ್ಗೆ ಹೇಳಿದ್ದೇವೆ. ಇದು ಖಂಡಿತವಾಗಿಯೂ ಪ್ರತಿಯೊಬ್ಬರ ಮನಸ್ಸು ಗೆಲ್ಲುವುದು ಖಚಿತ. ಬ್ರೆಜಿಲ್ ನ ಫೋರ್ಟಜೆಲಾ ಎಂಬಲ್ಲಿ ಯಾರ್ಜ್ ಲೂಯಿಸ್ ರೂಯಿಜ್ ಬೀದಿ ಬದಿಯ ಕಲಾವಿದನಾಗಿ ತನ್ನ ಜೀವನ ನಿರ್ವಹಣೆ ಮಾಡುವರು. ಈ ವ್ಯಕ್ತಿಗೆ ಇಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಉತ್ತಮ ಜೀವನ ನಿರ್ವಹಣೆಗಾಗಿ ಈ ಕಲಾವಿದ ಬ್ರೆಜಿಲ್ ಗೆ ವಲಸೆ ಬಂದಿರುವರು. ಫೆರಾರಾ ಸ್ಕ್ವೇರ್ ನಲ್ಲಿ ಪ್ರತಿಮೆಯಂತೆ ನಿಂತುಕೊಂಡು ದಾರಿಹೋಕರು ನೀಡುವ ಹಣದಿಂದಲೇ ಅವರು ಜೀವಿಸುವರು.
ಜೀವಂತ ಪ್ರತಿಮೆಯಂತೆ ಕಾರ್ಯನಿರ್ವಹಿಸುವ ವ್ಯಕ್ತಿ ಈ ನಗರದಲ್ಲಿ ಇವರೊಬ್ಬರು ಮಾತ್ರವಲ್ಲ, ಹಲವಾರು ಮಂದಿ ಇದೇ ರೀತಿಯಾಗಿ ಜೀವನ ಸಾಗಿಸುತ್ತಾರೆ. ಆದರೆ ಹೆಚ್ಚಿನ ಜನರ ಗಮನ ಸೆಳೆಯುವುದು ಎಂದರೆ ಇವರೊಂದಿಗೆ ಇರುವಂತಹ ಜಸ್ಪೆ ಎನ್ನುವ ನಾಯಿ. ಇದು ಕೂಡ ತನ್ನ ಮಾಲಕರು ಮಾಡಿದಂತೆ ಏನು ಮಾಡದೆ ಹಾಗೆ ನೇರವಾಗಿ ಪ್ರತಿಮೆಯಂತೆ ನಿಂತುಕೊಳ್ಳುತ್ತದೆ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಇದು ನೇರವಾಗಿ ನಿಲ್ಲಲು ಪ್ರಯತ್ನ ಮಾಡುವುದು.
Most Read: ವಿಶ್ವಕಪ್ 2019: 87 ವರ್ಷದ ಕ್ರಿಕೆಟ್ ಪ್ರೇಮಿ ಅಜ್ಜಿ ಈಗ ದಿನೇ ದಿನೇ ಜನಪ್ರಿಯ!
ಯಾರ್ಜ್ ಮತ್ತು ಜಾಸ್ಪೆ ಈಗ ಫೋರ್ಟಲೆಜಾ ಬೀದಿಗಳಲ್ಲಿ ಈಗ ತುಂಬಾ ಜನಪ್ರಿಯರಾಗಿರುವರು ಎಂದು ಹೇಳಲಾಗಿದೆ. ಇವರನ್ನು ನೋಡಲು ನಗರದ ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಟ್ವಿಟ್ಟರ್ ನಲ್ಲಿ ಇವರಿಬ್ಬರ ವಿಡಿಯೋ ವೈರಲ್ ಆದ ಬಳಿಕ ಈಗ ಇವರಿಬ್ಬರು ವಿಶ್ವ ಮಟ್ಟದಲ್ಲಿ ತುಂಬಾ ಜನಪ್ರಿಯರಾಗಿದ್ದಾರೆ. ಇದನ್ನು ಸುಮಾರು 5 ಮಿಲಿಯನ್ ಜನರು ವೀಕ್ಷಿಸಿದ್ದಾರೆ, 26000 ಲೈಕ್ ಮತ್ತು 9100 ಕಮೆಂಟ್ ಬಂದಿದೆ.ಅದು ಕೂಡ ಕೇವಲ ಮೂರು ವಾರದಲ್ಲಿ.