For Quick Alerts
ALLOW NOTIFICATIONS  
For Daily Alerts

ಕೆಲವು ಬದಲಾವಣೆಗಳು ಪ್ರತಿಯೊಂದು ರಾಶಿಚಕ್ರದವರಿಗೆ ಕಷ್ಟದ ಸಂಗತಿಗಳಾಗಿರುತ್ತವೆ

|

ಪ್ರತಿಯೊಬ್ಬ ವ್ಯಕ್ತಿ ತನ್ನ ವರ್ತನೆ ಹಾಗೂ ಭಾವನೆಗಳ ಮೇಲೆ ಬೆಳವಣಿಗೆ ಹೊಂದಿದ ಪರಿಸರದ ಪ್ರಭಾವ ಗಾಢವಾಗಿರುತ್ತವೆ. ಆ ಪರಿಸರ ಹಾಗೂ ತಮಗೆ ಸಿಕ್ಕ ಪ್ರೇರಣೆಗಳ ಆಧಾರದ ಮೇಲೆಯೇ ವ್ಯಕ್ತಿ ಭಾವನೆಗಳಲ್ಲಿ ಬದಲಾವಣೆ ಹಾಗೂ ವರ್ತನೆಗಳನ್ನು ಹೊಂದುವನು. ರಾಶಿಚಕ್ರಗಳು ಹಾಗೂ ಗ್ರಹಗಳ ಪ್ರಭಾವದಿಂದ ಆಯಾ ರಾಶಿಚಕ್ರಗಳಿಗೆ ಅನುಸಾರವಾಗಿ ಇರುವಂತಹದ್ದೇ ಪರಿಸರ ಹಾಗೂ ಸನ್ನಿವೇಶಗಳು ಎದುರಾಗುತ್ತವೆ ಎಂದು ಸಹ ಹೇಳಲಾಗುವುದು. ಹಾಗಾಗಿ ವ್ಯಕ್ತಿ ಬೆಳೆದು ಬಂದ ಪರಿಸರ ಹಾಗೂ ಕಲಿತ ಸಂಗತಿಗಳನ್ನು ಬಹುಬೇಗ ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಅದರ ಬದಲಾವಣೆಗೆ ಸಾಕಷ್ಟು ಸಮಯಗಳು ಹಿಡಿಯುವುದು.

ಬದಲಾವಣೆ ಎನ್ನುವುದು ಅತ್ಯಂತ ಪ್ರಮುಖವಾದ ಸಂಗತಿ. ವ್ಯಕ್ತಿ ತನ್ನಲ್ಲಿದ್ದ ಸ್ವಭಾವಗಳನ್ನು ತಿದ್ದುಕೊಳ್ಳಲು ಅಥವಾ ತನ್ನವರಿಗಾಗಿ ನಮ್ಮಲ್ಲಿರುವ ಹವ್ಯಾಸಗಳಲ್ಲಿ ಬದಲಾವಣೆ ತಂದುಕೊಳ್ಳುವುದು, ಇಲ್ಲವೇ ಸಮಾಜದ ಹಿತಕ್ಕಾಗಿ ತನ್ನಲ್ಲಿ ಇನ್ನಷ್ಟು ಸಕಾರಾತ್ಮಕ ಚಿಂತನೆ ಅಥವಾ ವರ್ತನೆಯ ಬದಲಾವಣೆ ಪಡೆಯಬೇಕು ಎಂದಾದರೆ ವ್ಯಕ್ತಿ ಸಾಕಷ್ಟು ಶ್ರಮವನ್ನು ನಿಯೋಗಿಸಬೇಕು. ಪ್ರಮುಖವಾಗಿ ದೃಢವಾದ ಮಾನಸಿಕ ಸಂಕಲ್ಪವು ಅತ್ಯಗತ್ಯವಾಗಿರುತ್ತದೆ. ಮಕ್ಕಳು ಚಿಕ್ಕವರಿರುವಾಗ ಅವರಲ್ಲಿ ಕಾಣುವ ವಿಭಿನ್ನತೆ ಅಥವಾ ಅಸಮಧಾನಕರವಾದ ಸಂಗತಿಯನ್ನು ಸುಲಭವಾಗಿ ತಿದ್ದಿ ತೀಡಬಹುದು. ಆದರೆ ವ್ಯಕ್ತಿ ಪ್ರಬುದ್ಧನಾದ ಬಳಿಕ ಅವನಲ್ಲಿರುವ ಆಲೋಚನೆ ಅಥವಾ ನಡವಳಿಕೆಯಲ್ಲಿ ಬದಲಾವಣೆಯನ್ನು ಅಷ್ಟು ಸುಲಭವಾಗಿ ತರಲು ಸಾಧ್ಯವಿಲ್ಲ.

ಬದಲಾವಣೆ ಬಯಸುತ್ತಾರೆ!

ಬದಲಾವಣೆ ಬಯಸುತ್ತಾರೆ!

ವ್ಯಕ್ತಿಯ ವರ್ತನೆಯಿಂದ ನೋವುಂಟಾದರೆ ಅಥವಾ ಅದರಿಂದ ಸಮಾಜಕ್ಕೆ ಕೆಡುಕಾಗುತ್ತಿದೆ ಎಂದಾದರೆ ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳಲು ಸುಲಭವಾಗಿ ಹೇಳಬಹುದು. ಆದರೆ ಅದನ್ನು ವ್ಯಕ್ತಿ ಎಷ್ಟರ ಮಟ್ಟಿಗೆ ಅನುಸರಿಸುತ್ತಾನೆ? ಅದರಿಂದ ಅವನ ಮಾನಸಿಕ ಸ್ಥಿತಿಯಲ್ಲಿ ಯಾವ ಬದಲಾವಣೆ ಉಂಟಾಗುವುದು? ಅದು ಷ್ಟು ಸುಲಭವೇ? ಎನ್ನುವುದನ್ನು ಯಾರು ಚಿಂತಿಸುವುದಿಲ್ಲ. ಕೇವಲ ಬದಲಾವಣೆಯನ್ನು ಬಯಸುತ್ತಾರೆ ಅಷ್ಟೆ. ಒಳ್ಳೆಯದು ಎನ್ನುವುದರ ಜೊತೆಗೆ ಕೆಟ್ಟದ್ದು ಸಹ ಒಂದು ನಾಣ್ಯದ ಎರಡು ಮುಖಗಳಂತೆ ಹೊಂದಿಕೊಂಡೇ ಇರುತ್ತವೆ. ಒಳ್ಳೆಯ ಮತ್ತು ಕೆಟ್ಟ ಸಂಗತಿಗಳ ಬಗ್ಗೆ ಸಾಕಷ್ಟು ಹೋಲಿಕೆ ಹಾಗೂ ವಿಮರ್ಶೆ ನಡೆಸುವುದು ಸಹಜ.

ಒಳ್ಳೆಯ ಹಾಗೂ ಕೆಟ್ಟ ಗುಣಗಳು

ಒಳ್ಳೆಯ ಹಾಗೂ ಕೆಟ್ಟ ಗುಣಗಳು

ವ್ಯಕ್ತಿಯಲ್ಲೂ ಸಹ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇರುತ್ತವೆ. ಉತ್ತಮ ವ್ಯಾಸಗಳು ಒಂದಿಷ್ಟು ಇದ್ದರೆ ಕೆಲವು ನ್ಯೂನತೆಗಳು ಸಹ ಇರುತ್ತವೆ. ಅವುಗಳನ್ನು ಗುರುತಿಸುವುದು ಮತ್ತು ಸರಿಪಡಿಸಿಕೊಳ್ಳುವುದು ಎಂದರೆ ಅತ್ಯಂತ ಕಷ್ಟದ ಸಂಗತಿಯಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರಲ್ಲಿಯೂ ಕೆಲವು ನ್ಯೂನತೆಗಳು ಅಥವಾ ಅಸಹಜವಾದ ವರ್ತನೆಗಳು ಇರುತ್ತವೆ. ಅವುಗಳನ್ನು ಗುರುತಿಸಿ, ಬದಲಾವಣೆಗೆ ಆಗ್ರಹಿಸಿದರೆ ಅವರಲ್ಲಿ ಒಂದು ಬಗೆಯ ಒತ್ತಡ ಉಂಟಾಗುವುದು. ಜೊತೆಗೆ ಅಂತಹ ಬದಲಾವಣೆಯನ್ನು ಪಡೆದು ಮುಂದೆ ಸಾಗಲು ಸಾಕಷ್ಟು ಕಷ್ಟವನ್ನು ಅನುಭವಿಸುವರು ಎಂದು ಹೇಳಲಾಗುವುದು. ಹಾಗಾದರೆ ಆ ನ್ಯೂನತೆ ಅಥವಾ ಅಸಹಜವಾದ ವರ್ತನೆಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವನ್ನು ಹೊಂದಿದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

ಮೇಷ

ಮೇಷ

ನೀವು ಮೇಷರಾಶಿಯವರ ಸ್ನೇಹಿತರಾಗಿದ್ದರೆ ಅವರನ್ನು ನೀವು ಸೂಕ್ಷ್ಮವಾಗಿ ನಿರೀಕ್ಷಿಸಿ. ಅವರು ಮಾಡುವ ಕೆಲಸ ಕಾರ್ಯಗಳಲ್ಲಿ ಕೊಂಚ ಸಮಯ ತೆಗೆದುಕೊಳ್ಳುವುದು. ಅವರಿಗೆ ತಾವು ಮಾಡುವ ಕೆಲಸದಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎನ್ನುವುದರ ಅರಿವು ಇರುವುದಿಲ್ಲ. ಅವರಲ್ಲಿ ನೀವೇನಾದರೂ ಒಂದು ಕೆಲಸವನ್ನು ನೀಡಿ, ಬಳಿಕ ಬೇಗ ಕೆಲಸ ಮಾಡುವಂತೆ ಹೇಳಿ. ಆಗ ಅವರಿಗೆ ಆ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಿ ಮುಗಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು. ಅಲ್ಲದೆ ಬೇಗ ಮುಗಿಸಲು ಆಗದೆ ಇರುವಾಗ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಮೇಷ ರಾಶಿಯವರ ಸಮಸ್ಯೆ ಎಂದರೆ ಸೂಕ್ತ ಸಮಯದಲ್ಲಿ ಕೆಲಸ ಮುಗಿಸುವುದು. ಅದರಲ್ಲಿ ಬದಲಾವಣೆ ಕಂಡುಕೊಳ್ಳಲು ಹೇಳಿದರೆ ಅದು ಅವರಿಗೆ ಕಷ್ಟದ ಸಂಗತಿಯಾಗುವುದು.

ವೃಷಭ

ವೃಷಭ

ವೃಷಭ ರಾಶಿಯವರು ಬಹಳ ಪ್ರತಿಕಾರವನ್ನು ಹೊಂದಿರುವ ವ್ಯಕ್ತಿ ಆಗಿರುತ್ತಾರೆ. ಭಾವನಾತ್ಮಕ ಸಂವೇದನಾ ಶೀಲರೂ ಆಗಿರುತ್ತಾರೆ. ಒಮ್ಮೆ ಅವರು ನಿಮ್ಮನ್ನು ನಂಬಿದರೆ ಅದಕ್ಕೆ ಬದ್ಧರಾಗಿರುತ್ತಾರೆ. ಜೊತೆಗೆ ಭರವಸೆಯನ್ನು ಇಡಬಹುದಾದಂತಹ ವ್ಯಕ್ತಿಗಳಾಗಿರುತ್ತಾರೆ. ಸಂಬಂಧ ಮತ್ತು ಸ್ನೇಹದ ವಿಷಯದಲ್ಲಿ ನೀಡುವುದು ಮತ್ತು ಪಡೆಯುವುದರಲ್ಲಿ ಅದ್ಭುತ ವ್ಯಕ್ತಿಗಳಾಗಿರುತ್ತಾರೆ. ಇವರು ಒಮ್ಮೆ ನೋವುಗೊಂಡರೆ ಶಾಶ್ವತವಾಗಿ ಇರುತ್ತದೆ. ಇವರು ತಮ್ಮ ನೋವಿಗೆ ಕಾರಣರಾದ ವ್ಯಕ್ತಿಗಳನ್ನು ಅಷ್ಟು ಸುಲಭವಾಗಿ ಕ್ಷಮಿಸುವುದಿಲ್ಲ. ಈ ಗುಣವನ್ನು ಅವರಲ್ಲಿ ಬದಲಿಸಿಕೊಳ್ಳಲು ಹೇಳಿದರೆ ಅದು ಅವರಿಗೆ ಬಹಳ ಹಿಂಸಾತ್ಮಕವಾಗಿರುತ್ತದೆ. ಜೊತೆಗೆ ಅದು ಅವರಿಂದ ಸಾಧ್ಯವಾಗದ ಸಂಗತಿ.

Most Read: 2019ರಲ್ಲಿ ಯಾವ್ಯಾವ ರಾಶಿಯವರಿಗೆ ಅದೃಷ್ಟ ತರುವ ಬಣ್ಣ ಯಾವುದು ಗೊತ್ತಾ?

ಮಿಥುನ

ಮಿಥುನ

ಈ ರಾಶಿಯ ವ್ಯಕ್ತಿಗಳು ಅತಿಯಾದ ಚಿಂತನಾಶೀಲರು ಹಾಗೂ ಯೋಚಿಸುವ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ಇವರು ಚಿಂತಕರ ಮೇಲೆ ಸುಲಭವಾಗಿ ಪರಿಣಾಮ ಬೀರುತ್ತಾರೆ ಎಂದು ಹೇಳಲಾಗುವುದು. ಇವರು ಹೆಚ್ಚು ಸಮಯ ಮನೆಯಲ್ಲಿ ಇರಲು ಬಯಸುತ್ತಾರೆ. ಅಲ್ಲದೆ ನಾಲ್ಕು ಗೋಡೆಯ ನಡುವೆ ಇರುವಂತ ಕೆಲಸ ಕಾರ್ಯ ಕ್ರೀಡೆಗಳಲ್ಲಿ ಹೆಚ್ಚು ಸಮಯವನ್ನು ಕಳೆಯುವರು. ಇವರು ತಮ್ಮ ಆಳವಾದ ಚಿಂತನಾ ಶಕ್ತಿಯಿಂದಲೇ ವಿಶ್ವದ ಸಾಹಸವನ್ನು ಸಹ ಅನ್ವೇಷಿಸುವ ವ್ಯಕ್ತಿಗಳಾಗಿರುತ್ತಾರೆ. ಎಲ್ಲಾ ಸಂಗತಿಯಲ್ಲೂ ಇವರು ಬಹಳಷ್ಟು ಆಳವಾಗಿ ಚಿಂತಿಸುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರಲ್ಲಿ ಬದಲಾವಣೆ ತಂದುಕೊಳ್ಳಲು ಹೇಳಿದರೆ ಅದು ಅವರಿಗೆ ಕಷ್ಟದ ಸಂಗತಿಯಾಗಿರುತ್ತದೆ.

ಕರ್ಕ

ಕರ್ಕ

ಇವರು ಸಾಮಾನ್ಯವಾಗಿ ಆರಾಮದಾಯಕ ಜೀವನ ಹಾಗೂ ಸೌಕರ್ಯಗಳಿಂದ ಕೂಡಿರಲು ಬಯಸುತ್ತಾರೆ. ಇವರು ಹೊಂದುವ ಆರಾಮದಾಯಕ ಜೀವನವನ್ನು ಎಲ್ಲರೂ ಪ್ರಶಂಸಿಸುತ್ತಾರೆ. ಎಲ್ಲಾ ಸಮಯದಲ್ಲೂ ಒಂದೇ ರೀತಿಯ ಆರಾಮದಾಯಕ ಸ್ಥಿತಿ ಇರುವುದಿಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇವರು ತಮಗೆ ಎಲ್ಲಿ ಆರಾಮದಾಯಕ ಸ್ಥಿತಿ ಒದಗಿ ಬರುತ್ತದೆಯೋ ಅಲ್ಲಿ ಹೆಚ್ಚು ಸಮಯ ಕಳೆಯುವರು ಜೊತೆಗೆ ಅದಕ್ಕೆ ಹೆಚ್ಚು ಹತ್ತಿರವಾಗುವರು. ಅದರಿಂದ ದೂರ ಸರಿಯುವುದು ಅವರಿಗೆ ಕಷ್ಟವಾಗುವುದು. ಅವರ ಈ ಸಂಗತಿಯಿಂದ ಬದಲಾವಣೆಯನ್ನು ತಂದುಕೊಳ್ಳಲು ಹೇಳಿದರೆ ಅದು ಅವರಿಗೆ ಕಷ್ಟ ಮತ್ತು ಹಿಂಸಾತ್ಮಕ ವಿಷಯವಾಗಿರುತ್ತದೆ.

ಸಿಂಹ

ಸಿಂಹ

ಇವರಿಗೆ ಜಗತ್ತಿನಲ್ಲಿ ಇರುವ ಎಲ್ಲಾ ಸಂಗತಿಗಳು ಒಳ್ಳೆಯದು ಮತ್ತು ಉತ್ತಮವಾಗಿರುತ್ತದೆ. ಅದು ಅವರ ಅಹಂಗೆ ಗಾಯವನ್ನುಂಟುಮಾಡದೆ ಇರುವಲ್ಲಿವರೆಗೆ ಎನ್ನಬಹುದು. ಬಹುತೇಕ ಸಂದರ್ಭದಲ್ಲಿ ಇವರು ರಾಜವಂಶದ ವ್ಯಕ್ತಿಯಂತೆ ಬದುಕಲು ಬಯಸುವರು. ಅಲ್ಲದೆ ಹಾಗೆಯೇ ಇರುತ್ತಾರೆ ಸಹ. ಹಾಗಾಗಿ ಇವರು ತಮ್ಮಲ್ಲಿ ಪೂರ್ವ ಸ್ಥಾಪಿತ ಅಹಂಅನ್ನು ಹೊಂದಿರುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಬಹಳ ವಿನಮ್ರರಾಗಿರಲು ನಿರ್ಧರಿಸುತ್ತಾರೆ. ಅಹಂಕಾರವನ್ನು ಪಕ್ಕಕ್ಕೆ ಇಡುತ್ತಾರೆ. ತಮ್ಮ ಮನಸ್ಸಿಗೆ ಹಾಗೂ ಅಹಂಗೆ ನೋವುಂಟುಮಾಡುವ ಸಂಗತಿಯ ವಿರುದ್ಧ ಸಿಡಿದು ಬೀಳುತ್ತಾರೆ. ಈ ವಿಷಯಗಳಲ್ಲಿ ಯಾವುದೇ ಬದಲಾವಣೆಯನ್ನು ಅವರು ಮಾಡಿಕೊಳ್ಳಲು ಬಯಸುವುದಿಲ್ಲ.

ಕನ್ಯಾ

ಕನ್ಯಾ

ಎಲ್ಲಾ ವ್ಯಕ್ತಿ ಹಾಗೂ ವಿಷಯದಲ್ಲೂ ಪರಿಪೂರ್ಣತೆಯನ್ನು ಕಾಣಲು ಬಯಸುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಕೆಲಸ ಉತ್ತಮವಾಗಿ ಇರುವಂತೆ ಮಾಡುವಲ್ಲಿ ಹೆಚ್ಚಿನ ಶ್ರಮವನ್ನು ವ್ಯಯಿಸುತ್ತಾರೆ. ಅದು ಕೇವಲ ಕೆಲಸದ ವಿಷಯಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲಾ ಸಂಗತಿಯಲ್ಲೂ ಅವರ ಶ್ರಮ ಹೆಚ್ಚಾಗಿಯೇ ಇರುತ್ತದೆ. ಕಷ್ಟಕರವಾದ ಸಂಗತಿಯಲ್ಲಿ ಅನಗತ್ಯ ವಿಷಯದಲ್ಲೂ ಅವರು ಈ ಪರಿಯಲ್ಲಿಯೇ ಪರಿಪೂರ್ಣತೆಯನ್ನು ಕಾಣಲು ಬಯಸುವರು. ಅದು ಅವರಿಗೆ ತೊಂದರೆಯನ್ನುಂಟುಮಾಡುತ್ತದೆ. ಅವರ ಈ ಸ್ವಭಾವದಲ್ಲಿ ಬದಲಾವಣೆ ತಂದುಕೊಳ್ಳಲು ಅವರಿಗೆ ಬಹಳಷ್ಟು ಹಿಂಸೆ ಹಾಗೂ ಕಷ್ಟವಾಗುವುದು.

Most Read: ಈ 5 ರಾಶಿಚಕ್ರದವರು ದ್ವೇಷ ಕಟ್ಟಿಕೊಳ್ಳುವುದಿಲ್ಲ-ಇತರರ ತಪ್ಪನ್ನು ಬೇಗನೇ ಕ್ಷಮಿಸಿ ಬಿಡುವರು

ತುಲಾ

ತುಲಾ

ಬಹುತೇಕ ಸಂದರ್ಭದಲ್ಲಿ ಇವರು ಇತರರನ್ನು ಮೆಚ್ಚಿಸಲು ಕೆಲಸವನ್ನು ನಿರ್ವಹಿಸುತ್ತಾರೆ. ಇತರರ ಅಗತ್ಯತೆ ಸಂತೋಷಕ್ಕಾಗಿ ಯೋಚಿಸುವುದು ಹಾಗೂ ಕೆಲಸ ಮಾಡುವುದು ಒಳ್ಳೆಯದು. ಆದರೆ ಅದು ಒಂದು ಮಿತಿಯನ್ನು ಮೀರಿದರೆ ಅಥವಾ ತಮ್ಮ ಅಗತ್ಯತೆಗಳನ್ನು ಬದಿಗೊತ್ತಿ ಇತರರಿಗೆ ಸಹಾಯ ಮಾಡಲು ಮುಂದಾಗುವುದು ಎಲ್ಲಾ ಸಮಯದಲ್ಲೂ ಉಚಿತ ಎನಿಸಿಕೊಳ್ಳುವುದಿಲ್ಲ. ಎಲ್ಲರನ್ನೂ ಸಂತೋಷ ಪಡಿಸುವುದು ಅಥವಾ ತೃಪ್ತಿಪಡಿಸುವುದು ಅಷ್ಟು ಸುಲಭವಲ್ಲ ಎನ್ನುವುದನ್ನು ಇವರು ಅರಿಯಬೇಕು. ಅವರಿಗೆ ತಮ್ಮ ಈ ಗುಣದಲ್ಲಿ ಸುಧಾರಣೆ ಅಥವಾ ಬದಲಾವಣೆ ತಂದುಕೊಳ್ಳುವುದು ಬಹಳ ಕಷ್ಟದ ಸಂಗತಿಯಾಗುವುದು.

ವೃಶ್ಚಿಕ

ವೃಶ್ಚಿಕ

ಇವರು ಶ್ರಮದಾಯಕ ವ್ಯಕ್ತಿಯಾಗಿರುತ್ತಾರೆ. ತಮ್ಮ ಕೆಲಸವನ್ನು ಪೂರ್ತಿಗೊಳಿಸಲು ಅಥವಾ ಗುರಿಯನ್ನು ತಲುಪಲು ಸಾಕಷ್ಟು ಕಷ್ಟಕರವಾದ ಕೆಲಸವನ್ನು ಕೈಗೊಳ್ಳುವರು. ಗುರಿ ಸಾಧನೆಗೆ ಎಂತಹ ಪ್ರಯತ್ನದಲ್ಲಿ ತೊಡಗಿಕೊಳ್ಳಲು ಸಹ ಇವರು ಭಯಪಡುವುದಿಲ್ಲ. ಅವರ ಗಮನವು ಸಾಧನೆಯ ವಿಷಯದಲ್ಲಿ ಅನಾವರಣಗೊಂಡಿರುತ್ತದೆ. ಇವರು ಸೌಂದರ್ಯವನ್ನು ಪ್ರಶಂಸಿಸುವುದು ಅಥವಾ ಇನ್ಯಾವುದೇ ಸಾಮಾನ್ಯ ಸಂಗತಿಯ ಬಗ್ಗೆ ಹೆಚ್ಚು ಗಮನ ಹಾಗೂ ಪ್ರಾಮುಖ್ಯತೆ ನೀಡುವುದಿಲ್ಲ. ಅವರ ಈ ಗುಣದಲ್ಲಿ ಬದಲಾವಣೆಯನ್ನು ತಂದುಕೊಳ್ಳುವುದು ಕಷ್ಟದ ಸಂಗತಿಯಾಗಿರುತ್ತದೆ.

ಧನು

ಧನು

ಈ ರಾಶಿಯ ವ್ಯಕ್ತಿಗಳು ಬಹುತೇಕ ಎಲ್ಲಾ ಸಂದರ್ಭದಲ್ಲೂ ಪ್ರತಿ ಸ್ಪರ್ಧಿಯ ರೀತಿಯಲ್ಲಿಯೇ ಪಾಲ್ಗೊಳ್ಳುತ್ತಾರೆ. ಕೆಲವು ಸ್ಪರ್ಧೆಗಳು ಆರೋಗ್ಯಕರವಾಗಿದ್ದು, ಉತ್ತಮ ಫಲಿತಾಂಶ ನೀಡುವುದು. ಆದರೆ ಕೆಲವೊಮ್ಮೆ ಸ್ಪರ್ಧಾತ್ಮಕ ಮನೋಭಾವವು ಸಂಬಂಧವನ್ನು ನಾಶಪಡಿಸಬಹುದು. ಇವರು ಪೈಪೋಟಿ ನಡೆಸುವಾಗ ಸಾಕಷ್ಟು ಚಿಂತನೆ ಹಾಘೂ ಯಾವುದು ಸೂಕ್ತ ಸಂಗತಿ ಎನ್ನುವುದು ಮೊದಲು ತಿಳಿದಿರಬೇಕು. ಆದರೆ ಇವರ ಸ್ಪರ್ಧಾತ್ಮಕ ಮನೋಭಾವದಿಂದ ಅವರಿಗೆ ಬದಲಾವಣೆ ಕಂಡುಕೊಳ್ಳುವುದು ಬಹಳ ಕಷ್ಟವಾಗಿರುತ್ತದೆ.

ಮಕರ

ಮಕರ

ಈ ರಾಶಿಯ ವ್ಯಕ್ತಿಗಳು ನಿಯಂತ್ರಿತವಾದ ಜೀವನವನ್ನು ನಡೆಸುತ್ತಾರೆ. ಇವರು ಅಗತ್ಯವಾದ ಕೆಲಸವನ್ನು ಮೊದಲು ಪೂರೈಸಲು ಮುಂದಾಗುತ್ತಾರೆ. ಅಲ್ಲದೆ ಅಧಿಕ ಸಮಯ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲ ಬಯಸುವರು. ಅದಕ್ಕಾಗಿಯೇ ಹೆಚ್ಚಿನ ಆಧ್ಯತೆಯನ್ನು ಸಹ ನೀಡುವರು. ಇವರು ಕೆಲವೊಮ್ಮೆ ಬಂದ ಪರಿಸ್ಥಿತಿ ಸಿಕ್ಕ ಅವಕಾಶಗಳೊಂದಿಗೆ ಮುಂದೆ ಸಾಗುತ್ತಾರೆ. ಜೊತೆಗೆ ಅದರಲ್ಲಿಯೇ ಜೀವನದ ಆನಂದ ಕಂಡುಕೊಳ್ಳುವರು. ಇವರು ಎಲ್ಲಾ ಸಂಗತಿಯೂ ವಿನೋದ ಅಥವಾ ವಿಶ್ರಾಂತಿಗಾಗಿಯೇ ಮೀಸಲಾಗಿರುತ್ತದೆ ಎಂದರ್ಥವಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಇವರ ಈ ಗುಣದಲ್ಲಿ ಬದಲಾವಣೆ ತಂದುಕೊಳ್ಳಲು ಬಹಳ ಕಷ್ಟಪಡುವರು.

Most Read: ಧನು ರಾಶಿಯ ಪುರುಷ ಹಾಗೂ ಕುಂಭ ರಾಶಿಯ ಮಹಿಳೆಯ ನಡುವಿನ ಹೊಂದಾಣಿಕೆ ಹೇಗಿರುವುದು ನೋಡಿ...

ಕುಂಭ

ಕುಂಭ

ಈ ರಾಶಿಯ ವ್ಯಕ್ತಿಗಳು ಬಹುದೊಡ್ಡ ಚಿಂತಕರು ಎನ್ನಬಹುದು. ಇವರ ಆಲೋಚನೆಗಳನ್ನು ಇವರು ತೀರ್ಪಿನಂತೆ ಪರಿಗಣಿಸುತ್ತಾರೆ. ನಿಮ್ಮ ಮನಸ್ಸಿನಲ್ಲಿ ಇರುವ ಪೂರ್ವಾಗ್ರಹವನ್ನು ನೀವು ಬಿಡಬೇಕು. ಇವರು ಯಾವಾಗಲೂ ತಾವೇ ಸರಿ ಎಂದು ಯೋಚಿಸುತ್ತಾರೆ. ಇತರರ ನಿಮ್ಮನ್ನು ನ್ಯಾಯೋಚಿತವಾಗಿ ಮತ್ತು ಒಳ್ಳೆಯ ವ್ಯಕ್ತಿ ಎಂದು ಅನುಭೂತಿ ತೋರಿಸಬೇಕು ಎಂದು ಬಯಸುವರು. ಅವರ ಈ ಗುಣದಲ್ಲಿ ಬದಲಾವಣೆಯನ್ನು ತಂದುಕೊಳ್ಳಲು ಅವರಿಗೆ ಬಹಳ ಕಷ್ಟದ ಸಂಗತಿಯಾಗಿರುತ್ತದೆ.

ಮೀನ

ಮೀನ

ಭಾವನಾತ್ಮಕ ಜೀವಿಗಳಾದ ಇವರಿಗೆ ಕಷ್ಟದ ಸಂಗತಿ ಅಥವಾ ನೋವಿನಿ ವಿಚಾರದಿಂದ ಅಷ್ಟು ಸುಲಭವಾಗಿ ಹೊರಬರಲು ಕಷ್ಟವಾಗುವುದು. ಕೆಲವೊಮ್ಮೆ ಇವರಿಗೆ ಉಂಟಾದ ನೋವಿಗೆ ಅತಿಯಾಗಿ ದುಃಖಿಸುತ್ತಾರೆ. ಈ ರೀತಿಯ ವರ್ತನೆಯಿಂದ ಮಾನಸಿಕವಾಗಿ ಸಾಕಷ್ಟು ದಣಿಯುವರು. ಜೊತೆಗೆ ಜೀವನದಲ್ಲಿ ಇರುವ ಕೆಲವು ಸಂತೋಷಗಳು ಇವುಗಳ ನಡುವೆ ಮರೆಯಾಗುವುದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಭಾವನಾತ್ಮಕವಾಗಿರುವ ಈ ಸಂಗತಿಯಲ್ಲಿ ಬದಲಾವಣೆ ಕಂಡುಕೊಳ್ಳಲು ಇವರಿಗೆ ಬಹಳಷ್ಟು ನೋವು ಮತ್ತು ಕಷ್ಟ ಉಂಟಾಗುವುದು.

Read more about: zodiac sign
English summary

Difficult Traits Of Each Zodiac Sign

Every human possesses some qualities that set them apart from others. While some of these qualities add to the personality, others might just be a hindrance to the growth. Moreover, of the latter, while some might be easy to change, others are difficult to let go. Astrology tells us how and which difficult traits are not easy to let go for each zodiac sign.
Story first published: Tuesday, January 29, 2019, 17:22 [IST]
X
Desktop Bottom Promotion