For Quick Alerts
ALLOW NOTIFICATIONS  
For Daily Alerts

ಕೈಬೆರಳಿಗೆ ಆಭರಣ ಚುಚ್ಚಿಸಿಕೊಳ್ಳುವ ಹೊಸ ಫ್ಯಾಷನ್ ವೈರಲ್

|

ಯುವ ಜನತೆಗೆ ದಿನಕ್ಕೊಂದು ಫ್ಯಾಷನ್ ಪಾಲಿಸಿಕೊಂಡು ಹೋಗುವರು. ಒಬ್ಬನನ್ನು ನೋಡಿ ಸಮೂಹ ಸನ್ನಿಯಂತೆ ಫ್ಯಾಷನ್ ಗಳು ದಿನೇ ದಿನೇ ಜನಪ್ರಿಯವಾಗುತ್ತಿದೆ. ಪ್ರತೀ ಗಂಟೆಗೊಂದು ಫ್ಯಾಷನ್ ಬರುತ್ತಲೇ ಇರುವುದು. ಅದನ್ನು ಮುಗಿಬಿದ್ದು ಪಾಲಿಸಿಕೊಂಡು ಹೋಗುವವರಿಗೆ ಏನೂ ಕಡಿಮೆ ಇಲ್ಲ. ಭಾರತೀಯರು ಧರಿಸುತ್ತಿದ್ದಂತಹ ಮೂಗುತಿಯನ್ನು ಒಂದು ಫ್ಯಾಷನ್ ಆಗಿ ಮಾಡಿಕೊಂಡು ವಿದೇಶಿಯರು ಅದನ್ನು ಧರಿಸಲು ಆರಂಭಿಸಿದರು. ಇದರ ಬಳಿಕ ಹೊಕ್ಕಳಿಗೂ ಮೂಗುತಿಗೆ ಬಳಸುವಂತಹ ರಿಂಗ್ ಅಥವಾ ಆಭರಣ ಚುಚ್ಚಿಸಿಕೊಳ್ಳಲು ಆರಂಭವಾಯಿತು. ಇದು ಕೂಡ ತುಂಬಾ ಜನಪ್ರಿಯವಾಯಿತು. ಅದೇ ರೀತಿ ತುಟಿಗಳ ಮೇಲ್ಬಾಗದಲ್ಲಿ, ಹುಬ್ಬಗಳು ಹೀಗೆ ಹಲವಾರು ಕಡೆಗಳಲ್ಲಿ ಆಭರಣ ಚುಚ್ಚಿಸಿಕೊಳ್ಳುವಂತಹ ಫ್ಯಾಷನ್ ಕಂಡುಬರುತ್ತಿದೆ.

Diamond Finger

ಇನ್ನು ಕೆಲವರು ತುಂಬಾ ಸೂಕ್ಷ್ಮವಾಗಿರುವ ಭಾಗದಲ್ಲಿ ಆಭರಣ ಚುಚ್ಚಿಸಿಕೊಳ್ಳುವರು. ಈಗ ಕೈಬೆರಳಿಗೆ ಆಭರಣ ಚುಚ್ಚಿಸಿಕೊಳ್ಳುವಂತಹ ಹೊಸ ಫ್ಯಾಷನ್ ಬಂದಿದೆ. ಈ ಫ್ಯಾಷನ್ ಭಾರೀ ಮಟ್ಟದಲ್ಲಿ ವೈರಲ್ ಆಗಿದೆ. ಯುವ ಜೋಡಿಯಲ್ಲಿ ಇಂತಹ ಒಂದು ಫ್ಯಾಷನ್ ಕಂಡುಬರುತ್ತಿದೆ. ಕೈಬೆರಳಿಗೆ ನೇರವಾಗಿ ವಜ್ರ ಅಥವಾ ಬಂಗಾರದ ಆಭರಣ ಚುಚ್ಚಿಸಿಕೊಳ್ಳುವುದು. ಮದುವೆ ಸಮಾರಂಭದ ವೇಳೆ ಹೆಚ್ಚಾಗಿ ಕೈಬೆರಳಿಗೆ ಉಂಗುರ ಹಾಕಿಕೊಳ್ಳುವರು. ಆದರೆ ಇಂದಿನ ಯುವ ಜನಾಂಗವು ಇದರ ಬದಲಿಗೆ ಹೊಸ ರೀತಿಯನ್ನು ಅಳವಡಿಸಿಕೊಂಡಿದೆ. ಅದೇನೆಂದರೆ ನೇರವಾಗಿ ಕೈಬೆರಳಿಗೆ ಈ ಉಂಗುರ ಚುಚ್ಚಿಸಿಕೊಳ್ಳುವುದು. ಸಾಮಾಜಿಕ ಜಾಲತಾಣದಲ್ಲಿ ಈ ಹೊಸ ಫ್ಯಾಷನ್ ವೈರಲ್ ಆಗಿದೆ. ಈ ಫ್ಯಾಷನ್ ಹೇಗೆ ಮತ್ತು ಯಾವ ರೀತಿಯಲ್ಲಿ ವೈರಲ್ ಆಗಿದೆ ಮತ್ತು ಅದರಿಂದ ಏನಾದರೂ ಅಪಾಯವಿದೆಯಾ ಎಂದು ನೀವು ತಿಳಿಯಿರಿ.

ದೇಹಕ್ಕೆ ಆಭರಣ ಚುಚ್ಚುವ ವೃತ್ತಿಪರರು ಈ ಬಗ್ಗೆ ಏನು ಹೇಳುವರು

ದೇಹಕ್ಕೆ ಆಭರಣ ಚುಚ್ಚುವ ವೃತ್ತಿಪರರು ಈ ಬಗ್ಗೆ ಏನು ಹೇಳುವರು

ಪ್ರತಿಯೊಂದು ಕೈಬೆರಳಿನ ಮಧ್ಯ ಭಾಗದಲ್ಲಿ ತುಂಬಾ ಮೃಧುವಾಗಿರುವಂತಹ ಸ್ನಾಯುಗಳು ಇರುವುದು. ಇದು ಬೆರಳಿಗೆ ಸ್ಥಿತಿಸ್ಥಾಪಕತ್ವ ನೀಡುವುದು. ತುಂಬಾ ಕಡಿಮೆ ಅಂಗಾಂಶಗಳು ಈ ಭಾಗದಲ್ಲಿ ಕೆಲಸ ಮಾಡುವುದು. ಇದರಿಂದಾಗಿ ಕೈಬೆರಳಿನ ಚರ್ಮಕ್ಕೆ ಚುಚ್ಚಿಸಿಕೊಳ್ಳುವುದು ಅಷ್ಟು ಸುಲಭವಾಗಿ ಆಗುವುದಿಲ್ಲ. ಇದರಿಂದಾಗಿ ಇದನ್ನು ಪರಿಗಣಿಸಬೇಡಿ ಎಂದು ಹೇಳಲಾಗುತ್ತದೆ.

Most Read: ಈ ಮಹಿಳೆ ದೇಹವನ್ನು ವೈದ್ಯರು 27 ಸಾವಿರ ತುಂಡುಗಳನ್ನಾಗಿ ಮಾಡಿದರು! ಯಾಕೆ ಗೊತ್ತೇ?

ತುಂಬಾ ಕ್ರೇಜ್ ಮತ್ತು ಅಪಾಯಕಾರಿ ಟ್ರೆಂಡ್

ತುಂಬಾ ಕ್ರೇಜ್ ಮತ್ತು ಅಪಾಯಕಾರಿ ಟ್ರೆಂಡ್

ದಂಪತಿಯು ಪರಸ್ಪರರ ಬಗ್ಗೆ ಇರುವಂತಹ ಬದ್ಧತೆ ತೋರಿಸಲು ಈ ರೀತಿಯ ಕೈಬೆರಳಿನ ಚರ್ಮಕ್ಕೆ ಆಭರಣ ಚುಚ್ಚಿಸಿಕೊಳ್ಳಬಹುದು. ಆದರೆ ವೈದ್ಯರು ಹೇಳುವ ಪ್ರಕಾರ ಇದು ಹಲವಾರು ವಿಧಾನಗಳಿಂದ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ.

ಜೀವಮಾನವಿಡಿ ಇದರ ಗಾಯವು ಇರುವುದು

ಜೀವಮಾನವಿಡಿ ಇದರ ಗಾಯವು ಇರುವುದು

ಈ ರೀತಿಯ ಫ್ಯಾಷನ್ ಆಯ್ಕೆ ಮಾಡಿಕೊಳ್ಳುವಂತಹ ವ್ಯಕ್ತಿಗಳು ಒಂದು ಅಂಶವನ್ನು ತುಂಬಾ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಅದೇನೆಂದರೆ ಈ ರೀತಿಯ ಚುಚ್ಚುವಿಕೆಯಿಂದ ಆಗುವಂತಹ ಗಾಯವು ಜೀವಮಾಣವಿಡಿ ಇರುವುದು. ಇದು ತುಂಬಾ ಕಿರಿಕಿರಿ ಉಂಟು ಮಾಡುವುದು ಮತ್ತು ಕೆಲವೊಂದು ಸಲ ತೊಂದರೆ ನೋಡಬಹುದು. ದಿನನಿತ್ಯದ ಕೆಲಸಕಾರ್ಯಗಳಿಗೂ ಇದು ಅಡ್ಡಿ ಉಂಟು ಮಾಡಬಹುದು.

Most Read: ಪಾಪ 90ರ ಹರೆಯದ ಈ ಅಜ್ಜ ಮೊಸರು ಎಂದು ಭಾವಿಸಿ ಪೈಂಟ್‌ನ್ನೇ ತಿಂದು ಬಿಟ್ಟರಂತೆ!

ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದೆ

ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದೆ

ಕೈಬೆರಳಿನ ಚರ್ಮಕ್ಕೆ ಆಭರಣ ಚುಚ್ಚಿಸಿಕೊಳ್ಳುವಂತಹ ಟ್ರೆಂಡ್ ತುಂಬಾ ನೋವಿನಿಂದ ಕೂಡಿದ್ದರೂ ಇದು ಇಂದಿನ ದಿನಗಳಲ್ಲಿ ತುಂಬಾ ವೈರಲ್ ಆಗಿದೆ. ಹಲವಾರು ಜನರು ಇದನ್ನು ಇಷ್ಟಪಡುತ್ತಿದ್ದಾರೆ. ಜನರು ನೋವು ಹಾಗೂ ಮುಂದೆ ಬರುವಂತಹ ಅಪಾಯವನ್ನು ಲೆಕ್ಕಿಸದೆ ಈ ಫ್ಯಾಷನ್ ನ್ನು ಅನುಕರಿಸಿಕೊಂಡು ಹೋಗುತ್ತಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಇದು ತುಂಬಾ ಜನಪ್ರಿಯವಾಗಿದೆ. ಇತರ ಸಾಮಾಜಿಕ ಜಾಲತಾಣಗಳಲ್ಲೂ ಇದು ತುಂಬಾ ಜನಪ್ರಿಯವಾಗುತ್ತಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

English summary

Diamond Finger Piercing Is A Viral Trend

A new trend seems to have become popular among young couples. They have started dermal piercing in which the couples will be able to insert the diamond directly in the finger. The trend of diamond piercing is a hit among couples who are willing to ignore the customary wedding ring and adopt this to become popular on social media.
X
Desktop Bottom Promotion