For Quick Alerts
ALLOW NOTIFICATIONS  
For Daily Alerts

ಮಗುವಿಗೆ ಗೂಗಲ್ ಎಂದು ಹೆಸರಿಟ್ಟ ದಂಪತಿ! ಯಾಕೆ ಗೊತ್ತೇ?

|

ಮಗುವಿಗೆ ಹೆಸರಿಡುವುದು ಹೆತ್ತವರಿಗೆ ದೊಡ್ಡ ಸವಾಲಿನ ಕೆಲಸವಾಗಿರುವುದು. ಅದರಲ್ಲೂ ಇಂದಿನ ಆಧುನಿಕ ಯುಗದಲ್ಲಿ ಮಗುವಿಗೆ ಹೆಸರಿಡಬೇಕಾದರೆ ತುಂಬಾ ಹುಡುಕಾಟ ಮಾಡುವರು. ಹೌದು, ಇಂಟರ್ನೆಟ್ ನಲ್ಲಿ ವಿವಿಧ ರೀತಿಯ ಹೆಸರಿನ ಹುಡುಕಾಟ ನಡೆಸುವರು. ಯಾವ ರೀತಿಯ ಹೆಸರು ತಮ್ಮ ಮಗುವಿಗೆ ಹೊಂದಿಕೊಳ್ಳುವುದು ಎಂದು ಅವರು ತಾಳೆ ಮಾಡಿ ನೋಡುವರು. ಒಂದು ಅರ್ಥ ಬರುವ ಹೆಸರಿದ್ದರೆ ಆಗ ಅದೇ ಹೆಸರನ್ನು ಇಡುವರು.

ಹಿಂದಿನ ಕಾಲದಲ್ಲಿ ಆಗಿದ್ದರೆ ಹೆಚ್ಚಾಗಿ ಎಲ್ಲಾ ಧರ್ಮಗಳಲ್ಲೂ ಮಗುವಿಗೆ ದೇವರ ಹೆಸರನ್ನಿಡುತ್ತಿದ್ದರು. ಆದರೆ ಈಗ ಹೊಸ ಹೊಸ ಹೆಸರುಗಳನ್ನಿಡುವರು. ತುಂಬಾ ವಿಚಿತ್ರ ಹಾಗೂ ವಿಭಿನ್ನವಾದ ಹೆಸರುಗಳು ಇಂದಿನ ದಿನಗಳಲ್ಲಿ ಕಾಣಸಿಗುತ್ತದೆ. ಇತ್ತೀಚೆಗೆ ಇಂಡೋನೇಶಿಯಾದ ದಂಪತಿಯು ತುಂಬಾ ಸುದ್ದಿಯಾಗಿದ್ದಾರೆ. ಇವರು ತಮ್ಮ ಮಗುವಿಗೆ ವಿಶ್ವದ ಅತೀ ದೊಡ್ಡ ಸರ್ಚ್ ಇಂಜಿನ್ ಕಂಪೆನಿ ಗೂಗಲ್ ಹೆಸರನ್ನಿಡಲು ಬಯಸಿದ್ದರು.

Google

ಈ ಬಗ್ಗೆ ನೀವು ಹೆಚ್ಚಿನ ಮಾಹಿತಿ ತಿಳಿಯಿರಿ

ಎಲ್ಲಾ ಕರಿನ್(27) ಮತ್ತು ಆಕೆಯ ಪತಿ ಆ್ಯಂಡಿ ಕಹ್ಯಾ ಸಪುತ್ರಾ(31) ದಂಪತಿಯು 2018ರ ನವಂಬರ್ ನಲ್ಲಿ ಗಂಡು ಮಗುವಿಗೆ ತಂದೆತಾಯಿಯಾಗಿದ್ದಾರೆ. ಆದರೆ ಮಗುವಿಗೆ ತುಂಬಾ ವಿಚಿತ್ರವಾದ ಹೆಸರನ್ನು ಆಯ್ಕೆ ಮಾಡಿ ಅವರು ಸುದ್ದಿಯಾಗಿದ್ದಾರೆ.
ಮಗುವಿಗೆ ಗೂಗಲ್ ಎಂದು ಅವರು ಹೆಸರನ್ನಿಟ್ಟಿದ್ದಾರೆ. ಗೂಗಲ್ ನಂತೆಯೇ ತಮ್ಮ ಮಗು ಕೂಡ ಮಾನವ ಕುಲಕ್ಕೆ ತುಂಬಾ ನೆರವಾಗಲಿ ಎಂದು ಅವರು ಹಾರೈಸುತ್ತಿದ್ದಾರೆ.

ತಂತ್ರಜ್ಞಾನದಿಂದ ಪ್ರೇರಣೆ ಪಡೆದಿರುವಂತಹ ಹೆಸರನ್ನು ತನ್ನ ಮಗಿನಿಗೆ ಇಡಬೇಕು ಎಂದು ಯಾವಾಗಲೂ ಆಲೋಚನೆ ಮಾಡುತ್ತಲಿದ್ದೆ. ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಾಗಲೇ ತಾನು ಹುಡುಕಾಟದಲ್ಲಿ ತೊಡಗಿದ್ದೆ ಎಂದು ಆ್ಯಂಡಿ ಅವರು ತಿಳಿಸಿದ್ದಾರೆ.

ವಿಂಡೋಸ್, ಐಫೋನ್, ಮೈಕ್ರೋಸಾಫ್ಟ್ ಮತ್ತು ಐಒಎಸ್ ಎನ್ನುವ ಹೆಸರುಗಳ ಬಗ್ಗೆ ನಾನು ಆಲೋಚನೆ ಮಾಡಿದ್ದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಪಟ್ಟಿಯು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಯಾಕೆಂದರೆ ಅವರು ತುಂಬಾ ಸಾಂಪ್ರದಾಯಿಕವಾದ ಅಲ್ಬರ್ ದಿರ್ಗಾಂತ್ರ ಪುತ್ರಾ ಎನ್ನುವ ಹೆಸರನ್ನು ಆಲೋಚನೆ ಮಾಡಿದ್ದರು!

ಅದಾಗ್ಯೂ, ಮಗು ಹುಟ್ಟಿದ ಬಳಿಕ ತಂದೆಯು ಅದಕ್ಕೆ ಗೂಗಲ್ ಎಂದು ಹೆಸರಿಟ್ಟಿದ್ದಾರೆ. ಈ ಹೆಸರನ್ನು ಕುಟುಂಬ ಸದಸ್ಯರು ಕೂಡ ಸ್ವಾಗತಿಸಿದ್ದಾರೆ. ಆದರೆ ಮಗುವಿನ ತಾಯಿಯು ಈ ಹೆಸರನ್ನು ಇಡಲು ಮೊದಲು ನಿರಾಕರಿಸಿದರು. ಆದರೆ ಬಳಿಕ ಮನವೊಲಿಸಲಾಯಿತು ಮತ್ತು ಈ ವಿಚಿತ್ರ ಹೆಸರನ್ನು ಒಪ್ಪಿಕೊಂಡರು ಎಂದು ಅವರು ತಿಳಿಸಿದರು.

ಮಗುವಿನ ತಾಯಿಯು ಆರಂಭದಲ್ಲಿ ಇದಕ್ಕೆ ಹಿಂಜರಿದರು. ಆರಂಭದಲ್ಲಿ ಅವರು ಮಗುವಿನ ಹೆಸರು ಬೇಬಿ ಬಾಯ್ ಆಗಿದೆ ಎಂದು ಹೇಳುತ್ತಿದ್ದರು. ಮಗುವಿನ ಹೆಸರನ್ನು ಸ್ವೀಕರಿಸಲು ಮೂರು ತಿಂಗಳು ಬೇಕಾಯಿತು ಮತ್ತು ಇದನ್ನು ಬಳಿಕ ಜನರ ಮುಂದೆ ಕೂಡ ಹೇಳಲಾಯಿತು ಎಂದು ಮಗುವಿನ ತಾಯಿ ಹೇಳುತ್ತಾರೆ. ಆ್ಯಂಡಿ ಹೇಳುವ ಪ್ರಕಾರ ಗೂಗಲ್ ಹೆಸರು ತನ್ನದೇ ಆಗಿರುವಂತಹ ಪ್ರಾಮುಖ್ಯತೆ ಪಡೆದಿದೆ. ತನ್ನ ಮಗ ಕೂಡ ದೊಡ್ಡವನಾದ ಮೇಲೆ ಜನರಿಗೆ ನೆರವಾಗುತ್ತಾನೆ ಮತ್ತು ಆತ ಬೇರೆಯವರಿಗೆ ತುಂಬಾ ನೆರವಾಗುವ ವ್ಯಕ್ತಿ ಆಗುತ್ತಾನೆ ಎನ್ನುತ್ತಾರೆ.

ಹೆಸರಿನ ಬಗ್ಗೆ ಮಾತನಾಡಿರುವ ಮಗುವಿನ ತಂದೆ, ಈ ಹೆಸರಿನ ಮುಂದೆ ಯಾವುದೇ ಉಪನಾಮೆ ಇಡಲು ಬಯಸಿಲ್ಲ. ಹೀಗೆ ಇಟ್ಟರೆ ಅದು ಹೆಸರಿನ ಅಂದ ಕೆಡಿಸುತ್ತದೆ ಎಂದು ಅವರು ಹೇಳುತ್ತಾರೆ. ಇದು ಮಗುವಿಗೆ ಇಟ್ಟಿರುವಂತಹ ಅತ್ಯಂತ ವಿಚಿತ್ರ ಹೆಸರು ಎಂದು ಹೇಳಬಹುದು. ನಿಮ್ಮ ಅನಿಸಿಕೆ ಏನು? ಇದನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

English summary

Couple Names Their Son ‘Google’ For This Reason

According to media reports, a couple from West Java, Indonesia have recently hit the headlines for giving their son an unconventional name. The couple decided to name their newborn son 'Google' without any surname. Just like Google, the parents hope that their son will be someone who would help others.
X
Desktop Bottom Promotion