Just In
Don't Miss
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Technology
ಶಿಯೋಮಿ 'ರೆಡ್ಮಿ ಕೆ30' ಸ್ಮಾರ್ಟ್ಫೋನ್ ಬಿಡುಗಡೆ!.ಬೆಲೆ ಎಷ್ಟು?.ಫೀಚರ್ಸ್ ಏನು?
- Automobiles
ಮೊದಲ ಬಾರಿಗೆ ಪ್ರದರ್ಶಿತವಾದ ಹೊಸ ತಲೆಮಾರಿನ ಪಜೆರೊ ಸ್ಪೋರ್ಟ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
2019ರಲ್ಲಿ ವಿವಾಹ ಆಗುವ ಆಲೋಚನೆ ಇದ್ದರೆ, ಹುಟ್ಟಿದ ದಿನಾಂಕ ನೋಡಿ ವಿವಾಹದ ದಿನಾಂಕ ನೀವೇ ಆಯ್ಕೆ ಮಾಡಿ!
ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷವಾದ ಘಟ್ಟ. ಹುಡುಗಾಟದ ಜೀವನವನ್ನು ತೊರೆದು, ಜವಾಬ್ದಾರಿಯ ಜೀವನಕ್ಕೆ ಕಾಲಿಡುವ ಸಮಯ. ಹುಡುಗರಾದರೆ ತನ್ನ ವಿವಾಹವಾಗುವ ಹುಡುಗಿಯ ಜೀವನದ ಸಂಪೂರ್ಣ ಜವಾಬ್ದಾರಿಯನ್ನು ತಾನು ನೋಡುತ್ತೇನೆ ಎಂದು ವಚನ ನೀಡುತ್ತಾನೆ. ಅದೇ ಹುಡುಗಿ ತಾನು ವಿವಾಹವಾಗುವ ಹುಡುಗನಿಗೆ ಬಾಳ ಸಂಗಾತಿಯಾಗಿ ಅವನ ಜೀವನದ ಸದ್ಗತಿಗಳಿಗೆ ಎಲ್ಲಾ ಬಗೆಯ ಸಹಕಾರ ನೀಡುತ್ತೇನೆ ಎನ್ನುವ ಸಮಯ. ಒಂದು ವಿವಾಹದಿಂದ ಎರಡು ಕುಟುಂಬಗಳು ಬಾಂಧವ್ಯವನ್ನು ಬೆಸೆದುಕೊಂಡು, ಹೊಸ ಬಂಧುಗಳಾಗಿ ಬರುತ್ತಾರೆ. ಅಲ್ಲಿಂದ ಅವರ ಬಂಧ ಸ್ನೇಹ, ಆಪ್ತರು ಹಾಗೂ ಬಂಧುಗಳು ಆಗಿ ಪರಸ್ಪರ ಪ್ರೀತಿ ವಿಶ್ವಾಸದ ವ್ಯಕ್ತಿಗಳಾಗಿ ಇರುತ್ತಾರೆ.
ಹೆಣ್ಣಾದರೆ ತಾನು ಹುಟ್ಟಿ-ಆಡಿದ ಮನೆಯನ್ನು ಬಿಟ್ಟು ಜೀವನ ಪೂರ್ತಿ ಪತಿಯಾಗುವವನ ಜೊತೆಗೆ ಇರುತ್ತೇನೆ. ಅವನ ಜೀವನದಲ್ಲಿ ಸಂತೋಷವನ್ನು ನೀಡುತ್ತಾ, ಅತೆ-ಮಾವಂದಿರ ಸೇವೆಯನ್ನು ಮಾಡುತ್ತೇನೆ. ತಮ್ಮದೇ ಆದ ಒಂದು ಪುಟ್ಟ ಸಂಸಾರವನ್ನು ಕಟ್ಟಿ, ಜೀವನವನ್ನು ಬೆಳಗುವ ಜವಾಬ್ದಾರಿ ಅವಳದ್ದಾಗಿರುತ್ತದೆ. ಆರಂಭದಲ್ಲಿ ಸಾಕಷ್ಟು ಹೊಂದಾಣಿಕೆ, ಹೊಸ ಕುಟುಂಬದ ಬಗ್ಗೆ, ಅವರ ಜೀವನ ಪದ್ಧತಿ, ಆಹಾರದ ಶೈಲಿ, ಹವ್ಯಾಸ ಹೀಗೆ ವಿವಿಧ ಬಗೆಯ ಸಂಗತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೊಸ ಜೀವನವನ್ನು ನಡೆಸಿಕೊಂಡು ಹೋಗುವುದು ಒಂದು ಸವಾಲು ಹಾಗೂ ಕರ್ತವ್ಯವಾಗಿರುತ್ತದೆ.

ಹುಡುಗ ಜವಾಬ್ದಾರಿ
ಅಂತೆಯೇ ಹುಡುಗನು ತಾನು ವಿವಾಹ ವಾಗಿ ಕರೆತಂದ ಒಂದು ಹೆಣ್ಣನ್ನು ಸಂತೋಷದಿಂದ ನೋಡಿಕೊಳ್ಳಬೇಕು. ಅವಳ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಬೇಕು. ಆಕೆಯ ಜೀವನದ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಬೇಕು ಎನ್ನುವ ಜವಾಬ್ದಾರಿ ಯಿರುತ್ತದೆ. ಅವಳ ತಾಯಿ ಮನೆಯವರನ್ನು ಗೌರವದಿಂದ ಕಾಣುವುದು, ಕಷ್ಟ ಸುಖಗಳಿಗೆ ಭಾಗಿಯಾಗುವುದು, ತನ್ನ ಅಪ್ಪ-ಅಮ್ಮನ ಬೇಕು ಬೇಡಗಳನ್ನು ಅರಿತು ಅವರ ಜೀವನಕ್ಕೆ ಆಸರೆಯಾಗಿ ನಿಲ್ಲುವ ಸಾಮಥ್ರ್ಯ ಅಥವಾ ಜವಾಬ್ದಾರಿಯ ಹೊರೆಯನ್ನು ಹುಡುಗ ಹೊರಬೇಕಾಗುವುದು.

ವಿವಾಹ ಆಗುವ ಮುಂಚೆ
ಹಾಗಾಗಿ ವಿವಾಹ ಆಗುವ ಮುಂಚೆ ಅಥವಾ ನಾವು ಪ್ರೀತಿಸಿದ ವ್ಯಕ್ತಿಯೊಂದಿಗೆ ವಿವಾಹ ಆಗಬೇಕು ಎಂದಾದರೆ ಮಾನಸಿಕವಾಗಿ ಸಾಕಷ್ಟು ಸಿದ್ಥತೆಯನ್ನು ನಡೆಸಿಕೊಳ್ಳಬೇಕು. ಜೊತೆಗೆ ಉತ್ತಮ ದಿನ ಹಾಗೂ ಘಳಿಗೆಯಲ್ಲಿ ವಿವಾಹ ಆಗಬೇಕು. ಆಗಲೇ ಜೀವನವು ಸಾಕಷ್ಟು ಆನಂದವನ್ನು ನೀಡುವುದು. ಉತ್ತಮ ಸಮಯ ಹಾಗೂ ಘಳಿಗೆಯಲ್ಲಿ ವಿವಾಹ ಆಗುವುದರಿಂದ ಆಧ್ಯಾತ್ಮಿಕವಾಗಿ ದೇವರ ಆಶೀರ್ವಾದ ನಮ್ಮ ಮೇಲೆ ಬೀಳುವುದು. ಜೊತೆಗೆ ಧನಾತ್ಮಕ ಶಕ್ತಿಯು ನಮ್ಮ ಸುತ್ತಲೂ ಇರುತ್ತವೆ. ಇವು ಸದಾ ಜೀವನದಲ್ಲಿ ಒಳಿತಿಗಾಗಿ ಪ್ರೇರೇಪಣೆ ನೀಡುತ್ತವೆ ಎಂದು ಹೇಳಲಾಗುವುದು. ಹಾಗಾಗಿಯೇ ವಿವಾಹ ಎನ್ನುವುದು ವ್ಯಕ್ತಿಯ ಜೀವನದ ಭವಿಷ್ಯದ ವಿಷಯ ಎಂದು ನಿರ್ಧರಿಸಲಾಗುವುದು.

ವಿವಾಹದ ದಿನಾಂಕ, ದಿನ ಹಾಗೂ ಸಮಯ
ವಿವಾಹದ ದಿನಾಂಕ, ದಿನ ಹಾಗೂ ಸಮಯವು ಅತ್ಯಂತ ಪ್ರಮುಖ ಪತ್ರವನ್ನು ವಹಿಸುತ್ತದೆ. ಪ್ರೇಮ ವಿವಾಹವೇ ಆಗಲಿ ಹಿರಿಯರು ಆಯ್ಕೆ ಮಾಡಿದ ವಿವಾಹವೇ ಆಗಲಿ, ವಿವಾಹದ ದಿನಾಂಕ ಹಾಗೂ ದಿನ ಉತ್ತಮವಾಗಿರಬೇಕು. ನಮ್ಮ ಕುಂಡಲಿ ಹಾಗೂ ವಿವಾಹ ಆಗಲಿರುವ ವ್ಯಕ್ತಿಯ ಕುಂಡಲಿಯ ಪ್ರಕಾರ ಹೊಂದುವ ಒಂದು ಉತ್ತಮ ದಿನಾಂಕ ಆಗಿರಬೇಕು. ಇಲ್ಲವಾದರೆ ವಿವಾಹದ ನಂತರದ ಜೀವನದಲ್ಲಿ ಹೊಂದಾಣಿಕೆಯ ಸಮಸ್ಯೆ ಹಾಗೂ ಸಾಕಷ್ಟು ಭಿನ್ನಾಭಿಪ್ರಾಯಗಳಿಂದ ಜೀವನ ಕೂಡಿರುತ್ತದೆ. ಆಗ ಜೀವನದಲ್ಲಿ ಸಂತೋಷದ ಸಮಯಗಳು ಕಡಿಮೆಯಾಗುತ್ತಾ ಹೋಗುವುದು ಎಂದು ಹೇಳಲಾಗುವುದು.
Most Read: ಜನ್ಮ ದಿನಾಂಕದ ರಹಸ್ಯ: ಸಂಖ್ಯೆ ಹೇಳಿ, ಭವಿಷ್ಯ ಕೇಳಿ!

ಸಂಖ್ಯಾ ಶಾಸ್ತ್ರದ ಪ್ರಕಾರ
ಸಂಖ್ಯಾ ಶಾಸ್ತ್ರ ಎನ್ನುವುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯುತ್ತಮವಾದ ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ. ವ್ಯಕ್ತಿ ಆರಿಸುವ ಸಂಖ್ಯೆ, ದಿನಾಂಕಗಳೆಲ್ಲವೂ ಅವನ ಭವಿಷ್ಯವನ್ನು ನಿರ್ಧರಿಸುತ್ತವೆ. ಆ ಸಂಖ್ಯೆಗಳು ಅವರ ಕುಂಡಲಿಗೆ ಹಾಗೂ ರಾಶಿಚಕ್ರಕ್ಕೆ ಸಂಬಂಧಿಸಿದ್ದೇ ಆಗಿರುತ್ತದೆ ಎಂದು ಹೇಳಲಾಗುವುದು. ವ್ಯಕ್ತಿ ಹುಟ್ಟಿದ ದಿನಾಂಕದ ಆಧಾರದ ಮೇಲೆ ವಿವಾಹದ ದಿನಾಂಕವನ್ನು ಆಯ್ಕೆ ಮಾಡಬಹುದು. ಉತ್ತಮ ವಿವಾಹದ ದಿನಾಂಕದ ಆಯ್ಕೆಯಿಂದ ಜೀವನವು ಸುಂದರವಾಗಿ ಇರುವುದು ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಹಾಗಾದರೆ ಹುಟ್ಟಿದ ದಿನಾಂಕದಿಂದ ವಿವಾಹದ ದಿನಾಂಕವನ್ನು ಕಂಡು ಹಿಡಿಯುವುದು ಹೇಗೆ? 2019ರಲ್ಲಿ ನೀವು ಹುಡುಕುತ್ತಿರುವ ವಿವಾಹದ ದಿನಾಂಕ ಯಾವುದು? ಎನ್ನುವುದನ್ನು ತಿಳಿಯಬೇಕು ಎನ್ನುವ ಕಾತುರದಲ್ಲಿ ಇದ್ದರೆ ಈ ಮುಂದೆ ವಿವರಿಸಿದ ವಿವರಣೆಯನ್ನು ಪರಿಶೀಲಿಸಿ.

ಅದೃಷ್ಟ ಸಂಖ್ಯೆಯನ್ನು ಹೇಗೆ ಕಂಡುಹಿಡಿಯುವುದು?
ಹುಟ್ಟಿದ ದಿನಾಂಕವನ್ನು ಆಧರಿಸಿ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಸಂಖ್ಯಾ ಶಾಸ್ತ್ರ ತೆರೆದಿಡುತ್ತದೆ. ವ್ಯಕ್ತಿಯ ಜೀವನದ ಪಥವನ್ನು ಸಂಖ್ಯಾ ಶಾಸ್ತ್ರ ನಿರ್ಧರಿಸುತ್ತದೆ ಎಂದು ಸಹ ಹೇಳಲಾಗುವುದು. ಹಾಗಾಗಿ ವಿವಾಹ ಎನ್ನುವ ಪವಿತ್ರವಾದ ಬಂಧವನ್ನು ಪಡೆದುಕೊಳ್ಳಲು ಸೂಕ್ತ ದಿನಾಂಕದ ಆಯ್ಕೆ ಮಾಡಬೇಕು. ಅದು ನಮ್ಮ ಹುಟ್ಟಿದ ದಿನಾಂಕದಿಂದ ಪಡೆಯಬಹುದು ಎಂದು ಹೇಳಲಾಗುವುದು. ನಿಮ್ಮ ವಿವಾಹದ ಜೀವನವನ್ನು ಈ ವರ್ಷದಿಂದ ಆರಂಭಿಸುವ ನಿರ್ಧಾರದಲ್ಲಿ ಇದ್ದರೆ ನಿಮಗೆ ಉತ್ತಮವಾದ ವಿವಾಹದ ದಿನಾಂಕಗಳು ಯಾವವು ಎನ್ನುವುದು ಮೊದಲು ನೋಡಿ.

ಜೀವನದ ಅದೃಷ್ಟದ ಸಂಖ್ಯೆ ಕಂಡುಹಿಡಿಯುವುದು
ಹುಟ್ಟಿದ ದಿನಾಂಕದ ಸಂಖ್ಯೆ + ಜನನದ ತಿಂಗಳ ಸಂಖ್ಯೆ + ಜನ್ಮ ವರ್ಷ
ಈ ರೀತಿಯಲ್ಲಿ ಎಲ್ಲಾ ಸಂಖ್ಯೆಯನ್ನು ಹಾಕಿ, ಎಲ್ಲಾ ಅಂಕಿ ಸಂಖ್ಯೆಯನ್ನು ಒಟ್ಟಿಗೆ ಸೇರಿಸಬೇಕು. ನಂತರ ಒಂದೇ ಅಂಕಿಗೆ ಕಡಿಮೆ ಮಾಡಬೇಕು. ನಂತರ ಜೀವನದ ಪಥದ ಅಥವಾ ಅದೃಷ್ಟದ ಸಂಖ್ಯೆಯನ್ನು ಪಡೆಯಬೇಕು. ಉದಾಹರಣೆಗೆ: ನೀವು ಹುಟ್ಟಿದ್ದು ಜೂನ್ 15, 1990 ಆಗಿದ್ದರೆ, ನಿಮ್ಮ ಜೀವನದ ಪಥದ ಸಂಖ್ಯೆಯನ್ನು ಪಡೆಯುವ ಮಾರ್ಗ ಹೀಗಿರುತ್ತದೆ ನೋಡಿ...
15 + 06 + 1990
(1+5)+(0+6)+(1+9+9+0)
6+6+19
6+6+(1+9)
6+6+10
6+6+(1+0)
6+6+1=13
1+3=4
15 ಜೂನ್ 1990ರಲ್ಲಿ ಜನಿಸಿದ ವ್ಯಕ್ತಿಯ ಪಥದ ಸಂಖ್ಯೆ ಅಥವಾ ಅದೃಷ್ಟದ ಸಂಖ್ಯೆ 4 ಆಗಿರುತ್ತದೆ. ಇದೇ ರೀತಿ ನಿಮ್ಮ ವಿವಾಹವಾಗಲಿರುವ ಸಂಗಾತಿಯ ಜೀವನ ಪಥದ ಸಂಖ್ಯೆ ಅಥವಾ ಅದೃಷ್ಟದ ಸಂಖ್ಯೆಯನ್ನು ಪಡೆಯಿರಿ.
Most Read: ಸಂಖ್ಯಾ ಶಾಸ್ತ್ರದ ಪ್ರಕಾರ 2019ರಲ್ಲಿ, ನಿಮ್ಮ ಭವಿಷ್ಯ ಹೇಗಿದೆ ಎಂದು ನೋಡಿ

ವಿವಾಹದ ದಿನಾಂಕವನ್ನು ಪಡೆಯುವುದು ಹೇಗೆ?
ವಧು ಮತ್ತು ವರನ ಜೀವನದ ಪಥದ ಸಂಖ್ಯೆ ಅಥವಾ ಅದೃಷ್ಟದ ಸಂಖ್ಯೆಯನ್ನು ಮೊದಲು ಕಂಡು ಹಿಡಿಯಬೇಕು. ನಂತರ ಅವೆರಡನ್ನೂ ಸೇರಿಸಬೇಕು. ನಂತರ ಸಿಗುವ ಸಂಖ್ಯೆಯೇ ವಿವಾಹದ ಸಂಖ್ಯೆಯಾಗಿರುತ್ತದೆ.
ಉದಾಹರಣೆಗೆ: ವರನ ಜೀವನ ಪಥದ ಸಂಖ್ಯೆ 4 ಮತ್ತು ವಧುವಿನ ಜೀವನ ಪಥದ ಸಂಖ್ಯೆ 7 ಆಗಿದ್ದರೆ, ವಿವಾಹದ ಸಂಖ್ಯೆ ಈ ಕೆಳಗಿನಂತಿರುತ್ತದೆ.
4+7=11
1+1= 2
ದಂಪತಿಗಳ ಮದುವೆ ಸಂಖ್ಯೆ 2 ಆಗಿರುತ್ತದೆ.

ಮದುವೆಯ ಸಂಖ್ಯೆಯನ್ನು ಆಧರಿಸಿ ವಿವಾಹದ ದಿನಾಂಕವನ್ನು ಕಂಡು ಹಿಡಿಯುವುದು ಹೇಗೆ?
ಜೀವನ ಪಥದ ಸಂಖ್ಯೆಯು 1 ಅಥವಾ 9 ದೊರೆತರೆ ಅಂತವರಿಗೆ ಎಲ್ಲಾ ಮದುವೆ ದಿನಾಂಕವು ಅತ್ಯಂತ ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಲಾಗುವುದು. ಇವರಿಗೆ ವಿವಾಹದ ದಿನಾಂಕವು 22 ನವೆಂಬರ್ 2019 ಆಗಿದ್ದರೆ ಇವರ ಅಂತಿಮವಾಗಿ ಕೂಡಿ ಬರುವ ಸಂಖ್ಯೆ 9 ಆಗಿರುತ್ತದೆ. ಹಾಗಾಗಿ ಇದು ಇವರ ವಿವಾಹಕ್ಕೆ ಅತ್ಯಂತ ಮಂಗಳಕರವಾದ ದಿನವಾಗಿರುತ್ತದೆ. ನೀವು ವಿವಾಹಕ್ಕೆ ಉತ್ತಮವಾದ ದಿನವನ್ನು ಹುಡುಕುತ್ತಿದ್ದರೆ 1 ಅಥವಾ 9ರ ದಿನಾಂಕವನ್ನು ತೆಗೆದುಕೊಂಡರೆ ಅದು ಅತ್ಯುತ್ತಮವಾದ ದಿನವಾಗಿರುತ್ತದೆ.

ನೀವು ವಿವಾಹದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ
ಮದುವೆಯ ದಿನಾಂಕ/ಸಂಖ್ಯೆ ಮತ್ತು ವಧುವಿನ ಮತ್ತು ವರನ ಜೀವನ ಪಥದ ಸಂಖ್ಯೆಯಿಂದ ಬಂದಿರುವ ಸಂಖ್ಯೆಗೆ ಹೊಂದಿಸಿ. 1 ಮತ್ತು 9 ಸಂಖ್ಯೆಯನ್ನು ಅತ್ಯಂತ ಅದೃಷ್ಟ ಮತ್ತು ಶುಭ ಎಂದು ಪರಿಗಣಿಸಲಾಗುವುದು. ವಧು ಅಥವಾ ವರನ ಜೀವನ ಪಥದ ಸಂಖ್ಯೆಯೊಂದಿಗೆ ಹೊಂದಿಕೆಯಾಗುವ ಎಲ್ಲಾ ದಿನಾಂಕಗಳನ್ನು ನೀವು ಆಯ್ಕೆ ಮಾಡಬಹುದು.

ವಿವಾಹದ ದಿನಾಂಕ ಮತ್ತು ವಿವಾಹದ ಸಂಖ್ಯೆಯನ್ನು ಹೇಗೆ ಹೊಂದಿಸುವುದು?
ವಧು ಮತ್ತು ವರರ ಹುಟ್ಟಿದ ದಿನಾಂಕದಿಂದ ಪಡೆದ ಸಂಖ್ಯೆಯನ್ನು ಕೂಡಿದಾಗ ಬಂದ ಕೊನೆಯ ಸಂಖ್ಯೆ ಮದುವೆಯ ಸಂಖ್ಯೆ ಎಂದು ಪರಿಗಣಿಸಲಾಗುವುದು. ಎಲ್ಲಾ ವಿವಾಹದ ದಿನಾಂಕವನ್ನು ಕೂಡಿದಾಗ ಬರುವ ಕೊನೆಯ ಸಂಖ್ಯೆಯನ್ನು ಅದೃಷ್ಟದ ಸಂಖ್ಯೆ ಅಥವಾ ಡೆಸ್ಟಿನಿ ಸಂಖ್ಯೆ ಎಂದು ಪರಿಗಣಿಸಲಾಗುವದು.
ನಿಮ್ಮ ವಿವಾಹದ ಸಂಖ್ಯೆ 1 ಆಗಿದ್ದರೆ ನೀವು ಆಯ್ಕೆ ಮಾಡಿದ ದಿನಾಂಕವನ್ನು ಒಟ್ಟಾಗಿ ಸೇರಿಸಿ ಪಡೆದ ಕೊನೆಯ ಸಂಖ್ಯೆಯೂ 1 ಆಗಿತ್ತು ಎಂದಾದರೆ ವಿವಾಹದ ಸಂಖ್ಯೆಗೆ ಹೊಂದುವ ಎಲ್ಲಾ ದಿನಾಂಕವೂ ಅತ್ಯುತ್ತಮವಾಗಿರುತ್ತದೆ.

ಅದೃಷ್ಟದ ಸಂಖ್ಯೆ ಮತ್ತು ವಿವಾಹದ ದಿನಾಂಕ:
ಅದೃಷ್ಟ ಸಂಖ್ಯೆ ಎನ್ನುವುದು ವ್ಯಕ್ತಿ ಹುಟ್ಟಿದ ದಿನಾಂಕದ ಒಟ್ಟು ಮೊತ್ತವಾಗಿರುತ್ತದೆ.
Most Read: ಗುರುತು ಮರೆಮಾಚಿ ತಲೆ ಕೂದಲು ಕತ್ತರಿಸುವ ಅಂಗಡಿ ನಡೆಸುತ್ತಿರುವ ಸಹೋದರಿಯರು!

ವ್ಯಕ್ತಿಯ ಅದೃಷ್ಟದ ಸಂಖ್ಯೆ 1 ಆಗಿದ್ದರೆ
ವ್ಯಕ್ತಿಯ ಅದೃಷ್ಟದ ಸಂಖ್ಯೆ 1 ಆಗಿದ್ದರೆ (ಯಾರು 1, 10, 19 ಮತ್ತು 28ರಲ್ಲಿ ಜನಿಸಿರುತ್ತಾರೆ) ಅವರ ವಿವಾಹದ ದಿನಾಂಕದಿಂದ ಪಡೆದ ಅದೃಷ್ಟದ ಸಂಖ್ಯೆ 1 ರ ದಿನಾಂಕದಂದು ಮದುವೆಯಾಗಬೇಕು.

ವ್ಯಕ್ತಿಯ ಅದೃಷ್ಟದ ಸಂಖ್ಯೆ 2 ಆಗಿದ್ದರೆ
ವ್ಯಕ್ತಿಯ ಅದೃಷ್ಟದ ಸಂಖ್ಯೆ 2 ಆಗಿದ್ದರೆ (ಯಾರು 2,20 ಮತ್ತು 29 ರಲ್ಲಿ ಜನಿಸಿರುತ್ತಾರೆ ) ಅವರ ವಿವಾಹದ ದಿನಾಂಕದಿಂದ ಪಡೆದ ಅದೃಷ್ಟದ ಸಂಖ್ಯೆ 1 ಅಥವಾ 7 ರ ದಿನಾಂಕದಂದು ಮದುವೆಯಾಗಬೇಕು.

ವ್ಯಕ್ತಿಯ ಅದೃಷ್ಟದ ಸಂಖ್ಯೆ 3 ಆಗಿದ್ದರೆ
ವ್ಯಕ್ತಿಯ ಅದೃಷ್ಟದ ಸಂಖ್ಯೆ 3 ಆಗಿದ್ದರೆ (ಯಾರು 3,12 ಮತ್ತು 30 ರಲ್ಲಿ ಜನಿಸಿರುತ್ತಾರೆ) ಅವರ ವಿವಾಹದ ದಿನಾಂಕದಿಂದ ಪಡೆದ ಅದೃಷ್ಟದ ಸಂಖ್ಯೆ 3 ಅಥವಾ 9 ರ ದಿನಾಂಕದಂದು ಮದುವೆಯಾಗಬೇಕು.

ವ್ಯಕ್ತಿಯ ಅದೃಷ್ಟದ ಸಂಖ್ಯೆ 4 ಆಗಿದ್ದರೆ
ವ್ಯಕ್ತಿಯ ಅದೃಷ್ಟದ ಸಂಖ್ಯೆ 4 ಆಗಿದ್ದರೆ (ಯಾರು 4,13 ಮತ್ತು 22 29 ರಲ್ಲಿ ಜನಿಸಿರುತ್ತಾರೆ) ಅವರ ವಿವಾಹದ ದಿನಾಂಕದಿಂದ ಪಡೆದ ಅದೃಷ್ಟದ ಸಂಖ್ಯೆ 1 ಅಥವಾ 7 ರ ದಿನಾಂಕದಂದು ಮದುವೆಯಾಗಬೇಕು.

ವ್ಯಕ್ತಿಯ ಅದೃಷ್ಟದ ಸಂಖ್ಯೆ 5 ಆಗಿದ್ದರೆ
ವ್ಯಕ್ತಿಯ ಅದೃಷ್ಟದ ಸಂಖ್ಯೆ 5 ಆಗಿದ್ದರೆ (ಯಾರು 5,14 ಮತ್ತು 23 ರಲ್ಲಿ ಜನಿಸಿರುತ್ತಾರೆ) ಅವರ ವಿವಾಹದ ದಿನಾಂಕದಿಂದ ಪಡೆದ ಅದೃಷ್ಟದ ಸಂಖ್ಯೆ 9 ರ ದಿನಾಂಕದಂದು ಮದುವೆಯಾಗಬೇಕು.

ವ್ಯಕ್ತಿಯ ಅದೃಷ್ಟದ ಸಂಖ್ಯೆ 6 ಆಗಿದ್ದರೆ
ವ್ಯಕ್ತಿಯ ಅದೃಷ್ಟದ ಸಂಖ್ಯೆ 6 ಆಗಿದ್ದರೆ (ಯಾರು 6,15 ಮತ್ತು 24 ರಲ್ಲಿ ಜನಿಸಿರುತ್ತಾರೆ) ಅವರ ವಿವಾಹದ ದಿನಾಂಕದಿಂದ ಪಡೆದ ಅದೃಷ್ಟದ ಸಂಖ್ಯೆ 6 ಅಥವಾ 9 ರ ದಿನಾಂಕದಂದು ಮದುವೆಯಾಗಬೇಕು.

ವ್ಯಕ್ತಿಯ ಅದೃಷ್ಟದ ಸಂಖ್ಯೆ 7 ಆಗಿದ್ದರೆ
ವ್ಯಕ್ತಿಯ ಅದೃಷ್ಟದ ಸಂಖ್ಯೆ 7 ಆಗಿದ್ದರೆ (ಯಾರು 7,16 ಮತ್ತು 25 ರಲ್ಲಿ ಜನಿಸಿರುತ್ತಾರೆ) ಅವರ ವಿವಾಹದ ದಿನಾಂಕದಿಂದ ಪಡೆದ ಅದೃಷ್ಟದ ಸಂಖ್ಯೆ 1 ಅಥವಾ 2 ರ ದಿನಾಂಕದಂದು ಮದುವೆಯಾಗಬೇಕು.
Most Read: ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!

ವ್ಯಕ್ತಿಯ ಅದೃಷ್ಟದ ಸಂಖ್ಯೆ 8 ಆಗಿದ್ದರೆ
ವ್ಯಕ್ತಿಯ ಅದೃಷ್ಟದ ಸಂಖ್ಯೆ 8 ಆಗಿದ್ದರೆ (ಯಾರು 8,17 ಮತ್ತು 26 ರಲ್ಲಿ ಜನಿಸಿರುತ್ತಾರೆ) ಅವರ ವಿವಾಹದ ದಿನಾಂಕದಿಂದ ಪಡೆದ ಅದೃಷ್ಟದ ಸಂಖ್ಯೆ 1 ರ ದಿನಾಂಕದಂದು ಮದುವೆಯಾಗಬೇಕು.

ವ್ಯಕ್ತಿಯ ಅದೃಷ್ಟದ ಸಂಖ್ಯೆ 9 ಆಗಿದ್ದರೆ
ವ್ಯಕ್ತಿಯ ಅದೃಷ್ಟದ ಸಂಖ್ಯೆ 9 ಆಗಿದ್ದರೆ (ಯಾರು 9,18 ಮತ್ತು 27 ರಲ್ಲಿ ಜನಿಸಿರುತ್ತಾರೆ) ಅವರ ವಿವಾಹದ ದಿನಾಂಕದಿಂದ ಪಡೆದ ಅದೃಷ್ಟದ ಸಂಖ್ಯೆ 3 ಅಥವಾ 6 ಅಥವಾ 9 ರ ದಿನಾಂಕದಂದು ಮದುವೆಯಾಗಬೇಕು.

ಸಂಖ್ಯಾಶಾಸ್ತ್ರದಿಂದ ನಿಷೇಧಿಸಲಾದ ವಿವಾಹದ ದಿನಾಂಕಗಳು
ವಿವಾಹದ ದಿನಾಂಕದಿಂದ ಬರುವ ಅದೃಷ್ಟದ ಸಂಖ್ಯೆ 4, 8 ಅಥವಾ 5 ಬಂದಿದ್ದರೆ ಅಂತಹ ದಿನಾಂಕದಂದು ವಿವಾಹ ಆಗಬಾರದು ಎಂದು ಸಂಖ್ಯಾ ಶಾಸ್ತ್ರ ಕಟ್ಟು ನಿಟ್ಟಾಗಿ ಸೂಚಿಸುತ್ತದೆ. ಈ ದಿನಾಂಕದಲ್ಲಿ ವಿವಾಹವಾದರೆ ದಂಪತಿಗಳ ನಡುವೆ ವಿರಸ ಹಾಗೂ ವಿಚ್ಛೇದನ ಸಂಭವಿಸುವುದು ಎಂದು ಹೇಳಲಾಗುವುದು. ಹಾಗಾಗಿ ಈ ದಿನಾಂಕವನ್ನು ಕಟ್ಟು ನಿಟ್ಟಾಗಿ ನಿಷೇಧಿಸಬೇಕು ಎಂದು ಸಂಖ್ಯಾಶಾಸ್ತ್ರ ಸೂಚಿಸುತ್ತದೆ.