For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: ಮಹಿಳೆಗೆ ಬೆವರುವ ವೇಳೆ ರಕ್ತ ಸುರಿಯುತ್ತಿದೆ!

|

ಮನುಷ್ಯರಲ್ಲಿ ಕೆಲವೊಂದು ವಿಚಿತ್ರವಾದ ದೈಹಿಕ ಬದಲಾವಣೆಗಳು ಕಂಡುಬರುವುದು. ಇದು ಅಪರೂಪದಲ್ಲಿ ಅಪರೂಪದ ಕಾಯಿಲೆಗಳು ಎಂದು ವೈದ್ಯಕೀಯ ಲೋಕವು ಹೇಳುತ್ತದೆ. ಈ ಹಿಂದೆ ನಾವು ಕಣ್ಣಿನಲ್ಲಿ ಕಲ್ಲಿನ ತುಂಡುಗಳು ಬರುವುದು, ದೇಹವು ಮರಗಳಂತೆ ಬೆಳೆಯುವುದು ಇತ್ಯಾದಿಗಳು. ಈ ಲೇಖನದಲ್ಲಿ ನಾವು ತುಂಬಾ ವಿಚಿತ್ರವಾದ ಸಮಸ್ಯೆ ಬಗ್ಗೆ ಹೇಳಲಿದ್ದೇವೆ. ಇಂತಹ ಅಪರೂಪದ ಸಮಸ್ಯೆಯು ಹತ್ತು ಮಿಲಿಯನ್ ಜನರಲ್ಲಿ ಕಂಡುಬರುವುದು.

21 ಹರೆಯದ ಮಹಿಳೆಗೆ ಈ ಸಮಸ್ಯೆಯು ಕಾಣಿಸಿಕೊಂಡಿದೆ. ಆದರೆ ಆಕೆಯ ಪರಿಚಯವನ್ನು ಗೌಪ್ಯವಾಗಿ ಇಡಲಾಗಿದೆ. ತುಂಬಾ ವಿಚಿತ್ರವಾದ ಸಮಸ್ಯೆಯಿಂದಾಗಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಮುಖ, ಅಂಗೈ ಮತ್ತು ಕೈಯಲ್ಲಿ ಬೆವರಿನ ಬದಲಿಗೆ ರಕ್ತವು ಸೋರುತ್ತಿದೆ.

Sweats Blood

ಇದನ್ನು ನಂಬುವುದು ತುಂಬಾ ಕಷ್ಟವಾದರೂ ಇದು ಸತ್ಯ ಮತ್ತು ಈ ವಿಚಿತ್ರ ಪರಿಸ್ಥಿತಿ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಇಟಲಿಯ ವೈದ್ಯರು ಪರೀಕ್ಷಿಸಿದ ವೇಳೆ ಅವರಿಗೂ ತುಂಬಾ ಅಚ್ಚರಿಯಾಗಿದೆ. ಮಹಿಳೆಯ ಚರ್ಮದಲ್ಲಿ ಯಾವುದೇ ಗಾಯಗಳು ಇಲ್ಲದೆ ಇರುವುದು ವೈದ್ಯರನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿತು.

Most Read: ಬೋಳು ತಲೆ ನಿವಾರಣೆ ಮಾಡಲು ಕೆಲವು ವಿಲಕ್ಷಣ ವಿಧಾನಗಳು!

ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಮಹಿಳೆಯ ದೇಹದಿಂದ ಹೀಗೆ ರಕ್ತ ಯಾಕೆ ಬರುತ್ತಿದೆ ಎಂದು ತಿಳಿಯಲು ತುಂಬಾ ಕಷ್ಟಪಡಬೇಕಾಯಿತು. ಮಹಿಳೆಯು ಮಲಗಿರುವ ವೇಳೆ ಮತ್ತು ಯಾವುದೇ ದೈಹಿಕ ಚಟುವಟಿಕೆ ನಡೆಸಿದ ವೇಳೆ ಈ ಪರಿಸ್ಥಿತಿಯು ತೀವ್ರವಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಮಹಿಳೆಯು ಒತ್ತಡಕ್ಕೆ ಒಳಗಾದ ವೇಳೆ ಆಕೆಯ ಮೈಯಲ್ಲಿ ಹೆಚ್ಚು ರಕ್ತ ಸೋರುತ್ತಲಿತ್ತು. ಕೆನಡಿಯನ್ ಮೆಡಿಕಲ್ ಅಸೋಸಿಯೇಶನ್ ಜರ್ನಲ್(ಸಿಎಂಎಜೆ)ನಲ್ಲಿ ಮಹಿಳೆಯ ಬಗ್ಗೆ ಲೇಖನವು ಪ್ರಕಟಗೊಂಡಿದೆ. ಪರಿಸ್ಥಿತಿ ಬಗ್ಗೆ ವಿವರ ನೀಡಿದ ವೈದ್ಯರು ಕಳೆದ ಮೂರು ವರ್ಷಗಳಿಂದ ರೋಗಿಯು ತುಂಬಾ ಅಸಾಮಾನ್ಯವಾದ ಲಕ್ಷಣಗಳಿಂದ ಬಳಲುತ್ತಿದ್ದರು ಮತ್ತು ಒಂದರಿಂದ ಐದು ನಿಮಿಷ ಕಾಲ ಆಕೆ ಈ ಪರಿಸ್ಥಿತಿಯಲ್ಲಿ ಇರುವರು. ಈ ಪರಿಸ್ಥಿತಿಯಿಂದಾಗಿ ಮಹಿಳೆಯು ಭಾವನಾತ್ಮಕವಾಗಿ ಬಳಲಿರುವರು ಮತ್ತು ಖಿನ್ನತೆಗೆ ಒಳಗಾಗಿರುವರು. ಸಾಮಾಜಿಕವಾಗಿಯೂ ಆಕೆ ದೂರವಾಗಿರುವರು.

ವೈದ್ಯರು ಹೇಳಿರುವ ಪ್ರಕಾರ ಮಹಿಳೆ ರಕ್ತದ ಗಣತಿ ಮತ್ತು ರಕ್ತ ಹೆಪ್ಪುಗಟ್ಟುವಿಕೆಯು ಸಾಮಾನ್ಯವಾಗಿ ಇದೆ. ಮಹಿಳೆಯು ಹೆಮಟೊಹಿಡ್ರೋಸಿಸ್ ಎನ್ನುವ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ಇದು ತುಂಬಾ ಅಪರೂಪದ ಪರಿಸ್ಥಿತಿಯಾಗಿದೆ. 10 ಮಿಲಿಯನ್ ಜನರಲ್ಲಿ ಒಬ್ಬರು ಇಂತಹ ಪರಿಸ್ಥಿತಿಗೆ ಸಿಲುಕುವರು.

Most Read: ಕುಡಿದ ಮತ್ತಿನಲ್ಲಿ ಮನೆಯ ಬೀಗದ ಕೈ ನುಂಗಿಬಿಟ್ಟ!

ಈ ಅಪರೂಪದ ಪರಿಸ್ಥಿತಿಯ ಚಿಕಿತ್ಸೆ ಬಗ್ಗೆ ಹೇಳಿರುವ ವೈದ್ಯರು, ಆಕೆಗೆ ಪ್ರೊಪ್ರಾನೊಲೊಲ್ ನೀಡಲಾಗಿದ್ದು, ಇದು ಬೆಟಾ ಬ್ಲಾಕ್ ಮಾಡುವ ಔಷಧಿಯಾಗಿದೆ. ಈ ಔಷಧಿಯು ಸ್ವಲ್ಪ ಸಮಯ ಆಕೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಆದರೆ ದುರಾದೃಷ್ಟದಿಂದ ಇದಕ್ಕೆ ಸಂಪೂರ್ಣ ಗುಣಮುಖವಾಗುವ ಯಾವುದೇ ಚಿಕಿತ್ಸೆಯಿಲ್ಲ ಎಂದು ವೈದ್ಯರು ಹೇಳಿರುವರು. ಈ ಪರಿಸ್ಥಿತಿಯ ಸಂಪೂರ್ಣ ವಿವರ ಮಾತ್ರ ತಿಳಿದಿಲ್ಲ. ಇದು ಅತಿಯಾದ ಒತ್ತಡ ಅಥವಾ ಆತಂಕದಿಂದ ಬರುವುದು ಎಂದು ಹೇಳಲಾಗುತ್ತದೆ.

English summary

Case Of A Woman Who Sweats Blood

A woman was hospitalised in Florence after she suffered showed a rare symptom for a while. The woman would bleed instead of sweat and this would increase and become more intense when she was under stress. Medics were shocked and diagnosed her with hematohidrosis. It is said that it affects one in 10 million individuals.
X
Desktop Bottom Promotion