For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತಾ? ಈ ಮಹಿಳೆ ಕಣ್ಣುಗಳನ್ನು ಕೂಡ ಸ್ವಚ್ಛಗೊಳಿಸುತ್ತಾಳಂತೆ!

|

ಭಾರತದಲ್ಲಿ ಆಯುರ್ವೇದವು ಇದ್ದಂತೆ ನಮ್ಮ ನೆರೆಯ ಚೀನಾದಲ್ಲಿ ಅಲ್ಲಿನ ವೈದ್ಯಕೀಯ ಪದ್ಧತಿಯು ತುಂಬಾ ಜನಪ್ರಿಯ. ಅದು ಕೂಡ ನಮ್ಮ ಆಯುರ್ವೇದಕ್ಕೆ ಸ್ವಲ್ಪ ಮಟ್ಟಿನ ಹೋಲಿಕೆ ಹೊಂದಿದೆ. ಇಂದು ಕೂಡ ಜನರು ಇಂತಹ ಚಿಕಿತ್ಸೆಗಳಿಗೆ ಮೊರೆ ಹೋಗಿ ತಮ್ಮ ಅನಾರೋಗ್ಯ ಹಾಗೂ ಕಾಯಿಲೆಗಳಿಂದ ಮುಕ್ತಿ ಪಡೆದುಕೊಳ್ಳುವರು. ಇಂತಹ ಕೆಲವೊಂದು ಚಿಕಿತ್ಸೆಗಳು ದೇಶದ ವಿವಿಧ ಭಾಗಗಳಲ್ಲೂ ನಾವು ಕಂಡುಕೊಳ್ಳುತ್ತೇವೆ. ಕೆಲವು ಚಿಕಿತ್ಸೆಗಳು ತುಂಬಾ ವಿಚಿತ್ರವೆಂದು ನಮಗೆ ಅನಿಸುವುದು. ಯಾಕೆಂದರೆ ನಾವು ಇಂತಹ ಚಿಕಿತ್ಸೆಯನ್ನು ಮೊದಲು ಮಾಡಿಕೊಂಡಿರುವುದಿಲ್ಲ.

Eye-Washing Master

ವಿಚಿತ್ರ ಚಿಕಿತ್ಸೆ ಬಗ್ಗೆ ನಾವಿಲ್ಲಿ ನಿಮಗೆ ಹೇಳಲಿದ್ದೇವೆ. ಇಲ್ಲಿ ಮಹಿಳೆಯೊಬ್ಬರು ಕಣ್ಣುಗಳನ್ನು ಸ್ವಚ್ಛ ಮಾಡುತ್ತಾರಂತೆ! ಆಕೆ ಕಣ್ಣುಗಳನ್ನು ಸ್ವಚ್ಛ ಮಾಡುವುದರಲ್ಲಿ ತುಂಬಾ ಪರಿಣತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಕೆಯ ವೃತ್ತಿ ಬಗ್ಗೆ ನೀವು ತಿಳಿಯಿರಿ ಮತ್ತು ಜನರ ಕಣ್ಣುಗಳು ಹೇಗೆ ಸ್ವಚ್ಛವಾಗುವುದು ಎಂದು ತಿಳಿಯಿರಿ.

ಇದು ಚೀನಾದ ವೈದ್ಯಕೀಯ ಪದ್ಧತಿಯ ಒಂದು ಭಾಗ

ಇದು ಚೀನಾದ ವೈದ್ಯಕೀಯ ಪದ್ಧತಿಯ ಒಂದು ಭಾಗ

ಕಣ್ಣುಗಳನ್ನು ಸ್ವಚ್ಛ ಮಾಡಿಸಿಕೊಳ್ಳುವುದು ಚೀನಾದ ವೈದ್ಯಕೀಯ ಪದ್ಧತಿಯ ಒಂದು ಭಾಗ ಆಗಿದೆ. ಇದು ಚೀನಾದಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಮಲೇಷಿಯಾದ ಹುಯಾಂಗ್ ಬಯೊಮಿ ಎಂಬ ಈ ಮಹಿಳೆಯು ಕಣ್ಣು ಸ್ವಚ್ಛ ಮಾಡುವ ಅಂಗಡಿ ನಡೆಸುತ್ತಿರುವರು. ಆಕೆ ಮಲೇಷಿಯಾದಲ್ಲಿ ಕಣ್ಣು ಸ್ವಚ್ಛಗೊಳಿಸುವ ಪರಿಣತಿ ಪಡೆದ ಮಹಿಳೆ ಎಂದು ಹೇಳಲಾಗುತ್ತದೆ.

Most Read: ನಕಲಿ ಉತ್ಪನ್ನ ಬಳಸಿ ಆರೋಗ್ಯ ಕೆಡಿಸಿಕೊಂಡ ಮಹಿಳೆ

ಈ ಅಂಗಡಿ ತುಂಬಾ ಅಸಾಮಾನ್ಯ ಸೇವೆ ನೀಡುವುದು

ಈ ಅಂಗಡಿ ತುಂಬಾ ಅಸಾಮಾನ್ಯ ಸೇವೆ ನೀಡುವುದು

ಈ ಅಂಗಡಿ ತುಂಬಾ ಅಸಾಮಾನ್ಯ ಎನಿಸುವ ಸೇವೆ ನೀಡುವುದು. ಇದನ್ನು ಕಣ್ಣುಗಳನ್ನು ಸ್ವಚ್ಛಗೊಳಿಸುವುದು ಎಂದು ಹೇಳಲಾಗುತ್ತದೆ. ವರದಿಗಳು ಹೇಳುವ ಪ್ರಕಾರ ಈ ಅಂಗಡಿ ಸುಮಾರು 80 ವರ್ಷಗಳಿಂದ ಇಲ್ಲಿದೆ ಮತ್ತು ನಾಲ್ಕು ಪೀಳಿಗೆಯವರು ಕಣ್ಣು ಸ್ವಚ್ಛಗೊಳಿಸುವ ಕೆಲಸ ಮಾಡುಕೊಂಡು ಬರುತ್ತಿದ್ದಾರೆ.

ಸಂಪೂರ್ಣ ವಿಧಾನದ ಬಗ್ಗೆ

ಸಂಪೂರ್ಣ ವಿಧಾನದ ಬಗ್ಗೆ

ಈ ಅಂಗಡಿಯು ಎಂಟು ದಶಕದ ಮೊದಲು ಒಂದು ಕ್ಷೌರದ ಅಂಗಡಿ ಆಗಿತ್ತು ಮತ್ತು ಇದರ ಬಳಿಕ ಸಾಂಪ್ರದಾಯಿಕ ಆಗಿರುವ ಚೀನಾದ ವೈದ್ಯಕೀಯ ಪದ್ಧತಿ ಕಣ್ಣು, ಕಿವಿ ಮತ್ತು ಮೂಗು ಸ್ವಚ್ಛಗೊಳಿಸಲು ಆರಂಭಿಸಿದೆ.

ಕಣ್ಣುಗಳನ್ನು ಸ್ವಚ್ಛ ಮಾಡಿಕೊಳ್ಳುವುದು ಹೇಗೆ?

ಕಣ್ಣುಗಳನ್ನು ಸ್ವಚ್ಛ ಮಾಡಿಕೊಳ್ಳುವುದು ಹೇಗೆ?

ಕಣ್ಣುಗಳನ್ನು ಮುಚ್ಚಿಕೊಂಡಿದ್ದ ವೇಳೆ ಹುಯಾಂಗ್ ಮೊದಲಿಗೆ ಎರಡು ಕಣ್ಣುಗಳಿಗೆ ನಿಧಾನವಾಗಿ ಮಸಾಜ್ ಮಾಡುವರು. ಇದರ ಬಳಿಕ ತುಂಬಾ ಎಚ್ಚರಿಕೆಯಿಂದ ಕಣ್ಣುಗಳ ರೆಪ್ಪೆಯನ್ನು ಹಿಂದಕ್ಕೆ ಎಳೆದುಕೊಳ್ಳುವರು ಮತ್ತು ಔಷಧಿಯ ಮಿಶ್ರಣವನ್ನು ಕಣ್ಣುಗಳಿಗೆ ಹಾಕುವರು. ಈ ಮಿಶ್ರಣವು ತುಂಬಾ ಪುರಾತನವಾಗಿದ್ದು, ಗಿಡಮೂಲಿಕೆ ಮತ್ತು ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಹತ್ತಿ ಬಳಸಿಕೊಂಡು ಆಕೆ ನಯವಾಗಿ ಇದನ್ನು ತೆಗೆಯುವರು. ಇದರ ಬಳಿಕ ಕಣ್ಣ ರೆಪ್ಪೆಗಳು ಮೊದಲಿನ ಸ್ಥಿತಿಗೆ ಬರುವುದು. ರೆಪ್ಪೆಯ ಅಡಿಯಲ್ಲಿ ಇರುವಂತಹ ಕಲ್ಮಷವನ್ನು ಎಚ್ಚರಿಕೆಯಿಂದ ತೆಗೆಯುವರು. ಇದರಿಂದ ರಕ್ತ ಸಂಚಾರವು ಉತ್ತಮ ಆಗುವುದು ಮತ್ತು ಕಣ್ಣುಗಳು ಸರಿಯಾಗಿ ಸ್ವಚ್ಛವಾಗುವುದು ಎಂದು ಆಕೆ ಹೇಳುವರು.

Most Read: ಕೇವಲ 9 ನಿಮಿಷದಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾನ್ ತಾಯಿ!

ಅಂತಿಮ ಫಲಿತಾಂಶ

ಅಂತಿಮ ಫಲಿತಾಂಶ

ಕಣ್ಣುಗಳಲ್ಲಿ ಎಷ್ಟು ಮಟ್ಟಿನ ಕಲ್ಮಶ ಇತ್ತು ಎಂದು ತೋರಿಸಲು ಆಕೆ ಹತ್ತಿಯನ್ನು ಒಂದು ನೀರನ ಲೋಟಕ್ಕೆ ಹಾಕುವರು. ಅದು ಕಲ್ಮಶವನ್ನು ಹೊರಗೆ ಬಿಡುವುದು. ಇದನ್ನು ಚಿಕಿತ್ಸೆ ಪಡೆದವರಿಗೆ ತೋರಿಸುವರು. ಇದು ತುಂಬಾ ನೋವುಂಟು ಮಾಡು ವಿಧಾನವಾಗಿದೆ. ಆದರೆ ಯಾವುದೇ ಗಾಯವಾಗಲ್ಲ ಮತ್ತು ತಾಜಾವಾಗಿರಲು ತುಂಬಾ ನೆರವಾಗುವುದು ಎಂದು ಹೇಳಲಾಗುತ್ತದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿ ಕಳುಹಿಸಿ.

English summary

All About The Eye-Washing Master

A woman named Huang Baomei is in her 30s. She is known to be Malaysia's only "eye-washing" master. She explains the process of eye-washing and also claims that this process makes the person feel refreshed and relaxed. Her shop is a super hit as people from different parts of world like to visit and clean their eyes.
X
Desktop Bottom Promotion