For Quick Alerts
ALLOW NOTIFICATIONS  
For Daily Alerts

40 ಬಗೆಯ ಹಣ್ಣುಗಳು ಈ ಒಂದೇ ಮರದಲ್ಲಿ!! ಎಂತಹ ವಿಸ್ಮಯ !!

|

ಮನೆಯ ಸುತ್ತಮುತ್ತ ಹಸಿರಾದ ಪರಿಸರ , ಗಿಡ , ಮರ ಬಳ್ಳಿಗಳ ಸಮಾಗಮ , ನಡುವೆ ಅಲ್ಲಲ್ಲಿ ಅರಳಿ ನಿಂತ ಹೂಗಳು , ಇದರ ಮಧ್ಯೆ ಸಣ್ಣಗೆ ಜುಳು ಜುಳು ಎಂದು ಹರಿಯುವ ನೀರಿನ ಇಂಪಾದ ಕಲರವ ಮತ್ತು ಅಲ್ಲಲ್ಲಿ ಜಿಂಕೆ , ಮೊಲಗಳ ಬೀಡು . ಇವಿಷ್ಟಿದ್ದರೆ ಸಾಕು . ಮನುಷ್ಯನಿಗೆ ಸ್ವರ್ಗವೇ ಕೈಯಲ್ಲಿದ್ದಂತೆ . ಬೇರೆ ಯಾವ ದುಡ್ಡು ಕಾಸು ಆಸ್ತಿ ಪಾಸ್ತಿ ಯಾವುದೂ ಬೇಡವೆನಿಸುತ್ತದೆ . ಏಕೆಂದರೆ ಅಷ್ಟು ಚೆನ್ನಾಗಿ ಮನಸ್ಸಿಗೆ ಮುದ ನೀಡಿರುತ್ತದೆ ಆ ಸುಂದರ ಪರಿಸರ . ನಾವೆಲ್ಲಾ ನಮ್ಮ ಅಜ್ಜ ಅಜ್ಜಿಯ ಹತ್ತಿರ ಕಥೆ ಕೇಳಿಯೇ ಇರುತ್ತೇವೆ . ದೂರದಲ್ಲಿ ಒಂದು ಕಾಡು . ಅಲ್ಲಿ ಒಂದು ಸುಂದರ ಸರೋವರ . ಅಲ್ಲಿಗೆ ಒಬ್ಬ ರಾಜ ಕುದುರೆ ಮೇಲೆ ಬರುತ್ತಾನೆ . ಎಂದೆಲ್ಲಾ ಹೇಳಿರುತ್ತಾರೆ . ಅದನ್ನು ನೆನೆಸಿಕೊಂಡು ಹಾಗೇ ಭಾವನಾಲೋಕಕ್ಕೆ ಹೋಗುತ್ತಿದ್ದುದೂ ಉಂಟು . ಇವೆಲ್ಲಾ ಏಕೆ ಪೀಠಿಕೆ ಹಾಕುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ ? ಈ ಕಥೆಯಲ್ಲಿ ಇಂತಹದೇ ಒಂದು ವಿಸ್ಮಯ ಮತ್ತು ನಿಮ್ಮನ್ನು ಮಂತ್ರ ಮುಗ್ಧರನ್ನಾಗಿಸುವ ಒಂದು ವಿಷಯ ಅಡಗಿದೆ.

ಮನುಷ್ಯ ಇತ್ತೀಚಿಗೆ ಜಗತ್ತಿನ ನಾಗಾಲೋಟಕ್ಕೆ ಹೊಂದಿಕೊಳ್ಳುವಂತೆ ತಾನೂ ಬದಲಾಗಿ ತನ್ನ ಸುತ್ತಲಿನ ನಿಸರ್ಗದ ಸೊಬಗನ್ನೂ ತನಗೆ ಹೇಗೆ ಬೇಕೋ ಹಾಗೆ ಬದಲಾಯಿಸಿ ಎಲ್ಲಾವನ್ನೂ ಕಾಂಕ್ರೀಟ್ ಮಯವಾಗಿಸಿದ್ದಾನೆ . ಅವನ ಪ್ರಕಾರ ಸುಂದರವಾದ ಕಟ್ಟಡಗಳು , ಗಗನಚುಂಬಿ ಅಪಾರ್ಟ್ಮೆಂಟ್ ಗಳು ನಡುವೆ ಎಲ್ಲೋ ಒಂದು ಕಡೆ ಆರ್ಟಿಫಿಷಿಯಲ್ ವಾಟರ್ ಫಾಲ್ ಇದ್ದರೆ , ಅದೇ ಅವನಿಗೆ ಸುಂದರ ಪರಿಸರ ಮತ್ತು ಈಗಿನ ಕಾಲದ ಸ್ವರ್ . ನಿಜವಾದ ನೈಸರ್ಗಿಕ ಪ್ರಕೃತಿಯ ಸೊಬಗನ್ನು ಉಳಿಸಿಕೊಳ್ಳಬೇಕು ಎಂದು ಯೋಚಿಸುವವರು ತೀರಾ ಕಡಿಮೆ ಅದು ಬೆರಳೆಣಿಕೆಯಷ್ಟು ಮಾತ್ರ . ಇದು ಹೀಗೆ ಮುಂದುವರಿದರೆ ನಮ್ಮ ಮುಂದಿನ ಮನುಕುಲದ ಪೀಳಿಗೆಗೆ ನಿಸರ್ಗ ಎಂದರೆ ಏನು ಎಂದು ಚಿತ್ರ ಬಿಡಿಸಿ ತೋರಿಸುವ ಕೆಲಸ ಮಾಡಬೇಕಾಗುತ್ತದೆ . ಇಂತಹ ಬೆರಳೆಣಿಕೆಯಷ್ಟು ಜನರಲ್ಲಿ ಸ್ಯಾಮ್ ವ್ಯಾನ್ ಆಕೆನ್ ಕೂಡ ಒಬ್ಬರು . ಇವರು ಕೂಡ ಪ್ರಕೃತಿಯ ಸೊಬಗನ್ನು ಚೆನ್ನಾಗಿ ಸವಿದು ಅದರ ಬಗ್ಗೆ ವಿಶೇಷವಾದ ಕಾಳಜಿ ಬೆಳೆಸಿಕೊಂಡವರು . ಮತ್ತು ಪ್ರಕೃತಿಯ ಸುಂದರತೆಯ ಕನಸು ಕಂಡು ತಕ್ಷಣ ಅದನ್ನು ಚಿತ್ರ ಬಿಡಿಸಿ ಸಾಕ್ಷರತೆ ಮೆರೆದು ತಮ್ಮ ಚಿತ್ರಗಳ ಮೂಲಕ ಜಗತ್ತಿಗೆ ಪರಿಚಯ ಗೊಳಿಸಬೇಕೆಂಬ ಮಹದಾಸೆ ಹೊಂದಿದ್ದರು . ಅದರಂತೆಯೇ ಮಾಡಿದರೂ ಕೂಡ .

Fruits

ಸಾಮಾನ್ಯವಾಗಿ ನಿಸರ್ಗದ ನಿಯಮದ ಪ್ರಕಾರ ಒಂದು ಜಾತಿಯ ಗಿಡ ಅಥವಾ ಬಳ್ಳಿಯಲ್ಲಿ ಅದೇ ಜಾತಿಯ ಹೂ , ಕಾಯಿ ಮತ್ತು ಹಣ್ಣು ಬಿಡುವುದು ವಾಡಿಕೆ . ಹಿಂದಿನ ಹಳ್ಳಿ ಜನರ ಮಾತೇ ಇದೆ . ಮಾವಿನ ಕಾಯಿ ಮರದಲ್ಲಿ ಬೇವಿನ ಕಾಯಿ ಬಿಡುವುದೇ ಎಂದು . ಅದರಂತೆ " ಬಾಳೆಗೆ ಒಂದೇ ಗೊನೆ ಬಾಳೋರಿಗೆ ಒಂದೇ ಮನೆ " ಎಂಬ ಗಾಧೆ ಕೂಡ ಇಂದಿಗೂ ಪ್ರಚಲಿತದಲ್ಲಿದೆ . ಅದೇನೇ ಆದರೂ ಒಂದು ಮರದಲ್ಲಿ ಒಂದೇ ರೀತಿಯ ಫಲ ಬಿಡುವುದು ಸರ್ವೇ ಸಾಮಾನ್ಯ . ಆದರೆ ಸ್ಯಾಮ್ ವ್ಯಾನ್ ಆಕೆನ್ ಕಂಡ ಕನಸು ಒಂದೇ ಮರದಲ್ಲಿ ಸುಮಾರು 40 ರೀತಿಯ ಹಣ್ಣುಗಳು ಬಿಟ್ಟರೆ ಹೇಗಿರುತ್ತದೆ ಎಂದು !!! ಇದು ಕೇಳಲು ಏನೋ ಒಂದು ಥರ ವಿಚಿತ್ರ ಎನಿಸಿದರೂ ಇದು ಸತ್ಯ . ನಿಜವಾಗಲೂ 40 ರೀತಿಯ ಹಣ್ಣುಗಳು ಬಿಡುವ ಮರ ಜಗತ್ತಿನಲ್ಲಿ ಇದೆ !!!

ಇಲ್ಲಿ ನಾವು ಈ 40 ರೀತಿಯ ಹಣ್ಣುಗಳನ್ನು ಬಿಡುವ ಮರ ಜನ್ಮ ತಾಳಿದ ಕಥೆಯನ್ನು ಹೇಳಲು ಬಯಸುತ್ತೇವೆ . ಇದರ ಕೃಷಿ , ಸಂಶೋಧನೆ ಮತ್ತು ಸಂರಕ್ಷಣೆ ಹೇಗೆ ನಡೆಯಿತೆಂದು ತಿಳಿಸಲು ಈ ಲೇಖನವನ್ನು ಸಾದರ ಪಡಿಸುತ್ತಿದ್ದೇವೆ . ಸ್ಯಾಮ್ ವ್ಯಾನ್ ಆಕೆನ್ ಒಬ್ಬ ಹವ್ಯಾಸಿ ಮತ್ತು ಸಮಕಾಲೀನ ಚಿತ್ರ ಬಿಡಿಸುವವರು ಮತ್ತು ಸೈರಾಕ್ಯೂಸ್ ವಿಶ್ವ ವಿದ್ಯಾಲಯದಲ್ಲಿ ಆರ್ಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು . ಅವರು ಅವರ ಕನಸಿನ ಕೂಸಾದ " ಒಂದೇ ಮರದಲ್ಲಿ 40 ರೀತಿಯ ಹಣ್ಣುಗಳು " ಎಂಬ ಪ್ರಾಜೆಕ್ಟ್ ಹೇಗೆ ಶುರುವಾಯಿತು ಮತ್ತು ಹೇಗೆ ಮುನ್ನಡೆಯಿತು , ಅದಕ್ಕೆ ಎದುರಾದ ಚಾಲೆಂಜ್ ಗಳೇನು ಎಂಬುದನ್ನು ಬಹಳ ಅಚ್ಚುಕಟ್ಟಾಗಿ ಹಂಚಿಕೊಂಡಿದ್ದಾರೆ .

ಸ್ಯಾಮ್ ವ್ಯಾನ್ ಆಕೆನ್ ಗೆ ನಿಸರ್ಗ ಎಂದರೆ ಮೊದಲಿನಿಂದಲೂ ಪಂಚ ಪ್ರಾಣ . ಅವರೇ ಹೇಳಿರುವಂತೆ ಅವರದು ಕೃಷಿ ಕುಟುಂಬದ ಹಿನ್ನೆಲೆ . ಆದ್ದರಿಂದ ಅವರು ಸಣ್ಣ ಮಗುವಾಗಿದ್ದಾಗಿನಿಂದ ಪ್ರಕೃತಿಯ ಸೊಬಗಿನ ಮಡಿಲಲ್ಲೇ ಬೆಳೆದರು . ಅವರು ಹುಟ್ಟಿದಾಗಿನಿಂದ ಮನುಷ್ಯ ಹೇಗೆ ನಿಸರ್ಗದ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬುದನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು . ಈ ವಿಷಯವೇ ಅವರ ಈ ಕನಸಿಗೆ ಒತ್ತು ಕೊಟ್ಟು ನನಸಾಗಲು ಪ್ರೇರೇಪಿಸಿತು . ಅವರು ಪ್ರಪ್ರಥಮ ಬಾರಿಗೆ ಈಡನ್ ಎಕ್ಸಿಬಿಷನ್ ನಲ್ಲಿ ವಿವಿಧ ತರಕಾರಿಗಳನ್ನು ಒಟ್ಟಿಗೆ ಕಸಿ ಮಾಡಿ ಅದರಿಂದ ಬಂದಂತಹ ವಿಚಿತ್ರ ಸಸಿಗಳನ್ನು ಪ್ರದರ್ಶನಕ್ಕೆ ಇಟ್ಟು ಎಲ್ಲರ ಗಮನ ಸೆಳೆದಿದ್ದರು . ಇದು ತಕ್ಷಣ ಎಲ್ಲರ ಮೆಚ್ಚುಗೆ ಗಳಿಸಿತು.

Most Read: ಈ ರೆಸ್ಟೋರೆಂಟ್‌ನಲ್ಲಿ ದೆವ್ವಗಳು ಗ್ರಾಹಕರಿಗೆ ಆಹಾರ ಸರಬರಾಜು ಮಾಡುತ್ತವೆಯಂತೆ!!

ಇದರಿಂದ ಉತ್ತೇಜಿತಗೊಂಡ ಸ್ಯಾಮ್ ವ್ಯಾನ್ ಆಕೆನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪ್ರಯೋಗವನ್ನು ಹಣ್ಣುಗಳ ಮೇಲೆ ಏಕೆ ಪ್ರಯೋಗ ಮಾಡಬಾರದು ಎಂದು ಯೋಚಿಸಿ ತಕ್ಷಣ ಈ ಮಹತ್ತರ ಯೋಜನೆಯನ್ನು ಕೈ ಗೆತ್ತಿಕೊಂಡು ಕೆಲವು ವರ್ಷಗಳ ಕಾಲ ಹಲವಾರು ಮರಗಳ ಮೇಲೆ ಸಂಶೋಧನೆ ಕೈ ಗೊಂಡು ಸುಮಾರು 40 ಹಣ್ಣುಗಳ ಸಸಿಗಳನ್ನು ಕಸಿ ಮಾಡಲು ಮುಂದಾದರು ಮತ್ತು ಇದರಲ್ಲಿ ಯಶಸ್ಸನ್ನು ಕೂಡ ಪಡೆದರು . ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಅವರ ಆ ಶ್ರಮದ ಸಂಶೋಧನೆಯ ಪ್ರತಿಫಲವೇ ಸುಮಾರು 40 ಹಣ್ಣುಗಳ ಹೈಬ್ರಿಡ್ ಮರ ಜನ್ಮ ತಾಳಲು ಕಾರಣವಾಯಿತು .ಸ್ಯಾಮ್ ವ್ಯಾನ್ ಆಕೆನ್ ರ ಪ್ರಕಾರ ಆ ಹೈಬ್ರಿಡ್ ಮರ ವಸಂತ ಕಾಲದಲ್ಲಿ ಬಗೆ ಬಗೆಯ ಹೂ ಬಿಟ್ಟು ಎಲ್ಲರನ್ನೂ ಬೆರಗು ಗೊಳಿಸುತ್ತದೆ . ಇದು ಕಲೆಯ ದೃಷ್ಟಿಯಲ್ಲಿ ನೋಡುವುದಾದರೆ ನಿಜಕ್ಕೂ ಒಂದು ಅದ್ಭುತಕ್ಕೆ ಉದಾಹರಣೆಯೇ ಸರಿ .

ಸ್ಯಾಮ್ ವ್ಯಾನ್ ಆಕೆನ್ ಹೇಳಿರುವ ಪ್ರಕಾರ ಈ ಅದ್ಬುತ ಸಾಧನೆಗೆ ಕೆಲವು ತಿಂಗಳುಗಳೇ ಹಿಡಿದಿದ್ದು , ಇದರ ಪ್ರತಿಫಲವೇ ಅವರು ಬೆಳೆಸಿದ ಒಂದೇ ಮರದಲ್ಲಿ ಬಾದಾಮಿ , ಪ್ಲಮ್ , ಪೀಚ್ , ಏಪ್ರಿಕಾಟ್ , ನೆಕ್ಟರಿನ್ ಎಂಬ ಇತ್ಯಾದಿ ಹಣ್ಣುಗಳನ್ನು ಬಿಡಲು ಪ್ರಾರಂಭಿಸಿತು . ಇವು ಕೇವಲ ಕೆಲವು ಹಣ್ಣುಗಳು ಮಾತ್ರ . ಇನ್ನೂ ಹಲವಾರು ರೀತಿಯ , ಬಗೆ ಬಗೆಯ , ನಾವು ಇದುವರೆಗೂ ಎಲ್ಲೂ ನೋಡಿರದ ಹಣ್ಣುಗಳನ್ನು ಈ ಮರದಲ್ಲಿ ಕಾಣಬಹುದು ಎನ್ನುತ್ತಾರೆ ಸ್ಯಾಮ್ ವ್ಯಾನ್ ಆಕೆನ್.

Most Read: ಮಲಗುವಾಗ ತಲೆ ದಿಂಬಿನ ಕೆಳಗೆ ಇಂತಹ 5 ವಸ್ತುಗಳನ್ನು ಇಡಬಾರದಂತೆ!

ಸ್ಯಾಮ್ ವ್ಯಾನ್ ಆಕೆನ್ ರದು ಧಾರಾಳ ಮನೋಭಾವ . ಅವರ ಈ ಯೋಜನೆ ಕೇವಲ ಅವರ ಮನಸ್ಸಿನ ಖುಷಿಗಷ್ಟೇ ಸೀಮಿತವಾಗಿರಲಿ ಎಂಬ ಭಾವನೆ ಎಂದಿಗೂ ಅವರಿಗೆ ಬರಲೇ ಇಲ್ಲ . ಅವರ ವಿಶಾಲ ಮನೋಭಾವದಿಂದ ಈ ಯೋಜನೆ ಜಗತ್ತಿಗೆ ಪ್ರಸಿದ್ಧಿಯಾಗಲೀ ಎಂಬ ಕಾರಣಕ್ಕೆ ಇಂತಹ ಸುಮಾರು 16 ಮರಗಳನ್ನು ದೇಶದ ಹಲವು ಭಾಗಗಳಲ್ಲಿ ವಿವಿಧ ಮ್ಯೂಸಿಯಂ , ಸದಾ ಜನನಿಬಿಡ ಪ್ರದೇಶಗಳು , ಕಮ್ಯೂನಿಟಿ ಸೆಂಟರ್ ಗಳು ಮತ್ತು ಪ್ರೈವೇಟ್ ಆರ್ಟ್ ಗ್ಯಾಲರಿ ಗಳಲ್ಲಿ ನೆಟ್ಟು ಬೆಳೆಸಲಾರಂಭಿಸಿದರು . ಇದರಿಂದ ಹಲವಾರು ಮಂದಿ ಪ್ರೇರೇಪಿತಗೊಳ್ಳುತ್ತಾರೆ ಮತ್ತು ಇಂತಹ ಹಲವಾರು ಚಿಂತನೆಗಳು ಮೈದಳೆಯುತ್ತವೆ ಎಂಬುದು ಅವರ ಭಾವನೆ . ನಿಜಕ್ಕೂ ಎಂತಹ ಅದ್ಭುತ ಸಾಧನೆ ಎಂದು ನಾವೆಲ್ಲರೂ ತಲೆದೂಗಬೇಕು . ಅಲ್ಲವೇ ?

English summary

A Magical Tree Produces 40 Different Types Of Fruits

An incredible tree that produces 40 fruits is an invention by Van Aken who spent a few years to figure out how to graft different parts of the trees onto one single fruit tree. It took over five years and several grafted branches for the end result and the first tree that bear 40 fruits was complete.
X
Desktop Bottom Promotion