For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಲಿಂಗಿ ಸಮುದಾಯಕ್ಕಾಗಿ ಉದ್ಯೋಗ ಮೇಳ

|

ಸಲಿಂಗಿಗಳನ್ನು ಸಮಾನವಾಗಿ ನೋಡಬೇಕು ಎನ್ನುವ ಕಾನೂನು ಹೋರಾಟವು ನಡೆಯುತ್ತಿರುವಂತೆ ಅವರಿಗಾಗಿ ಈಗ ಉದ್ಯೋಗ ಮೇಳವೊಂದು ನಡೆಯುತ್ತಲಿದೆ. ಇದರಲ್ಲಿ ಐಟಿ, ಫ್ರಂಟ್ ಡೆಸ್ಕ್, ಅಡ್ಮಿನ್ ಮತ್ತು ಹೌಸ್ ಕೀಪಿಂಗ್ ಸಹಿತ ಸುಮಾರು 50ಕ್ಕೂ ಹೆಚ್ಚು ಕಂಪೆನಿಗಳು ಇದರಲ್ಲಿ ಭಾಗಿಯಾಗಲಿದೆ.

ಭಾರತದಲ್ಲಿ ಸಲಿಂಗ ಕಾಮಕ್ಕೆ ಕಾನುನು ಬದ್ಧ ಮಾನ್ಯತೆ ನೀಡಿದ ಒಂದು ವರ್ಷದ ಬಳಿಕ ಬೆಂಗಳೂರಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸಲಿಂಗ ಸಮುದಾಯಕ್ಕೆ ಇದೇ ಜುಲೈ ತಿಂಗಳಲ್ಲಿ ಉದ್ಯೋಗ ಮೇಳವು ನಡೆಯಲಿದೆ. ಪ್ರೈಡ್ ಸರ್ಕಲ್ ಎನ್ನುವ ಎರಡು ವರ್ಷ ಹಳೆಯ ಕಂಪೆನಿಯೊಂದು ಉದ್ಯೋಗಸ್ಥ ವಿದೇಶಿ ಹಾಗೂ ಭಾರತೀಯ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಈ ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತಲಿದೆ. ಪ್ರೈಡ್ ಸರ್ಕಲ್ ರೈಸ್'(ರಿ ಇಮೇಜಿಂಗ್ ಇನಕ್ಲೂಷನ್ ಫಾರ್ ಸೋಶಿಯಲ್ ಇಕ್ವಿಟಿ) ಎನ್ನುವ ಧ್ಯೇಯದಡಿಯಲ್ಲಿ ಈ ಉದ್ಯೋಗ ಮೇಳವನ್ನು ಇನ್ನು ಹತ್ತು ನಗರಗಳಲ್ಲಿ ನಡೆಸಲು ನಿರ್ಧಾರ ಮಾಡಿದೆ. ಇದರಿಂದ 2020 ವೇಳೆ ಸುಮಾರು 1000 ಉದ್ಯೋಗ ನಿರ್ಮಾಣವಾಗಲಿದೆ.

Job

ಬೆಂಗಳೂರು ಉದ್ಯೋಗ ಮೇಳದಲ್ಲಿ ಸುಮಾರು 50 ಕಂಪೆನಿಗಳು ಭಾಗಿಯಾಗುವ ನಿರೀಕ್ಷೆಯಿದೆ. ಐಟಿ, ಫ್ರಂಟ್ ಡೆಸ್ಕ್, ಅಡ್ಮಿನ್ ಮತ್ತು ಹೌಸ್ ಕೀಪಿಂಗ್ ಮತ್ತು ಇತರ ವಿಭಾಗಗಳಲ್ಲಿ ಉದ್ಯೋಗವಿದೆ. ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಮೊದಲು ನೋಂದಣಿ ಮಾಡಿಕೊಳ್ಳಬೇಕು ಮತ್ತು ಹಾಗೆ ಬಂದವರಿಗೆ ಅವಕಾಶವಿಲ್ಲ ಎಂದು ಪ್ರೈಡ್ ಸರ್ಕಲ್ ನ ಸಹ ಸಂಸ್ಥಾಪಕರಾಗಿರುವ ಶ್ರೀನಿ ರಾಮಸ್ವಾಮಿ ಹೇಳಿದ್ದಾರೆ.

ಎರಡು ವಾರಗಳ ಮೊದಲು ನಾವು ಭಾರತದಲ್ಲೇ ಮೊದಲ ಬಾರಿಗೆ ಸಲಿಂಗಿ ಸಮುದಾಯಕ್ಕಾಗಿ ರೆಸ್ಯುಮೆ ಡೆಟಾ ಬೇಸ್ ಮಾಡಿದ್ದಾರೆ. ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪಿಎಚ್ ಡಿ ಶಿಕ್ಷಣ ಪೂರೈಸಿದವರ ತನಕ ಅಭ್ಯರ್ಥಿಗಳು ಇದ್ದಾರೆ. ವೈಯಕ್ತಿಕ ವಿವರಗಳನ್ನು ಪರಿಶೀಲಿಸಿದ ಬಳಿಕ ನಾವು ಇದನ್ನು ಕಂಪೆನಿಗಳಿಗೆ ಕಳುಹಿಸಿಕೊಡುತ್ತಿದ್ದೇವೆ. ಸಂದರ್ಶನವು ಉದ್ಯೋಗ ಮೇಳದ ದಿನ ನಡೆಯಲಿದೆ ಮತ್ತು ಕಂಪೆನಿಯ ಪ್ರತಿನಿಧಿಗಳು ಅಭ್ಯರ್ಥಿಗಳನ್ನು ಭೇಟಿ ಮಾಡಲಿದ್ದಾರೆ. ಈ ಡೆಟಾ ಬೇಸ್ ನಲ್ಲಿ ಸುಮಾರು 80 ರೆಸ್ಯೂಮಿ ಹೊಂದಿದೆ ಎಂದು ಅವರು ಹೇಳುತ್ತಾರೆ.

ಈ ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ. ಇಲ್ಲಿ ಕಂಪೆನಿಗಳು ಶುಲ್ಕ ಪಾವತಿಸುತ್ತವೆ. ಸಮುದಾಯದ ಬಗ್ಗೆ ಒಳ್ಳೆಯ ಕೆಲಸ ಮಾಡುತ್ತಿರುವಂತಹ ಹಲವಾರು ಸರಕಾರೇತರ ಸಂಸ್ಥೆಗಳೊಂದಿಗೆ ಕೂಡ ನಾವು ಕೆಲಸ ಮಾಡುತ್ತಲಿದ್ದೇವೆ. ಬೆಂಗಳೂರನ್ನು ನಾವು ಮೊದಲು ಆಯ್ಕೆ ಮಾಡಿಕೊಂಡಿದ್ದೇವೆ. ಯಾಕೆಂದರೆ ಇಲ್ಲಿ ಅವಕಾಶಗಳು ಹೆಚ್ಚಾಗಿವೆ. ದಿನಪೂರ್ತಿ ನಡೆಯಲಿರುವಂತಹ ಕಾನ್ಫರೆನ್ಸ್ ನಲ್ಲಿ ಪ್ರಸಿದ್ಧ ವ್ಯಕ್ತಿಗಳು ಇಲ್ಲಿ ಮಾತನಾಡಲಿದ್ದಾರೆ. ಸುಮಾರು 20 ಬೂತ್ ಗಳನ್ನು ನಾವು ಹಾಕಿಕೊಂಡಿದ್ದೇವೆ.

ಇಲ್ಲಿ ಉದ್ಯೋಗದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲಿದ್ದೇವೆ ಎಂದು ರಾಮಸ್ವಾಮಿ ಮಾಹಿತಿ ನೀಡಿದರು. 2018ರಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 377 ತೆಗೆದು ಹಾಕಿದ ಬಳಿಕ ಕಂಪೆನಿಗಳು ಈಗ ಸಲಿಂಗಿಗಳಿಗೆ ಕೂಡ ಉದ್ಯೋಗ ನೀಡಲು ಮುಂದಾಗುತ್ತಿವೆ.

ಕಂಪೆನಿಗಳು ಲೋಗೋ ಹಾಕಿಕೊಂಡು ಬೆಂಬಲ ವ್ಯಕ್ತಪಡಿಸಿವೆ. ಕೆಲವೊಂದು ಕಂಪೆನಿಗಳಲ್ಲಿ ಫ್ರಂಟ್ ಡೆಸ್ಕ್ ಮತ್ತು ಅಡ್ಮಿನ್ ಗೆ ಲಿಂಗ ಪರಿವರ್ತನೆ ಮಾಡಿಕೊಂಡಿರುವವರನ್ನು ಆಯ್ಕೆ ಮಾಡಲಾಗಿದೆ. ಸಲಿಂಗಿ ಸಮುದಾಯದವರನ್ನು ಉದ್ಯೋಗಕ್ಕಾಗಿ ನೇಮಿಸುವಂತಹ ಪ್ರಕ್ರಿಯೆಯು ಇನ್ನಷ್ಟು ಹೆಚ್ಚಬೇಕು ಮತ್ತು ಅವರಿಗೆ ಕೂಡ ಉದ್ಯೋಗದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು. ಸಲಿಂಗಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಿರುವಂತಹ ಜಪಾನ್ ಮತ್ತು ಅಮೆರಿಕಾದಂತಹ ರಾಷ್ಟ್ರಗಳಿಂದ ಅವರು ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಇದರ ಬಗ್ಗೆ ಆಸಕ್ತಿ ಇರುವಂತಹವರು [email protected] ಗೆ ಮೇಲ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಉದ್ಯೋಗ ಮೇಳವು ಜುಲೈ 12ರಂದು ಹೋಟೆಲ್ ಲಲಿತ್ ಅಶೋಕದಲ್ಲಿ ನಡೆಯಲಿದೆ.

ಲಾಗಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

English summary

A job fair for the LGBTQ community

Close to a year after the decriminalisation of homosexuality in India, Bengaluru will host what is touted to be one of the country’s first job fair for the LGBTQ community this July. The event is being organised by Pride Circle, a two-year-old platform that engages with working individuals, as well as representatives from MNCs and Indian companies across the country. Pride Circle intends to take job fair, ‘RISE’ (Re-imagining Inclusion for Social Equity) to 10 cities that it is active in, with the aim of creating 1,000 jobs by 2020.
X
Desktop Bottom Promotion