Just In
Don't Miss
- News
ಕೆಂಪೇಗೌಡ ಅಧ್ಯಯನ ಪೀಠ ವಿವಾದಕ್ಕೆ ಹೊಸ ತಿರುವು..
- Movies
ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಜೇನುತುಪ್ಪದೊಂದಿಗೆ ಕಣಜದ ಕೀಟ ಮಾರುತ್ತಿರುವ ಜಪಾನ್‌ನ ಕಂಪೆನಿ!
ನಾವು ವಿದೇಶಗಳಲ್ಲಿನ ಆಹಾರ ಪದ್ಧತಿಯನ್ನು ನೋಡಿದರೆ ಅಲ್ಲಿ ಸಣ್ಣ ಹುಳದಿಂದ ಹಿಡಿದು ದೊಡ್ಡ ಪ್ರಾಣಿ ತನಕ ತಿನ್ನುವರು. ಅಲ್ಲಿನ ಹವಾಮಾನ ಹಾಗೂ ಭೌಗೋಳಿಕತೆಗೆ ಅನುಗುಣವಾಗಿ ಅಲ್ಲಿ ಆಹಾರ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಕೆಲವೊಂದು ರಾಷ್ಟ್ರಗಳಲ್ಲಿ ಕೀಟಗಳು, ಹಾವುಗಳನ್ನು ಕೂಡ ತಿನ್ನಲಾಗುತ್ತದೆ. ಆದರೆ ಭಾರತದಲ್ಲಿ ಮಾತ್ರ ಆಹಾರ ಪದ್ಧತಿಯು ತುಂಬಾ ಕಟ್ಟುನಿಟ್ಟಾಗಿದೆ. ಹುಳುಹುಪ್ಪಟೆಗಳನ್ನು ತಿನ್ನುವಂತಹ ಜನರು ನಮ್ಮಲ್ಲಿ ಇಲ್ಲ. ಕೆಲವೊಂದು ಸಲ ನಾವು ಕುಡಿಯುವಂತಹ ಪ್ಯಾಕ್ ಮಾಡಲ್ಪಟ್ಟಿರುವ ಜ್ಯೂಸ್ ನಲ್ಲಿ ಹುಳು, ಕೀಟ ಅಥವಾ ಇನ್ನೇನೋ ಕಾಣಿಸಿಕೊಳ್ಳುವುದು. ಇದು ಕೆಲವೊಂದು ತಪ್ಪುಗಳಿಂದ ಆಗಿರುವುದು. ಆದರೆ ಜಪಾನ್ ನಲ್ಲಿನ ಕಂಪೆನಿಯೊಂದು ತನ್ನ ಜೇನುತುಪ್ಪದ ಬಾಟಲಿಯಲ್ಲಿ ದೊಡ್ಡ ಕಣಜದ ಕೀಟವವನ್ನು ಹಾಕಿಕೊಡುತ್ತಿದೆ. ಇದು ತುಂಬಾ ವಿಚಿತ್ರ ಎಂದು ನಮಗನಿಸಿದರೂ ಜೇನುತುಪ್ಪದ ಬಾಟಲಿಯಲ್ಲಿ ದೊಡ್ಡ ಕಣಜದ ಹುಳು ಇರುವುದು. ಇದರ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ.

ಜೇನಿನ ಬಾಟಲಿಯಲ್ಲಿ ಕಣಜದ ಕೀಟ ತೇಲುತ್ತಲಿದೆ!
ವರದಿಗಳು ಹೇಳುವ ಪ್ರಕಾರ ಜಪಾನ್ ನ ದೊಡ್ಡ ಕಣಜದ ಕೀಟವನ್ನು ಜೇನಿನ ಬಾಟಲಿಯಲ್ಲಿ ಜೀವಂತವಿರುವಾಗಲೇ ಹಾಕಲಾಗಿದೆ. ಜೇನಿನಲ್ಲಿ ಈ ಕೀಟವನ್ನು ಹಾಗೆಯೇ ತೇಲಿ ಬಿಡಲಾಗಿದೆ.
Most Read: ಈತ ಕ್ಷೌರದಂಗಡಿಯಲ್ಲಿ ಕುತ್ತಿಗೆ ಮಸಾಜ್ ಮಾಡಿಸಿಕೊಂಡು ಆಸ್ಪತ್ರೆ ಸೇರಿದ! ಅಷ್ಟಕ್ಕೂ ಏನಾಯಿತು ಗೊತ್ತೇ?

ಕಣಜದ ಕೀಟಗಳು ಜೇನುಹುಳುಗಳ ನೈಸರ್ಗಿಕ ಶತ್ರುಗಳಾಗಿವೆ
ಜೇನಿನ ಡಬ್ಬದಲ್ಲಿ ಕಣಜದ ಕೀಟಗಳನ್ನು ಬಳಸಿರುವ ಬಗ್ಗೆ ವಿವರಣೆ ನೀಡಿರುವ ಕಂಪೆನಿಯು, ಕಣಜದ ಕೀಟಗಳು ನೈಸರ್ಗಿಕವಾಗಿ ಜೇನು ಹುಳದ ಶತ್ರುಗಳು ಮತ್ತು ಇದನ್ನು ಜೇನು ಸಂಗ್ರಹಕರು ಜೀವಂತವಾಗಿ ಹಿಡಿದಿದ್ದಾರೆ. ಕಂಪೆನಿಯ ಜೇನುತುಪ್ಪದ ಬಾಟಲಿಗಳಲ್ಲಿ ಇದನ್ನು ಅಲಂಕಾರಕ್ಕಾಗಿ ಬಳಸಿಕೊಳ್ಳಲಾಗಿದೆ.

ಕಣಜದ ಕೀಟಗಳು ತುಂಬಾ ಆರೋಗ್ಯಕಾರಿ ಎಂದು ನಂಬಲಾಗಿದೆ!
ಕಣಜದ ಕೀಟವನ್ನು ಅಲಂಕಾರಕ್ಕಾಗಿ ಬಳಸುವ ಜತಗೆ ಅದರಲ್ಲಿ ಇರುವಂತಹ ಅಂಶವು ಜೇನಿನಲ್ಲಿ ಹೋಗಿ ಸೇರಿಕೊಳ್ಳುವುದು. ಇದರಿಂದಾಗಿ ಜೇನು ಮತ್ತಷ್ಟು ಆರೋಗ್ಯಕರ ಹಾಗೂ ರುಚಿಕರವಾಗುವುದು.
Most Read: ನಿಮಗೆ ಗೊತ್ತಾ? ಈ ಮಹಿಳೆ ಕಣ್ಣುಗಳನ್ನು ಕೂಡ ಸ್ವಚ್ಛಗೊಳಿಸುತ್ತಾಳಂತೆ!

ಈ ಜೇನುತುಪ್ಪದ ಬಾಟಲಿಯ ಲೇಬಲ್ ನಲ್ಲಿ ಎಚ್ಚರಿಕೆ ನೀಡಲಾಗಿದೆ!
ಕಂಪೆನಿಯ ವೆಬ್ ಸೈಟ್ ನಲ್ಲಿ ಇರುವಂತಹ ಮಾಹಿತಿ ಪ್ರಕಾರ, ಕಂಪೆನಿಯು ಈ ಕಣಜದ ಕೀಟವನ್ನು ತಿನ್ನದಂತೆ ತನ್ನ ಗ್ರಾಹಕರಿಗೆ ಸೂಚಿಸಿದೆ ಮತ್ತು ಕೇವಲ ಜೇನುತುಪ್ಪ ಮಾತ್ರ ಸೇವಿಸಬೇಕು ಎಂದು ಅದು ಹೇಳಿದೆ. ಕಣಜದ ಕೀಟವನ್ನು ಹಾಗೆ ಉಳಿಸಿಕೊಂಡು ಆಲ್ಕೋಹಾಲ್ ನಲ್ಲಿ ಕೂಡ ಮುಳುಗಿಸಿ ತೆಗೆಯಬಹುದು ಎಂದು ಹೇಳಿದೆ. ಈ ವಿಚಿತ್ರ ಜೇನುತುಪ್ಪದ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯ ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.