Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯ ಹೊಟ್ಟೆಯಲ್ಲಿತ್ತು ಒಂದು ಅಡಿ ಉದ್ದದ ಹುಳ
ಆರೋಗ್ಯಕಾರಿ ಆಹಾರ ಸೇವನೆಯು ಅತೀ ಅಗತ್ಯವಾಗಿ ಇರುವುದು. ಯಾಕೆಂದರೆ ದೇಹದ ಆರೋಗ್ಯದಲ್ಲಿ ನಮ್ಮ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ ಆಹಾರದ ಕಡೆ ಹೆಚ್ಚಿನ ಗಮನಹರಿಸಬೇಕು. ಇಲ್ಲವಾದಲ್ಲಿ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುವುದು. ಇದೇ ರೀತಿಯಾಗಿ ಇಲ್ಲೊಬ್ಬರು ಮಹಿಳೆಯು ಕಳೆದ ಒಂದು ದಶಕದಿಂದ ಹೊಟ್ಟೆ ನೋವಿನಿಂದ ಬಳಲುತ್ತಿರುವರು.

ಆದರೆ ಇತ್ತೀಚಿನ ತನಕ ಆಕೆಯ ಪರಿಸ್ಥಿತಿ ಬಗ್ಗೆ ತಿಳಿಯದೆ ಇರುವುದು ತುಂಬಾ ದುರಾದೃಷ್ಟ ಎನ್ನಬಹುದು. ವೈದ್ಯರಿಗೆ ಮಹಿಳೆಯ ಹೊಟ್ಟೆಯಲ್ಲಿ ಒಂದು ಅಡಿ ಉದ್ದದ ದೊಡ್ಡ ಹುಳು ಕಂಡುಬಂದಿದೆ. ಈ ಬಗ್ಗೆ ನೀವು ತಿಳಿಯಿರಿ.

ಹತ್ತು ವರ್ಷಗಳಿಂದ ಆಕೆ ಬಳಲುತ್ತಿದ್ದರು
ಕಳೆದ ಹತ್ತು ವರ್ಷಗಳಿಂದ ಯಂಗ್ ಎಂಬ ಮಹಿಳೆಯು ಹೊಟ್ಟೆ ನೋವಿನಿಂದಾಗಿ ತುಂಬಾ ಸಂಕಷ್ಟ ಪಡುತ್ತಿದ್ದರು. ನಗರದಲ್ಲಿರುವ ಹಲವಾರು ಆಸ್ಪತ್ರೆಗಳು ಹಾಗೂ ವೈದ್ಯರನ್ನು ಆಕೆ ಭೇಟಿಯಾಗಿದ್ದರು. ಆದರೆ ಹೊಟ್ಟೆ ನೋವಿಗೆ ನಿಖರ ಕಾರಣ ಮಾತ್ರ ತಿಳಿದುಬಂದಿರಲಿಲ್ಲ.

ಇತ್ತೀಚೆಗೆ ಆಕೆಯ ಹೊಟ್ಟೆ ನೋವಿಗೆ ನಿಖರ ಕಾರಣ ತಿಳಿಯಿತು
ಇತ್ತೀಚೆಗೆ ಮಹಿಳೆಯ ಎಂಡೋಸ್ಕೋಪಿ ಮಾಡಿದ ವೇಳೆ ವೈದ್ಯರಿಗೆ ಆಕೆಯ ಕರುಳಿನಲ್ಲಿ ಜಂತುಹುಳು ಇರುವುದು ಪತ್ತೆಯಾಗಿದೆ. ಈ ಪರಾವಲಂಬಿಯು ಹೊಟ್ಟೆಯಲ್ಲಿ ಸುತ್ತಿಕೊಂಡಿತ್ತು. ಹೊಟ್ಟೆಯಲ್ಲಿ ಇದು ಸುತ್ತಿಕೊಂಡಿದ್ದ ಕಾರಣದಿಂದಾಗಿ ಅದಕ್ಕೆ ಬೆಳೆಯಲು ಸರಿಯಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ವೈದ್ಯರು ಹೇಳಿರುವರು. ಮಹಿಳೆಗೆ ದಶಕದಿಂದ ಆಸ್ಕರಿಯಾಸಿಸ್ ಕಾಡುತ್ತಲಿತ್ತು. ಬಿಸಿ ಮಾಡದೆ ಇರುವ ನೀರನ್ನು ಆಕೆ ಕುಡಿಯುತ್ತಲಿದ್ದರು ಎಂದು ಆಕೆ ಹೇಳಿಕೊಂಡಿರುವರು.

ಡಾ. ಲೀ ಜುಯಾನ್ ಹೇಳುವ ಪ್ರಕಾರ
ಡಾ. ಲೀ ಜುಯಾನ್ ಅವರು ಮಹಿಳೆಗೆ ಎಂಡೋಸ್ಕೋಪಿ ಮಾಡುವಂತೆ ಸೂಚಿಸಿದ್ದರು. ಯಾಕೆಂದರೆ ಇದರಿಂದಾಗಿ ಆಕೆಯ ಸಮಸ್ಯೆಯನ್ನು ಸರಿಯಾಗಿ ಪರಿಹರಿಸಲು ಸಾಧ್ಯವಾಗುತ್ತಿತ್ತು. ಆಕೆಯನ್ನು ಪರೀಕ್ಷಿಸಿದ ಬಳಿಕ ಹೊಟ್ಟೆಯಲ್ಲಿ ಹುಳು ಇರುವುದು ಕಂಡುಬಂದಿದೆ.

ಹುಳುವನ್ನು ತೆಗೆಯಲಾಯಿತು
ಎರಡು ಚಿಮುಟ ಬಳಸಿಕೊಂಡು ಹುಳುವನ್ನು ಮಹಿಳೆಯ ಹೊಟ್ಟೆಯಿಂದ ಹೊರಗೆ ತೆಗೆಯಲಾಯಿತು. ಎಂಡೋಸ್ಕೋಪಿಯಲ್ಲಿ ಮಾಡಿರುವಂತಹ ಸಣ್ಣ ತೂತಿನಿಂದಾಗಿ ಇದನ್ನು ಹೊರಗೆ ಎಳೆಯಲಾಯಿತು. ಇದರ ಬಳಿಕ ಯಾಂಗ್ ಮತ್ತು ಅವರ ಸಂಪೂರ್ಣ ಕುಟುಂಬಕ್ಕೆ ಪರಾವಲಂಬಿ ವಿರೋಧಿ ಔಷಧಿಯನ್ನು ನೀಡಲಾಯಿತು. ಇದರಿಂದ ಮುಂದೆ ಸೋಂಕು ಬರುವುದು ತಡೆಯಬಹುದಾಗಿದೆ.
ಆಸ್ಕರಿಯಾಸಿಸ್ ಎನ್ನುವುದು ಹುಳುಗಳ ಮೊಟ್ಟೆಯು ಹೊಟ್ಟೆಯ ಒಳಗೆ ಹೋಗುವುದರಿಂದ ಬರುವುದಾಗಿದೆ. ಕಲುಷಿತ ಕೈಗಳು ಅಥವಾ ಬೆರಳುಗಳಿಂದ ನಾವು ಏನಾದರೂ ತಿಂದರೆ ಹೀಗೆ ಆಗುವುದು. ಹೀಗಾಗಿ ನಾವು ತರಕಾರಿ ಹಾಗೂ ಹಣ್ಣುಗಳನ್ನು ತಿನ್ನುವ ಬದಲು ಅದನ್ನು ಸರಿಯಾಗಿ ತೊಳೆಯಬೇಕು.



Click it and Unblock the Notifications
