Just In
Don't Miss
- News
ಬೇಕಾದ ಖಾತೆಯ ಪಟ್ಟಿ ಸಿಎಂ ಗೆ ನೀಡಿರುವ ಬೈರತಿ ಬಸವರಾಜ್
- Movies
ಬಾಲಿವುಡ್ ನಲ್ಲಿ ಬರ್ತಿದೆ ಕನ್ನಡದ 'ಯು ಟರ್ನ್': ನಾಯಕಿ ಇವರೇ
- Technology
ಜಿ-ಮೇಲ್ ಬಳಕೆದಾರರಿಗೆ ಹೊಸ ಫೀಚರ್ಸ್ ಪರಿಚಯಿಸಿದ ಗೂಗಲ್!
- Automobiles
ಹೊಸ ಸಿಟಿ ಆರ್ಎಸ್ ಕಾರಿನ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸರ್ಕಸ್‌ನಲ್ಲಿ 3ಡಿ ಪ್ರಾಣಿಗಳ ಬಳಸಿ ಯಶಸ್ವಿಯಾದ ಜರ್ಮನಿಯ ಸರ್ಕಸ್ ಕಂಪೆನಿ
ಹಿಂದೆ ಒಂದು ಕಡೆ ಸರ್ಕಸ್ ಬಂದರೆ ತಡ ಅಲ್ಲಿಗೆ ಹುಡುಕಿಕೊಂಡು ಹೋಗಿ ನೋಡುತ್ತಿದ್ದರು. ಈಗ ಸಮಯ ಬದಲಾಗಿದೆ. ಪ್ರಾಣಿಗಳನ್ನು ಸರ್ಕಸ್ ನಲ್ಲಿ ಬಳಸುವಂತಿಲ್ಲ ಎನ್ನುವ ಕಾನೂನಿನಿಂದಾಗಿ ಸರ್ಕಸ್ ಕಂಪೆನಿಗಳು ಬಾಗಿಲು ಮುಚ್ಚಿವೆ. ಈಗ ಬಾರಿ ಅಪರೂಪಕ್ಕೆ ಎಂಬಂತೆ ಒಂದು ಸರ್ಕಸ್ ಕಂಪೆನಿಯು ಕಾಣಿಸಲು ಸಿಗುವುದು. ಆದರೆ ಜರ್ಮನಿಯಲ್ಲಿನ ಕಂಪೆನಿಯೊಂದು ಹೊಸ ವಿಧಾನ ಕಂಡುಕೊಂಡಿದೆ. ಇದು ಈಗ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡುಕೊಂಡಿದೆ.
ರೊನಕಲ್ಲಿ ಎನ್ನುವ ಸರ್ಕಸ್ ಕಂಪೆನಿಯು ಪ್ರಾಣಿಗಳಿಗೆ ಸರ್ಕಸ್‌ನಲ್ಲಿ ತುಂಬಾ ಹಿಂಸೆ ನೀಡಲಾಗುತ್ತಿದೆ ಎನ್ನುವುದನ್ನು ಪರಿಗಣಿಸಿ ಈಗ ಒಂದು ವಿಭಿನ್ನವಾದ ಪ್ರಯೋಗಕ್ಕೆ ಕೈ ಹಾಕಿದೆ ಮತ್ತು ಪ್ರಾಣಿಗಳು 3ಡಿ ಹೊಲೊಗ್ರಾಮ್ ನ್ನು ನಿರ್ಮಾಣ ಮಾಡಿದೆ. ಇದು ನಿಜ ಪ್ರಾಣಿಗಳನ್ನು ಬಳಸುವುದಕ್ಕಿಂತಲೂ ಒಳ್ಳೆಯದು. ವರದಿಗಳು ಹೇಳುವ ಪ್ರಕಾರ ಜರ್ಮನಿಯ ಸರ್ಕಸ್ ಕಂಪೆನಿಯನ್ನು 1976ರಲ್ಲಿ ಬೆರ್ನಾರ್ಡ್ ಪೌಲ್ ಮತ್ತು ಆಂಡ್ರೆ ಹೆಲ್ಲೆರ್ ಎಂಬವರು ಆರಂಭಿಸಿದ್ದರು.
Most Read: ಪ್ರಿಯತಮೆ ಜತೆಗೆ ಮಾತನಾಡಲು ಸಾಫ್ಟವೇರ್ ರಚಿಸಿದ ಟೆಕ್ಕಿ!
ಬೆರ್ನಾಡ್ ಪೌಲ್ ಅವರು 2018ರಲ್ಲಿ ಸೂಪರ್ ಬೌಲರ್ ಹಾಫ್ ಟೈಮ್ ಶೋ ನೋಡುತ್ತಿದ್ದ ವೇಳೆ ಅವರಿಗೆ ಸರ್ಕಸ್ ನಲ್ಲಿ 3ಡಿ ಹೊಲೊಗ್ರಾಮ್ ತಂತ್ರಜ್ಞಾನವನ್ನು ಬಳಸಬಹುದು ಎನ್ನುವ ಆಲೋಚನೆ ಬಂತು. ಜಸ್ಟಿನ್ ಟಿಂಬರ್ ಲೇಕ್ ಅವರು ಹೊಲೊಗ್ರಾಫಿಕ್ ರಾಜಕುಮಾರಿ ಜತೆಗೆ ಪ್ರದರ್ಶನ ನೀಡುತ್ತಿರುವುದು ಇವರನ್ನು ತುಂಬಾ ಆಕರ್ಷಿಸಿತು.
ಇದರ ಬಳಿಕ ರೊನಕಲ್ಲಿ ಕಂಪೆನಿಯು ತನ್ನ ಸರ್ಕಸ್‌ನಲ್ಲಿ ಜೀವಂತ ಪ್ರಾಣಿಗಳನ್ನು ಬಳಸುವುದನ್ನು ನಿಲ್ಲಿಸಿಬಿಟ್ಟಿತು. ಇದರ ಬಳಿಕ ಹೊಲೊಗ್ರಾಫಿಕ್ ಪ್ರಾಣಿಗಳನ್ನು ಬಳಸಿಕೊಂಡು ಅದರಿಂದ ಪ್ರಾಣಿಗಳಿಗೂ ರಕ್ಷಣೆ ಸಿಗುವಂತಾಗುತ್ತದೆ ಎಂದು ತಿಳಿದರು. ಇದನ್ನು ಸರ್ಕಸ್ ನಲ್ಲಿ ಅಳವಡಿಸಿಕೊಳ್ಳಲು ಇದಕ್ಕಾಗಿ ಸುಮಾರು 11 ಪ್ರಾಜೆಕ್ಟ್ ಗಳನ್ನು ರಚಿಸಿದ ಬಳಿಕ ಅದು ಸರ್ಕಸ್‌ಗೆ ಸರಿಹೊಂದುವುದೇ ಎಂದು ಪರೀಕ್ಷಿಸಲಾಯಿತು. ಈ ತಂತ್ರಜ್ಞಾನದ ಮೂಲಕ ಜನರು ಸಂಪೂರ್ಣವಾಗಿ 360 ಡಿಗ್ರಿಯಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.
ಸಂಪೂರ್ಣ ಶೋ ತಯಾರಿಸಿಕೊಳ್ಳಲು 15 ಮಂದಿ ಡಿಸೈನರ್ ಮತ್ತು ಸಾಫ್ಟ್ ವೇರ್ ಇಂಜಿನಿಯರ್ ಗಳನ್ನು ಬಳಸಿಕೊಳ್ಳಲಾಯಿತು ಎಂದು ಪೌಲ್ ತಿಳಿಸಿದ್ದಾರೆ. 3ಡಿ ಹೊಲೊಗ್ರಾಮ್ ಕೇಲವು ಪ್ರಾಣಿಗಳಿಗೆ ಮಾತ್ರ ಸೀಮಿತವಾಗಿಲ್ಲ ಮತ್ತು ಕುದುರೆಗಳು ಇಲ್ಲಿ ಓಡಾಡುತ್ತಿರುತ್ತವೆ. ಆನೆಗಳು ಮಾಡುವಂತಹ ಕಸರತ್ತನ್ನು ಖಂಡಿತವಾಗಿಯೂ ಮರೆಯಲು ಸಾಧ್ಯವಿಲ್ಲ. ಇಲ್ಲಿ ಮೀನಿನ ಮ್ಯಾಜಿಕ್ ಕೂಡ ಲಭ್ಯವಿದೆ.
3ಡಿ ಶೋ ಹೊರತಾಗಿ ಇಲ್ಲಿ ಇತರ ಕೆಲವೊಂದು ಸಾಮಾನ್ಯ ರೀತಿಯ ಸರ್ಕಸ್ ಇದ್ದು, ಪ್ರೇಕ್ಷಕರನ್ನು ತುಂಬಾ ಸಂತೋಷಪಡಿಸುತ್ತಿದೆ. ತಂತ್ರಜ್ಞಾನವು ಬಂದಿರುವಂತೆ ಇದನ್ನು ಸರ್ಕಸ್ ನಲ್ಲಿ ಕೂಡ ಅಳವಡಿಸಿಕೊಂಡಿರುವುದು ತುಂಬಾ ವಿಭಿನ್ನವಾಗಿದೆ ಮತ್ತು ಇಲ್ಲಿ ಯಾವುದೇ ಪ್ರಾಣಿಗಳಿಗೂ ಹಿಂಸೆ ನೀಡಲಾಗುತ್ತಿಲ್ಲ. ಇನ್ನು ಹಲವಾರು ಕಂಪೆನಿಗಳು ಈ ತಂತ್ರಜ್ಞಾವನ್ನು ತಮ್ಮ ಸರ್ಕಸ್ ನಲ್ಲಿ ಅಳವಡಿಸಿಕೊಂಡು ಹೊಸತನ ನೀಡಬಹುದು.