For Quick Alerts
ALLOW NOTIFICATIONS  
For Daily Alerts

ಮಲಗುವಾಗ ತಲೆ ದಿಂಬಿನ ಕೆಳಗೆ ಇಂತಹ 5 ವಸ್ತುಗಳನ್ನು ಇಡಬಾರದಂತೆ!

|

ನಿದ್ರೆ ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯವಾದ ಸಂಗತಿ. ನಿದ್ರೆ ಸರಿಯಾಗದೆ ಇದ್ದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಗೊಂದಲ ಹಾಗೂ ಕಿರಿಕಿರಿ ಉಂಟಾಗುವುದು. ನಿತ್ಯವೂ ನಿದ್ರಾ ಹೀನತೆ ಕಾಡುವುದು ಅಥವಾ ನಿದ್ರೆ ಮಾಡಲು ಕಷ್ಟವಾಗುವುದು ಎಂದಾಗ ಬಹುಬೇಗ ಆರೋಗ್ಯದ ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತವೆ. ಹಾಗಾಗಿ ಮನುಷ್ಯ ಕನಿಷ್ಠ ಎಂದರೂ 7 ರಿಂದ 8 ತಾಸುಗಳ ನಿದ್ರೆ ಮಾಡಬೇಕಾಗುವುದು. ನಿದ್ರೆಯ ಸಮಯದಲ್ಲಿ ಸಾಕಷ್ಟು ಕ್ರಿಯೆಗಳು ನಡೆಯುತ್ತವೆ. ಅಲ್ಲದೆ ಕೆಲವು ದ್ರವಗಳ ಬಿಡುಗಡೆಯಾಗುತ್ತವೆ. ಅವು ಮಿದುಳಿನ ಆರೋಗ್ಯ ಸುಧಾರಣೆ, ನೆನಪಿನ ಶಕ್ತಿಯ ವರ್ಧನೆ ಸೇರಿದಂತೆ ಇನ್ನೂ ಅನೇಕ ಬಗೆಯ ಆರೋಗ್ಯ ಸುಧಾರಣೆಗೆ ಅನುವು ಮಾಡುವುದು.

ಈ ನಿಟ್ಟಿನಲ್ಲಿಯೇ ನಿದ್ರೆ ಮಾಡುವುದು ಹಾಗೂ ಆರೋಗ್ಯ ಕಾಯ್ದುಕೊಳ್ಳುವುದರ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸಬೇಕಾಗುವುದು. ಮನುಷ್ಯ ತನ್ನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು ಎಂದರೆ ಸೂಕ್ತ ಸಮಯದಲ್ಲಿ ಅಗತ್ಯವಿರುವಷ್ಟು ನಿದ್ರೆ ಮಾಡಬೇಕು. ಅದು ನೈಸರ್ಗಿಕ ದತ್ತವಾಗಿಯೇ ನಿದ್ರೆಯು ಬರಬೇಕು. ಇಲ್ಲವಾದರೆ ಸಾಕಷ್ಟು ಮಾನಸಿಕ ಗೊಂದಲ ಹಾಗೂ ಕೆಲಸದಲ್ಲಿ ಸೋಮಾರಿತನ ಕಾಣಿಸಿಕೊಳ್ಳುವುದು.

ನಮ್ಮ ಆರೋಗ್ಯ ಹಾಗೂ ಜೀವನ ಸಮಸ್ಯೆಗೆ ನಿದ್ರೆ ಹೇಗೆ ಕಾರಣವಾಗುತ್ತದೆಯೋ ಹಾಗೆಯೇ ಮಲಗುವ ಕೋಣೆಯ ವಾಸ್ತು ಹಾಗೂ ಕೆಲವು ರೂಢಿಗಳು ಸಹ ನಮಗೆ ಕಿರಿಕಿರಿಯನ್ನು ಉಂಟುಮಾಡುತ್ತವೆ. ಅದರಲ್ಲೂ ನಾವು ನಿದ್ರೆ ಮಾಡುವಾಗ ನಮ್ಮ ಹಾಸಿಗೆ ಹಾಗೂ ತಲೆ ದಿಂಬಿನ ಅಡಿಯಲ್ಲಿ ಕೆಲವು ವಸ್ತುಗಳು ಇರಬಾರದು. ನಾವು ನಿದ್ರೆ ಮಾಡುವಾಗ ತಲೆ ದಿಂಬಿನ ಕೆಳಗೆ ಇರುವ ಕೆಲವು ವಸ್ತುಗಳು ಊಹೆಗೂ ನಿಲುಕದ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎಂದು ಹೇಳಲಾಗುವುದು. ನಿಮಗೆ ಈ ಸಂಗತಿಯು ಹೊಸತನ ಹಾಗೂ ಆಶ್ಚರ್ಯವನ್ನು ಮೂಡಿಸುತ್ತಿದ್ದೆ, ಮಲಗುವ ಮುನ್ನ ತಲೆ ದಿಂಬಿನ ಕೆಳಗೆ ಏನು ಇರಬಾರದು? ತಲೆ ದಿಂಬು ಹಾಗೂ ನಿದ್ರೆಯ ಸಂಗತಿಯಲ್ಲಿ ಎಂತಹ ಸಮಸ್ಯೆ ಉದ್ಭವಿಸುವುದು? ಹೀಗೆ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

Pillow

ಪರ್ಸ್ ಅಥವಾ ಹಣ

ಕೆಲವರು ತಮ್ಮ ಹಣ ಹಾಗೂ ಪರ್ಸ್‍ಗಳನ್ನು ಮಲಗುವ ದಿಂಬಿನ ಅಡಿಯಲ್ಲಿ ಇರಿಸಿಕೊಳ್ಳುತ್ತಾರೆ. ಹೀಗೆ ಇರಿಸುವುದರಿಂದ ತಮ್ಮ ಹಣವು ಸುರಕ್ಷಿತವಾಗಿದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತು ಶಾಸ್ತ್ರ ಹಾಗೂ ದೈವಿಕ ಸಂಗತಿಯ ಪ್ರಕಾರ ನಾವು ಮಲಗುವ ದಿಂಬಿನ ಕೆಳಗೆ ಹಣ ಅಥವಾ ಪರ್ಸ್‍ಗಳನ್ನು ಇಡಬಾರದು. ಇವೆರಡು ವಸ್ತುವು ವ್ಯಕ್ತಿಯ ಅಗತ್ಯವನ್ನು ಪೂರೈಸುವ ಲಕ್ಷ್ಮಿ ದೇವಿ. ನಮ್ಮ ತಲೆಯ ಕೆಳಗೆ ಲಕ್ಷ್ಮಿ ದೇವಿಯನ್ನು ಇಟ್ಟು ಮಲಗಿದರೆ ದೇವಿಗೆ ಕೋಪ ಬರುವುದು. ನಿಧಾನವಾಗಿ ಆರ್ಥಿಕ ಸಮಸ್ಯೆಗಳು ಪ್ರಾರಂಭವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ನಿಮಗೆ ಈ ಹವ್ಯಾಸ ಅಥವಾ ಪದ್ಧತಿ ರೂಢಿಯಲ್ಲಿದ್ದರೆ ಇಂದೇ ಬಿಟ್ಟುಬಿಡಿ.

Most Read: ದಿನಗೂಲಿಗಾಗಿ ಗರ್ಭಾಶಾಯವನ್ನೇ ತೆಗೆಸಿಕೊಳ್ಳುತ್ತಿರುವ ಮಹಿಳೆಯರು!

ಆಭರಣಗಳು

ಹಣದಂತೆ ಆಭರಣಗಳು ಸಹ ಲಕ್ಷ್ಮಿ ದೇವಿ. ಆಭರಣಗಳನ್ನು ತಲೆ ದಿಂಬಿನ ಬಳಿ ಇಡುವುದರಿಂದ ನಿಮ್ಮ ವಸ್ತು ನಿಮ್ಮ ಬಳಿಯೇ ಇದೆ ಎನ್ನುವ ಖುಷಿ ನಿಮಗಾಗಬಹುದು. ಆದರೆ ಇದರಿಂದ ನಿಮ್ಮ ಆಭರಣಗಳು ಬಹುಬೇಗ ಹಾಳಾಗುವುದು. ಜೊತೆಗೆ ಜೀವನದಲ್ಲಿ ದುಃಖ ಮತ್ತು ಅಡೆತಡೆಗಳು ಎದುರಾಗುತ್ತವೆ ಎಂದು ಹೇಳಲಾಗುವುದು. ಆಭರಣಗಳನ್ನು ದಿಂಬಿನ ಕೆಳಗೆ ಇಡುವ ಹವ್ಯಾಸವನ್ನು ಬಿಟ್ಟು ಅದನ್ನು ಸುರಕ್ಷಿತವಾದ ಜಾಗದಲ್ಲಿ ಇಡಲು ಅಭ್ಯಾಸ ಮಾಡಿ. ಆಗ ಸಮಸ್ಯೆಗಳು ತಾನಾಗಿಯೇ ಮಾಯವಾಗುವುದು.

ಪುಸ್ತಕಗಳು

ಕೆಲವರಿಗೆ ಪುಸ್ತಕವನ್ನು ತಮ್ಮ ತಲೆದಿಂಬಿನ ಅಡಿಯಲ್ಲಿ ಇಟ್ಟುಕೊಳ್ಳುವ ಹವ್ಯಾಸ ಇರುತ್ತದೆ. ಮಲಗುವ ಮುನ್ನ ಓದುವುದು, ಓದುತ್ತಾ ಓದುತ್ತಾ ನಿದ್ರೆಗೆ ಜಾರಿದಾಗ ಆ ಪುಸ್ತಕವನ್ನು ದಿಂಬಿನ ಅಡಿಯಲ್ಲಿ ಇಟ್ಟು ಮಲಗುವುದು ಸಾಮಾನ್ಯ ಸಂಗತಿಯಾಗಿರುತ್ತದೆ. ಅದೇ ವ್ಯಕ್ತಿ ಓದಿದ ನಂತರ ಸೂಕ್ತ ಜಾಗದಲ್ಲಿ ಇಟ್ಟು ಮಲಗುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಇಲ್ಲವಾದರೆ ಮನಸ್ಸು ಚಂಚಲಗೊಳ್ಳುವುದು. ಅಲ್ಲದೆ ಗಾಢ ನಿದ್ರೆಯ ಸಾಧ್ಯತೆಯನ್ನು ಕಡಿಮೆ ಮಾಡುವುದು. ಒಮ್ಮೆ ಓದಿದ ನಂತರ ಅದನ್ನು ಸೂಕ್ತ ಜಾಗದಲ್ಲಿ ಇಡುವಂತೆ ನೋಡಿಕೊಳ್ಳಿ.

Most Read: ಆಘಾತಕಾರಿಯನ್ನು ಉಂಟುಮಾಡುವಂತಹ ವಿಲಕ್ಷಣ ವ್ಯಸನಗಳು

ಕೀಲಿಗಳು

ನಿಮ್ಮ ಕೀಲಿಗಳನ್ನು ದಿಂಬಿನ ಅಡಿಯಲ್ಲಿ ಇಟ್ಟುಕೊಳ್ಳುವುದು ನಿಮಗೆ ಸುರಕ್ಷತೆಯ ಭಾವನೆ ನೀಡುತ್ತದೆ ಆದರೆ ನಿಮಗಾಗಿ ಅನುಕೂಲಕರವಾಗಿರುವುದಿಲ್ಲ. ಹಾಗೆ ಮಾಡುವುದರಿಂದ ಕುಟುಂಬದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ನಿಮ್ಮ ಮೆತ್ತೆ ಅಡಿಯಲ್ಲಿ ನಿಮ್ಮ ಕೀಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವ ಈ ಅಭ್ಯಾಸವನ್ನು ನೀವು ಹೊಂದಿದ್ದರೆ, ನೀವು ಅದನ್ನು ತಕ್ಷಣ ಬದಲಿಸಬೇಕು ಮತ್ತು ನಿಮ್ಮ ಕೀಗಳು ಬೇರೆ ಸುರಕ್ಷಿತ ಸ್ಥಳದಲ್ಲಿ ಇರಬೇಕು.

ಔಷಧಗಳು

ಮಲಗುವ ಮುನ್ನ ಔಷಧಿ ಹೊಂದುವ ಜನರು ಅನೇಕರಿರುತ್ತಾರೆ. ಅವರು ಮಾತ್ರೆಯನ್ನು ಸೇವಿಸಿದ ಬಳಿಕ ಉಳಿದ ಮಾತ್ರೆಯನ್ನು ತಮ್ಮ ತಲೆದಿಂಬಿನ ಅಡಿಯಲ್ಲಿ ಇಟ್ಟು ಮಲಗುತ್ತಾರೆ. ಇದಕ್ಕೆ ಕಾರಣ ಅವರಿಗೆ ಮಾತ್ರೆ ಸೇವಿಸುವುದು ಮರೆಯುವುದಿಲ್ಲ ಹಾಗೂ ಮಾತ್ರೆಯೂ ಸುರಕ್ಷಿತವಾಗಿರುತ್ತದೆ ಎನ್ನುವ ಭಾವವಾಗಿರುತ್ತದೆ. ಆದರೆ ಈ ಹವ್ಯಾಸವು ಉತ್ತಮವಾದುದ್ದಲ್ಲ. ಇದರಿಂದ ಅನೇಕ ಸಮಸ್ಯೆ ಉಂಟಾಗುವುದು. ಜೀವನದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗುವುದು. ಹೀಗೆ ಮಾಡುವುದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಣೆ ಆಗುವುದು. ಆರ್ಥಿಕವಾಗಿಯೂ ತೊಂದರೆ ನಿವಾರಣೆಯಾಗುವುದು.

English summary

5 Things To Not Keep Under Your Pillow While Sleeping

While there are so many things to be taken care of for sleeping well, there are also certain things that should be consciously avoided. While many people tend to keep things under the pillow while sleeping, one should be careful enough as a few things might prove to be hazardous. One should avoid keeping purse or money, books, medicines etc. under the pillow.
X
Desktop Bottom Promotion