For Quick Alerts
ALLOW NOTIFICATIONS  
For Daily Alerts

ಆನ್ ಲೈನ್‌ನಲ್ಲಿ ಸವಾಲನ್ನು ಸ್ವೀಕರಿಸಿದ ವ್ಯಕ್ತಿಯೊಬ್ಬ ಮೂರು ತಿಂಗಳ ಬಳಿಕ ಪ್ರಾಣ ಕಳೆದುಕೊಂಡ!

|

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಇಂಟರ್ನೆಟ್ ಲೋಕದಲ್ಲಿ ಜನಪ್ರಿಯತೆ ಪಡೆದುಕೊಳ್ಳುವುದು ಒಂದು ದೊಡ್ಡ ಸಾಹಸವೆಂದು ಭಾವಿಸಲಾಗುತ್ತದೆ. ಪ್ರತಿಯೊಬ್ಬರು ಕೂಡ ತನಗೆ ಹೆಚ್ಚಿನ ಪ್ರಚಾರ ಸಿಗಬೇಕು ಎಂದು ಇನ್ನಿಲ್ಲದಂತೆ ಕಸರತ್ತು ಮಾಡುತ್ತಲಿರುವರು. ಕೆಲವೊಂದು ವಿಡಿಯೋಗಳು ಹಾಗೂ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಬಹುದು. ಇನ್ನು ಕೆಲವನ್ನು ಯಾರೂ ಗಮನಿಸದೆ ಇರಬಹುದು. ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆಯನ್ನು ಕಾಪಿಡಲು ತುಂಬಾ ಶ್ರಮ ಅಗತ್ಯ.

ಯಾಕೆಂದರೆ ದಿನನಿತ್ಯವು ಹಲವಾರು ಬದಲಾವಣೆಗಳು ಹಾಗೂ ಹೊಸ ಹೊಸ ಆಲೋಚನೆಗಳನ್ನು ನಾವು ವಿಡಿಯೋದಲ್ಲಿ ಹಾಕಬೇಕು. ಯಾಕೆಂದರೆ ವೀಕ್ಷಕರು ವಿಡಿಯೋ ನೋಡಲು ಕಾಯುತ್ತಲಿರಬೇಕು. ಅಂತಹ ಹೊಸತನವು ವಿಡಿಯೋದಲ್ಲಿ ಇದ್ದರೆ ಮಾತ್ರ ಸಾಧ್ಯ. ಆದರೆ ಕೆಲವೊಂದು ಸಲ ಜನಪ್ರಿಯತೆಯ ಅಮಲಿನಲ್ಲಿ ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಮೇಲೆ ಪರಿಣಾಮ ಉಂಟಾಗಬಹುದು.

Months Of Challenges, He Lost His Life

ಯಾಕೆಂದರೆ ಇಂದಿನ ದಿನಗಳಲ್ಲಿ ಇಂಟರ್ನೆಟ್ ನಲ್ಲಿ ಹಲವಾರು ರೀತಿಯ ಸವಾಲುಗಳನ್ನು ಎದುರಿಸಿ ಎನ್ನುವಂತಹ ಸ್ಪರ್ಧೆಗಳು ಬರುವುದು. ಇದು ಅಂತ್ಯದಲ್ಲಿ ಜೀವಕ್ಕೆ ಹಾನಿ ಉಂಟು ಮಾಡಬಹುದು. ಈ ಕಾರಣದಿಂದ ನೀವು ಯಾವುದೇ ರೀತಿಯ ಸವಾಲನ್ನು ಸ್ವೀಕರಿಸುವ ಮೊದಲು ಅದರ ಸಾಧಕಭಾದಕಗಳ ಬಗ್ಗೆ ಸರಿಯಾಗಿ ತಿಳಿಯಿರಿ. ಈ ಲೇಖನದಲ್ಲಿ ಆನ್ ಲೈನ್ ನಲ್ಲಿ ಸವಾಲನ್ನು ಸ್ವೀಕರಿಸಿದ ವ್ಯಕ್ತಿಯೊಬ್ಬ ಮೂರು ತಿಂಗಳ ಬಳಿಕ ಪ್ರಾಣ ಕಳೆದುಕೊಂಡ ಬಗ್ಗೆ ತಿಳಿಸಲಾಗಿದೆ. ಈ ದುರಾದೃಷ್ಟದ ಘಟನೆ ಬಗ್ಗೆ ನೀವು ತಿಳಿಯಿರಿ.

ಆನ್ ಲೈನ್ ನಲ್ಲಿ ಜನಪ್ರಿಯನಾಗಬೇಕೆಂದು ಬಯಸಿದ

ಆನ್ ಲೈನ್ ನಲ್ಲಿ ಜನಪ್ರಿಯನಾಗಬೇಕೆಂದು ಬಯಸಿದ

ಚೀನಾದ ಈಶಾನ್ಯ ಪ್ರಾಂತ್ಯದ ಈ ವ್ಯಕ್ತಿ ಆನ್ ಲೈನ್ ನಲ್ಲಿ ಜನಪ್ರಿಯ ವ್ಯಕ್ತಿಯಾಗಬೇಕು ಎಂದು ಬಯಸಿದ. ಜನಪ್ರಿಯತೆ ಅನ್ನುವುದು ಹಾಗೆ ಸುಲಭವಾಗಿ ಬರುವುದಿಲ್ಲ. ಇದಕ್ಕಾಗಿ ಆತ ಆನ್ ಲೈನ್ ನಲ್ಲಿ ನೇರಪ್ರಸಾರದಲ್ಲಿ ಹೊಸ ಗಿಮಿಕ್ ಮಾಡಲು ನಿರ್ಧರಿಸಿದ. ಇದರ ಪ್ರಕಾರ ನೇರಪ್ರಸಾರದಲ್ಲಿ ವೀಕ್ಷಕರು ಏನು ಹೇಳುತ್ತಾರೆಯಾ ಅದನ್ನು ಆತ ಕುಡಿಯಲು ನಿರ್ಧರಿಸಿದ್ದಾನೆ.

Most Read: ಕಲ್ಲು, ಮುಚ್ಚಳ, ನಾಣ್ಯ ನುಂಗಿ ಆತಂಕ ನಿವಾರಿಸುತ್ತಿದ್ದ ವ್ಯಕ್ತಿ!

ಕೇವಲ ಮೂರು ತಿಂಗಳು ಮಾತ್ರ

ಕೇವಲ ಮೂರು ತಿಂಗಳು ಮಾತ್ರ

ಈ ವ್ಯಕ್ತಿಯ ಕೊನೆಯ ಹೆಸರು ಛೂ ಎಂದು ತಿಳಿದುಬಂದಿದೆ. ಆತನ ವಯಸ್ಸು ಕೇವಲ 29 ವರ್ಷ. ಪ್ರತಿನಿತ್ಯ ಆನ್ ಲೈನ್ ನಲ್ಲಿ ನೇರಪ್ರಸಾರ ಮಾಡುತ್ತಿದ್ದ ಆತನಿಗೆ ವೀಕ್ಷಕರು ಕೂಡ ವಿವಿಧ ರೀತಿಯ ಪಾನೀಯಗಳನ್ನು ಕುಡಿಯಲು ಸೂಚನೆ ನೀಡುತ್ತಿದ್ದರು. ಅದರಂತೆ ಆತ ಸತತ ಮೂರು ತಿಂಗಳ ಕಾಲ ಮದ್ಯಪಾನ ಮತ್ತು ಇತರ ಪಾನೀಯಗಳನ್ನು ಸೇವಿಸುತ್ತಿದ್ದ. ಇದು ಜನಪ್ರಿಯತೆಗಾಗಿ ಪ್ರತಿನಿತ್ಯವು ಆತ ಮಾಡುತ್ತಿದ್ದ ಕೆಲಸ.

ಆತ ಖಾದ್ಯ ತೈಲವನ್ನು ಕುಡಿದ!

ಆತ ಖಾದ್ಯ ತೈಲವನ್ನು ಕುಡಿದ!

ಛೂ ಸ್ನೇಹಿತರು ಹೇಳುವ ಪ್ರಕಾರ ಆತ ನೇರ ಪ್ರಸಾರದಲ್ಲಿ ಪ್ರೇಕ್ಷಕರು ಹೇಳಿದಂತೆ ಪ್ರತಿನಿತ್ಯವು ಬಿಯರ್, ಸ್ಪಿರಿಟ್ ಮತ್ತು ಇನ್ನಿತರ ಪಾನೀಯಗಳನ್ನು ಸೇವನೆ ಮಾಡುತ್ತಲಿದ್ದ. ನೇರ ಪ್ರಸಾರದಲ್ಲಿ ಒಂದು ಸಲ ಪ್ರೇಕ್ಷಕರೊಬ್ಬರು ಖಾದ್ಯ ತೈಲವನ್ನು ಸೇವಿಸಲು ಸೂಚಿಸಿದ್ದರು. ಅದಕ್ಕೂ ಕೂಡ ಆತ ಒಪ್ಪಿಕೊಂಡು ಖಾದ್ಯ ತೈಲ ಕುಡಿದಿದ್ದ. ತನಗೆ ಇದರಿಂದ ನಗದು ಬಹುಮಾನ ಸಿಗುತ್ತದೆ ಎಂದು ಆತ ಭಾವಿಸಿದ್ದ.

ಇನ್ನು ನನಗೆ ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲವೆಂದು ಆತ ಪ್ರೇಕ್ಷಕರಿಗೆ ಹೇಳಿದ್ದ

ಇನ್ನು ನನಗೆ ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲವೆಂದು ಆತ ಪ್ರೇಕ್ಷಕರಿಗೆ ಹೇಳಿದ್ದ

ಮೂಲಗಳು ಹೇಳುವ ಪ್ರಕಾರ, ಒಂದು ಸಲ ಪ್ರೇಕ್ಷಕರು ಹೇಳಿದಂತೆ ತನಗೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಛೂ ಹೇಳಿದ್ದ. ತನಗೆ ಹೊಟ್ಟೆಯಲ್ಲಿ ನೋವಾಗುತ್ತಲಿದೆ ಎಂದು ಆತ ಹೇಳಿದ್ದ. ಆದರೆ ಪ್ರೇಕ್ಷಕ ಮಾತ್ರ ಸವಾಲನ್ನು ಪೂರ್ತಿಗೊಳಿಸಬೇಕು ಎಂದು ಹುರಿದುಂಬಿಸುತ್ತಿದ್ದ. ಆತ ಸಾವನ್ನಪ್ಪಿದ ಬಳಿಕ ಸೈಟ್ ನಲ್ಲಿ ಇದ್ದ ಎಲ್ಲಾ ವಿಡಿಯೋಗಳನ್ನು ತೆಗೆದು ಹಾಕಲಾಗಿದೆ.

ಜನಪ್ರಿಯತೆಗಾಗಿ ಪ್ರಾಣ ಕಳೆದುಕೊಂಡ ಬಗ್ಗೆ ನಿಮ್ಮ ಅನಿಸಿಕೆ ಏನು? ಈ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

English summary

3 Months Of Challenges, He Lost His Life

According to the South China Morning Post, a man named Chu, 29, was a livestreamer and wanted to become an online celebrity. Hence he came up with a unique idea to grab the attention of the audience. He started to drink anything that was requested by his audience for three months, which included alcohol as well as other liquids. He died within 3 months of his stints.
X
Desktop Bottom Promotion