For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ ಯಾರು ಪ್ರೀತಿಯನ್ನು ನಂಬುತ್ತಾರೆ? ಯಾರು ನಂಬುವುದಿಲ್ಲ ನೋಡಿ...

|

ಪ್ರೀತಿ ಎನ್ನುವುದು ಜೀವಕ್ಕೊಂದು ಸಂಜೀವಿನಿ. ಪ್ರೀತಿಯನ್ನು ಕಾಣದ ಮನುಷ್ಯ/ವ್ಯಕ್ತಿ ಮಾನಸಿಕವಾಗಿ ಸಾಕಷ್ಟು ಅಸ್ವಸ್ತತೆಯನ್ನು ಹೊಂದಿರುತ್ತಾನೆ. ಭಗವಂತ ಮನುಷ್ಯನಿಗೆ ಕೊಟ್ಟಿರುವ ಒಂದು ವರ ಹಾಗೂ ಶಾಪ ಎಂತಲೂ ಹೇಳಬಹುದು. ಏಕೆಂದರೆ ಪ್ರೀತಿಯನ್ನು ಜೀವನದಲ್ಲಿ ಪಡೆದುಕೊಂಡರೆ ಸಂತುಷ್ಟ ಜೀವನ ನಡೆಸುವನು. ಅದೇ ಪ್ರೀತಿಯನ್ನು ಕಳೆದುಕೊಂಡರೆ ದುಃಖದ ಜೀವನ ನಡೆಸುವನು. ಮನುಷ್ಯ ಸಂಘ ಜೀವಿ. ಅವನ ಹವ್ಯಾಸಗಳು, ಜೀವನದ ಶೈಲಿ, ವರ್ತನೆ, ಭಾಷೆ, ಉಡುಗೆ-ತೊಡುಗೆ, ಊಟ-ತಿಂಡಿ, ವರ್ಣ ಎಲ್ಲವೂ ವಿಭಿನ್ನತೆಯಿಂದ ಕೂಡಿರಬಹುದು. ಆದರೆ ಬದುಕಲು ನೀರು, ಗಾಳಿ, ಬೆಳಕು ಹೇಗೆ ಅಗತ್ಯವಾಗಿರುತ್ತದೆಯೋ ಹಾಗೆಯೇ ಪ್ರೀತಿ ಎನ್ನುವ ಸಂಜೀವಿನಿ ಅಷ್ಟೇ ಅಗತ್ಯವಾದದ್ದು.

ಮನುಷ್ಯನ ಜೀವನದಲ್ಲಿ ಏನನ್ನೂ ಪಡೆದುಕೊಳ್ಳದೆ ಇರಬಹುದು. ಆದರೆ ಪ್ರೀತಿ, ವಾತ್ಸಲ್ಯ, ಆರೈಕೆ, ಮೋಹಕ್ಕಾಗಿ ಹಂಬಲಿಸುತ್ತಾನೆ. ಶ್ರೀಮಂತನಾಗಿರಲಿ ಬಡವನೇ ಆಗಿರಲಿ ಅವನ ಜೀವನದಲ್ಲಿ ಪ್ರೀತಿಯ ಸೆಲೆ ಇದೆ ಎಂದಾದರೆ ಅವನು ಜೀವನದಲ್ಲಿ ಸಂತೋಷದಿಂದ ಇರುತ್ತಾನೆ. ಅದೇ ವ್ಯಕ್ತಿಗೆ ಪ್ರೀತಿ ಎನ್ನುವುದು ಸಿಗದೆ ಬೇಕಾದಷ್ಟು ಹಣ, ಆಸ್ತಿ, ಶ್ರೀಮಂತಿಕೆ ಯಾವುದೇ ಇದ್ದರೂ ಅದು ಸಮಾಧಾನ ಅಥವಾ ಜೀವನಕ್ಕೊಂದು ಪರಿಪೂರ್ಣತೆಯ ಭಾವನೆ ನೀಡಲು ಸಾಧ್ಯವಿಲ್ಲ. ಪ್ರೀತಿ ಎನ್ನುವುದು ಒಂದು ಗಂಡು ಹೆಣ್ಣಿನ ಸಂಬಂಧದಲ್ಲಿ ಬಂಧಿಯಾಗಿ, ಅಪ್ಪ, ಅಮ್ಮ, ಅಣ್ಣ, ಅಕ್ಕ, ತಂಗಿ, ತಮ್ಮ, ಅತ್ತೆ-ಮಾವ, ಗೆಳತಿ-ಗೆಳೆಯ ಹೀಗೆ ವಿವಿಧ ಸಂಬಂಧಗಳಿಂದ ಹೊರ ಹೊಮ್ಮುವ ಪ್ರೀತಿ ಎನಿಸಿಕೊಳ್ಳುತ್ತದೆ. ಎಲ್ಲಾ ಬಗೆಯ ಸಂಬಂಧಗಳ ಪ್ರೀತಿ ವಾತ್ಸಲ್ಯದಲ್ಲಿ ಬಾಳನ್ನು ಬೆಳಗಬೇಕು ಎಂದು ಬಯಸುತ್ತಾನೆ.

ಜೀವನದ ಆರಂಭದಲ್ಲಿ ಅಪ್ಪ ಅಮ್ಮನ ಪ್ರೀತಿಯಲ್ಲಿ ಬೆಳೆದು, ವಯಸ್ಸಿಗೆ ಬರುತ್ತಿದ್ದಂತೆ ಸಂಗಾತಿಯೊಂದಿಗೆ ಹೊಸ ಬಂಧವನ್ನು ಬೆಸೆದು, ತನ್ನದೇ ಆದ ಪುಟ್ಟ ಸಂಸಾರವನ್ನು ನಿರ್ಮಿಸುವುದು ಮನುಷ್ಯನ ಒಂದು ನೈಸರ್ಗಿಕ ಪ್ರಕ್ರಿಯೆ. ಈ ಬಂಧನಗಳಲ್ಲಿ ತನ್ನ ಸಾಕ್ಷಾತ್ಕಾರವನ್ನು ಕಂಡುಕೊಳ್ಳುತ್ತಾ, ತನ್ನವರೆನಿಸಿಕೊಂಡ ಅಪ್ಪ, ಅಮ್ಮ, ಸಂಗಾತಿ ಮತ್ತು ಮಕ್ಕಳ ಕಲ್ಯಾಣಕ್ಕೂ ಸಾಕಷ್ಟು ಶ್ರಮಿಸುತ್ತಾನೆ. ಜೊತೆಗೆ ಅವರೆಲ್ಲರ ಪ್ರೀತಿ ಪಾತ್ರಕ್ಕೆ ಒಳಗಾಗುತ್ತಾನೆ. ಸಂಗಾತಿಯಿಂದ ಪಡೆಯುವ ಪ್ರೀತಿಯ ಸೆಲೆಯಲ್ಲಿ ಸಾಕಷ್ಟು ಸಂತೋಷವನ್ನು ಹಾಗೂ ಜೀವನದ ಅರ್ಥವನ್ನು ಕಂಡುಕೊಳ್ಳುತ್ತಾನೆ ಎನ್ನಲಾಗುವುದು.

ಹೌದು, ಪ್ರೀತಿ ಎಂದರೆ ಹಾಗೆ. ಪ್ರಾಯಕ್ಕೆ ಬಂದ ವ್ಯಕ್ತಿಗೆ ಹೇಗೆ ಪ್ರೀತಿ ಕಾಡುವುದು ಅಥವಾ ಹುಟ್ಟುವುದು ಎಂದು ಹೇಳಲು ಸಾಧ್ಯವಿಲ್ಲ. ಅದೇ ಒಮ್ಮೆ ಹುಟ್ಟಿದ ಪ್ರೀತಿಯಿಂದ ತನ್ನ ಲೋಕದಲ್ಲಿ ಬಣ್ಣ ಬಣ್ಣದ ಚಿತ್ತಾರವನ್ನು ಕಾಣುತ್ತಾನೆ. ಸಾಕಷ್ಟು ಕನಸುಗಳು, ಅದನ್ನು ಸಾಧಿಸುವ ಹುಮ್ಮಸ್ಸು ವ್ಯಕ್ತಿಯಲ್ಲಿ ತುಂಬಿರುತ್ತದೆ. ಒಂದರ್ಥದಲ್ಲಿ ಅವನ ಬಾಳಿಗೆ ಬರುವ ಒಂದು ಸಂಭ್ರಮದ ಸಮಯ ಎನ್ನಬಹುದು. ಪ್ರೀತಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧನಾಗಿರುತ್ತಾನೆ. ಜೀವನದ ಉದ್ದಕ್ಕೂ ಆ ಪ್ರೀತಿಯನ್ನು ಸುಂದರವಾಗಿ ಕಾಪಾಡಿಕೊಳ್ಳಲು ಬಯಸುತ್ತಾನೆ. ಪ್ರೀತಿಯ ಬಂಧದಲ್ಲಿ ಬೀಳುವುದೇ ಜೀವನದ ಸಾಕ್ಷಾತ್ಕಾರ ಎಂದು ಭಾವಿಸುತ್ತಾರೆ ಎಂದರೂ ಸಹ ತಪ್ಪಾಗಲಾರದು.

ಪ್ರೀತಿಯಿಂದ ಮೋಸಗೊಂಡವರು, ಜೀವನದಲ್ಲಿ ತಾವು ಬಯಸಿದ ಪ್ರೀತಿಯನ್ನು ಪಡೆದುಕೊಳ್ಳಲು ವಿಫಲರಾದವರು ಸಾಕಷ್ಟು ಜನರಿರುತ್ತಾರೆ. ಅವರ ಮನಸ್ಸಿನಲ್ಲಿ ಸಾಕಷ್ಟು ನೋವು ಹಾಗೂ ಪ್ರೀತಿಯ ಬಗ್ಗೆ ಕೋಪ ಇರುವ ಸಾಧ್ಯತೆಗಳು ಇರುತ್ತವೆ. ಅಲ್ಲದೆ ಪ್ರೀತಿ ಎನ್ನುವುದೇ ಸುಳ್ಳು, ಪ್ರೀತಿ ಎನ್ನುವ ಹೆಸರಿನ ಮೂಲಕ ನಡೆಯುವ ದೌರ್ಜನ್ಯ ಹಾಗೂ ಶೋಷಣೆಗಳು ನಡೆಯುತ್ತವೆ ಎಂದು ಭಾವಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವ್ಯಕ್ತಿಗಳು ತಮ್ಮ ಜೀವನದಲ್ಲಿ ತಾವು ಬಯಸುವ ಪ್ರೀತಿಯನ್ನು ಪಡೆದುಕೊಳ್ಳುವುದಿಲ್ಲ. ಬದಲಿಗೆ ಪ್ರೀತಿಯ ಬಗ್ಗೆ ಸಾಕಷ್ಟು ನಕಾರಾತ್ಮಕ ಚಿಂತನೆಯನ್ನು ತಳೆಯುತ್ತಾರೆ. ಇನ್ನೂ ಕೆಲವು ರಾಶೀಚಕ್ರದವರು ತಮ್ಮ ಬದುಕಿನಲ್ಲಿ ಸಾಕಷ್ಟು ಪ್ರೀತಿ ಹಾಗೂ ಸಂಗಾತಿಯೊಂದಿಗೆ ಸುಂದರ ಜೀವನ ನಡೆಸುತ್ತಾರೆ. ಅವರಿಗೆ ಪ್ರೀತಿಯೇ ಜೀವನ ಆಗಿರುತ್ತದೆ ಎಂದು ಹೇಳಲಾಗುವುದು.

ನಿಮಗೆ ನಿಮ್ಮ ರಾಶಿಚಕ್ರದ ಅನುಸಾರ ನೀವು ಪ್ರೀತಿಯ ಬಗ್ಗೆ ಯಾವ ಭಾವನೆ ತಳೆದಿದ್ದೀರಿ? ನಿಮ್ಮವರು ಪ್ರೀತಿಯ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ? ಯಾವ ಯಾವ ರಾಶಿಚಕ್ರದವರು ಪ್ರೀತಿಯ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ಲೇಖನದ ಮುಂದಿನ ಭಾಗದಲ್ಲಿ ಬೋಲ್ಡ್ ಸ್ಕೈ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ಮೀನ

ಮೀನ

ಈ ರಾಶಿಯ ವ್ಯಕ್ತಿಗಳು ತೋರ್ಪಡಿಕೆಯ ಪ್ರೀತಿಯನ್ನು ನಂಬುವುದಿಲ್ಲ. ನಿಜವಾದ ಪ್ರೀತಿಯನ್ನು ನಂಬುತ್ತಾರೆ. ಉತ್ತಮ ಪ್ರೀತಿಯ ಬಗ್ಗೆ ಮಾತನಾಡುವಾಗ ಅವರ ಮಾತುಗಳು ಹಾಗೂ ಶಬ್ದಗಳು ಬಹಳ ಸುಂದರ ಹಾಗೂ ಹಿತವಾಗಿರುತ್ತದೆ. ಇವರ ಕಣ್ಣುಗಳಲ್ಲಿ ಪ್ರೀತಿಯ ಹೊಳಪು ಸದಾ ಮಿನುಗುತ್ತಿರುತ್ತವೆ. ಇವರು ಒಮ್ಮೆ ಒಂದು ನಿಜವಾದ ಪ್ರೀತಿಯ ಸೆಲೆಯನ್ನು ಕಂಡುಕೊಂಡರೆ ಅದಕ್ಕಾಗಿ ಜೀವನವನ್ನೇ ಮುಡುಪಾಗಿ ಇಡುತ್ತಾರೆ. ತನ್ನ ಪ್ರೀತಿ ಪಾತ್ರರಿಗಾಗಿ ಎಂತಹ ಸಾಹಸಗಳನ್ನು ಅಥವಾ ಕೆಲಸವನ್ನು ಸಹ ಮಾಡಲು ಸಿದ್ಧರಾಗಿರುತ್ತಾರೆ. ಪ್ರೀತಿಯ ಬಗ್ಗೆ ಸಾಕಷ್ಟು ನಂಬಿಕೆ ಹಾಗೂ ಗೌರವ ಹೊಂದಿರುವುದರಿಂದ ಸಂಬಂಧಗಳಲ್ಲಿ ಇವರ ಪ್ರೀತಿ ಉತ್ತಮ ಹಾಗೂ ದೀರ್ಘ ಕಾಲದವರೆಗೂ ಮಿಗುತ್ತಿರುತ್ತದೆ. ತಮ್ಮ ಪ್ರೀತಿಯಲ್ಲಿ ಯಾವುದೇ ಬದಲಾವಣೆ ಅಥವಾ ಪದೇ ಪದೇ ಬದಲಾಯಿಸುವ ಮನಃಸ್ಥಿತಿಯನ್ನು ಹೊಂದಿರುವುದಿಲ್ಲ ಎಂದು ಹೇಳಲಾಗುವುದು.

Most Read: ಈ ರಾಶಿಚಕ್ರದ ಜನರು ಸಂಬಂಧದ ವಿಚಾರದಲ್ಲಿ ಹೆಚ್ಚು ನಿಷ್ಠಾವಂತ ಸಂಗಾತಿಗಳಾಗಿರುತ್ತಾರೆ

ವೃಷಭ

ವೃಷಭ

ಈ ರಾಶಿಯವರು ಪ್ರೀತಿಯ ಬಗ್ಗೆ ಸಾಕಷ್ಟು ನಂಬಿಕೆ ಹಾಗೂ ಗೌರವವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಹುಟ್ಟಿನಿಂದಲೇ ಅಪ್ಪ-ಅಮ್ಮನ ಪ್ರೀತಿಗೆ ಗೌರವ ನೀಡುತ್ತಾ ಬರುವ ವ್ಯಕ್ತಿಗಳು. ಸಂಬಂಧಿಕರು, ಸುತ್ತ-ಮುತ್ತಲಿನ ಜನರು, ಸ್ನೇಹಿತರು, ಜೀವನ ಸಂಗಾತಿ ಹೀಗೆ ಪ್ರತಿಯೊಂದು ಬಂಧಗಳಲ್ಲಿ ತೋರುವ ಪ್ರೀತಿಯನ್ನು ಬಯಸುತ್ತಾರೆ. ಜೊತೆಗೆ ನಂಬುತ್ತಾರೆ. ಅಂತಹ ಪ್ರೀತಿಗೆ ಸದಾ ತಲೆ ಬಾಗಿರುತ್ತಾರೆ. ಸದಾ ಎಲ್ಲರೊಂದಿಗೂ ಉತ್ತಮ ಸಂಬಂಧ ಹಾಗೂ ಪ್ರೀತಿ-ವಾತ್ಸಲ್ಯದಿಂದ ಇರಲು ಬಯಸುವರು. ತಮ್ಮ ಪ್ರೀತಿ ಪಾತ್ರರಿಗೆ ಸದಾ ರಕ್ಷಣೆ ಹಾಗೂ ಪ್ರೀತಿಯನ್ನು ಎರೆಯುತ್ತಾರೆ. ಅವರಿಗಾಗಿ ಸಾಕಷ್ಟು ತ್ಯಾಗ ಹಾಗೂ ಸಹಕಾರವನ್ನು ನೀಡುವರು.

ಕರ್ಕ

ಕರ್ಕ

ಈ ರಾಶಿಯ ವ್ಯಕ್ತಿಗಳು ಪ್ರಾಯಕ್ಕೆ ಬಂದಂತೆ ತಮ್ಮದೇ ಆದ ಪ್ರೀತಿಯನ್ನು ಕಂಡುಕೊಳ್ಳಲು ಹಂಬಲಿಸುತ್ತಾರೆ. ಅಲ್ಲದೆ ತಮ್ಮ ಜೀವನದ ಉದ್ದಕ್ಕೂ ಸುಂದರವಾದ ಹಾಗೂ ಸಂತೋಷ ಭರಿತವಾದ ಜೀವನವನ್ನು ಬಯಸುತ್ತಾರೆ. ಪ್ರೀತಿಯಿಂದ ಕೂಡಿರುವ ಸಂಸಾರವೇ ಜೀವನದ ಸಾಕ್ಷಾತ್ಕಾರ ನೀಡುವುದು ಎಂದು ನಂಬಿರುವ ವ್ಯಕ್ತಿಗಳಾಗಿರುತ್ತಾರೆ. ಕುಟುಂಬ, ಸಂಬಂಧ ಹಾಗೂ ಪ್ರೀತಿಗೆ ವಿಶೇಷ ಸ್ಥಾನವನ್ನು ನೀಡುವ ಇವರು ಪ್ರೀತಿಯಿಂದ ಹೇಗೆ ಜನರೊಂದಿಗೆ ವರ್ತಿಸಬೇಕು ಎನ್ನುವುದನ್ನು ಸುಂದರವಾಗಿ ತಿಳಿದಿರುವ ವ್ಯಕ್ತಿಗಳು. ಪ್ರೀತಿ ಎನ್ನುವುದು ಜೀವಮಾನದಲ್ಲಿ ಬರುವ ಒಂದು ವಿಷಯವಲ್ಲ. ಅದೊಂದು ವ್ಯಕ್ತಿಕಗೆ ಬದುಕಲು ಬೇಕಾದ ಅಗತ್ಯತೆ ಎಂದು ಭಾವಿಸುತ್ತಾರೆ. ಇವರು ತಮ್ಮವರಿಗೆ ತಮ್ಮ ಪ್ರೀತಿ ಪಾತ್ರರಿಗೆ ತೋರುವ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಯಾವುದೇ ಮಿತಿ ಅಥವಾ ಗಡಿ ಎನ್ನುವುದು ಇರುವುದಿಲ್ಲ.

ಮೇಷ

ಮೇಷ

ಪ್ರೀತಿಯನ್ನು ನಂಬುವ ಹಾಗೂ ಅದೇ ಜೀವನ ಎಂದು ಗೌರವ ನೀಡುವ ರಾಶಿಚಕ್ರಗಳಲ್ಲಿ ಮೇಷ ರಾಶಿಯು ಒಂದು. ಇವರು ಸದಾ ಮೃದು ಹಾಗೂ ಸೌಮ್ಯವಾದ ವರ್ತನೆಯನ್ನು ತೋರದೆ ಹೋಗಬಹುದು. ಆದರೆ ಪ್ರೀತಿಯ ವಿಚಾರದಲ್ಲಿ ಅತ್ಯಂತ ವಿನಯತೆಯನ್ನು ತೋರುವರು. ಸಾಂಪ್ರದಾಯಿಕ ರೀತಿಯಲ್ಲಿ ಬಹಳ ಪ್ರಣಯರೂಪವನ್ನು ಕಾಣುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಸಂಗಾತಿಯೊಂದಿಗೆ ಸಾಕಷ್ಟು ವಿನೋದ ಹಾಗೂ ಪ್ರಣಯವನ್ನು ಹೊಂದುವುದರ ಮೂಲಕ ಜೀವನದಲ್ಲಿ ಸಾಕಷ್ಟು ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಜೊತೆಗೆ ತಮ್ಮವರಿಗಾಗಿ ಸದಾ ಪ್ರೀತಿಯನ್ನು ತೋರುವರು. ಪ್ರೀತಿಯಲ್ಲಿ ನಂಬಿಕೆ ಹೊಂದಿರುವ ಇವರು ಪ್ರೀತಿಗಾಗಿ ಹುಡುಕಾಡುತ್ತಾರೆ. ಸದಾ ಸುಂದರ ಸಂಬಂಧದಲ್ಲಿ ಮುಂದುವರಿಯಲು ಬಯಸುವರು.

ವೃಶ್ಚಿಕ

ವೃಶ್ಚಿಕ

ಸದಾ ಬೆಳಗುವ ಹಾಗೂ ಭಾವೋದ್ರಿಕ್ತ ಪ್ರೀತಿಯನ್ನು ನಂಬುವ ಮತ್ತು ಬಯಸುವ ರಾಶಿಚಕ್ರದವರಲ್ಲಿ ವೃಶ್ಚಿಕ ರಾಶಿಯೂ ಒಂದು. ತೆರೆದ ಮನಸ್ಸಿನ ಸುಂದರ ಪ್ರೀತಿಯನ್ನು ಬಯಸುವ ಇವರು ಪ್ರೀತಿಯ ಬಗ್ಗೆ ಸಾಕಷ್ಟು ನಂಬಿಕೆ ಹಾಗೂ ಗೌರವವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ತಮ್ಮವರಿಗೆ ತಮ್ಮ ಪ್ರೀತಿಪಾತ್ರರಿಗೂ ಸುಂದರವಾದ ಪ್ರೀತಿಯ ಅನುಭವ ನೀಡಲು ಸದಾ ಸಿದ್ಧರಾಗಿರುವ ವ್ಯಕ್ತಿಗಳು ಎನ್ನಬಹುದು. ನಿರಾಶೆಯನ್ನು ಹೊಂದುವುದು ಇವರಿಗೆ ಇಷ್ಟವಿರದ ಸಂಗತಿ. ಅದನ್ನು ಅವರು ದ್ವೇಷಿಸುತ್ತಾರೆ. ಬಹುಬೇಗ ಪ್ರೀತಿಯಲ್ಲಿ ತೆರೆದುಕೊಳ್ಳದೆ ಇರಬಹುದು. ಅದೇ ಒಮ್ಮೆ ಪ್ರೀತಿಯಲ್ಲಿ ಸಿಲುಕಿದರೆ ಅಥವಾ ಪಡೆದುಕೊಂಡರೆ ಅದನ್ನು ಜೋಪಾನ ಮಾಡಿಕೊಳ್ಳುತ್ತಾರೆ. ಜೀವನ ಉದ್ದಕ್ಕೂ ಆ ಪ್ರೀತಿಯನ್ನು ಲಾಲಿಸುತ್ತಾನೆ ಎಂದು ಹೇಳಲಾಗುವುದು. ಅಲ್ಲದೆ ಇವರು ಪ್ರೀತಿಯಲ್ಲಿ ನಿಷ್ಠೆ ಹಾಗೂ ನಂಬಿಕೆಯನ್ನು ಹೊಂದುವುದನ್ನು ನಿರೀಕ್ಷಿಸುತ್ತಾರೆ.

ಸಿಂಹ

ಸಿಂಹ

ಈ ರಾಶಿಯ ವ್ಯಕ್ತಿಗಳು ಪ್ರೀತಿಯನ್ನು ನಂಬುತ್ತಾರೆ. ಆದರೆ ಅದು ಇಲ್ಲದೆ ಇದ್ದರೆ ಜೀವನದಲ್ಲಿ ದುಃಖಿಸುವ ಅಗತ್ಯವಿಲ್ಲ ಎನ್ನುವ ಮನಃಸ್ಥಿತಿಯನ್ನು ಸಹ ಹೊಂದಿರುತ್ತಾರೆ. ಜೀವನದಲ್ಲಿ ಪ್ರೀತಿ ಸಿಗದೆ ಇದ್ದರೆ ಅದಕ್ಕಾಗಿ ದುಃಖದಲ್ಲಿಯೇ ಕೈತೊಳೆಯುವುದಿಲ್ಲ. ಆದರೆ ಜೀವನದಲ್ಲಿ ಸಿಕ್ಕ ಪ್ರೀತಿಯನ್ನು ಕಳೆದುಕೊಳ್ಳಲು ಸಹ ಸಿದ್ಧರಾಗಿರುವುದಿಲ್ಲ. ಸಿಕ್ಕ ಪ್ರೀತಿಯನ್ನು ರಕ್ಷಿಸಿಕೊಳ್ಳುತ್ತಾರೆ. ಸ್ವತಂತ್ರ ಪ್ರಿಯರಾದ ಇವರು ಸ್ವಯಂ ಪ್ರೀತಿಯ ಮೌಲ್ಯ ಏನು ಎನ್ನುವುದನ್ನು ತಿಳಿದಿದ್ದಾರೆ. ಪ್ರೀತಿ ಇಲ್ಲದೆ ಹೋದರೂ ಬದುಕುವುದು ಹೇಗೆ ಎನ್ನುವುದನ್ನು ಇವರು ತಿಳಿದಿದ್ದಾರೆ. ಎಲ್ಲರಿಗೂ ಬಯಸಿದ ಪ್ರೀತಿ ದೊರೆಯದು. ದೊರೆತ ಪ್ರೀತಿಯನ್ನು ಕಳೆದುಕೊಳ್ಳಬಾರದು ಎಂದು ಹೇಳುತ್ತಾರೆ. ಇವರು ಪ್ರಬುದ್ಧ, ಶಾಶ್ವತ, ನಿಷ್ಕಪಟ, ಆಳವಿಲ್ಲದ ಪ್ರೀತಿಯನ್ನು ಬಯಸುತ್ತಾರೆ.

Most Read: ಈ ರಾಶಿಚಕ್ರದವರು ಅತ್ಯುತ್ತಮ ಕೇಳುಗರು... ಹಾಗಾಗಿ ಇವರು ಯಾವುದಕ್ಕೂ ಹೆದರುವುದಿಲ್ಲ...

ತುಲಾ

ತುಲಾ

ಪ್ರೀತಿಯಲ್ಲಿ ನಂಬಿಕೆ ಹಾಗೂ ಗೌರವವನ್ನು ಹೊಂದಿರುವ ವ್ಯಕ್ತಿಗಳಲ್ಲಿ ಈ ರಾಶಿಚಕ್ರದವರು ಸಹ ಒಬ್ಬರು. ಇವರು ಪ್ರೀತಿಯನ್ನು ಅರಿಯಲು ಹಾಗೂ ಅದರಲ್ಲಿ ತಮ್ಮನ್ನು ತಾವು ತೆರೆದುಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವರು. ಇವರು ಪ್ರೀತಿಗಾಗಿ ಸಾಕಷ್ಟು ಬದ್ಧತೆಯನ್ನು ತೋರುವರು. ಪ್ರೀತಿಗೆ ಹೇಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಂಬಂಧಗಳಲ್ಲಿ ಯಾವ ರೀತಿಯ ಪ್ರೀತಿ ತೋರಬೇಕು? ಅದರ ಪಾಲನೆ ಹೇಗೆ ಮಾಡುವುದು ಎನ್ನುವುದನ್ನು ಚೆನ್ನಾಗಿ ತಿಳಿದಿದ್ದಾರೆ. ಹಾಗಾಗಿ ಜೀವನದಲ್ಲಿ ಎಲ್ಲಾ ಸಂಗತಿಗಳಲ್ಲೂ ಸಮತೋಲನವನ್ನು ಕಂಡುಕೊಳ್ಳುವುದರ ಮೂಲಕವೂ ಪ್ರೀತಿಯನ್ನು ರಕ್ಷಿಸಿಕೊಳ್ಳುವರು. ಆದರೆ ಕೆಲವೊಮ್ಮೆ ತಮ್ಮ ಪಾಲುದಾರರಿಗೆ ತನ್ನ ಅಗತ್ಯವಿದೆ ಎನ್ನುವುದನ್ನು ಮರೆಯುವ ಸಾಧ್ಯತೆಗಳು ಇವೆ ಎಂದು ಹೇಳಲಾಗುವುದು. ಕಥೆ ಪುಸ್ತಕಗಳಲ್ಲಿ ಬರುವ ಕಾಲ್ಪನಿಕ ಹಾಗೂ ಕನಸಿನಲ್ಲಿ ಕಾನುವ ಪ್ರೀತಿಗೂ ಸಹ ಮಹತ್ವವನ್ನು ನೀಡುತ್ತಾರೆ.

ಧನು

ಧನು

ಈ ರಾಶಿಚಕ್ರದವರು ವಾಸ್ತವಿಕತೆಯನ್ನು ಹೆಚ್ಚು ನಂಬುತ್ತಾರೆ. ಒಂದು ಮಟ್ಟಿಗೆ ಇವರು ಮುಕ್ತ ಪ್ರೀತಿಯ ಬಗ್ಗೆ ತಿಳಿದಿದ್ದಾರೆ ಎಂದು ಹೇಳಬಹುದು. ತೀಕ್ಷ್ಣವಾದ ಪ್ರೀತಿಪಾತ್ರರೂ ಹೌದು ಎಂದು ಹೇಳಲಾಗುವುದು. ವಾಸ್ತವದ ರೀತಿಯಲ್ಲಿ ಪ್ರೀತಿಯನ್ನು ಕಾಣಲು ಹಾಗೂ ನಿರ್ವಹಿಸಲು ಬಯಸುತ್ತಾರೆ. ಇವರು ತಮ್ಮನ್ನು ತಾವು ಹೆಚ್ಚು ಇಷ್ಟಪಡುವ ವ್ಯಕ್ತಿಗಳು ಎನ್ನಬಹುದು. ಹಾಗಾಗಿ ಇವರು ಇತರರ ಮೇಲೆ ಪ್ರೀತಿಗಾಗಿ ಬಾಗುವುದು ಅಥವಾ ಇತರರ ಪ್ರೀತಿಗೆ ಶರಣಾಗುವುದರಿಂದ ಆತಂಕ ಹೊಂದುವ ಸಾಧ್ಯತೆಗಳು ಹೆಚ್ಚೆಂದು ತಿಳಿಯುವರು. ಸ್ವತಂತ್ರರಾಗಿರಲು ಬಯಸುವ ಈ ವ್ಯಕ್ತಿಗಳು ಸಂಬಂಧಗಳಲ್ಲಿ ಪ್ರೀತಿಯನ್ನು ಗೌರವಿಸುತ್ತಾರೆ. ಪ್ರೇಮಿಯ ಪ್ರೀತಿಯಾಗಿರುವುದಕ್ಕಿಂತ ಸ್ನೇಹಿತರ ರೂಪದಲ್ಲಿ ಪ್ರೀತಿಯನ್ನು ಹೊಂದಲು ಬಯಸುವ ವ್ಯಕ್ತಿಗಳು ಇವರು ಎಂದು ಹೇಳಬಹುದು.

ಮಕರ

ಮಕರ

ಈ ರಾಶಿಚಕ್ರದ ವ್ಯಕ್ತಿಗಳು ಸಹ ಪ್ರೀತಿಯ ಬಗ್ಗೆ ಸಾಕಷ್ಟು ನಂಬಿಕೆ ಹಾಗೂ ಬಯಕೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಜೀವನದಲ್ಲಿ ಸಾಕಷ್ಟು ಯೋಜನೆಗಳನ್ನು ಹೊಂದಿರುತ್ತಾರೆ. ಹಾಗಾಗಿ ಆ ಯೋಜನೆಗಳನ್ನು ಕೈಗೊಳ್ಳುವುದು, ಅದರಲ್ಲಿ ಯಶಸ್ವಿ ಕಾಣುವುದರ ಬಗ್ಗೆ ಹೆಚ್ಚು ಸಮಯ ಹಾಗೂ ಪ್ರೀತಿಯನ್ನು ತೋರುತ್ತಾರೆ. ಸಾಮಾಜಿಕ ಜೀವನವ ಮತ್ತು ವೃತ್ತಿ ಜೀವನವನ್ನು ತಮ್ಮ ವೈಯಕ್ತಿಕ ಜೀವನದಷ್ಟೇ ಮಹತ್ವವನ್ನು ನೀಡುತ್ತಾರೆ. ಹಾಗಾಗಿ ವೈಯಕ್ತಿಕ ಜೀವನಕ್ಕೆ ಸ್ವಲ್ಪ ಕಡಿಮೆ ಸಮಯವನ್ನು ವಿನಿಯೋಗಿಸುತ್ತಾರೆ ಎಂದು ಸಹ ಹೇಳಲಾಗುವುದು. ಪುಸ್ತಕ, ಸಿನೆಮಾ ಮತ್ತು ಕನಸುಗಳಲ್ಲಿ ನಡೆಯುವಂತೆ ರೋಮಾಂಚಕಾರಿ ಪ್ರೀತಿಯನ್ನು ಜೀವನದಲ್ಲಿ ಪಡೆಯಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಕೆಲವು ಕಷ್ಟದ ಕೆಲಸವನ್ನು ಸಹ ಕೈಗೊಳ್ಳುವರು. ಇವರ ಪ್ರಕಾರ ಜೀವನ ಹಾಗೂ ಪ್ರೀತಿ ಹೇಗೆ ದೊರೆಯುತ್ತದೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ಸಂತೋಷ ಅಥವಾ ನಿರಾಶಾದಾಯಕವಾಗಿರುತ್ತದೆಯೇ ಎನ್ನುವುದು ನಿರ್ಧಾರವಾಗುತ್ತದೆ ಎಂದು ಹೇಳುವರು.

ಕನ್ಯಾ

ಕನ್ಯಾ

ಪ್ರೀತಿಯನ್ನು ಬಯಸುವ ಮತ್ತು ಗೌರವಿಸುವ ರಾಶಿಚಕ್ರದವರಲ್ಲಿ ಕನ್ಯಾ ರಾಶಿಯೂ ಒಂದು. ಆದರೆ ಇವರು ವಾಸ್ತವದ ಕೆಲವು ಕೆಲಸವನ್ನು ಜೀವನದಲ್ಲಿ ಮರೆಯಬಾರದು ಎಂದು ಭಾವಿಸುತ್ತಾರೆ. ಸುಂದರ ಕುಟುಂಬ ಹಾಗೂ ಅಧಿಕ ಸಂಖ್ಯೆಯ ಸ್ನೇಹಿತರ ಬಳಗವನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಎಲ್ಲರೊಂದಿಗೂ ಕಾಳಜಿ ಹಾಗೂ ಪ್ರೀತಿಯ ನಡೆ ನುಡಿಯನ್ನು ಹೊಂದಲು ಬಯಸುವರು. ತಮ್ಮ ಪ್ರೀತಿ ಪಾತ್ರರಿಗೆ ಸುಂದರ ಅನುಭವ ನೀಡುವುದರ ಜೊತೆಗೆ ಆರೈಕೆಯನ್ನು ಮಾಡುವರು. ಪ್ರತಿಯೊಂದು ಕೆಲಸದ ಬಗ್ಗೆಯೂ ವಿಶೇಷ ಗಮನವನ್ನು ನೀಡುವ ಇವರು ಜೀವನದಲ್ಲಿ ಪ್ರೀತಿಯ ಪಾತ್ರ ಅಮೂಲ್ಯವಾದದ್ದು ಎಂದು ಅಭಿಪ್ರಾಯಿಸುವರು.

ಮಿಥುನ

ಮಿಥುನ

ಈ ರಾಶಿಯ ವ್ಯಕ್ತಿಗಳು ಜೀವನದಲ್ಲಿ ಬದ್ಧತೆಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಇವರು ಜೀವನದಲ್ಲಿ ಒಂದೇ ವ್ಯಕ್ತಿಯ ಬಗ್ಗೆ ಸಾಕಷ್ಟು ಗಮನವನ್ನು ಹಿಡಿದಿಟ್ಟುಕೊಳ್ಳಲು ಬಯಸುವುದಿಲ್ಲ. ಅವರಿಗೆ ಅದು ಕಷ್ಟದ ಸಂಗತಿಯಾಗಿರುತ್ತದೆ. ಇವರು ಜೀವನದಲ್ಲಿ ಸಿಗುವ ಇತರ ಸಂಗತಿಗಳಷ್ಟು ಪ್ರಮುಖವಾದ್ದು ಪ್ರೀತಿ ಎಂದು ಭಾವಿಸುವುದಿಲ್ಲ. ಒಂದರ್ಥದಲ್ಲಿ ಇವರಿಗೆ ಪ್ರೀತಿಯ ಬಗ್ಗೆ ಅಷ್ಟಾಗಿ ನಂಬಿಕೆಯಿಲ್ಲ ಎಂದು ಹೇಳಬಹುದು. ಇವರು ಜೀವನ ಪರ್ಯಂತ ಒಂದೇ ವ್ಯಕ್ತಿಯೊಂದಿಗೆ ಸಮಯ ಕಳೆಯುವುದರ ಬದಲು ವಿಭಿನ್ನ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಲು ಬಯಸುತ್ತಾರೆ. ಸ್ವತಂತ್ರರಾಗಿರಲು ಬಯಸುವ ಇವರು ಪ್ರೀತಿಯ ಬಂಧದಲ್ಲಿ ಬಂಧಿಯಾಗಲು ಬಯಸುವುದಿಲ್ಲ.

ಕುಂಭ:

ಕುಂಭ:

ಪ್ರೀತಿಯ ಬಗ್ಗೆ ವಿರೋಧ ಹೊಂದಿರುವ ರಾಶಿಚಕ್ರದವರಲ್ಲಿ ಇವರು ಒಬ್ಬರು. ಮುಂಗೋಪಿಗಳಾದ ಇವರು ಹೆಚ್ಚು ಸಮಯವನ್ನು ಏಕಾಂಗಿಯಾಗಿ ಇರಲು ಬಯಸುತ್ತಾರೆ. ಹಾಗಂತ ಜೀವನ ಪರ್ಯಂತ ಏಕಾಂಗಿಯಾಗಿರಬೇಕು ಎನ್ನುವ ಅರ್ಥದಲ್ಲಿ ಅಲ್ಲ. ತಮ್ಮನ್ನು ತಾವು ಪ್ರೀತಿಯಲ್ಲಿ ತೆರೆದುಕೊಳ್ಳಲು ಅಥವಾ ಕಲ್ಪಿಸಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವರು. ಅಲ್ಲದೆ ವಿಶೇಷ ಚಿಂತನೆಯನ್ನು ನಡೆಸುವರು. ವಾಸ್ತವದ ಬಗ್ಗೆ ಹೆಚ್ಚು ಚಿಂತನೆ ನಡೆಸುವ ಇವರು ಸಾಕಷ್ಟು ಸಿದ್ಧಾಂತ ಹಾಗೂ ಜೀವನದ ಬಗ್ಗೆ ತಮ್ಮದೇ ಆದ ನಿಲುವನ್ನು ಹೊಂದಿರುತ್ತಾರೆ. ವಾಸ್ತವದ ಮುಂದೆ ಪ್ರೀತಿಯ ಸಂಗತಿಯು ಗೌಣ ಎಂದು ತಿಳಿದಿರುತ್ತಾರೆ. ಸಾಕಷ್ಟು ಸಮಯದಲ್ಲಿ ಕರಕುಶಲತೆಯಲ್ಲಿ ಚಿಂತನೆಯನ್ನು ತೋರುವರು. ಸೃಜನತೆಯಿಂದಲೇ ಬದುಕನ್ನು ನಿರ್ವಹಿಸುವ ವ್ಯಕ್ತಿಗಳು ಇವರು. ಕೆಲವೊಮ್ಮೆ ಪ್ರೀತಿಯ ಜೀವನದಲ್ಲೂ ಸೃಜನತೆ ಇರಬೇಕು ಎಂದು ಆಶಿಸುವರು. ಇವರ ಆಶಯದಂತೆ ಜೀವನ ನಡೆಯದೆ ಇದ್ದಾಗ ಪ್ರೀತಿಯ ಬಗ್ಗೆ ಸಾಕಷ್ಟು ತಾತ್ಸಾರ ಹೊಂದುವ ಸಾಧ್ಯತೆಯು ಹೆಚ್ಚು.

English summary

Zodiac Signs Who Believe In Love And The Ones Who Dont

From the die-hard lovers to the anti-love realists. I am going to just come right out and say it: I'm not totally sure if I believe in love. Not in the way some of the other zodiac signs believe in it. Maybe it's because I'm an Aquarius, or maybe it's just me, but I don't completely believe that love has to be gooey and sappy all the time. That's just how I feel.Sure, I believe that love for friends and family exists, but I don't know how true romantic love is. Like soulmates, for instance. Part of me wants to believe that everyone has a astrological soulmate. But if you asked me if it was a realistic assumption to assume that there's only one person out there for everyone?
Story first published: Thursday, November 22, 2018, 20:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more