Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಈ 5 ರಾಶಿಯವರು ಪ್ರೀತಿಯ ವಿಷಯಕ್ಕೆ ಬಂದಾಗ 'ಐ ಲವ್ ಯು' ಹೇಳಲು ಸಾಕಷ್ಟು ಕಷ್ಟ ಪಡುತ್ತಾರಂತೆ!
ನಮಗೇ ಅರಿಯದ ಒಂದು ಕಾರಣದಿಂದಾಗಿ ಇನ್ನೊಂದು ಜೀವವನ್ನು ಅತಿಯಾಗಿ ಪ್ರೀತಿಸುವುದು ಪ್ರಕೃತಿಯ ಒಂದು ವಿಸ್ಮಯ. ಆ ವಿಸ್ಮಯದ ಅನುಭವಕ್ಕೆ ಪದಗಳಿಂದ ವಿವರಣೆ ನೀಡುವುದು ಕಷ್ಟ. ನಿಷ್ಕಲ್ಮಷವಾಗಿರುವ ಆ ಪ್ರೀತಿಯೇ ಹೊಸ ಜೀವನದ ಆರಂಭ ಪಡೆದುಕೊಳ್ಳಬೇಕು ಎಂದು ಬಯಸುವುದು ಸಹಜ. ಅದೇ ನಮ್ಮ ಭಾವನೆ, ಆ ಒಂದು ಅನುಭವಗಳನ್ನು ಹೊತ್ತು ಪ್ರೀತಿಯನ್ನು ಹುಟ್ಟಿಸಿದ ಆ ಜೀವದ ಮುಂದೆ ತೆರೆದಿಡುವುದು ಎಂದರೆ ಅದೊಂದು ಬಗೆಯ ಗೊಂದಲ ಹಾಗೂ ಆತಂಕ ಕಾಡುವುದು ಸುಳ್ಳಲ್ಲ. ನೂರಾರು ಪ್ರಶ್ನೆಗಳು ಮನಸ್ಸನ್ನು ಕಾಡುವುದು. ಈಗ ಹೇಳುವುದು ಸರಿಯೇ? ತಪ್ಪೇ? ಎನ್ನುವುದಕ್ಕೆ ಉತ್ತರ ಹುಡುಕುವುದರಲ್ಲಿಯೇ ಸಾಕಷ್ಟು ಸಮಯವನ್ನು ಕಳೆದಿರುತ್ತಾರೆ.
ಪ್ರೀತಿ ಹೇಗೆ ಹುಟ್ಟುತ್ತದೆ? ಅದಕ್ಕಾಗಿ ನಮ್ಮ ಜೀವ ಏಕೆ ಹಾತೊರೆಯುವುದು? ಪ್ರೀತಿಯಿಂದ ದೂರವಾದರೆ ಮನಸ್ಸು ಏಕೆ ದುಃಖಿಸುವುದು? ಅದೇ ಪ್ರೀತಿಯು ನಮಗೆ ಒಲಿದಾಗ ನಮ್ಮ ಹೃದಯದ ಝೇಂಕಾರಕ್ಕೆ ಒಳಗಾಗುವುದು ಏಕೆ? ಎನ್ನುವುದರ ಉತ್ತರ ಹುಡುಕುವುದು ಕಷ್ಟ. ವ್ಯಕ್ತಿ ಬಯಸುವ ಆ ಪ್ರೀತಿ, ಒಡನಾಟ ಎಲ್ಲವೂ ಒಂದು ಅದ್ಭುತ. ಅದೊಂದು ಪ್ರಕೃತಿಯ ಕೊಡುಗೆ. ಮನುಷ್ಯ ಕುಲದ ಸಂತೋಷ ಹಾಗೂ ಜೀವನ ಅಡಗಿರುವುದೇ ಅವನ ಪ್ರೀತಿಯಲ್ಲಿ ಎಂದು ಹೇಳಬಹುದು. ಬದುಕಲ್ಲಿ ಸಿಕ್ಕ ಪ್ರೀತಿಯನ್ನು ಹೇಗೆ ಪಾಲನೆ ಮಾಡುತ್ತಾನೆ? ಆ ಪ್ರೀತಿಯ ರಕ್ಷಣೆಯಲ್ಲಿ ಎಷ್ಟು ನಿಷ್ಠಾವಂತನಾಗಿರುತ್ತಾರೆ? ಎನ್ನುವುದೇ ಅವರ ಜೀವನದ ಪ್ರಮುಖ ಪ್ರಶ್ನೆಗಳಾಗಿರುತ್ತವೆ ಎಂದು ಹೇಳಬಹುದು....
ಕುಂಡಲಿ ಹಾಗೂ ರಾಶಿಚಕ್ರದ ಅನುಸಾರ
ನಮ್ಮ ಕುಂಡಲಿ ಹಾಗೂ ರಾಶಿಚಕ್ರದ ಅನುಸಾರ ಭಾವನಾತ್ಮಕ ವಿಷಯಗಳು ನಿರ್ಧಾರವಾಗುತ್ತದೆ. ವ್ಯಕ್ತಿಯ ವರ್ತನೆ, ಭಾವನೆ ಎಲ್ಲವೂ ಅವರವರ ಗ್ರಹಗತಿಗೆ ಅನುಸಾರವಾಗಿ ಇರುತ್ತವೆ ಎಂದು ಹೇಳಲಾಗುವುದು. ಅದು ಅವರ ಪ್ರೀತಿಯ ವಿಚಾರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅವರ ಬಹುತೇಕ ವಿಷಯಗಳಲ್ಲೂ ಅದೇ ರೀತಿಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಸಂಬಂಧ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಸ್ಥಾನವನ್ನು ಹೊಂದಿರುವ ವಿಷಯವಾಗಿದ್ದರೂ ಅವರು ತಮ್ಮ ಪ್ರೀತಿಯನ್ನು ಹೇಳಲು ಸಾಕಷ್ಟು ಕಷ್ಟ ಪಡುತ್ತಾರೆ. ಕೆಲವೊಮ್ಮೆ ಹೇಳದೆಯೇ ಇರುವ ಸಾಧ್ಯತೆಗಳು ಇರುತ್ತವೆ. ಈ ನಿಟ್ಟಿನಲ್ಲಿಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರಾಶಿಚಕ್ರದವರು ತಮ್ಮ ಮನಸ್ಸಿನ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಲು ಸಾಕಷ್ಟು ಹಿಂಜರಿಕೆಯನ್ನು ಅಥವಾ ಹಿಂದೇಟನ್ನು ಹಾಕುತ್ತಾರೆ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರವರು ಯಾರು? ಅವರು ತಮ್ಮ ಭಾವನೆಗಳನ್ನು ತರೆದಿಡಲು ಏಕೆ ಭಯಪಡುವರು? ಸಾಕಷ್ಟು ಗೊಂದಲ ಕಾಡುವುದು ಏಕೆ? ಇವರು ಎಂದಿಗೂ ಪ್ರೀತಿಯನ್ನು ವ್ಯಕ್ತಪಡಿಸುವುದೇ ಇಲ್ಲವೇ? ಎನ್ನುವುದನ್ನು ತಿಳಿಯಲು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.
ಮಿಥುನ
ಈ ರಾಶಿಯ ವ್ಯಕ್ತಿಗಳು ಹೊಸ ಅನುಭವವನ್ನು ನೀಡುವ ಪ್ರೀತಿಯನ್ನು ಸದಾ ಬಯಸುತ್ತಾರೆ. ಸಂಬಂಧಗಳಿಗೆ ಸಾಕಷ್ಟು ಗೌರವ ಹಾಗೂ ಬದ್ಧರಾಗಿರುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಪ್ರೀತಿ ಎನ್ನುವ ಭಾರವಾದ ಪದಗಳನ್ನು ತಮ್ಮ ಪ್ರೀತಿ ಪಾತ್ರರ ಎದುರು ವ್ಯಕ್ತಪಡಿಸುವುದು ಕಷ್ಟ. ಇವರು ವಿಷಯವನ್ನು ಆದಷ್ಟು ಆಸಕ್ತಿದಾಯಕ ಹಾಗೂಆಶ್ಚರ್ಯಕರವಾದ ರೀತಿಯಲ್ಲಿ ಅನುಭವವನ್ನು ನೀಡಬೇಕು. ದೀರ್ಘ ಕಾಲದ ವರೆಗೂ ಈ ಸುಂದರ ಅನುಭವವನ್ನು ಪಡೆದುಕೊಳ್ಳಬೇಕು. ಆ ಅನುಭವವನ್ನು ಪಡೆದುಕೊಳ್ಳಲು ಸಾಕಷ್ಟು ಕುತೂಹಲ ಹಾಗೂ ಕಾತುರ ಅವರ ಮನಸ್ಸಿನಲ್ಲಿ ಇರಬೇಕು ಎಂದು ಬಯಸುತ್ತಾರೆ. ಇತರ ವ್ಯಕ್ತಿಗಳ ಬಗ್ಗೆ ವಿಶೇಷ ಆಸಕ್ತಿ ಹಾಗೂ ಪ್ರೀತಿಯನ್ನು ಹೊಂದಿರುತ್ತಾರೆ. ಆದರೆ ಆ ಭಾವನೆಗಳನ್ನು ತೆರೆದಿಡುವುದರಲ್ಲಿ ಸಾಕಷ್ಟು ವಿಳಂಬವನ್ನು ಅನುಸರಿಸುವರು. ಇವರು ಸಾಮಾನ್ಯವಾಗಿ ಎಲ್ಲಾ ವಿಚಾರದಲ್ಲೂ ಇದೇ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಅದು ಪ್ರೀತಿಯ ವಿಷಯದಲ್ಲಿ ವಿಶೇಷವಾಗಿ ಹೆಚ್ಚಾಗಿರುತ್ತದೆ ಎಂದು ಹೇಳಬಹುದು.
ಮಿಥುನ
ಇವರ ಭಾವನೆಗಳು ಪ್ರೀತಿಯಲ್ಲಿ ಸಾಕಷ್ಟು ಬಯಕೆ ಹಾಗೂ ಆಸೆಯನ್ನು ಹೊಂದಿದ್ದರೂ ಪ್ರೀತಿಯ ವ್ಯಕ್ತಿಯ ಮುಂದೆ ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ. ಇದರರ್ಥ ಅವರೊಂದಿಗೆ ದೀರ್ಘಕಾಲದ ಸಂಬಂಧ ಹೊಂದಲು ಬಯಸುವುದಿಲ್ಲ ಎಂದರ್ಥವಲ್ಲ. ಇವರು ತಮ್ಮದೇ ಆದ ಒಂದು ಬದ್ಧತೆಗೆ ಒಳಗಾಗಿರುತ್ತಾರೆ. ಅದರ ಅನುಸಾರವೇ ಜೀವನದ ಕಲ್ಪನೆ ಹಾಗೂ ಮುನ್ನಡೆಯುವ ಮನಸ್ಸನ್ನು ಹೊಂದಿರುತ್ತಾರೆ. ಅಪರೂಪದ ಅಥವಾ ವಿಶೇಷ ಭಾವನೆಯನ್ನು ವ್ಯಕ್ತಪಡಿಸಲು ತಮ್ಮದೇ ಆದ ವಿಶೇಷ ಸಂದರ್ಭದಲ್ಲಿ ಹೇಳಬೇಕು ಎಂದು ಬಯಸುತ್ತಾರೆ. ಪ್ರೀತಿ ಪಾತ್ರರಿಗೆ ಸಾಕಷ್ಟು ವಿಶೇಷ ಸ್ಥಾನವನ್ನು ನೀಡುವುದರಿಂದ ಅವರು ಅತ್ಯುತ್ತಮ ಸಂವಹನಕಾರರಾಗಿರುತ್ತಾರೆ ಎಂದು ಹೇಳಬಹುದು.
Most Read:ಅಪರೂಪದ ಕಾಯಿಲೆ: ಈ ಬಾಲಕನಿಗೆ 6 ವರ್ಷ ಆದರೆ ಮುದುಕನಂತೆ ಕಾಣುತ್ತಾನೆ!
ಕನ್ಯಾ
ಯಾವುದಾದರೂ ರಾಶಿಚಕ್ರದವರು ಸಂಬಂಧಗಳ ವಿಷಯದಲ್ಲಿ ಅಥವಾ ಪ್ರೀತಿಗೆ ಸಂಬಂಧಿಸಿದ ವಿಷಯದಲ್ಲಿ ಅತಿಯಾದ ಚಿಂತನೆ ನಡೆಸುತ್ತಾರೆ ಎಂದಾದರೆ ಅವರು ಕನ್ಯಾ ರಾಶಿಯವರು ಎಂದು ಹೇಳಲಾಗುವುದು. ಈ ರಾಶಿಯ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ತಮ್ಮದೇ ಆದ ಕೆಲವು ವಿಷಯಗಳನ್ನು ಮನಗಂಡಿರುತ್ತಾರೆ. ಇವರು ಯಾರಿಗಾದರೂ ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಬೇಕು ಎಂದಾದರೆ ಅವರ ಮನಸ್ಸಿನಲ್ಲಿ ಇರುವ ಕೆಲವು ವಿಷಯಗಳೊಂದಿಗೆ ತುಲನೆಯಾಗಬೇಕು. ಜೊತೆಗೆ ಅವರು ಪರಿಪೂರ್ಣ ವ್ಯಕ್ತಿಗಳು ಎನ್ನುವ ಬದ್ಧತೆಗೆ ಅಥವಾ ನಿರ್ಣಯಕ್ಕೆ ಇವರು ಬಂದಿರಬೇಕು. ಆಗಲೇ ತಮ್ಮ ಪ್ರೀತಿಯ ವಿಷಯವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕಾಗಿ ಸಾಕಷ್ಟು ದೀರ್ಘ ಸಮಯದವರಗೆ ಕಾದು ಕುಳಿತಿರುತ್ತಾರೆ ಎಂದು ಸಹ ಹೇಳಲಾಗುವುದು. ಹಾಗಾಗಿಯೇ ಇವರು ತಮ್ಮ ಪ್ರೀತಿಯನ್ನು ಹೇಳಲು ವಿಳಂಬವನ್ನು ಅನುಸರಿಸುವರು.
ಕನ್ಯಾ
ಪ್ರೀತಿಯ ಜೀವನ ಒಮ್ಮೆ ಆರಂಭಿಸಿದ ಬಳಿಕ ಅದಕ್ಕೆ ಸರಿಯಾದ ಬದ್ಧತೆ ಹಾಗೂ ನಿಷ್ಠೆಯಿಂದ ಇರಬೇಕು ಎನ್ನುವುದು ಇವರ ನಿಲುವು. ಹಾಗಾಗಿಯೇ ಅನೇಕ ಸಂದರ್ಭದಲ್ಲಿ ತಮ್ಮ ನಿರ್ಣಯ ಸರಿಯಾಗಿದೆಯೇ ಎನ್ನುವ ಆತಂಕ ಹಾಗೂ ಗೊಂದಲವನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲೂ ತಮ್ಮ ಪ್ರೀತಿಯನ್ನು ಅಷ್ಟು ಸುಲಭವಾಗಿ ಹೇಳುವುದಿಲ್ಲ. ಅದರ ಬಗ್ಗೆ ಯಾವುದೇ ವಿಷಯವನ್ನು ಸಹ ಇತರರೊಂದಿಗೆ ಚರ್ಚಿಸುವುದಿಲ್ಲ ಎಂದು ಹೇಳಲಾಗುವುದು. ಇವರು ಸಂಬಂಧಗಳ ವಿಷಯದಲ್ಲಿ ಸಾಕಷ್ಟು ಭಯ ಹಾಗೂ ಹಿಂಜರಿಕೆಯನ್ನು ಅನುಭವಿಸುತ್ತಿದ್ದರೆ ಅದನ್ನು ಅಷ್ಟು ಸುಲಭವಾಗಿ ಹೇಳುವುದಿಲ್ಲ ಎಂದು ಹೇಳಲಾಗುವುದು.
ವೃಶ್ಚಿಕ
ಸ್ಥಿರವಾದ ಮನಃಸ್ಥಿತಿಯನ್ನು ಹೊಂದಿರುವ ರಾಶಿಚಕ್ರದವರಲ್ಲಿ ವೃಶ್ಚಿಕ ರಾಶಿಯ ವ್ಯಕ್ತಿಗಳು ಒಬ್ಬರಾಗಿರುತ್ತಾರೆ. ವ್ಯಕ್ತಿಯೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು ಎಂದರೆ ಅವರ ಅನುಕೂಲಕ್ಕೆ ತಕ್ಕಂತೆ ನಮ್ಮ ವರ್ತನೆಯೂ ಇರಬೇಕು ಎಂದು ಬಯಸುತ್ತಾರೆ. ಅಲ್ಲದೆ ಒಬ್ಬ ವ್ಯಕ್ತಿಯನ್ನು ನಾವು ಪ್ರೀತಿಸುತ್ತೇವೆ ಎಂದರೆ ಅವರಿಗೆ ನಮ್ಮಿಂದ ಯಾವುದೇ ನೋವು ಅಥವಾ ಕಷ್ಟ ಉಂಟಾಗಬಾರದು ಎಂದು ಬಯಸುತ್ತಾರೆ. ಇವರು ಸಂಬಂಧ ಹಾಗೂ ತಮ್ಮ ವೃತ್ತಿಯ ವಿಷಯದಲ್ಲಿ ಸಮಾನತೆಯನ್ನು ಅನುಸರಿಸುವುದರಿಂದ ಯಾವುದೇ ಬಗೆಯ ತೊಂದರೆ ಉಂಟಾಗಬಾರದು ಎಂದು ತಿಳಿದಿದ್ದಾರೆ. ಪ್ರೀತಿ ಹಿಂದೆ ಸಾಕಷ್ಟು ಕರ್ತವ್ಯಗಳು ಹಾಗೂ ಜವಾಬ್ದಾರಿಯು ಅಡಗಿರುತ್ತದೆ ಎಂದು ಇವರು ನಂಬಿರುತ್ತಾರೆ. ಹಾಗಾಗಿಯೇ ಮನಸ್ಸು ಬಯಸಿದ ತಕ್ಷಣ ಅದಕ್ಕಾಗಿ ಭಾವನೆಯನ್ನು ತೆರೆದಿಡುವುದಿಲ್ಲ ಅಥವಾ ಹೇಳುವುದಿಲ್ಲ.
ವೃಶ್ಚಿಕ
ಇವರು ಒಮ್ಮೆ ತಮ್ಮ ದೃಷ್ಟಿಕೋನಗಳಿಗೆ ಅನುಗುಣವಾಗಿ ಅಥವಾ ತಮ್ಮ ಕಲ್ಪನೆಯಂತೆ ಎಲ್ಲವೂ ಸೂಕ್ತವಾಗಿದೆ ಎಂದಾದರೆ ಮಾತ್ರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇವರು ಹಾಗೆ ತಮ್ಮ ಪ್ರೀತಿಯನ್ನು ಒಮ್ಮೆ ವ್ಯಕ್ತಪಡಿಸಿದ್ದಾರೆ ಎಂದಾದರೆ ಅದನ್ನು ಹೃದಯ ಪೂರ್ಣವಾಗಿ ಸ್ವಾಗತಿಸುತ್ತಾರೆ. ಜೊತೆಗೆ ಅವರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವರು. ಹಾಗಾಗಿಯೇ ತಮ್ಮ ಮನಸ್ಸಿನಲ್ಲಿ ಮೂಡಿದ ಪ್ರೀತಿಯನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ. ವಿಳಂಬವನ್ನು ಅನುಸರಿಸಿದರೂ ತಮ್ಮ ಪ್ರೀತಿಯನ್ನು ಬಹಳ ಪ್ರೀತಿ ಹಾಗೂ ಕಾಳಜಿಯಿಂದ ಪಾಲನೆ ಮಾಡುವರು. ಸಂಬಂಧದ ಬಗ್ಗೆ ಭಾವನೆಯನ್ನು ವ್ಯಕ್ತಪಡಿಸಲು ಸಾಕಷ್ಟು ಸಮಯ ಅಥವಾ ಭಯವನ್ನು ಹೊಂದಿರುತ್ತಾರೆಯಾದರೂ ಹೇಳಿದ ನಂತರ ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುವರು.
ಮಕರ
ಭೂಮಿಯ ಚಿಹ್ನೆಯನ್ನು ಹೊಂದಿರುವಂತೆ ಈ ರಾಶಿಯ ವ್ಯಕ್ತಿಗಳ ವಿಚಾರವು ಪರಿಪೂರ್ಣತೆಯನ್ನು ಆಧರಿಸಿರುತ್ತದೆ. ಇವರು ಮಾಡುವ ಕೆಲಸ ಕಾರ್ಯಗಳು ವಿಸ್ಮಯಕರವಾದ ಫಲಿತಾಂಶವನ್ನು ಪಡೆದುಕೊಳ್ಳುವುದು. ಸ್ಥಿರತೆಯನ್ನು ಅನುಸರಿಸುವ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ಮನಸ್ಸಿಗೆ ಕಂಡ ವಿಷಯವನ್ನು ಅಥವಾ ವಿಚಾರವನ್ನು ತಕ್ಷಣಕ್ಕೆ ವ್ಯಕ್ತಪಡಿಸುವ ವ್ಯಕ್ತಿಗಳಾಗಿರುತ್ತಾರೆ. ಪ್ರೀತಿಯನ್ನು ಹೆಚ್ಚು ಗೌರವ ಹಾಗೂ ಅಗತ್ಯದ ರೀತಿಯಲ್ಲಿ ಭಾವಿಸುತ್ತಾರೆ. ಹಾಗಾಗಿ ಒಮ್ಮೆ ಪ್ರೀತಿಯ ಜೀವನ ನಡೆಸುವ ಮುನ್ನ ಅದರ ಕುರಿತು ಸೂಕ್ತ ತಿಳಿವಳಿಕೆ ಹಾಗೂ ಜವಾಬ್ದಾರಿಯನ್ನು ಅರಿತಿರಬೇಕಾಗುವುದು ಎಂದು ಭಾವಿಸುತ್ತಾರೆ. ಈ ಎಲ್ಲಾ ಸಂಗತಿಗಳಿಗೆ ಅನುಗುಣವಾಗಿಯೇ ತಮ್ಮ ಪ್ರೀತಿಯನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ ಎಂದು ಹೇಳಲಾಗುವುದು.
Most Read:ಕೊನೆಯುಸಿರಿರುವವರೆಗೂ ಸಂಗಾತಿಯೊಂದಿಗೇ ಇರುವ ರಾಶಿಯವರಿವರು
ಮಕರ
ಇವರು ಒಮ್ಮೆ ಸಂಗಾತಿಯ ಆಯ್ಕೆಯನ್ನು ಮಾಡಿಕೊಂಡರೆ ಅಥವಾ ಪ್ರೀತಿಯಲ್ಲಿ ಇಳಿದರೆ ಅದನ್ನು ದೀರ್ಘ ಸಮಯದವರೆಗೆ ಅಥವಾ ಜೀವನ ಪರ್ಯಂತ ಸುಂದರ ರೀತಿಯಲ್ಲಿಯೇ ನಿರ್ವಹಣೆಯನ್ನು ಮಾಡಬೇಕು ಎಂದು ಭಾವಿಸುತ್ತಾರೆ. ಹಾಗಾಗಿ ಇವರು ಮನಸ್ಸು ಬಯಸಿದ ತಕ್ಷಣ ಅದಕ್ಕೆ ಪರಿಹಾರ ಕಂಡುಕೊಳ್ಳುವುದಿಲ್ಲ. ತಮ್ಮ ಜೀವನ ಹಾಗೂ ವರ್ತನೆಗೆ ಸೂಕ್ತ ವ್ಯಕ್ತಿಯೇ ಅಥವಾ ತಮ್ಮ ವಿಚಾರಗಳಿಗೆ ಹೊಂದಾಣಿಕೆಯಾಗುವುದೇ ಎನ್ನುವುದನ್ನು ಅವರು ಮೊದಲು ತುಲನೆ ಮಾಡುತ್ತಾರೆ. ನಂತರ ಆ ವಿಷಯಗಳ ಕುರಿತು ನಿರ್ಣಯಕ್ಕೆ ಬರುವರು. ಸಂಬಂಧದಲ್ಲಿ ದೃಢತೆ ಹಾಗೂ ಪ್ರೀತಿಯು ಸುಂದರವಾಗಿ ಇರಬೇಕು ಎನ್ನುವ ಆಶಯ ಹೆಚ್ಚಾಗಿರುವುದರಿಂದ ಇವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಸಾಕಷ್ಟು ಭಯ ಹಾಗೂ ಹಿಂಜರಿಕೆಗೆ ಒಳಗಾಗುವರು.
ಕುಂಭ
ಈ ರಾಶಿಯ ವ್ಯಕ್ತಿಗಳು ಅತ್ಯಂತ ಮುಕ್ತ ಮನಸ್ಸಿನ ಅಥವಾ ಮನೋಭಾವದ ರಾಶಿಚಕ್ರದವರು ಎಂದು ಹೇಳಲಾಗುವುದು. ಇವರು ಪ್ರತಿಯೊಂದು ವಿಷಯ ಹಾಗೂ ಕೆಲಸಗಳಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಅದು ಅವರ ನಿಕಟ ಸಂಬಂಧಗಳ ಮೇಲೂ ಪ್ರಭಾವ ಬೀರುವುದು. ಇವರು ಡೇಟಿಂಗ್ ವಿಷಯದಲ್ಲಿ ಅಥವಾ ಸಂಬಂಧಗಳ ವಿಷಯ ಎದುರಾದಾಗ ಬಹುಬೇಗ ತಮ್ಮ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಇವರು ಪ್ರೀತಿಯ ವಿಷಯದಲ್ಲಿ ಕೆಲವೊಮ್ಮೆ ಸಾಂಪ್ರದಾಯಿಕ ಭಾವನೆಯನ್ನು ಹೊಂದಿರದೆ ಇರಬಹುದು ಅಥವಾ ತಮ್ಮ ಮನಸ್ಸಿನಲ್ಲಿ ಇರುವ ಪ್ರೀತಿಯ ವಿಷಯವನ್ನು ಹೇಳಲು ಬಹಳ ಸಮಯ ತೆಗೆದುಕೊಳ್ಳಬಹುದು. ಹಾಗಾಂತ ಇವರು ಪ್ರೀತಿ ಅಥವಾ ಸಂಬಂಧಗಳ ವಿರೋಧಿಸುವ ವ್ಯಕ್ತಿ ಎಂದರ್ಥವಲ್ಲ.
ಕುಂಭ
ಇವರ ಕಲ್ಪನೆಗೆ ಅಥವಾ ಆಸೆಗೆ ಅನುಗುಣವಾಗಿ ಪಾಲುದಾರರನ್ನು ಅಥವಾ ಪ್ರೇಮಿಯನ್ನು ಪಡೆದುಕೊಂಡ ಬಳಿಕ ಬದ್ಧತೆಯನ್ನು ಅನುಸರಿಸುತ್ತಾರೆ. ಆದರೆ ಅದು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವುದು ಎಂದು ಹೇಳಲಾಗುವುದು. ಆಗ ಅವರು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಗುವುದು ಎಂದು ಭಾವಿಸುತ್ತಾರೆ. ಅವುಗಳಿಗೆ ಸಿದ್ಧತೆಯ ಮನಃಸ್ಥಿತಿ ಉಂಟಾದಾಗ ಅವರು ಪ್ರೀತಿಯನ್ನು ಸುಂದರವಾಗಿ ವ್ಯಕ್ತಪಡಿಸುವರು. ಈ ವಿಷಯಗಳನ್ನು ಅರಿಯದ ಅವರ ಸಂಗಾತಿಗೆ ಅಥವಾ ಪಾಲುದಾರರಿಗೆ ಕೆಲವೊಮ್ಮೆ ಹತಾಶೆ ಅಥವಾ ನೋವುಂಟಾಗಬಹುದು.
ಕುಂಭ
ಇವರು ಯಾರೂ ಊಹಿಸದ ರೀತಿಯಲ್ಲಿ ಚಿಂತನೆ ಹಾಗೂ ಬದುಕಿನ ಪಥವನ್ನು ಅನುಸರಿಸುವುದರಿಂದ ಕೆಲವು ಗೊಂದಲಗಳು ಕಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೆಚ್ಚು ಸಾಂಪ್ರದಾಯಿಕ ರೀತಿಯಲ್ಲಿ ಸಂಬಂಧಗಳು ಸುಂದರವಾಗಿ ಇರಬೇಕು ಎಂದು ಬಯಸುವ ವ್ಯಕ್ತಿಗಳು ಇವರು ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ವ್ಯಕ್ತಿಯ ಹವ್ಯಾಸ ಹಾಗೂ ಆಸಕ್ತಿಯನ್ನು ತಿಳಿದುಕೊಳ್ಳಲು ಬಯಸುವರು. ಅವರ ಮನಃಸ್ಥಿತಿಗೆ ಅಥವಾ ಆಸಕ್ತಿಗೆ ಅನುಗಣವಾಗಿದ್ದಾರೆ ಎಂದಾಗ ಅವರ ಪ್ರೀತಿಯನ್ನು ವಿಳಂಬವಾಗಿಯೇ ವ್ಯಕ್ತಪಡಿಸುವರು.