For Quick Alerts
ALLOW NOTIFICATIONS  
For Daily Alerts

ಯಾವ ರಾಶಿಚಕ್ರದವರು ಹೆಚ್ಚು ಪ್ರಾಯೋಗಿಕವಾಗಿ ಆಧ್ಯಾತ್ಮಿಕ ಚಿಂತನೆ ನಡೆಸುತ್ತಾರೆ ನೋಡಿ...

|

ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಚಾರಗಳು ಎಂದರೆ ಅದು ವಿಶಾಲವಾದ ವ್ಯಾಪ್ತಿಯನ್ನು ಪಡೆದುಕೊಂಡಿದೆ. ಅಲ್ಲಿ ನಮ್ಮ ಊಹೆಗೂ ಮೀರಿದ ವಿಚಾರಗಳಿರುತ್ತವೆ. ಅದನ್ನು ತಿಳಿದುಕೊಳ್ಳುವುದು ಹಾಗೂ ಅದರಂತೆಯೇ ನಡೆದುಕೊಳ್ಳುವುದು ಎಂದರೆ ಒಂದು ಸಾಧನೆ. ಬಹುತೇಕ ಜನರು ವಾಸ್ತವ ಹಾಗೂ ಆಧುನಿಕತೆಯ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಸಂಗತಿಗಳನ್ನು ಮೂಡ ನಂಬಿಕೆ ಅಥವಾ ಅನಗತ್ಯ ವಿಚಾರ ಎಂದು ಭಾವಿಸಬಹುದು. ಆದರೆ ನಮ್ಮ ದೃಷ್ಟಿಕೋನಕ್ಕೆ ನಿಲುಕದ ವಿಶೇಷ ಶಕ್ತಿ ಹಾಗೂ ಸಂಗತಿಗಳು ನಮ್ಮೊಡನೆ ಇರುತ್ತದೆ ಎನ್ನುವುದು ಸತ್ಯ.

Zodiac Signs Ranked From Spiritual To Practical

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ರಾಶಿಚಕ್ರ ಹಾಗೂ ಗ್ರಹಗತಿಗಳ ಪ್ರಭಾವದ ಆಧಾರದ ಮೇಲೆ ಆಧ್ಯಾತ್ಮಿಕ ಮತ್ತು ಆಧುನಿಕ ಚಿಂತನೆಯ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ಕೆಲವು ರಾಶಿಚಕ್ರದವರಲ್ಲಿ ನೈಸರ್ಗಿಕವಾಗಿಯೇ ಆಧ್ಯಾತ್ಮಿಕ ಶಕ್ತಿ ಹಾಗೂ ಚಿಂತನೆಗಳು ಅಡಕವಾಗಿರುತ್ತವೆ. ಅವರು ಪ್ರಾಯೋಗಿಕವಾಗಿ ನಡೆಯುವ ಸಂಗತಿಗಳನ್ನು ಮೊದಲೆ ಅಂದಾಜಿಸುತ್ತಾರೆ. ಜೊತೆಗೆ ದೈವಶಕ್ತಿ ಹಾಗೂ ಸಕಾರಾತ್ಮಕ ಸಂಗತಿಗಳ ಕಡೆಗೆ ಹೆಚ್ಚು ನಂಬಿಕೆ ಹೊಂದಿರುತ್ತಾರೆ. ಕೆಲವು ರಾಶಿಚಕ್ರದವರು ಕ್ರಮಾಂಕದ ರೀತಿಯಲ್ಲಿ ಹೇಗೆ ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಹಾಗೂ ಚಿಂತನೆ ನಡೆಸುತ್ತಾರೆ ಎನ್ನುವುದನ್ನು ತಿಳಿಯಲು ಮುಂದಿರುವ ಲೇಖನದ ವಿವರಣೆಯನ್ನು ಪರಿಶೀಲಿಸಿ.

ಮೀನ

ಮೀನ

ಬ್ರಹ್ಮಾಂಡದ ಶಕ್ತಿ ಇವರೊಳಗೆ ಇರುತ್ತದೆ ಎಂದು ಹೇಳಬಹುದು. ಸಾಮನ್ಯವಾಗಿ ಯಾರಿಗೂ ಕಾಣದ, ಕೇಳದ ಹಾಗೂ ನೋಡದ ಸಂಗತಿಗಳನ್ನು ತಿಳಿದುಕೊಳ್ಳುವ ಮತ್ತು ಅದನ್ನು ಊಹಿಸುವಂತಹ ಶಕ್ತಿಯನ್ನು ಹೊಂದಿರುತ್ತಾರೆ. ಇವರು ವಿಷಯಗಳ ಕುರಿತು ಆಳವಾದ ಚಿಂತನೆ ನಡೆಸುತ್ತಾರೆ. ಬಾಹ್ಯ ಪ್ರದರ್ಶನಗಳ ಬಗ್ಗೆ ಕೊಂಚವೂ ಕಾಳಜಿ ನೀಡುವುದಿಲ್ಲ. ಇವರಿಗೆ ಪ್ರಾಯೋಗಿಕವಾಗಿ ಉತ್ತಮ ಬಟ್ಟೆ ಧರಿಸುವುದು ಪ್ರದರ್ಶನ ಕೈಗೊಳ್ಳುವುದರಲ್ಲಿ ಆಸಕ್ತಿ ಹೊಂದಿರುವುದಿಲ್ಲ.

ಧನು

ಧನು

ಇವರು ವಿಷಯಗಳ ಆಳವನ್ನು ಅರಿಯಲು ಪ್ರಯತ್ನಿಸುವರು. ಇವರು ಅನಗತ್ಯ ವಿಷಯಗಳ ಬಗ್ಗೆ ಹೆಚ್ಚು ಚಿಂತನೆ ನಡೆಸುವುದಿಲ್ಲ. ಇವರು ಯಾವಾಗಲೂ ದೊಡ್ಡ ಸಂಗತಿಗಳನ್ನು ನೋಡಬಹುದು. ಇವರು ವಿಷಯಗಳನ್ನು ಪ್ರಾಯೋಗಿಕವಾಗಿ ಸ್ವೀಕರಿಸುವುದರ ಬದಲು ಅದೃಷ್ಟಕ್ಕೆ ಬಿಡುವರು. ತಮ್ಮ ಏಳುಬೀಳುಗಳೆಲ್ಲವೂ ನಮ್ಮ ಅದೃಷ್ಟದಿಂದ ಆಗುವುದು. ಎಲ್ಲವೂ ಬ್ರಹ್ಮಾಂಡದಲ್ಲಿ ಉಂಟಾಗುವ ಬದಲಾವಣೆ ಎಂದು ಚಿಂತಿಸುವರು.

ವೃಶ್ಚಿಕ

ವೃಶ್ಚಿಕ

ಇವರು ಮೂರನೇ ದೃಷ್ಟಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಜೀವನ ಚಿಕ್ಕದಾಗಿರಬಹುದು. ಆದರೆ ಮರಣದ ನಂತರವೂ ಬದುಕು ಶಾಶ್ವತವಾಗಿರುತ್ತದೆ ಎಂದು ಭಾವಿಸುವರು. ಹೆಚ್ಚಾಗಿ ಏಕಾಂಗಿಯಾಗಿರಲು ಬಯಸುವ ವ್ಯಕ್ತಿಗಳು ಇವರಾಗಿರುತ್ತಾರೆ ಎನ್ನಬಹುದು. ಎಲ್ಲಾ ಸಂಗತಿಗಳು ಒಂದಕ್ಕೊಂದು ಸಂಬಂಧವನ್ನು ಪಡೆದುಕೊಂಡಿರುತ್ತವೆ ಎನ್ನುವ ಭಾವನೆಯನ್ನು ತಳೆದಿರುತ್ತಾರೆ.

Most Read: ಚಿಕನ್- ಮಟನ್‌ಗಿಂತಲೂ ಇಂತಹ ಸಸ್ಯಾಹಾರಿ ಆಹಾರಗಳು ತುಂಬಾನೇ ಆರೋಗ್ಯಕಾರಿ

ಕರ್ಕ

ಕರ್ಕ

ಇವರು ಒಬ್ಬ ಕನಸುಗಾರರು. ಇವರು ಒಬ್ಬ ಕವಿ, ಲೇಖಕ, ಚಿತ್ರಕಾರ, ಗಾಯಕರಿಗಿಂತಲೂ ಮೇಲು. ಹೋರಾಟ ಮಾಡುವ ಬದಲಿಗೆ ಪ್ರೇಮಿಯಾಗಿ ಇರಲು ಬಯಸುವ ವ್ಯಕ್ತಿಗಳು. ಇವರು ಅತ್ಯಂತ ಶುದ್ಧ ಮನಸ್ಸನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಎಲ್ಲವನ್ನೂ ದೇವರು ಮಾಡುವುದಿಲ್ಲ ಎಂದು ಅಂದುಕೊಳ್ಳುತ್ತಾರೆ.

ಕುಂಭ

ಕುಂಭ

ಇವರು ಆಧ್ಯಾತ್ಮಿಕವಾಗಿ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಅದನ್ನು ಗಮನವಿಟ್ಟು ಅರ್ಥೈಸಿಕೊಳ್ಳುವುದರಲ್ಲಿಯೇ ಇವರು ತಲ್ಲೀನರಾಗಿರುತ್ತಾರೆ. ಇವರು ದೇವರನ್ನು ನಂಬುವರು. ಆದರೆ ದೇವರಿಗೆ ನಿಮ್ಮ ಸಹಾಯದ ಅಗತ್ಯವಿಲ್ಲ. ಅಂತೆಯೇ ದೇವರು ಸಹ ತಮ್ಮ ಸಮಸ್ಯೆಗಳನ್ನು ಆಲಿಸುವಲ್ಲಿ ಯಾವುದೇ ಆಸಕ್ತಿಯನ್ನು ಹೊಂದಿಲ್ಲ ಎಂದು ಭಾವಿಸುತ್ತಾರೆ.

ಸಿಂಹ

ಸಿಂಹ

ಬ್ರಹ್ಮಾಂಡವು ಸುಮ್ಮ ಸುಮ್ಮನೆ ಹುಟ್ಟಿಕೊಳ್ಳುವುದಿಲ್ಲ ಎಂದು ಭಾವಿಸುವ ನಾಸ್ತಿಕರು ಇವರು ಎನ್ನಬಹುದು. ಎರಡು ಸಾವಿರ ವರ್ಷಗಳ ಹಿಂದೆ ನಡೆದ ಪುರಾಣ ಸಂಗತಿಗಳು ಒಂದು ತಮಾಷೆಯ ಸಂಗತಿ ಎಂದು ಭಾವಿಸುತ್ತಾರೆ. ಇವರು ಕಷ್ಟದಲ್ಲಿರುವಾಗ ದೇವರ ಪ್ರಾರ್ಥನೆಯನ್ನು ಗೈಯುವರು. ದೇವರ ಅಗತ್ಯವಿದ್ದಾಗ ಮಾತ್ರ ದೇವರನ್ನು ನೆನೆಯುವ ವ್ಯಕ್ತಿಗಳಾಗಿರುತ್ತೀರಿ. ಮರಣಾನಂತರ ಜೀವನದಲ್ಲಿ ಆಧ್ಯಾತ್ಮಿಕವಾಗಿರಲು ಸಾಕಷ್ಟು ಸಮಯಗಳಿರುತ್ತವೆ ಎಂದು ಭಾವಿಸುವ ವ್ಯಕ್ತಿಗಳು ಇವರಾಗಿರುತ್ತಾರೆ. ನಾವು ದುಡ್ಡು ಕೊಟ್ಟರಷ್ಟೆ ಊಟ ನಮ್ಮ ಮೇಜಿನ ಮೇಲೆ ಬಂದು ಬೀಳುವುದು ಎಂದು ಭಾವಿಸುತ್ತಾರೆ.

ಕನ್ಯಾ

ಕನ್ಯಾ

ಇವರು ಅರ್ಧ ಆಧ್ಯಾತ್ಮಿಕ ವಿಚಾರದಲ್ಲಿ ಹಾಗೂ ಇನ್ನರ್ಧ ಆಧುನಿಕ ಸಂಗತಿಯಲ್ಲಿ ನಂಬಿಕೆಯನ್ನು ಹೊಂದಿರುವ ವ್ಯಕ್ತಿಗಳು ಎನ್ನಬಹುದು. ಆಧ್ಯಾತ್ಮಿಕ ವಿಷಯಗಳನ್ನು ಅನ್ವೇಷಿಸಲು ಬಯಸುತ್ತೀರಾದರೂ ಐದು ನಿಮಿಷದಲ್ಲಿ ಮನಸ್ಸು ಬದಲಾದ ಚಿಂತನೆಗೆ ಒಳಗಾಗಿರುವುದು. ಹಾಗಾಗಿ ಇವರು ಹೆಚ್ಚು ಆಂತರಿಕ ಜಾಗೃತಿಯನ್ನು ಹೊಂದಿರುತ್ತಾರೆ.

Most Read: ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಈ ವರ್ಷದ ನವರಾತ್ರಿಯಿಂದ ಎಲ್ಲರಿಗೂ ಶುಭವಾಗಲಿದೆ

ತುಲಾ

ತುಲಾ

ಮೇಲ್ನೋಟಕ್ಕೆ ಇವರು ನ್ಯಾಯದ ಮಾಪಕವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ನ್ಯಾಯ ಎನ್ನುವುದು ಸೇಡು ತೀರಿಸಿಕೊಳ್ಳಲು ಒಂದು ಒಳ್ಳೆಯ ಪದ ಎಂದು ಭಾವಿಸುವರು. ಇವರು ದೇವರೊಂದಿಗೆ ದೈವಿಕ ಸಂಬಂಧವನ್ನು ಹೊಂದಿರುತ್ತಾರೆ ಆದರೆ ಇತರರಂತೆ ಭಿನ್ನವಾದ ರೀತಿಯಲ್ಲಿರುತ್ತದೆ. ಅದನ್ನು ಜಗತ್ತಿಗೆ ತೋರಿಸಲು ನಿಮಗೆ ಸಾಧ್ಯವಾಗದು. ಅಲ್ಲದೆ ಅದರ ಬಗ್ಗೆ ಕೇಳಲು ಯಾರೂ ಬಯಸುವುದಿಲ್ಲ.

ವೃಷಭ

ವೃಷಭ

ಇವರು ನಟನಾ ಜಗತ್ತಿನಲ್ಲಿ ಇರುವುದಕ್ಕಿಂತ ವಾಸ್ತವದ ಜಗತ್ತಿನಲ್ಲಿ ಬದುಕಲು ಬಯಸುತ್ತೀರಿ. ಇವರು ಸಾಕ್ಷಾತ್ಕಾರಕ್ಕಿಂತ ಹೆಚ್ಚಾಗಿ ಪರಾಕಾಷ್ಠೆಯನ್ನು ಹೊಂದಿರುತ್ತಾರೆ. ಇವರು ಕಲ್ಪನೆಯ ಲೋಕದಲ್ಲಿ ಇರುವುದಕ್ಕಿಂತ ವಾಸ್ತವವಾಗಿ ಬದುಕಲು ಬಯಸುವರು. ಎಲ್ಲರೂ ಆಕಾಶದ ಕಡೆಗೆ ಕಣ್ಣನ್ನು ಹಾಯಿಸುತ್ತಿದ್ದರೆ ಇವರು ಬಹುಮಾನದ ಕಡೆಗೆ ದೃಷ್ಟಿಯನ್ನು ಹಾಯಿಸಿರುತ್ತಾರೆ.

ಮೇಷ

ಮೇಷ

ಆಧ್ಯಾತ್ಮಿಕರಾಗಿರಲು ಇವರೊಂದು ಬಗೆಯ ಅಸಹ್ಯವನ್ನು ವ್ಯಕ್ತಪಡಿಸುವರು. ಇವರು ದೇವಸ್ಥಾನದಲ್ಲಿ ಶಾಂತವಾಗಿರುವುದಕ್ಕಿಂತ ದೊಡ್ಡದಾಗಿ ನಗಲು ಬಯಸುವರು. ಇವರು ದೇವರ ಇರುವಿಕೆಯ ಮೇಲೆ ಯಾವುದೇ ನಂಬಿಕೆಯನ್ನು ಹೊಂದಿಲ್ಲ ಎನ್ನಬಹುದು. ದೇವರು ಇದ್ದರೆ ನಮ್ಮ ಅಗತ್ಯಗಳನ್ನು ಆಶೀರ್ವದಿಸಲಿ ಎಂದು ಹೇಳುತ್ತಾರೆ. ನೀವು ನರಕಕ್ಕೆ ಹೋಗುವಿರಿ ಎಂದರೆ ಅದಕ್ಕೂ ನಾನು ಸಿದ್ಧನಿದ್ದೇನೆ ಎನ್ನುವರು.

ಮಕರ

ಮಕರ

ಇವರು ದೈಹಿಕ ಹಾಗೂ ವಾಸ್ತವಿಕ ಚಿಂತನೆಗಳಿಗೆ ಹೆಚ್ಚು ಮಹತ್ವವನ್ನು ನೀಡುವರು. ಇವರು ತಮ್ಮ ಪಾದಗಳನ್ನು ಕ್ಷಮಿಸುವುದಕ್ಕಿಂತ ಕೈಗಳನ್ನು ಕೊಳಕು ಮಾಡಿಕೊಳ್ಳಲು ಬಯಸುತ್ತಾರೆ. ಆಧ್ಯಾತ್ಮಿಕ ಸಂಗತಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವುದಿಲ್ಲ. ಇವರು ವಾಸ್ತವ ಹಾಗೂ ನೇರ ಸಂಗತಿಯಲ್ಲಿ ಆಸಕ್ತರಾಗಿರುತ್ತಾರೆ.

Most Read: ಜನರನ್ನು ಹೆದರಿಸಬಲ್ಲ ಗುಣಲಕ್ಷಣವನ್ನು ಹೊಂದಿರುವ 4 ರಾಶಿಚಕ್ರದವರು

ಮಿಥುನ

ಮಿಥುನ

ಇವರು ಅತ್ಯಂತ ಪ್ರಾಯೋಗಿಕ ವ್ಯಕ್ತಿಗಳಾಗಿರುತ್ತಾರೆ. ಇವರು ಆಂತರಿಕ ವಿಚಾರಗಳಿಗಿಂತ ಹೆಚ್ಚಾಗಿ ಬಾಹ್ಯ ಸಂಗತಿಗಳ ಮೇಲೆ ಕೇಂದ್ರೀಕರಿಸುತ್ತಾರೆ. ಕಣ್ಣು ಮುಚ್ಚಿರುವಾಗಲೂ ಕಣ್ಣು ಏನನ್ನು ನೋಡಲು ಬಯಸುವುದು ಎನ್ನುವುದರ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತದೆ. ಕಾಣದ ಮತ್ತು ತಿಳಿಯದ ವಿಷಯಗಳಿಗೆ ಸಮಯವನ್ನು ವ್ಯಯಮಾಡುವ ಬದಲು ನೋಟಕ್ಕೆ ಸಿಲುಕುವ ಸಂಗತಿಯ ಬಗ್ಗೆ ಸಮಯ ವ್ಯಯಿಸುವುದು ಉತ್ತಮ ಎಂದು ಭಾವಿಸುತ್ತಾರೆ.

English summary

Zodiac Signs Ranked From Spiritual To Practical

The power of the universe flows in and through you. You can see the things that can’t be seen and can hear the things that can’t be heard. You don’t care about superficial appearances, only the deeper meaning. You are tuned in to the internal and the eternal rather than the external and the temporary. Your only problem getting dressed in the morning is fitting your clothes over your giant angel wings.
Story first published: Friday, October 12, 2018, 17:43 [IST]
X
Desktop Bottom Promotion