Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಎಲ್ಲಾ 12 ರಾಶಿಯವರ 'ಜೀವನದ ನಿಜವಾದ ಗುರಿ' ಇಲ್ಲಿದೆ ನೋಡಿ
ಭೂಮಿ ಮೇಲೆ ಹುಟ್ಟಿರುವ ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿಯೆನ್ನುವುದು ಇರುತ್ತದೆ. ಪ್ರತಿಯೊಬ್ಬರು ತಮ್ಮ ಜೀವನದ ಗುರಿ ಸಾಧಿಸಲು ಪ್ರಯತ್ನಿಸುವರು. ಕೆಲವರು ಇದರಲ್ಲಿ ಯಶಸ್ವಿಯಾದರೆ, ಇನ್ನು ಕೆಲವರು ವಿಫಲರಾಗುವರು. ಆಧ್ಯಾತ್ಮಿಕ ಗುರುಗಳು ಹೇಳುವ ಪ್ರಕಾರ ಜೀವನ ಗುರಿ ಅಂತಿಮವಾಗಿ ಮುಕ್ತಿ ಪಡೆಯುವುದು. ಆದರೆ ಜ್ಯೋತಿಷಗಳ ಪ್ರಕಾರ ಪ್ರತಿಯೊಂದು ರಾಶಿಯವರು ಒಂದು ನಿರ್ದಿಷ್ಟವಾದ ಗುರಿ ಇಟ್ಟುಕೊಂಡಿರುವರು.

ಪ್ರತಿಯೊಂದು ರಾಶಿಗೆ ಕೂಡ ಒಂದು ಮೂಲ ಅಂಶವೆನ್ನುವುದು ಇರುವುದು. ಗಾಳಿ, ನೀರು, ಬೆಂಕಿ ಮತ್ತು ಭೂಮಿ ಇದು ನಾಲ್ಕು ಅಂಶಗಳಾಗಿವೆ. ಇದು ನಮ್ಮ ರಾಶಿಗಳ ಮೇಲೆ ತುಂಬಾ ಪರಿಣಾಮ ಬೀರುವುದು. ನಿಮ್ಮ ರಾಶಿಗೆ ಅನುಗುಣವಾಗಿ ಜೀವನದ ನಿಜವಾದ ಗುರಿ ಏನು ಎಂದು ತಿಳಿಯಿರಿ.

ಮೇಷ
ಬೆಂಕಿಯ ಚಿಹ್ನೆಯಾಗಿರುವ ಮೇಷ ರಾಶಿಯು ಪ್ರತಿಯೊಂದು ಕಡೆ ಹಾಗೂ ಪ್ರತಿಯೊಂದರಲ್ಲೂ ಪ್ರಗತಿಯನ್ನು ಗುರಿಯಾಗಿಟ್ಟುಕೊಂಡಿರುವುದು. ಅವರಿಗೆ ಸಾಧ್ಯವಿಲ್ಲವೆಂದು ನೀವು ಹೇಳಿ ಮತ್ತು ಅದನ್ನು ಅವರು ಸಾಧಿಸಿ ತೋರಿಸುವರು. ಇದು ಯಾವುದೇ ಯೋಜನೆ, ಜೀವನ ಅಥವಾ ಅವರು ಇಟ್ಟುಕೊಂಡಿರುವ ಗುರಿಯಾಗಿರಬಹುದು. ಇವರು ಗುರಿ ಸಾಧನೆಗಾಗಿ ತುಂಬಾ ಕಠಿಣ ಶ್ರಮ ವಹಿಸುವರು. ಸಮಯವು ಬಂದಾಗ ನಡೆಯುತ್ತದೆ ಎನ್ನುವುದನ್ನು ಇವರು ಕಾದು ಕೂರಲ್ಲ.

ವೃಷಭ
ವೃಷಭ ರಾಶಿಯು ಭೂಮಿಗೆ ಸಂಬಂಧಪಟ್ಟದ್ದು. ಇವರು ಜೀವನದಲ್ಲಿ ಪ್ರತಿಯೊಂದನ್ನು ನಿರ್ಮಿಸಲು ಪ್ರಯತ್ನಿಸುವರು. ಸಂಬಂಧದ ವಿಚಾರಕ್ಕೆ ಬಂದರೆ ಇವರು ತಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವು ತುಂಬಾ ಶಾಂತಿಯುತ ಮತ್ತು ಆರಾಮದಾಯಕವಾಗಿರಬೇಕೆಂದು ಬಯಸುವರು. ಇವರಿಗೆ ಸಮಸ್ಯೆಗಳು ಬರುವುದು ಇಷ್ಟವಿಲ್ಲ ಮತ್ತು ಇವರ ಶಾಂತಿಗೆ ಅದು ಭಂಗ ತಂದರೆ ಸಮಸ್ಯೆಯನ್ನು ಕಿತ್ತು ಹಾಕುವರು. ಹಣ ಹಾಗೂ ಆಸ್ತಿಯನ್ನು ವ್ಯಯಿಸುವ ಬದಲು ಅವರನ್ನು ಕ್ರೂಢೀಕರಿಸಲು ಪ್ರಯತ್ನಿಸುವರು. ಜೀವನದ ಪ್ರತಿಯೊಂದು ವಿಭಾಗದಲ್ಲೂ ಸ್ಥಿರತೆ ಬಯಸುವರು.

ಮಿಥುನ
ಮಿಥುನ ರಾಶಿಯ ವಾಯುವಿಗೆ ಸಂಬಂಧಿಸಿದ್ದಾಗಿದೆ. ಮಿಥುನ ರಾಶಿಯವರು ಹೆಚ್ಚು ಮಾತನಾಡಲ್ಲ. ಆದರೆ ನಿಜವೇನೆಂದರೆ ಇವರು ವೀಕ್ಷಕರಂತೆಯೇ ಒಳ್ಳೆಯ ಸಂವಹನಕಾರರು ಆಗಿರುವರು. ಇವರು ಮಾತನಾಡಲು ಆರಂಭಿಸಿದರೆ ಸುತ್ತಲಿನ ಜನರ ಹೃದಯ ಗೆಲ್ಲುವರು. ಸ್ನೇಹಿತರನ್ನು ಟ್ರೋಲ್ ಮಾಡುವರು ಮತ್ತು ಗಮನಸೆಳೆಯಲು ತಮಾಷೆಯ ಕಮೆಂಟ್ ಮಾಡುವರು. ಸಂತೋಷ ಹಾಗೂ ತಮಾಷೆಯ ಜೀವನವೇ ಅವರ ಗುರಿ.

ಕರ್ಕಾಟಕ
ಈ ರಾಶಿಯವರು ಜಲಕ್ಕೆ ಸಂಬಂಧಿಸಿದ್ದಾಗಿದೆ. ಈ ರಾಶಿಯವರು ಸಂಪೂರ್ಣವಾಗಿ ಭಾವನಾತ್ಮಕವಾಗಿರುವರು. ಇವರ ಭುಜಕ್ಕೆ ಹೆಗಲಿಟ್ಟು ಅತ್ತರೆ ಆಗ ನಿಮ್ಮನ್ನು ಇವರು ಉತ್ತಮವಾಗಿ ಸಂತೈಸುವರು. ಕರ್ಕಾಟಕ ರಾಶಿಯವರು ತುಂಬಾ ಸಹಾನುಭೂತಿಗಳು ಮತ್ತು ಪ್ರೀತಿ ಹರಡುವರು.

ಸಿಂಹ
ಅಗ್ನಿಗೆ ಸಂಬಂಧಿಸಿದ ರಾಶಿಯಾಗಿರುವ ಸಿಂಹ ರಾಶಿಯವರಲ್ಲಿ ಇರುವಂತಹ ಚರಿಷ್ಮಾವು ಬೇರೆ ಯಾವುದೇ ರಾಶಿಯವರಲ್ಲಿ ಕಂಡುಬರಲ್ಲ. ಇವರಲ್ಲಿ ನಾಯಕತ್ವ ಗುಣಗಳು ಇವೆ ಮತ್ತು ಜನರನ್ನು ಪ್ರಯತ್ನಿಸುವಂತೆ ಉತ್ತೇಜಿಸುವರು. ಇವರ ಹೃದಯದಲ್ಲಿರುವ ಕಿಡಿಯನ್ನು ಇವರು ಅರ್ಥ ಮಾಡಿಕೊಳ್ಳುವರು ಮತ್ತು ವಿಶ್ವಕ್ಕೆ ರೋಲ್ ಮಾಡೆಲ್ ಆಗಲು ಬಯಸುವರು. ವಿಶ್ವವನ್ನು ಇವರು ತುಂಬಾ ಧೈರ್ಯದ ಸ್ಥಳವಾಗಿಸುವ ಗುರಿಯನ್ನಿಡುವರು.

ಕನ್ಯಾ
ಕನ್ಯಾ ರಾಶಿಯವರು ಜೀವನದಲ್ಲಿ ಎಲ್ಲವನ್ನು ಸುಧಾರಣೆಗೆ ಪ್ರಯತ್ನಿಸುವರು. ಇವರು ಯಾವುದೇ ರೀತಿಯ ಅಡೆರಡೆ ಅಥವಾ ಅಪರಿಪೂರ್ಣತೆ ಬಯಸುವುದಿಲ್ಲ. ಇವರು ಎಲ್ಲಾ ಕಡೆ ಶಾಂತಿ ಹಾಗೂ ಪರಿಪೂರ್ಣತೆ ಬಯಸುವರು. ಹೇಗೆ ಉತ್ತಮಪಡಿಸಬಹುದು ಎಂದು ಯಾವಾಗಲೂ ವಿಶ್ಲೇಷಿಸುತ್ತಾ ಇರುವರು. ಇವರು ಜೀವನದಲ್ಲು ಸುಧಾರಣೆಯಾಗುವುದನ್ನು ಗುರಿಯಾಗಿಟ್ಟುಕೊಂಡಿರುವರು.

ತುಲಾ
ತುಲಾ ರಾಶಿಯವರ ಚಿಹ್ನೆಯೇ ಹೇಳುವಂತೆ ಈ ರಾಶಿಯವರು ಜೀವನದಲ್ಲಿ ಸಮತೋಲ ಕಾಪಾಡಿಕೊಳ್ಳುವರು. ಇವರು ಸಮಯವನ್ನು ನಿರ್ವಹಿಸುವ ಸಾಮರ್ಥ್ಯವು ಅದ್ಭುತವಾಗಿರುವುದು. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಇವರು ಎರಡು ಕಡೆಯಿಂದ ಅಲೆದುತೂಗಿ ನೋಡುವರು. ಇವರು ನ್ಯಾಯ ಮತ್ತು ಪರಿಪೂರ್ಣತೆ ಬಯಸುವರು. ಇದರಿಂದಾಗಿ ಜೀವನದಲ್ಲಿ ಸಮತೋಲನ ಕಾಪಾಡುವರು.

ವೃಶ್ಚಿಕ
ವೃಶ್ಚಿಕ ರಾಶಿಯವರು ತುಂಬಾ ಭಾವೋದ್ರೀಕ್ತ ವ್ಯಕ್ತಿಗಳಾಗಿರುವರು. ಇವರು ತಾವು ಮಾಡುವಂತಹ ಕೆಲಸಕ್ಕೆ ಸಂಪೂರ್ಣ ಶಕ್ತಿ ವಿನಿಯೋಗಿಸುವರು. ಫಲಿತಾಂಶಕ್ಕಾಗಿ ಬದ್ಧತೆ ಬೇಕು, ಯಶಸ್ಸು ಪಡೆಯಲು ಸಮಯ ಹಾಗೂ ಕಠಿಣಪರಿಶ್ರಮ ಅಗತ್ಯವೆಂದು ಇವರು ನಂಬಿರುವರು. ಸಂಬಂಧ ಅಥವಾ ವೃತ್ತಿಯಲ್ಲಿ ಇವರು ಭಾವೋದ್ರೀಕ್ತರಾಗಿಯೇ ಇರುವರು.

ಧನು
ಧನು ರಾಶಿಯವರು ಯಾವಾಗಲೂ ಹೊಸತನ್ನು ಅನ್ವೇಷಿಸಲು ಬಯಸುವರು. ಹೊಸ ವಿಚಾರಗಳನ್ನು ಕಲಿಯಲು, ಹೊಸ ಜನರನ್ನು ಭೇಟಿಯಾಗಲು ಮತ್ತು ಸಂಸ್ಕೃತಿಯನ್ನು ಕಲಿಯಲು ಬಯಸುವರು. ವಿಶ್ವವನ್ನು ಸ್ಫೂರ್ತಿಯುತವಾಗಿ ಮಾಡಲು ಬಯಸುವರು. ಜೀವನದಲ್ಲಿ ಅಡಗಿರುವ ದಾರಿಗಳನ್ನು ಹುಡುಕುವುದು ಇವರ ಗುರಿ.

ಮಕರ
ಮಕರ ರಾಶಿಯವರು ಕಠಿಣಪರಿಶ್ರಮಿ, ನೇರನುಡಿಯ ಮತ್ತು ಬದ್ಧತೆಯವರು. ಇವರು ಜೀವನದಲ್ಲಿ ಸಂತೋಷಕ್ಕಾಗಿ ಕೆಲಸ ಮಾಡಲು ಬಯಸುವರು. ಇವರು ಜೀವನದಲ್ಲಿ ಯಶಸ್ಸನ್ನು ಗುರಿಯಾಗಿಟ್ಟುಕೊಂಡಿರುವರು. ಇವರು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯಲು ಬಯಸುವರು. ತಮ್ಮ ಪ್ರೀತಿಪಾತ್ರರ ಸಂತೋಷವೇ ಇವರ ಜೀವನದ ಗುರಿಯಾಗಿರುವುದು.

ಕುಂಭ
ಕುಂಭ ರಾಶಿಯವರು ನಿಜವಾದ ಮಾನವತವಾದಿಗಳು. ಇವರ ಜೀವನದ ಗುರಿಯು ವಿಶ್ವವನ್ನು ಒಂದು ಒಳ್ಳೆಯ ಕರುಣಾಮಯಿ ಸ್ಥಳವನ್ನಾಗಿಸುವುದು. ಇವರು ಹೆಚ್ಚಿನ ಸಮಯದಲ್ಲಿ ಕರುಣೆಯನ್ನು ತೋರಿಸುವರು. ಕುಂಭ ರಾಶಿಯವರು ಲೋಕೋಪಕಾರದಲ್ಲಿ ತೊಡಗಿರುವರು ಮತ್ತು ವಿಶ್ವವನ್ನು ಶಾಂತಿಧಾಮವನ್ನಾಗಿ ಮಾಡುವುದು ಇವರ ಗುರಿ. ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಿ ನೋವು ನೀಡದೆ ಇರುವುದು ಇವರ ಉದ್ದೇಶ.

ಮೀನ
ಮೀನ ರಾಶಿಯು ಜಲ ರಾಶಿ.ಕರ್ಕಾಟಕ ರಾಶಿಯವರಂತೆ ಇವರು ಸಂಪೂರ್ಣ ಭಾವನಾತ್ಮಕ ವ್ಯಕ್ತಿಗಳು. ಇದನ್ನು ಹೊರತುಪಡಿಸಿ, ಇವರು ತುಂಬಾ ಕ್ರಿಯಾತ್ಮಕವಾಗಿರುವರು. ಇವರು ಅತಿಯಾಗಿ ಮಾತನಾಡಲ್ಲ ಮತ್ತು ವಿವಿಧ ರೀತಿಯ ಕಲೆಗಳಾಗಿರುವ ಸಂಗೀತ, ಕವಿತೆ ಮತ್ತು ಕಲಾಕೃತಿಗಳಲ್ಲಿ ಇವರು ತಮ್ಮ ಭಾವನೆ ವ್ಯಕ್ತಪಡಿಸುವರು. ಹೆಚ್ಚಿನ ಮೀನ ರಾಶಿಯವರು ಇದನ್ನು ತಮ್ಮ ಹವ್ಯಾಸನ್ನಾಗಿಸಿಕೊಂಡಿರುವರು. ತಮ್ಮ ಹವ್ಯಾಸಗಳಿಂದಾಗಿ ಮೀನ ರಾಶಿಯವರು ತುಂಬಾ ಮೌನವಾಗಿರುವರು.



Click it and Unblock the Notifications











