Just In
Don't Miss
- Technology
ಜಿ-ಮೇಲ್ ಬಳಕೆದಾರರಿಗೆ ಹೊಸ ಫಿಚರ್ಸ್ ಪರಿಚಯಿಸಿದ ಗೂಗಲ್!
- Automobiles
ಹೊಸ ಸಿಟಿ ಆರ್ಎಸ್ ಕಾರಿನ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
9-12-2018: ಭಾನುವಾರದ ದಿನ ಭವಿಷ್ಯ
ಆದಿತ್ಯವಾರ ವೇದಗಳ ಭವಿಷ್ಯ ಶಾಸ್ತ್ರ ದಲಿ, ಸೂರ್ಯನು ತನ್ನ ಬಿಸಿ ಮತ್ತು ಒಣಗಿದ ಪ್ರಕೃತಿಯಿಂದಾಗಿ, ಸಣ್ಣ ಪ್ರಮಾಣದ ಮೇಲ್ಫಿಕ್ ಎಂದು ಕರೆಯಲಾಗಿದೆ. ಆತ್ಮ , ಇಚ್ಚಾ-ಶಕ್ತಿ ,ಹೆಸರು , ಕಣ್ಣುಗಳು , ಸಾಮಾನ್ಯ ಶಕ್ತಿ , ಧೈರ್ಯ , ಒಡೆತನ , ತಂದೆ , ಉನ್ನತ ಸ್ಥಾನದಲ್ಲಿರುವವರು ಹಾಗು ಅಧಿಕಾರ ಇವುಗಳನ್ನು ಸೂರ್ಯನು ಪ್ರತಿನಿಧಿಸುತ್ತಾನೆ.
ಎಲ್ಲಾ ರಾಶಿಯಲ್ಲಿಯೂ ಸೂರ್ಯನು 'ಉಚ್ಚ' ಸ್ಥಾನದಲ್ಲಿದ್ದರೆ, ಹೆಚ್ಚು 'ಬಲಶಾಲಿ'ಯಾಗಿ ಇರುತ್ತಾರೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ
ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಮನೆಯ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ನಂತರ ನೀವು ತೀರ್ಮಾನ ಕೈಕೊಂಡಲ್ಲಿ ಎಲ್ಲರೂ ನಿಮ್ಮ ತೀರ್ಮಾನವನ್ನು ಒಪ್ಪುವ ಸಾಧ್ಯತೆ ಇರುತ್ತದೆ. ಆದರೆ ಒಬ್ಬರ ವಿಚಾರ ಮತ್ತೊಬ್ಬರ ಬಳಿ ಹೇಳದಿರಿ. ಸದಾ ಕಾಲವು ನಿಮ್ಮನ್ನು ಜನರು ಮಾತನಾಡಿಸಬೇಕು. ಪ್ರತಿಯೊಂದು ಕ್ರಿಯೆಗೂ ಶಹಾಬಾಸ್‌ಗಿರಿ ಕೊಡಬೇಕೆಂಬ ಮನೋಭೂಮಿಕೆಯಿಂದ ಹೊರಬನ್ನಿ. ಏಕೆಂದರೆ ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸಲು ಶಕ್ಯವಿಲ್ಲ. ನಿಮ್ಮಲ್ಲಿನ ತಪ್ಪನ್ನು ತಿದ್ದುವವರನ್ನು ಗೌರವಿಸಿ.ಸಾಮಾಜಿಕವಾಗಿ ನೀವು ಗುರುತಿಸಲ್ಪಡುವಿರಿ. ನೀವು ಅದ್ಭುತವೂ ವಿಶೇಷವೂ ಆದಂತಹ ಕಾಂತಿಯ ಶಕ್ತಿಯಾಗಿ ಆದರಿಸಲ್ಪಡುವಿರಿ. ಇದು ದೈವವು ನಿಮ್ಮ ಮೇಲೆ ತೋರಿದ ಔದಾರ್ಯವೆಂದು ಭಾವಿಸಿ. ಅಹಂಕಾರ ಪಡದಿರಿ.
9845743807. ಅದೃಷ್ಟ ಸಂಖ್ಯೆ:2

ವೃಷಭ
ನಿಜವಾದ ಅಂತಃಕರಣಶೀಲರಾದ ನೀವು ಪರರ ಕಷ್ಟಕ್ಕೆ ಮರುಗಿ ಸಹಾಯ ನೀಡುವಿರಿ. ಇದರಿಂದ ಜನರು ನಿಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನು ತಾಳುವರು. ನಿಮ್ಮನ್ನು ಗೌರವಿಸಲು ಬಂದ ವ್ಯಕ್ತಿಗಳೊಂದಿಗೆ ಸೌಜನ್ಯದಿಂದ ಮಾತನಾಡಿ.ನಿಮ್ಮಲ್ಲಿ ಅಡಗಿರುವ ಅಪರೂಪವಾದ ಶಕ್ತಿ, ಚೈತನ್ಯಗಳು ಅನ್ಯರನ್ನು ನಿಮ್ಮತ್ತ ಸೆಳೆಯಲು ಸಹಕಾರಿಯಾಗುವುದು. ಅಂತರಂಗದಲ್ಲಿನ ದುಗುಡ, ದುಮ್ಮಾನಗಳನ್ನು ಅದುಮಿಟ್ಟುಕೊಂಡು ಹೊರಜಗತ್ತಿನಲ್ಲಿ ನಗುವಿನ ಮುಖವಾಡವನ್ನು ಧರಿಸುವಿರಿ.ಅಯ್ಯೋ ಪಾಪ ಎಂದರೆ ಆಯುಷ್ಯ ಕಡಿಮೆ ಆಗುವಂತಹ ಸಂದರ್ಭವಿದೆ. ಪರರ ಕಷ್ಟಕ್ಕೆ ಮರುಗಿ ದಾನಶೂರ ಕರ್ಣನಂತೆ ಇದ್ದುದೆಲ್ಲವನ್ನು ಪರರಿಗೆ ಹಂಚುವ ಔದಾರ್ಯದಿಂದ ಕೆಲಕಾಲ ಹಿಂದೆ ಸರಿಯುವುದು ಒಳ್ಳೆಯದು.9845743807
ಅದೃಷ್ಟ ಸಂಖ್ಯೆ:1

ಮಿಥುನ
ನಿಮ್ಮೊಳಗಿನ ಸೂಕ್ಷ ್ಮ ಅಹಂಕಾರದ ಕುರಿತಾಗಿ ಪರಾಮರ್ಶೆಯನ್ನು ಮಾಡಿಕೊಳ್ಳಿ. ಎಲ್ಲಾ ಖಾರಕ್ಕಿಂತ ಅಹಂಕಾರ ಹೆಚ್ಚು ಖಾರ ಎಂಬ ಅನುಭವದ ಮಾತು ನಿಮಗೆ ಬಿಸಿ ಮುಟ್ಟಿಸುವುದು. ಉತ್ತಮರಾದ ಸ್ನೇಹಿತರ ಸಲಹೆಯನ್ನು ಪಡೆಯಿರಿ.ನಂಬಿಕೆಯೆ ದೇವರು. ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ಎಂಬ ದಾಸವಾಣಿಯನ್ನು ನಿಮ್ಮ ವ್ಯಾಪಾರ, ವ್ಯವಹಾರದ ಬಂಡವಾಳ ಮಾಡಿಕೊಳ್ಳಿ. ಹಾಗಾಗಿ ಕೆಲಸಗಾರರನ್ನು ನಂಬಿ. ಮತ್ತು ಅವರೂ ಕೂಡಾ ನಿಮ್ಮನ್ನು ನಂಬುವಂತೆ ಮಾಡಿ. ನಿಮ್ಮ ಪಾಲುಗಾರಿಕೆ ವ್ಯವಹಾರದಲ್ಲಿ ಅತಿ ಹೆಚ್ಚಿನ ಲಾಭಾಂಶವನ್ನು ನಿರೀಕ್ಷಿಸಬಹುದು. ಪಾಲುದಾರರು ನಿಷ್ಠೆಯಿಂದ ಬಂದ ಲಾಭಾಂಶದಲ್ಲಿ ನಿಮ್ಮ ಪಾಲನ್ನು ನೀಡುವರು. ಇದರಿಂದ ಮುಂದಿನ ವ್ಯವಹಾರಗಳು ಸುಗಮವಾಗುವುದು.9845743807
ಅದೃಷ್ಟ ಸಂಖ್ಯೆ:2

ಕಟಕ
ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎನ್ನುವಂತೆ ನಿಮ್ಮ ಮನೆಗೆ ಲಕ್ಷ್ಮೀಯ ಆಗಮನವಾಗುವುದು. ದುಡಿದ ಹಣದಲ್ಲಿ ಸ್ವಲ್ಪ ಭಾಗ ದಾನ ಧರ್ಮ ಮಾಡಿದಲ್ಲಿ ನಿಮಗೂ ನಿಮ್ಮ ಕುಟುಂಬಕ್ಕೂ ಒಳಿತಾಗುವುದು.ಕಚೇರಿ ಕೆಲಸ ಕಾರ್ಯಗಳಲ್ಲಿ ನೀವು ತೋರುವ ಶ್ರದ್ಧೆ ಮತ್ತು ನಿಮ್ಮ ಮೇಲೆ ಮೇಲಧಿಕಾರಿಗಳ ಕೃಪಾಕಟಾಕ್ಷ ಕಂಡು ಇತರೆಯವರು ಅಸೂಯೆ ಪಡುವರು. ನಿಮ್ಮನ್ನು ಮಣಿಸಲೆಂದೆ ನಿಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುವರು. ಈ ಬಗ್ಗೆ ತಲೆಕೆಡಿಸಿಕೊಳ್ಳದಿರಿ.ನಿಮ್ಮ ಮೇಲೆ ನಿಜವಾದ ಅಂತಃಕರಣದಿಂದ ಮಿಡಿಯುವ ಜನರ ಭೇಟಿ ಆಗುವುದು. ಇದರಿಂದ ನಿಮಗೆ ಮಾನಸಿಕ ಧೈರ್ಯ-ಸ್ಥೈರ್ಯ ಬರುವುದು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ಸಾಹ ತೋರುವಿರಿ.9845743807
ಅದೃಷ್ಟ ಸಂಖ್ಯೆ:5

ಸಿಂಹ
ತುಂಬಾ ಎಚ್ಚರಿಕೆಯಿಂದ ಸಂಘಟನೆಯನ್ನು ನಡೆಸಿ. ಇದರ ಮುಂದಾಳತ್ವವನ್ನು ನೀವೇ ವಹಿಸುವುದು ಒಳ್ಳೆಯದು. ಇದರಿಂದ ಜನರು ಸಂತಸಗೊಂಡು ನಿಮ್ಮನ್ನು ಆದರಿಸಿ ಗೌರವ ತೋರುವರು. ಆಹಾರ-ವಿಹಾರದಲ್ಲಿ ನಿಯಮತೆಯನ್ನು ಕಾಪಾಡಿಕೊಳ್ಳಿ. ಕುಟುಂಬದ ಹಿರಿಯ ಸದಸ್ಯರ ನಿರೀಕ್ಷೆಗೆ ವಿರುದ್ಧವಾಗಿ ನಿಮ್ಮ ಜೀವನ ಕ್ರಮವನ್ನು ಅನುಸರಿಸದಿರಿ. ಹೀಗೆ ಮಾಡಿದಲ್ಲಿ ವಿನಾಕಾರಣ ನೀವು ನಿಷ್ಟೂರಕ್ಕೆ ಒಳಗಾಗುವಿರಿ ಮತ್ತು ನಿಮ್ಮ ಬಗ್ಗೆ ಇತರೆಯವರು ತೋರುವ ಗೌರವ ಕಡಿಮೆ ಆಗುವುದು.ಕೆಲಸದ ಬಗೆಗಿನ ಸಂದರ್ಶನವು ಉತ್ತಮ ರೀತಿಯಲ್ಲಿ ಆಗುವುದು. ಸಂದರ್ಶನದ ಫಲಿತಾಂಶವು ನಿಮ್ಮ ಜೀವನದ ದಿಕ್ಕನ್ನೆ ಧನಾತ್ಮಕವಾಗಿ ಬದಲಿಸುವ ಶಕ್ತಿಯನ್ನು ಹೊಂದಿರುತ್ತದೆ. ಸಂತೋಷದ ದಿನವಾಗಿರುತ್ತದೆ.9845743807
ಅದೃಷ್ಟ ಸಂಖ್ಯೆ:2

ಕನ್ಯಾ
ಆರೋಗ್ಯದ ವಿಚಾರದಲ್ಲಿ ತೂಗುಯ್ಯಾಲೆಯ ರೀತಿಯ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವುದು. ಹನುಮಾನ್ ಚಾಲೀಸ್ ಪಠಿಸುವುದು ಒಳ್ಳೆಯದು.
ಕೌಟುಂಬಿಕ ವಲಯದಲ್ಲಿ ಕಿರಿಕಿರಿಯಾಗುವ ವಾದವಿವಾದಗಳನ್ನು ತಪ್ಪಿಸಿಕೊಳ್ಳಲು ತಾಳ್ಮೆ ರೂಢಿಸಿಕೊಂಡರೆ ಒಳ್ಳೆಯದು. ಕ್ರಮಭರಿತ ಅಥವಾ ಶಿಸ್ತುಬದ್ಧ ನಿಮ್ಮ ಜೀವನವು ಇತರರಿಗೆ ಮಾದರಿಯಾಗಿ ನಿಲ್ಲುವುದು.ತಾಳ್ಮೆ ಹಾಗೂ ನಿಮ್ಮ ಸೂಕ್ಷ ್ಮಮತಿಯು ಹೊಸದೇ ಆದ ಅನುಪಮ ಅವಕಾಶವೊಂದನ್ನು ತಂದು ಕೊಡುವುದು. ಇದರಿಂದ ಮನೆಯಲ್ಲಿಯೂ ಮತ್ತು ಹೊರಗಿನ ಸಮಾಜದಲ್ಲಿಯೂ ಹೆಸರನ್ನು ತಂದುಕೊಡುವುದು.9845743807
ಅದೃಷ್ಟ ಸಂಖ್ಯೆ:1

ತುಲಾ
ಲಂಗುಲಗಾಮಿಲ್ಲದ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಕಾರ್ಯೋನ್ಮುಖರಾಗಿ. ಕೂಡಿಟ್ಟ ಹೊನ್ನು ಕರಗಿ ಹೋಗುವ ಸಾಧ್ಯತೆ ಇರುತ್ತದೆ. ಸಾಲಮಾಡಿ ಜೀವನ ನಡೆಸುವ ಹಂತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ. ಆದಷ್ಟು ಪ್ರಾಮಾಣಿಕ ಜೀವನ ನಡೆಸಿ.ನೀವು ಹಮ್ಮಿಕೊಂಡಿರುವ ಕಾರ್ಯಗಳು ಜನಮನ್ನಣೆ ಗಳಿಸುವುದು. ಇದರಿಂದ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಗುರುತಿಸಿಕೊಳ್ಳುವಿರಿ. ನಿಮ್ಮನ್ನು ಭಾವಿ ನಾಯಕನೆಂದು ಗುರುತಿಸಿ ಗೌರವಿಸುವ ಸಂದರ್ಭ ಎದುರಾಗುವುದು. ಬಂದ ಅವಕಾಶಗಳನ್ನು ಬಿಡಬೇಡಿ.ಕೆಲ ಗ್ರಹಗಳ ಪ್ರಭಾವ ನಿಮ್ಮ ಮೇಲೆ ಹಲವು ರೀತಿಯಲ್ಲಿ ಆಗುವ ಸಾಧ್ಯತೆ ಇದೆ. ವಾಹನಗಳನ್ನು ಓಡಿಸುವಾಗ ಎಚ್ಚರ ಪಾಲಿಸುವುದು ಒಳ್ಳೆಯದು. ಪ್ರಯಾಣ ಮಾಡುವಾಗ ಮೊಬೈಲ್ ಉಪಯೋಗಿಸದೆ ಇರುವುದು ಒಳ್ಳೆಯದು.
9845743807
ಅದೃಷ್ಟ ಸಂಖ್ಯೆ:4

ವೃಶ್ಚಿಕ
ದೂರ ದೇಶದ ಪ್ರಯಾಣದ ಕುರಿತು ಚಿಂತಿಸುತ್ತಿದ್ದರೆ ವೀಸಾ ಅನುಮತಿಗಾಗಿ ಅರ್ಜಿ ಹಾಕಿಕೊಳ್ಳುವುದು ಒಳ್ಳೆಯದು. ದೈವಕೃಪೆಯಿಂದ ನಿಮ್ಮ ಕೆಲಸಗಳು ಸುಗಮವಾಗುವುದು.ಈ ದಿನ ಮತ್ತೊಮ್ಮೆ ನಿಮ್ಮ ಬುದ್ಧಿಚಾತುರ‍್ಯದ ಪ್ರದರ್ಶನವಾಗುವುದು. ಇದರಿಂದ ನಿಮ್ಮ ಮೇಲಧಿಕಾರಿಗಳು ಸಂತುಷ್ಟರಾಗುವರು. ನಿಮಗೆ ಸರ್ಕಾರದಿಂದ ಬರಬೇಕಾಗಿದ್ದ ಸೌಲಭ್ಯಗಳು ಬೇಗನೆ ಬರುವಂತೆ ಒತ್ತಡ ತರುವರು.'ಮನೆಗೆದ್ದು ಮಾರುಗೆಲ್ಲು' ಎನ್ನುವರು ಹಿರಿಯರು. ಅಂತೆಯೇ ಮನೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಅತ್ಯಂತ ಹರ್ಷದಿಂದ ಬಾಳುವಿರಿ. ಮನಸ್ಸಿನ ದುಗುಡಗಳು ಕಾಣೆ ಆಗುವುದು. ಕುಲದೇವರನ್ನು ಭಜಿಸಿ9845743807
ಅದೃಷ್ಟ ಸಂಖ್ಯೆ:2

ಧನುಸ್ಸು
ಹಿರಿಯರು ಮತ್ತು ಬಂಧುಗಳಿಂದ ಉತ್ತಮವಾದ ಬೆಂಬಲ ಲಭ್ಯವಾಗಲಿದೆ. ಇಡೀ ದಿನ ಉಲ್ಲಾಸದಿಂದ ಇರುವಿರಿ. ಮಕ್ಕಳು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸುವರು. ಬರಬೇಕಾಗಿದ್ದ ಬಾಕಿ ಹಣ ಕೈ ಸೇರುವುದು.ಕೆಲಸ ಕಾರ್ಯಗಳಲ್ಲಿ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗದೆ ಪರದಾಟ ಉಂಟಾಗುವ ಸಾಧ್ಯತೆ ಇರುತ್ತದೆ. ವಿಷ್ಣುವಿನ ಆರಾಧನೆಯನ್ನು ಮಾಡುವುದು ಮತ್ತು ವಿಷ್ಣು ದೇವಾಲಯಕ್ಕೆ ತುಳಸೀ ಮಾಲೆಯನ್ನು ನೀಡುವುದು ಒಳ್ಳೆಯದು.ಚಂಚಲತೆ ಸ್ವಭಾವವುಳ್ಳ ನೀವು ಯಾರೊಟ್ಟಿಗಾದರೂ ಮಾತಾಡಿದರೆ ಏನು ತಿಳಿದುಕೊಳ್ಳವರೋ ಎಂಬ ಸೂಕ್ಷ್ಮ ಪ್ರವೃತ್ತಿಯವರು. ಹಾಗಾಗಿ ಜನರೇ ನಿಮ್ಮನ್ನು ನೋಯಿಸುವರು. ಅವರಿಗೆ ಪ್ರತ್ಯುತ್ತರ ಕೊಡಲು ಅಸಹಾಯಕರಾಗಿ ನೋವನ್ನು ಅನುಭವಿಸುವಿರಿ.
9845743807
ಅದೃಷ್ಟ ಸಂಖ್ಯೆ:6

ಮಕರ
ಸಾಂಸಾರಿಕವಾದ ಬಿಕ್ಕಟ್ಟುಗಳನ್ನು ಆಂತರಿಕವಾಗಿಯೇ ಪರಿಹಾರ ಮಾಡಿಕೊಳ್ಳುವುದು ಒಳಿತು. 'ಸಂಸಾರ ಗುಟ್ಟು ವ್ಯಾಧಿ ರಟ್ಟು' ಎನ್ನುವ ನಾಣ್ನುಡಿಯನ್ನು ಅರಿತು ಬಾಳಿ. ಇಲ್ಲದಿದ್ದಲ್ಲಿ ಸಮಾಜದಲ್ಲಿ ನಿಮಗೆ ಗೌರವ ಕಡಿಮೆ ಆಗುವುದು.ನಿಮ್ಮ ವಿಚಾರದಲ್ಲಿ ಈ ದಿನದ ಬೆಳವಣಿಗೆಗಳು ಧನಾತ್ಮಕವಾಗಿ ಮೂಡಿಬರುವುದು. ಹಾಗಾಗಿ ನಿಮಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಬರುವವು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ ಮತ್ತು ಬೆಳೆದು ನಿಂತ ಮಗನ ಮನಸ್ಸನ್ನು ನೋಯಿಸದಿರಿ.ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಹೊಸ ಸಮಸ್ಯೆಯೊಂದು ಸೃಷ್ಟಿ ಆಗುವುದು. ಸಹೋದ್ಯೋಗಿಗಳ ಜೊತೆಯಲ್ಲಿ ಕುಳಿತು ಸಮಸ್ಯೆಯ ಗಂಭೀರತೆಯನ್ನು ಚರ್ಚಿಸಿ. ಪರಿಹಾರ ದೊರೆಯುವುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.9845743807
ಅದೃಷ್ಟ ಸಂಖ್ಯೆ:1

ಕುಂಭ
ಉದಾಸೀನತೆಯೇ ಅಧೋಗತಿಗೆ ಮೂಲ ಎಂದರು ಹಿರಿಯರು. ಹಾಗಾಗಿ ಹಿರಿಯರ ಮಾತನ್ನು ಉಡಾಫೆತನದಿಂದ ತಿರಸ್ಕರಿಸಿದಲ್ಲಿ ಸೋಲನ್ನು ಕಾಣುವಿರಿ. ಸದ್ಯದ ಪರಿಸ್ಥಿತಿ ಉತ್ತಮವಾಗಿಲ್ಲದಿರುವಾಗ ಚಿಕ್ಕಮಗುವು ಹೇಳಿದ ಮಾತನ್ನು ಕೇಳಬೇಕಾದೀತು.
ಮುನ್ನುಗ್ಗುವ ಮಾರ್ಗದಲ್ಲಿ ಕಾಲಿಡುವ ಕಡೆಯಲ್ಲೆಲ್ಲ ಮುಳ್ಳುಗಳೇ ಎದುರಾಗುವುದು. ಮುಳ್ಳಿನಿಂದ ರಕ್ಷ ಣೆ ಹೊಂದಲು ಪಾದರಕ್ಷೆ ಧರಿಸುವಂತೆ ನಿಮ್ಮ ವಿರೋಧಿಗಳನ್ನು ಮಟ್ಟಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುವುದು.
ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡುವಿರಿ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಕಾರ್ಯವನ್ನು ವೀಕ್ಷಿಸಿ ಬೆನ್ನು ಚಪ್ಪರಿಸುವವರು ಕಡಿಮೆ. ಆದಾಗ್ಯೂ ದೈವದ ಮೊರೆ ಹೋಗಿ. ಮನಸ್ಸಿನ ದುಗುಡಗಳು ಕಡಿಮೆ ಆಗುವುದು.9845743807
ಅದೃಷ್ಟ ಸಂಖ್ಯೆ:2

ಮೀನ
ಮಕ್ಕಳ ವಿಚಾರದಲ್ಲಿ ಹರ್ಷದಾಯಕವಾದ ಮತ್ತು ಹೆಮ್ಮೆ ಪಡುವಂತಹ ವಿಚಾರಗಳು ನಿಮ್ಮನ್ನು ತಲುಪಿ ಸಂತೋಷ ಸಾಗರದಲ್ಲಿ ತೇಲುವಿರಿ. ಹಣಕಾಸಿನ ಪರಿಸ್ಥಿತಿ ಸುಧಾರಣೆ ಆಗುವುದರಿಂದ ಹೆಚ್ಚು ಉತ್ಸಾಹಶಾಲಿಗಳಾಗುವಿರಿ. ಹೊಸ ವಹಿವಾಟೊಂದರ ವಿಚಾರಗಳ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸುವಿರಿ. ನೀವು ನೀಡುವ ಸಲಹೆಯು ಸೂಕ್ತ ವಾದುದೆಂದು ಪರಿಗಣಿಸಿ. ಅದನ್ನು ಕಾರ್ಯರೂಪಕ್ಕೆ ತರುವರು. ಇದರಿಂದ ಕಚೇರಿ ವಾತಾವರಣದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.ಮುನ್ನುಗ್ಗುವ ವ್ಯಕ್ತಿಯನ್ನು ಕೀಟಲೆ ಮಾಡಿ ಅವನಿಗೆ ಅಡೆತಡೆ ಉಂಟು ಮಾಡಲು ಕಿತಾಪತಿ ಜನರು ನಿಮ್ಮ ಸುತ್ತಮುತ್ತಲಿನಲ್ಲಿರುವರು. ಅವರ ಹಾವಭಾವ ಮತ್ತು ಮಾತುಕತೆಗೆ ಉತ್ತರ ಕೊಡದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಯಶಸ್ಸು ನಿಮ್ಮದಾಗುವುದು.9845743807
ಅದೃಷ್ಟ ಸಂಖ್ಯೆ:5
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp