For Quick Alerts
ALLOW NOTIFICATIONS  
For Daily Alerts

11-11-2018: ಭಾನುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಭಾನುವಾರ ದಿನ ಸೂರ್ಯ ದೇವತೆ , ಅಗ್ನಿ ಅಷ್ಟದಿಕ್ಕಪಾಲಾರಲ್ಲಿ ಮಹಾನ್ ಶಕ್ತಿ. ಸೂರ್ಯವಂಶವೆಂದೆ ಪುರಾಣದಲ್ಲಿ ಹೆಚ್ಚು ಪ್ರಸಿದ್ದಿ.ಸೂರ್ಯನಲ್ಲಿ

ಚಿನ್ನ ದ ರಥಗಳಿವೆ. ಆತನು ತನ್ನ ವಿಜಯೋತ್ಸವದ ರಥ ದಲ್ಲಿ ಸ್ವರ್ಗದಿಂದ ಬರಲಿದ್ದು,ಏಳು ಕುದುರೆಗಳು ರಥವನ್ನು ಎಳೆಯುತ್ತಿದ್ದು ಆತನ ವರ್ಣನೆಯನ್ನು ಹೆಚ್ಚಿಸುತ್ತದೆ.ಆತನ ಮಂತ್ರದ 'ಅದ್ಭುತ' ಶಕ್ತಿಯಿಂದ , ಕುಂತಿಯು ಮಂತ್ರವನ್ನು ಪರೀಕ್ಷಿಸುವ ಉದ್ದೇಶದಿಂದ, ಸೂರ್ಯನ ಮೇಲೆ ಪ್ರಯೋಗಿಸಿದಾಗ , ಸೂರ್ಯ ಪ್ರತ್ಯಕ್ಷನಾಗಿದ್ದನ್ನು ವರವನ್ನು ನೀಡಿದ್ದನ್ನು ಸ್ಮರಿಸಬಹುದು.ಸೂರ್ಯನು ತನ್ನ ಮಾಯಾ ಶಕ್ತಿಯಿಂದ 'ಕುಂತಿ' ಗೆ ಮಗುವೊಂದನ್ನು ದಯಪಾಲಿಸಿರಿವುದು ಮಹಾಭಾರತದಲ್ಲಿ ಸೂರ್ಯನ ಮಂತ್ರ ಶಕ್ತಿಯನ್ನು ನೋಡಬಹುದಾಗಿದೆ. ಸೂರ್ಯನ ಆತ್ಮ , ಇಚ್ಚಾ-ಶಕ್ತಿ ,ಹೆಸರು , ಕಣ್ಣುಗಳು , ಸಾಮಾನ್ಯ ಶಕ್ತಿ , ಧೈರ್ಯ , ಒಡೆತನ , ತಂದೆ , ಉನ್ನತ ಸ್ಥಾನದಲ್ಲಿರುವವರು ಹಾಗು ಅಧಿಕಾರ ಇವುಗಳನ್ನು ಸೂರ್ಯನು ಪ್ರತಿನಿಧಿಸುತ್ತಾನೆ.

ಹಿಂದೂಗಳು ರಥ ಸಪ್ತಮಿಯನ್ನು ಆಚರಿಸುತ್ತಾರೆ ಸೂರ್ಯ ಜಯಂತಿ ಎಂದು ಸೂರ್ಯನ ಆಚರಣೆ.ಭಾಸ್ಕರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯ ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ(11 ನವಂಬರ್ 2018)

ಮೇಷ(11 ನವಂಬರ್ 2018)

ನಿಮ್ಮ ವೈಯಕ್ತಿಕ ಕಾರ್ಯ ಸಾಧನೆಗೋಸ್ಕರ ಹಲವರನ್ನು ಸಂದರ್ಶಿಸಬೇಕಾಗುವುದು. ನಿಮ್ಮ ಮೇಲಿನ ಅಭಿಮಾನದಿಂದ ಒಬ್ಬರು ನಿಮಗೆ ಸಹಾಯ ಹಸ್ತ ಚಾಚುವರು. ಇದರಿಂದ ನಿಮ್ಮ ಕಾರ್ಯ ಕೈಗೂಡುವುದು. ಕಚೇರಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನವಿಟ್ಟು ಕೆಲಸ ಮಾಡುವಿರಿ. ಆದರೆ ಅಲ್ಲಿ ಎಲ್ಲರನ್ನು ನಂಬಿ ಕೆಡದಿರಿ. ಇಲ್ಲಸಲ್ಲದ ಅಪವಾದ ಬರುವ ಸಾಧ್ಯತೆ ಇರುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ನಿಮ್ಮ ಕಾರ್ಯಗಳಿಗೆ ಹಿರಿಯರ ಸಹಕಾರ ಮತ್ತು ಆಶೀರ್ವಾದ ದೊರೆಯಲಿದೆ. ಮನೆಯಲ್ಲಿ ಆಸ್ತಿ ವಿಭಜನೆಗೆ ಸಂಬಂಧಪಟ್ಟಂತೆ ಮಾತುಗಳು ಕೇಳಿಬರುವವು. ಮನೆ ಸದಸ್ಯರು ಒಂದೆಡೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಿ.

ಅದೃಷ್ಟ ಸಂಖ್ಯೆ:2

ವೃಷಭ(11 ನವಂಬರ್ 2018)

ವೃಷಭ(11 ನವಂಬರ್ 2018)

ಶಾಂತ ಸಮುದ್ರದಂತೆ ನೀವು ಸಹನಾಮೂರ್ತಿಗಳಾಗುವಿರಿ. ಕೆಲವರು ನಿಮ್ಮ ಬಳಿ ಅನೇಕ ಸಮಸ್ಯೆಗಳಿಗೆ ಪರಿಹಾರ ಬಯಸಿ ಬರುವರು. ಅವರಿಗೆ ನಿಮ್ಮ ಸಹಾಯ ಹಸ್ತ ದೊರೆಯುವುದು.ನಿಮ್ಮದೇ ಆದ ನೂತನ ಗೃಹದ ವಿಚಾರದಲ್ಲಿ ಮಹತ್ವದ ಜನರೊಂದಿಗೆ ಪ್ರಸ್ತಾಪ ನಡೆಸಲು ಕಾಲ ಪಕ್ವವಾಗಿರುವುದು. ಬಹುದಿನದ ಬಯಕೆ ಈಡೇರಿದ ಸಂಭ್ರಮ ನಿಮ್ಮದಾಗುವುದು. ಇದಕ್ಕೆ ಪೂರಕವಾಗಿ ಮಕ್ಕಳು ಸ್ಪಂದಿಸುವರು.

ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಚೇತರಿಕೆ ಕಂಡುಬರಲಿದೆ ಮತ್ತು ಲಾಭ ಹೆಚ್ಚಾಗಲಿದೆ. ಈ ಲಾಭಾಂಶವನ್ನು ಮತ್ತೊಂದು ವ್ಯವಹಾರದಲ್ಲಿ ಹೂಡಲು ಯಾವುದೇ ಅಡ್ಡಿಯಿಲ್ಲ. ಆರೋಗ್ಯದ ಕಡೆ ಗಮನ ಹರಿಸಿ.

ಅದೃಷ್ಟ ಸಂಖ್ಯೆ:1

ಮಿಥುನ(11 ನವಂಬರ್ 2018)

ಮಿಥುನ(11 ನವಂಬರ್ 2018)

ಬಾಳಸಂಗಾತಿ ಜತೆಗಿನ ಒಂದು ಕಿರು ಸುತ್ತಾಟದಿಂದ ವೈವಿಧ್ಯಮಯ ಚೈತನ್ಯ ಕೂಡಿ ಬರಲಿದೆ. ಅಂತೆಯೇ ಮಹತ್ತರ ಕೆಲಸ ಕಾರ್ಯಗಳನ್ನು ಮಾಡಲು ಮನಸ್ಸು ಹಾತೊರೆಯುವುದು.ಗುರು ಒಲಿದರೆ ಕೊರಡು ಕೊನರುವುದಯ್ಯಾ ಎನ್ನುವಂತೆ ಗುರುವಿನ ಶುಭ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ಕಚೇರಿ ಕೆಲಸಗಳು ಸುಗಮವಾಗಿ ನಡೆಯುವವು. ಆದರೆ ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ.ನವ ದಂಪತಿಗೆ ಸಂತತಿ ಭಾಗ್ಯ ದೊರೆತು ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ. ಪರಸ್ತ್ರೀ ಮತ್ತು ಪರಧನದ ಬಗ್ಗೆ ಹೆಚ್ಚಿನ ವ್ಯಾಮೋಹ ಸೂಕ್ತವಲ್ಲ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ತೋರುವರು.

ಅದೃಷ್ಟ ಸಂಖ್ಯೆ:2

ಕಟಕ(11 ನವಂಬರ್ 2018)

ಕಟಕ(11 ನವಂಬರ್ 2018)

ನೀವು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ನಿಮ್ಮ ಬಾಸ್‌ ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸುವರು. ನಿಮ್ಮ ಸಹೋದ್ಯೋಗಿಗಳು ಕೂಡಾ ನಿಮ್ಮ ಕ್ರಿಯಾಶೀಲತೆಯನ್ನು ಕೊಂಡಾಡುವರು. ಆರೋಗ್ಯದ ಕಡೆ ಗಮನ ಹರಿಸಿ. 'ಮಾತೇ ಮುತ್ತು ಮಾತೇ ಶತ್ರು' ಅಂತೆಯೇ ನೀವಾಡುವ ಮಾತುಗಳು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ಸಾಧ್ಯತೆಗಳು ಇರುತ್ತದೆ. ಆದಷ್ಟು ಸಾರ್ವಜನಿಕವಾಗಿ ಸ್ಪಂದಿಸುವಾಗ ಎಚ್ಚರದಿಂದ ಇರಿ. ಸ್ನೇಹಿತರ ಉತ್ತಮ ಸಹಕಾರದಿಂದ ವೃತ್ತಿಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆಸ್ತಿ ಖರೀದಿ ವಿಷಯವನ್ನು ಒಂದು ವಾರ ಮುಂದೂಡುವುದು ಉತ್ತಮ. ಮನೆಯಲ್ಲಿ ಮದುವೆಗೆ ಯೋಗ್ಯರಾದ ವಧು ವರರಿಗೆ ಕಂಕಣಭಾಗ್ಯ ಕೂಡಿಬರಲಿದೆ.

ಅದೃಷ್ಟ ಸಂಖ್ಯೆ:4

ಸಿಂಹ(11 ನವಂಬರ್ 2018)

ಸಿಂಹ(11 ನವಂಬರ್ 2018)

ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಕತ್ತಲು ಇದೇ ಎಂದು ಕೊರಗುವುದರಲ್ಲಿ ಅರ್ಥವಿಲ್ಲ. ಕತ್ತಲಿನಲ್ಲಿ ನಕ್ಷ ತ್ರಗಳನ್ನು ಕಾಣುವ ಸುಯೋಗ ನಿಮ್ಮದಾಗುವುದು. ಅಂತೆಯೆ ಬಾಳಿನಲ್ಲಿ ಒಂದು ಹೊಸ ಆಶಾಕಿರಣ ಮೂಡುವುದು. ತೀರ್ಥಯಾತ್ರೆ ಮುಗಿಸಿಕೊಂಡು ಬಂದ ನಿಮ್ಮಲ್ಲಿ ಧನ್ಯತೆಯ ಭಾವ ಮೂಡುವುದು. ಆದರೆ ಸಾಕಷ್ಟು ಕೆಲಸ ಕಾರ್ಯಗಳು ನಿಮಗೆ ವಿಶ್ರಾಂತಿ ನೀಡಲಾರವು. ಗುರುವಿನ ಮಂತ್ರ ಪಠಿಸಿ. ಒಳಿತಾಗುವುದು.

ಕಚೇರಿಯ ಮಿತಿಮೀರಿದ ನಿಯಮಗಳಿಂದ ಕೆಲಸದಲ್ಲಿ ಅನಾಸಕ್ತಿ ಮೂಡುವುದು. ವ್ಯವಹಾರದಲ್ಲಿ ಕಂಡುಬರುವ ಹಿನ್ನಡೆಯಿಂದ ಮನಸ್ಸಿಗೆ ಬೇಸರವಾಗುವುದು. ಆಂಜನೇಯ ಸ್ತೋತ್ರ ಪಠಿಸಿ. ಮಕ್ಕಳ ನಡವಳಿಕೆ ಬೇಸರ ತರಿಸುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ:5

ಕನ್ಯಾ(11 ನವಂಬರ್ 2018)

ಕನ್ಯಾ(11 ನವಂಬರ್ 2018)

ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯ‌ ನಿಮಗೆ ಗೌರವ ಮತ್ತು ಪ್ರಶಂಸೆಗಳನ್ನು ತಂದುಕೊಡುವುದು. ಸಾಲದ ತೀರುವಳಿಗಾಗಿ ನೀವು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುವಿರಿ. ಬುದ್ಧಿವಂತ ಜನರೊಡನೆ ಒಡನಾಟ ಇರುವುದರಿಂದ ನಿಮ್ಮ ಜ್ಞಾನ ಮಟ್ಟ ಹೆಚ್ಚಾಗುವುದು. ಪ್ರತಿನಿತ್ಯದ ಜಂಜಾಟದಿಂದ ದೂರ ಉಳಿಯುವಿರಿ. ಗುರುವಿನ ಅನುಗ್ರಹ ಸಂಪಾದಿಸುವಿರಿ. ಮಡದಿ ಮಕ್ಕಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವ ಸಾಧ್ಯತೆ ಇದೆ. ನಿರುದ್ಯೋಗಿ ಮಗನಿಗೆ ಸಾಧಾರಣ ನೌಕರಿ ದೊರೆಯಲಿದ್ದು ಮನೆಯಲ್ಲಿ ಸಂತಸ ನೆಲೆಸಲಿದೆ. ರೈತರು ಉತ್ತಮ ಫಲ ನಿರೀಕ್ಷಿಸಬಹುದು.

ಅದೃಷ್ಟ ಸಂಖ್ಯೆ:2

ತುಲಾ(11 ನವಂಬರ್ 2018)

ತುಲಾ(11 ನವಂಬರ್ 2018)

ನಿಮ್ಮ ಮನೆ ದೇವರನ್ನು ಗೌರವ ಪೂರ್ವಕವಾಗಿ ನಂಬಿ ಸ್ತುತಿಸಿ. ಮನೆಯ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಕಂಡುಬರಲಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಇಂದೇ ಯೋಜನೆಗಳನ್ನು ರೂಪಿಸುವುದು ಒಳ್ಳೆಯದು.

ಮಾಧ್ಯಮಗಳ ಮಂದಿಗೆ ಮತ್ತು ಸಿನಿಮಾರಂಗದಲ್ಲಿರುವವರಿಗೆ ಹೆಚ್ಚಿನ ಲಾಭಾಂಶ ಕಂಡು ಬರುವುದು. ಅಧಿಕಾರಿಗಳು ನಿಮ್ಮ ಕಾರ್ಯಕ್ಷ ಮತೆಯನ್ನು ಮೆಚ್ಚುವರು. ಹೊಸ ನಿರ್ಧಾರಗಳನ್ನು ಸ್ವಲ್ಪ ಮುಂದೂಡುವುದು ಒಳ್ಳೆಯದು. ಮನೆಯಲ್ಲಿ ನಡೆಯಬೇಕಿದ್ದ ಧರ್ಮ ಕಾರ್ಯಗಳು ಅನಿರೀಕ್ಷಿತ ಕಾರಣಗಳಿಂದ ಮುಂದೂಡಲ್ಪಡುವವು. ಪ್ರತಿ ಕಾರ್ಯಗಳಲ್ಲಿ ವಿಘ್ನಗಳು ಬರುವ ಸಾಧ್ಯತೆ ಇದೆ. ಗಣಪತಿಯ ಆರಾಧನೆ ಮಾಡಿ. ನಿಷ್ಠುರದ ಮಾತುಗಳಿಂದ ದೂರ ಇರಿ.

ಅದೃಷ್ಟ ಸಂಖ್ಯೆ:4

ವೃಶ್ಚಿಕ(11 ನವಂಬರ್ 2018)

ವೃಶ್ಚಿಕ(11 ನವಂಬರ್ 2018)

ಒಂದು ಪಕ್ಕಾ ಆದ ದೊಡ್ಡ ವಹಿವಾಟುವೊಂದನ್ನು ನಿಭಾಯಿಸುವ ಜವಾಬ್ದಾರಿ ನಿಮ್ಮದಾಗುವುದು. ದಿನದಿಂದ ದಿನಕ್ಕೆ ನಿಮ್ಮ ಕೀರ್ತಿ ಮುಗಿಲೆತ್ತರಕ್ಕೆ ಏರುವುದು. ಹಾಗಂತ ಅಹಂಕಾರ ಪಡುವುದು ಸೂಕ್ತವಲ್ಲ.

ಸಂಶಯ ಹಾಗೂ ಅಸೂಯೆಗಳನ್ನುಳ್ಳ ಜನರು ನಿಮ್ಮನ್ನು ಸಂಧಿಸುವರು. ಅವರು ನಿಮ್ಮ ಪ್ರಗತಿಯನ್ನು ಕಂಡು ಕರಬುವರು. ನಿಮ್ಮನ್ನು ಟೀಕಿಸುತ್ತಿದ್ದ ಜನರೇ ನಿಮ್ಮ ಬಳಿ ಕೆಲಸ ಮಾಡಲು ಒಪ್ಪಿಗೆ ಸೂಚಿಸುವರು.ಪರಾಕ್ರಮಶಾಲಿಗಳಾದ ನಿಮ್ಮ ಪ್ರಯತ್ನಗಳಲ್ಲಿ ಆರಂಭದಲ್ಲಿ ಹಿನ್ನಡೆಯಾದರೂ ಕೊನೆಗೆ ಯಶಸ್ಸು ನಿಮ್ಮದೇ ಆಗುವುದು. ಕುಲದೇವರ ಅನುಗ್ರಹ ಸಂಪಾದಿಸಿಕೊಳ್ಳಿ. ಆರೋಗ್ಯದ ಬಗ್ಗೆ ಉದಾಸೀನ ಬೇಡ. ಹಿರಿಯರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ:6

ಧನಸ್ಸು(11 ನವಂಬರ್ 2018)

ಧನಸ್ಸು(11 ನವಂಬರ್ 2018)

ಅತ್ಯಂತ ನಂಬುಗೆಗೆ ಪಾತ್ರರಾದ ಸ್ನೇಹಿತರು, ಬಂಧುಗಳೇ ನಿಮಗೆ ಹಣಕಾಸಿನ ವಿಷಯದಲ್ಲಿ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ನಿಮ್ಮ ಮನೆ ಕುಲದೇವರನ್ನು ಭಜಿಸಿ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು ತಿಳಿದು ಸಹ ತಪ್ಪು ಮಾಡುವಿರಿ. ಬಂಧುಗಳ ಜೊತೆ ವ್ಯವಹಾರ ಮಾಡುವುದು ಉತ್ತಮವಲ್ಲ. ಹಣಕಾಸಿನ ಮುಗ್ಗಟ್ಟು ಎದುರಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ಉಂಟಾಗುವುದು. ಅಧಿಕ ತಿರುಗಾಟದಿಂದ ಆಯಾಸವಾಗುವುದು. ಆರೋಗ್ಯದ ಬಗ್ಗೆ ಉದಾಸೀನ ಬೇಡ. ಬೆಳೆಗಳಿಗೆ ಹೆಚ್ಚಿನ ಬೆಂಬಲ ದರ ದೊರೆಯುವುದು. ಅತಿಯಾದ ಕೆಲಸ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು.

ಅದೃಷ್ಟ ಸಂಖ್ಯೆ:8

ಮಕರ(11 ನವಂಬರ್ 2018)

ಮಕರ(11 ನವಂಬರ್ 2018)

ಬೆಳ್ಳಗಿರುವುದೆಲ್ಲಾ ಹಾಲು ಎಂದು ಭ್ರಮಿಸಿ ಮೋಸ ಹೋಗದಿರಿ. ವ್ಯವಹಾರದಲ್ಲಿ ನಿಮ್ಮ ಬುದ್ಧಿಚಾತುರ್ಯವನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ. ಕೆಲವೊಮ್ಮೆ ವ್ಯವಹಾರದಲ್ಲಿ ನಿಷ್ಠೂರತೆ ಫಲ ಕೊಡುವುದು.

ನೀವು ಸರಿಯಾದ ಮಾರ್ಗದಲ್ಲಿಯೇ ಚಲಿಸುತ್ತಿದ್ದೀರಿ. ಆದರೆ ನಿಮ್ಮ ಮಾರ್ಗವನ್ನು ತಪ್ಪಿಸಬೇಕೆಂದು ಕೆಲವರು ಹೊಂಚು ಹಾಕುತ್ತಿರುವರು. ಈ ಬಗ್ಗೆ ಎಚ್ಚರದಿಂದ ಇರಿ. ಆಂಜನೇಯ ಮಂತ್ರ ಪಠಿಸಿ. ಯಶಸ್ಸು ಸಿಗಲು ನಿಮ್ಮ ಶ್ರಮ ಹಾಗೂ ಶ್ರದ್ಧೆ ಎರಡೂ ಬೇಕಾಗುವವು. ಗುರು ಹಿರಿಯರ ಆಶೀರ್ವಾದವೂ ಪ್ರಮುಖವಾಗಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹೆಚ್ಚಿನ ಶ್ರಮ ವಹಿಸಬೇಕು. ಕಾರ್ಮಿಕರಿಗೆ ಉತ್ತಮ ದಿನಗಳು.

ಅದೃಷ್ಟ ಸಂಖ್ಯೆ:2

ಕುಂಭ(11 ನವಂಬರ್ 2018)

ಕುಂಭ(11 ನವಂಬರ್ 2018)

ಟೀಕಿಸುವ ಜನರ ಬಗ್ಗೆ ಆತಂಕ ಪಡಬೇಕಾಗಿಲ್ಲ. ಹೊಗಳುವ ಜನರೇ ನಿಮಗೆ ಆತಂಕ ಉಂಟು ಮಾಡುವ ಸಂದರ್ಭವಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ. ಮಕ್ಕಳನ್ನು ಗೊತ್ತಾಗದ ಸ್ಥಳಕ್ಕೆ ಡ್ರಾಪ್‌ ಮಾಡಲು ಹೋಗಬೇಡಿ. ನಿಮ್ಮ ವೈಯಕ್ತಿಕ ಬದುಕಿನತ್ತ ಗಮನವಹಿಸಿ. ಅಲ್ಲಿಯೆ ದಾರಿ ಸುದೀರ್ಘವಾಗಿರುವುದು. ಸ್ನೇಹಿತರು ನಿಮ್ಮ ನೆರವಿಗೆ ಬರುವುದರಿಂದ ಕೆಲಸಗಳು ಸುಗಮವಾಗಿ ನಡೆಯಲಿವೆ. ನೀವು ಪರಿವಾರದೊಂದಿಗೆ ನಡೆಸಲಿರುವ ಪುಣ್ಯಕ್ಷೇತ್ರ ದರ್ಶನ ಸಮಯದಲ್ಲಿ ಅತ್ಯಂತ ಸಂತೋಷದಾಯಕ ಘಟನೆಯೊಂದು ನಡೆಯಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಅದೃಷ್ಟ ಸಂಖ್ಯೆ:2

ಮೀನ(11 ನವಂಬರ್ 2018)

ಮೀನ(11 ನವಂಬರ್ 2018)

ಗಡಿಬಿಡಿಯು ನಿಮ್ಮ ಕೆಲಸದಲ್ಲಿ ಅನಾನುಕೂಲತೆಯನ್ನು ಉಂಟು ಮಾಡುವುದು. ಸಾವಧಾನವಾಗಿ ಚಿಂತಿಸಿ ಕಾರ್ಯ ಪ್ರವೃತ್ತರಾಗುವುದರಿಂದ ಒಳಿತಾಗುವುದು. ದೂರದ ಹಳೆಯ ಗೆಳೆಯನ ಭೇಟಿ ಸಾಧ್ಯತೆ ಇದೆ.

ಪ್ರತಿಯೊಬ್ಬರೂ ನಿಮ್ಮ ಪರವಾಗಿಯೇ ಲಕ್ಷ್ಯ ವಹಿಸಬೇಕೆಂಬ ಆಸೆಯನ್ನು ಬಿಡಿ. ಎಲ್ಲರಿಗೂ ಅವರದೇ ಆದ ಜವಾಬ್ದಾರಿಗಳು ಇರುತ್ತವೆ. ಆರೋಗ್ಯ ಉತ್ತಮವಾಗಿರುವುದು. ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಸರ್ಕಾರದ ನೆರವನ್ನೇ ಅವಲಂಬಿಸಿ ಕಾರ್ಯಕ್ರಮ ಹಮ್ಮಿಕೊಳ್ಳದಿರಿ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ ಓದಬೇಕು. ವಿದ್ಯೆಯಲ್ಲಿ ಹೆಚ್ಚಿನ ಪ್ರಗತಿಗಾಗಿ ಹಯಗ್ರೀವ ಮಂತ್ರ ಪಠಿಸಿ.

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-11-November-2018

Know what astrology and the planets have in store for you today. Choose your zodiac sign and read the details...
Story first published: Sunday, November 11, 2018, 4:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more