For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಅನುಸಾರ ದುರ್ಗಾದೇವಿಯನ್ನು ಯಾವ ಅವತಾರದಲ್ಲಿ ನೀವು ಆರಾಧಿಸಬೇಕು ನೋಡಿ...

|

ದುರ್ಗಾದೇವಿ ಎಂದರೆ ದುಷ್ಟ ಶಕ್ತಿಯನ್ನು ನಿಗ್ರಹಿಸಿ, ಶಿಷ್ಠರ ಪಾಲನೆಗೆ ಅವತರಿಸಿ ಬಂದ ದೇವಿಯ ಅವತಾರ ಎಂದು ಹೇಳಲಾಗುವುದು. ಹಿಂದೂ ಧರ್ಮದಲ್ಲಿ ದುರ್ಗಾದೇವಿಗೆ ಅತ್ಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ಅತ್ಯಂತ ಶಕ್ತಿವಂತ ದೇವತೆ ಎಂದು ಹೇಳಲಾಗುವುದು. ತನ್ನ ಭಕ್ತರನ್ನು ಉತ್ತಮ ಮಾರ್ಗದಲ್ಲಿ ನಡೆಯುವಂತೆ ಮಾಡಿ ಅವರ ರಕ್ಷಣೆಗೆ ಸದಾ ಸಿದ್ಧಳಾಗಿರುತ್ತಾಳೆ ಎಂದು ಹೇಳಲಾಗುವುದು. ಭಕ್ತರ ಮನಸ್ಸಿನಲ್ಲಿರುವ ಅಂದಕಾರ ಹಾಗೂ ಅಜ್ಞಾನವನ್ನು ಓಡಿಸಿ, ಜ್ಞಾನದ ಬೆಳಕನ್ನು ನೀಡುವ ತಾಯಿ ದುರ್ಗಾದೇವಿ.

ಮಹಿಷಾಸುರ ಎನ್ನುವ ದುಷ್ಟ ರಾಕ್ಷಸನನ್ನು ನಿರ್ಮೂಲನೆ ಮಾಡಲು ಅವತಾರ ಎತ್ತಿ ಬಂದ ದುರ್ಗಾದೇವಿ ತನ್ನ ಒಂಬತ್ತು ಅವತಾರದ ಮೂಲಕ ಅವನನ್ನು ಸಂಹಾರ ಮಾಡಿದಳು. ಮಹಿಷಾಸುರನ ಸಂಹಾರಕ್ಕಾಗಿಯೇ ಶಿವನು ದೇವಿಗೆ ಒಂಬತ್ತು ಶಕ್ತಿಯ ರೂಪವನ್ನು ನೀಡಿದ್ದನು ಎಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರಿಗೂ ದೇವಿಯ ಬೇರೆ ಬೇರೆ ಅವತಾರಗಳು ಆಶೀರ್ವಾದ ನೀಡುವುದು. ಎಂದು ಹೇಳಲಾಗುತ್ತದೆ.

Worship Goddess Durga As Per Zodiac

ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ನೀವು ದೇವಿಯ ಅವತಾರಗಳಿಗೆ ಆರಾಧನೆ ಮಾಡುವುದರಿಂದ ಹೆಚ್ಚು ಯಶಸ್ಸು ಹಾಗೂ ಉತ್ತಮ ಜೀವನ ದೊರೆಯುವುದು ಎಂದು ಹೇಳಲಾಗುವುದು. ಹಾಗಾದರೆ ರಾಶಿಚಕ್ರಕ್ಕೆ ಅನುಗುಣವಾಗಿ ಯಾವ ದೇವಿಯ ಅವತಾರಕ್ಕೆ ಆರಾಧನೆ ನಡೆಸಬೇಕು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಮೇಷ ರಾಶಿಯವರು ದೇವಿಯ ಶೈಲಪುತ್ರಿ ಅವತಾರಕ್ಕೆ ಆರಾಧನೆ ಹಾಗೂ ಪ್ರಾರ್ಥನೆಯನ್ನು ಸಲ್ಲಿಸಬೇಕು. ಇದನ್ನು ನವರಾತ್ರಿಯ ಮೊದಲ ದಿನದಂದು ಪೂಜಿಸಲಾಗುತ್ತದೆ. ದೇವಿಯ ಆರಾಧನೆಗೆ ದುರ್ಗಾ ಚಾಲಿಸಾ ಮತ್ತು ಸಪ್ತಸತಿ ಪಥವನ್ನು ಪಠಿಸಬೇಕು.

ವೃಷಭ

ವೃಷಭ

ವೃಷಭ ರಾಶಿಯವರು ದೇವಿಯ ಮಹಾಗೌರಿ ರೂಪಕ್ಕೆ ಪೂಜಿಸಬೇಕು. ದೇವಿಯ ಆಶೀರ್ವಾದಕ್ಕೆ ಪಾತ್ರರಾಗಲು ಲಲಿತಾಷ್ಟೋತ್ತರ ಹಾಗೂ ಸಹಸ್ರನಾಮವನ್ನು ಪಠಿಸಬೇಕು. ಅವಿವಾಹಿತರು ದೇವಿಯ ಆರಾಧನೆ ಮಾಡುವುದರಿಂದ ಸೂಕ್ತ ವರನನ್ನು ಪಡೆಯಬಹುದು ಎಂದು ಹೇಳಲಾಗುವುದು.

Most Read: ಇಂತಹ ವಸ್ತುಗಳನ್ನು ಆದಷ್ಟು ಬೇಗ ಬೆಡ್-ರೂಮ್‌ನಿಂದ ಹೊರಹಾಕಿ- ಇಲ್ಲಾಂದ್ರೆ ಕ್ಯಾನ್ಸರ್ ಬರಬಹುದು!!

ಮಿಥುನ

ಮಿಥುನ

ಈ ರಾಶಿಯವರು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಬೇಕು. ಶಿಕ್ಷಣದ ಹಾದಿಯಲ್ಲಿ ಉಂಟಾಗುವ ಎಡರು ತೊಡರುಗಳನ್ನು ತೆಗೆದುಹಾಕುವಳು. ಭಕ್ತರು ದೇವಿಗಾಗಿ ತಾರಾ ಕವಾಚ್‍ಅನ್ನು ಪಠಿಸಬಹುದು.

ಕರ್ಕ

ಕರ್ಕ

ಈ ರಾಶಿಯವರು ದೇವಿಯ ಶೈಲಪುತ್ರಿ ಅವತಾರಕ್ಕೆ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಬೇಕು. ಲಕ್ಷ್ಮಿ ಸಹಸ್ರನಾಮ ಜಪಿಸುವುದರಿಂದ ದೇವಿಯನ್ನು ಪ್ರಾರ್ಥನೆ ಸಲ್ಲಿಸಬಹುದು. ತಾಯಿ ಭಕ್ತರ ಭಯವನ್ನು ಓಡಿಸುವಳು. ಜೊತೆಗೆ ಯಶಸ್ಸಿನ ಬದುಕನ್ನು ಕರುಣಿಸುವಳು.

ಸಿಂಹ

ಸಿಂಹ

ದುರ್ಗಾದೇವಿಯ ಕುಷ್ಮಾಂಡ ಅವತಾರಕ್ಕೆ ಸಿಂಹ ರಾಶಿಯವರು ಆರಾಧನೆ ಮಾಡಬೇಕು. ದೇವಿಯ ಮಂತ್ರವನ್ನು 505 ಬಾರಿ ಹೇಳುವುದರಿಂದ ದೇವಿ ಸಂತುಷ್ಟಳಾಗುವಳು. ಜೊತೆಗೆ ಜೀವನದಲ್ಲಿ ಸರ್ವತೋಮುಖ ಅಭಿವೃದ್ಧಿಯಾಗಲೆಂದು ಆಶೀರ್ವಾದ ನೀಡುವಳು.

ಕನ್ಯಾ

ಕನ್ಯಾ

ಕನ್ಯಾ ರಾಶಿಯ ವ್ಯಕ್ತಿಗಳು ಬ್ರಹ್ಮಚಾರಿಣಿ ದೇವತೆಗೆ ಆರಾಧನೆ ಸಲ್ಲಿಸಬೇಕು. ದೇವಿಯು ತನ್ನ ಭಕ್ತರಿಗೆ ಜ್ಞಾನದ ಬೆಳಕನ್ನು ಕರುಣಿಸುವಳು. ಇವರು ಲಕ್ಷ್ಮಿ ಮಂತ್ರವನ್ನು ಪಠಿಸಬಹುದು ಎಂದು ಹೇಳಲಾಗುವುದು.

ತುಲಾ

ತುಲಾ

ಈ ರಾಶಿಯವರು ಮಹಾಗೌರಿ ಅವತಾರಕ್ಕೆ ಆರಾಧನೆ ಸಲ್ಲಿಸಬೇಕು. ಆಗ ದೇವಿಯು ಸಂತೋಷಕವಾದ ವಿವಾಹಿತ ಜೀವನವನ್ನು ಆಶೀರ್ವಾದ ಮಾಡುವಳು. ತಮ್ಮ ಆಶಯದ ಸಂಗಾತಿಯನ್ನು ಹೊಂದಲು ಆಶೀರ್ವಾದ ನೀಡುವಳು. ದೇವಿಯ ಆರಾಧನೆಗೆ ದುರ್ಗಾ ಸಪ್ತಸತಿ ಮತ್ತು ಪ್ರಥಮ್ ಸ್ತೋತ್ರವನ್ನು ಪಠಿಸಬೇಕು. ಮಹಾಕಾಳಿ ಸ್ತೋತ್ರ ಮತ್ತು ಕಾಳಿ ಚಾಲಿಸಾವನ್ನು ಪಠಿಸಬಹುದು.

Most Read: ದಿನಾ ಒಂದೊಂದು ಗ್ಲಾಸ್ 'ಟೊಮೆಟೊ ಜ್ಯೂಸ್' ಕುಡಿದರೆ ಆರೋಗ್ಯವಾಗಿರುವಿರಿ

ವೃಶ್ಚಿಕ

ವೃಶ್ಚಿಕ

ಇವರು ದೇವಿಯ ಸ್ಕಂದ ಮಾತೆಗೆ ಆರಾಧನೆ ಮಾಡಬೇಕು. ಸ್ಕಂದ ಮಾತೆಯು ಉತ್ತಮ ಸಂತಾನವನ್ನು ಕರುಣಿಸುವಳು. ಅಲ್ಲದೆ ಜೀವನದ ಅನೇಕ ಅಭಿಲಾಶೆಗಳ ಈಡೇರಿಕೆಗಾಗಿ ದೇವಿಯ ಆರಾಧನೆ ಮಾಡಬಹುದು. ದುರ್ಗಾ ಸಪ್ತಸತಿ ಪಥವನ್ನು ಹೇಳುವುದರ ಮೂಲಕ ದೇವಿಯ ಆರಾಧನೆ ಕೈಗೊಳ್ಳಬೇಕು.

ಧನು

ಧನು

ಇವರು ದೇವಿಯ ಚಂದ್ರಘಂತ ರೂಪಕ್ಕೆ ಆರಾಧನೆ ಕೈಗೊಳ್ಳಬೇಕು. ದುರ್ಗಾದೇವಿಯ ಮಂತ್ರವನ್ನು ಪಠಿಸುವುದರ ಮೂಲಕ ಪೂಜೆಯನ್ನು ಸಲ್ಲಿಸಿದರೆ ಋಣಾತ್ಮಕ ಶಕ್ತಿಯು ನಿವಾರಣೆಯಾಗಿ ಮಾನಸಿಕ ನೆಮ್ಮದಿಯು ದೊರೆಯುವುದು. ಅಲ್ಲದೆ ಜೀವನದ ಅನೇಕ ಆಸೆಗಳನ್ನು ಪೂರೈಸುವಳು.

ಮಕರ

ಮಕರ

ಇವರು ದೇವಿಯ ಕಲ್ಪತ್ರಿ ಅವತಾರವನ್ನು ಆರಾಧಿಸಬೇಕು. ದೇವಿಯು ಭಕ್ತರ ಜೀವನದಲ್ಲಿ ಇರುವ ಕಷ್ಟ ಹಾಗೂ ಭಯವನ್ನು ನಿವಾರಿಸಿ ಸಂತುಷ್ಟ ಜೀವನವನ್ನು ಕರುಣಿಸುವಳು. ದುಷ್ಟ ಶಕ್ತಿಯಿಂದ ರಕ್ಷಣೆ ಹಾಗೂ ಋಣಾತ್ಮಕ ಶಕ್ತಿಯನ್ನು ಪಡೆದುಕೊಳ್ಳುವಳು.

Most Read: ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್

ಕುಂಭ

ಕುಂಭ

ಇವರು ದೇವಿಯ ಕಾಲರಾತ್ರಿ ರೂಪಕ್ಕೆ ಆರಾಧನೆ ಮಾಡಬೇಕು. ಇವರು ದೇವಿಗೆ ದುರ್ಗಾ ಮಂತ್ರ, ದುರ್ಗಾ ಸಪ್ತಸತಿ ಪಥ ಮತ್ತು ದುರ್ಗಾದೇವಿಯ ಕವಾಚ್‍ಅನ್ನು ಪಠಿಸಬೇಕು. ಜೀವನದ ಸಮಸ್ತ ಸಮಸ್ಯೆಗಳಗಳು ನಿವಾರಣೆಯಾಗುವುದು.

ಮೀನ

ಮೀನ

ಇವರು ದೇವಿಯ ಚಂದ್ರಘಂತ ಅವತಾರಕ್ಕೆ ಆರಾಧನೆ ಸಲ್ಲಿಸಬೇಕು. ಜೀವನದಲ್ಲಿ ಆಗಾಗ ಸಂಭವಿಸುವ ಸಮಸ್ಯೆಗಳು ನಿವಾರಣೆಯಾಗಿ ತಮ್ಮ ಕನಸುಗಳನ್ನು ಸಾಧಿಸಲು ಆಶೀರ್ವಾದ ಪಡೆಯಬಹುದು. ಇವರು ದೇವಿಗಾಗಿ ಬಗ್ಲಮುಕಿ ಮಂತ್ರವನ್ನು ಪಠಿಸಬಹುದು.

English summary

Worship Goddess Durga As Per Zodiac

Goddess Durga is believed to have originated from Goddess Parvati, as the female power born to kill the demons. She has nine other forms who supported her when she was told by Lord Shiva, to kill Mahishasura. Navratri is the most auspicious time to worship Goddess Durga. Worshipping all the nine forms of the Goddess is highly significant; she can also be worshipped according to one's zodiac sign. Given below is a list which explains how you can worship Goddess Durga as per the zodiac sign.
X
Desktop Bottom Promotion