For Quick Alerts
ALLOW NOTIFICATIONS  
For Daily Alerts

ಈ 65 ವರ್ಷದ ವೃದ್ಧೆ ಕೆರೆಯ ನೀರಿನಲ್ಲಿಯೇ ಕುಳಿತು ಜೀವನ ಸಾಗಿಸುತ್ತಿದ್ದಾರಂತೆ!

|

ಕೆಲವರು ತುಂಬಾ ವಿಚಿತ್ರವಾಗಿರುವ ಕಾಯಿಲೆಗಳಿಂದ ಬಳಲುತ್ತಾ ಇರುವರು. ಇದಕ್ಕಾಗಿ ಅವರು ಚಿಕಿತ್ಸೆ ಮಾಡಿಕೊಳ್ಳಬೇಕೆಂದು ಹೋದರೂ ಅದು ಅವರಿಗೆ ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಅವರಾಗಿಯೇ ಕೆಲವೊಂದು ಪರಿಹಾರಗಳನ್ನು ಹುಡುಕಿಕೊಳ್ಳುವರು. ಇಲ್ಲಿ ನಮ್ಮದೇ ದೇಶದ ಮಹಿಳೆಯೊಬ್ಬರು ಚರ್ಮದಲ್ಲಿನ ಉರಿಯೂತ ಮತ್ತು ಸುಟ್ಟಂತೆ ಆಗುವ ಕಾರಣದಿಂದಾಗಿ ದಿನವಿಡಿ ಕರೆಯ ನೀರಿನಲ್ಲಿ ಕುತ್ತಿಗೆ ತನಕ ಮುಳುಗಿಕೊಂಡು ಇರುವರು.

ಈ ಬಗ್ಗೆ ನಮ್ಮ ದೇಶದ ಮಾಧ್ಯಮಗಳಿಗೆ ಇದುವರೆಗೆ ಮಾಹಿತಿಯೇ ಸಿಕ್ಕಿಲ್ಲ. ರಷ್ಯಾದ ಮಾಧ್ಯಮವೊಂದು ಈ ಬಗ್ಗೆ ವರದಿಯನ್ನು ಪ್ರಕಟಿಸಿದೆ. ಇದು ಪಶ್ಚಿಮ ಬಂಗಾಳದಲ್ಲಿ ನಡೆದಿರುವುದು. ತನ್ನ ವಿಚಿತ್ರ ಸಮಸ್ಯೆಗೆ ಮಹಿಳೆಯೇ ತಾನಾಗಿಯೇ ಪರಿಹಾರ ಕಂಡುಕೊಂಡಿರುವರು. ಇದರ ಬಗ್ಗೆ ನೀವು ಓದುತ್ತಾ ಸಾಗಿ....

ರಷ್ಯಾದ ಮಾಧ್ಯಮವೊಂದು ಇದರ ಬಗ್ಗೆ ವರದಿ ಮಾಡಿದೆ

ರಷ್ಯಾದ ಮಾಧ್ಯಮವೊಂದು ಇದರ ಬಗ್ಗೆ ವರದಿ ಮಾಡಿದೆ

ಭಾರತದ ಮಾಧ್ಯಮಗಳಿಗೆ ಈ ಸುದ್ದಿಯು ಯಾಕೆ ಸಿಕ್ಕಿಲ್ಲ ಎನ್ನುವ ಸಂಶಯವು ಈ ಸುದ್ದಿಯ ಬಗ್ಗೆ ದೃಢವಾಗಿ ಹೇಳಲು ನಮಗೆ ಸಾಧ್ಯವಾಗುತ್ತಿಲ್ಲ. ವಿಡಿಯೋದಲ್ಲಿ ಇರುವಂತಹ ವೃದ್ಧ ಮಹಿಳೆಯೊಬ್ಬರು ಕೆರೆಯಲ್ಲಿ ಕುತ್ತಿಗೆ ತನಕ ನೀರಿನಲ್ಲಿ ಕುಳಿತಿರುವರು. ಇದನ್ನು ಗ್ರಾಮಸ್ಥರು ಸುತ್ತಲು ನಿಂತುಕೊಂಡು ನೋಡುತ್ತಲಿರುವರು.

ಇದು ರಷ್ಯಾದ ವರದಿ

ಇದು ರಷ್ಯಾದ ವರದಿ

65 ವರ್ಷದ ಮಹಿಳೆಯು ಪಶ್ಚಿಮ ಬಂಗಾಳದವರಾಗಿರುವರು. ಇವರು ಕಳೆದ 20 ವರ್ಷಗಳಿಂದ ಇದೇ ರೀತಿಯಾಗಿ ನೀರಿನಲ್ಲಿ ಕುತ್ತಿಗೆ ತನಕ ಮುಳುಗಿ ತನ್ನ ಜೀವನ ಸಾಗಿಸುತ್ತಿದ್ದಾರೆ. ಯಾಕೆಂದರೆ ಅವರು ತುಂಬಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.

Most Read: ಸಾಯಲು ಗುಂಡು ಹಾರಿಸಿಕೊಂಡ ವ್ಯಕ್ತಿ, ಕೊನೆಗೆ ಮುಖ ಕಸಿ ಮಾಡಿಕೊಂಡು ಹೊಸ ಜೀವನ ಪಡೆದ!

ಇದು ಮಹಿಳೆಯ ದೈನಂದಿನ ಕಾರ್ಯ

ಇದು ಮಹಿಳೆಯ ದೈನಂದಿನ ಕಾರ್ಯ

ಮಹಿಳೆಯು ಪ್ರತಿನಿತ್ಯ ಸೂರ್ಯ ಮೂಡುವ ಮೊದಲೇ ಎದ್ದು ಸಮೀಪದಲ್ಲೇ ಇರುವಂತಹ ಕೆರೆಗೆ ಹೋಗುವರು. ಅಲ್ಲಿ ಆಕೆ ಕುತ್ತಿಗೆ ತನಕ ನೀರಿನಲ್ಲಿ ಮುಳುಗಿ ಕುಳಿತುಕೊಂಡು ಸೂರ್ಯ ಮುಳುಗುವ ತನಕ ತನ್ನ ದಿನ ಕಳೆಯುವರು. 1998ರಿಂದ ಪ್ರತಿನಿತ್ಯವು ಅವರು ಹೀಗೆ ಮಾಡುತ್ತಿದ್ದಾರೆ.

ಆಕೆಗೆ ಅಪರೂಪದ ಆರೋಗ್ಯ ಸಮಸ್ಯೆಯಿದೆ

ಆಕೆಗೆ ಅಪರೂಪದ ಆರೋಗ್ಯ ಸಮಸ್ಯೆಯಿದೆ

ಆಕೆಯು ತುಂಬಾ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದಾಗಿ ಆಕೆಯ ದೇಹದಲ್ಲಿ ಉರಿಯೂತ ಮತ್ತು ನೋವು ಕಾಣಿಸಿಕೊಳ್ಳುವುದು. ಕೆರೆಯಲ್ಲಿ ನೀರಿನಲ್ಲಿ ಮುಳುಗಿ ಕುಳಿತುಕೊಂಡ ವೇಳೆ ಆಕೆಗೆ ಇದರಿಂದ ಶಮನ ಸಿಗುವುದು. ತನ್ನ ಗ್ರಾಮಕ್ಕೆ ಹತ್ತಿರದಲ್ಲೇ ಇರುವಂತಹ ಕೆರೆಯಲ್ಲಿ ಆಕೆ ಪ್ರತಿನಿತ್ಯವು ನೀರಿನಲ್ಲಿ ಕುಳಿತುಕೊಂಡು ದಿನ ಕಳೆಯುವರು. ಕಳೆದ ಎರಡು ದಶಕದಿಂದ ಅವರು ಹೀಗೆ ನೀರಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ.

Most Read: ಅಚ್ಚರಿ ಜಗತ್ತು: ಹಣೆಗೆ ನಾಲಿಗೆ ತಾಗಿಸುವ ನೇಪಾಳದ ವ್ಯಕ್ತಿ!

ಮಧ್ಯಾಹ್ನದ ಊಟಕ್ಕೆ ಮಾತ್ರ ನೀರಿನಿಂದ ಮೇಲೆ ಬರುವರು

ಮಧ್ಯಾಹ್ನದ ಊಟಕ್ಕೆ ಮಾತ್ರ ನೀರಿನಿಂದ ಮೇಲೆ ಬರುವರು

ಈಕೆಯಲ್ಲಿ ರಷ್ಯಾದ ಮಾಧ್ಯಮವು ಭಾರತದ ಮತ್ಸ್ಯಕನ್ಯೆ ಎಂದು ಹೇಳಿದೆ. ಈಕೆ ಮಧ್ಯಾಹ್ನ ವೇಳೆ ನೀರಿನಿಂದ ಮೇಲೆ ಬಂದು ಸ್ವಲ್ಪ ಅನ್ನ ಮತ್ತು ತರಕಾರಿಯಿಂದ ಮಾಡಿದ ಪದಾರ್ಥ ಸೇವನೆ ಮಾಡುವರು. ನೀರಿನಲ್ಲಿ ಕುಳಿತೇ ಇರುವ ಕಾರಣದಿಂದಾಗಿ ಅವರ ಹಸಿವಿನ ಮೇಲೆ ಕೂಡ ಪರಿಣಾಮ ಬೀರಿದೆ. ಆಕೆ ಬೆಳಗ್ಗೆ ಆಕೆ ಮಧ್ಯಾಹ್ನ ಊಟವನ್ನು ತೆಗೆದುಕೊಂಡು ಹೋಗುವರು ಮತ್ತು ಮಧ್ಯಾಹ್ನ ವೇಳೆ ಕೆಲವೇ ನಿಮಿಷಗಳ ಕಾಲ ಹೊರಗೆ ಬಂದು ಊಟ ಮಾಡುವರು.

Most Read: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇಂತಹ ಹಕ್ಕಿಗಳು ಮತ್ತು ಪ್ರಾಣಿಗಳು ಮನೆಯ ಒಳಗೆ ಪ್ರವೇಶಿಸಬಾರದಂತೆ

ಗ್ರಾಮಸ್ಥರು ಹೇಳುವ ಪ್ರಕಾರ

ಗ್ರಾಮಸ್ಥರು ಹೇಳುವ ಪ್ರಕಾರ

ಗ್ರಾಮಸ್ಥರು ತುಂಬಾ ಅತಿಮಾನುಷವಾಗಿ ನಂಬಿರುವಂತೆ ಆಕೆ ದಿನದ ಹೆಚ್ಚಿನ ಸಮಯವನ್ನು ಕೆರೆಯಲ್ಲಿ ಕಳೆಯುವ ಕಾರಣದಿಂದ ಮುಂದೆ ಆಕೆಯ ಆತ್ಮವು ಅಲ್ಲಿಯೇ ಉಳಿಯಬಹುದು. ಕುಟುಂಬದವರ ಪ್ರಕಾರ ಆಕೆಯನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಈ ವಿಚಿತ್ರ ಕಾಯಿಲೆ ಬಗ್ಗೆ ವೈದ್ಯರಿಂದ ಚಿಕಿತ್ಸೆ ಮಾಡಿಸಿ ಕೊಳ್ಳಬೇಕು ಎಂದು ಬಯಸಿದ್ದಾರೆ. ರಷ್ಯಾದ ಮಾಧ್ಯಮಗಳಲ್ಲಿ ಈ ಸುದ್ದಿಯು ಬಿತ್ತರವಾಗಿದೆ. ಆದರೆ ಇದು ಗಾಳಿಸುದ್ದಿಯಾ ಅಥವಾ ನಿಜವಾ ಎನ್ನುವುದು ನಮಗೆ ತಿಳಿದಿಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.

English summary

Woman Spends Her Entire Day Sitting In A Lake

A woman has been reportedly spending over 14 hours in water every single day in a lake as she suffers from a rare allergic condition that leaves her with burning skin. The woman comes out of the water only to have her meal and gets back into it. The story was first covered by the Russian media. She Sits In The Lake For The Entire Day!
Story first published: Friday, December 14, 2018, 13:20 [IST]
X
Desktop Bottom Promotion