For Quick Alerts
ALLOW NOTIFICATIONS  
For Daily Alerts

ಪುಸ್ತಕ ಹಳೆಯದಾಗುತ್ತಿದ್ದಂತೆ ಪುಟಗಳು ಹಳದಿಯಾಗುವುದೇಕೇ?

|

ಹಳೆ ಪುಸ್ತಕವನ್ನು ನೀವು ಓದುತ್ತಿರುವಾಗ ಅದರ ಪುಟಗಳು ಹಳದಿ ಬಣ್ಣಕ್ಕೆ ತಿರುಗುವುದು. ಹೊಸ ಪುಸ್ತಕವಾದರೆ ಅದು ಬಿಳಿಯಾಗಿರುವುದು. ಆದರೆ ಹಳೆ ಪುಸ್ತಕಗಳ ಪುಟಗಳು ಹಳದಿ ಬಣ್ಣಕ್ಕೆ ಯಾಕೆ ತಿರುಗುತ್ತದೆ ಎಂದು ನೀವು ಯಾವತ್ತಾದರೂ ಆಲೋಚನೆ ಮಾಡಿದ್ದೀರಾ?

ಪುಸ್ತಕ ಅಥವಾ ಪತ್ರಿಕೆಗಳನ್ನು ತುಂಬಾ ದೀರ್ಘಕಾಲದ ತನಕ ಬಳಸದೆ ಇದ್ದರೆ ಆಗ ಅದು ಹಳದಿ ಬಣ್ಣಕ್ಕೆ ತಿರುಗುವುದು. ಪುಟಗಳು ಹಳದಿ ಬಣ್ಣಕ್ಕೆ ತಿರುಗುವ ಹಿಂದೆ ವೈಜ್ಞಾನಿಕವಾದ ಕಾರಣಗಳು ಇವೆ. ಇದರ ಬಗ್ಗೆ ನೀವು ಈ ಲೇಖನದಲ್ಲಿ ಮತ್ತಷ್ಟು ತಿಳಿಯಿರಿ....

ಕಾಗದವನ್ನು ಮರದಿಂದ ತಯಾರಿಸಲಾಗುವುದು

ಕಾಗದವನ್ನು ಮರದಿಂದ ತಯಾರಿಸಲಾಗುವುದು

ಕಾಗದವನ್ನು ಸಾಮಾನ್ಯವಾಗಿ ಮರದ ಬಿಳಿ ಸೆಲ್ಯುಲಸ್ ನಿಂದ ತಯಾರಿಸಲಾಗುತ್ತದೆ. ಮರದಲ್ಲಿ ಲಿಗ್ನಿನ್ ಎನ್ನುವ ಕಡು ಅಂಶವಿದ್ದು, ಇದು ಕೂಡ ಕಾಗದ ತಯಾರಿಕೆಯ ಅಂಶವಾಗಿದೆ.

 ಲಿಗ್ನಿನ್ ಬಗ್ಗೆ

ಲಿಗ್ನಿನ್ ಬಗ್ಗೆ

ಲಿಗ್ನಿನ್ ಎನ್ನುವ ಅಂಶವು ಮರವು ತುಂಬಾ ಕಠಿಣವಾಗಿ, ನೇರವಾಗಿ ಬೆಳೆಯಲು ನೆರವಾಗುವುದು. ಸೆಲ್ಯುಲಸ್ ನಾರಿನಾಂಶವು ಜತೆಯಾಗಿರಲು ಲಿಗ್ನಿನ್ ಅಂಟಿನಂತೆ ಕೆಲಸ ಮಾಡುವುದು. ಲಿಗ್ನಿನ್ ಗಾಳಿ ಮತ್ತು ಬಿಸಿಲಿಗೆ ಒಡ್ಡುವುದರಿಂದ ಕಾಗದದ ಬಣ್ಣವು ಹಳದಿಯಾಗುವುದು.

Most Read:ಡಜನ್ ಗಟ್ಟಲೆ ಪ್ರವಾಸಿಗರನ್ನು ಆಕರ್ಷಿಸಿರುವ ಥಾಯ್ಲೆಂಡ್ ನ ಗವಿಮಾನವ'!

 ಕಾಗದ ಹಳದಿಯಾಗಲು ಕಾರಣವೇನು?

ಕಾಗದ ಹಳದಿಯಾಗಲು ಕಾರಣವೇನು?

ಲಿಗ್ನಿನ್ ಅಣುಗಳು ಗಾಳಿಯಲ್ಲಿರುವ ಆಕ್ಸಿಜನ್ ಗೆ ಒಡ್ಡಿಕೊಂಡಾಗ ಇದು ಬದಲಾಗಲು ಆರಂಭವಾಗುವುದು ಮತ್ತು ಸ್ಥಿರತೆ ಕಡಿಮೆಯಾಗುವುದು. ಲಿಗ್ನಿನ್ ಹೆಚ್ಚು ಬೆಳಕನ್ನು ಹೀರಿಕೊಳ್ಳುವುದು. ಇದರ ಪರಿಣಾಮ ಕಾಗದದ ಬಣ್ಣ ಕಡುವಾಗುವುದು.

 ಲಿಗ್ನಿನ್ ಕಡಿಮೆಯಿದ್ದರೆ ಕಾಗದ ಬಿಳಿ

ಲಿಗ್ನಿನ್ ಕಡಿಮೆಯಿದ್ದರೆ ಕಾಗದ ಬಿಳಿ

ಲಿಗ್ನಿನ್ ನ್ನು ಹೆಚ್ಚು ತೆಗೆದರೆ ಅದು ಕಾಗದದ ಬಣ್ಣವು ಬಿಳಿಯಾಗಿಯೇ ಇರುವುದು. ಕಾಗದ ತಯಾರಕರು ಮರದಲ್ಲಿರುವ ಲಿಗ್ನಿನ್ ಅಂಶವನ್ನು ತೆಗೆಯಲು ಬ್ಲೀಚಿಂಗ್ ಬಳಸುವರು. ಪತ್ರಿಕೆ ಹಾಗೂ ಪಠ್ಯ ಪುಸ್ತಕಗಳಿಗೆ ಬಳಸುವಂತಹ ಕಾಗದದ ಗುಣಮಟ್ಟವು ತುಂಬಾ ಕೆಳಮಟ್ಟದ್ದಾಗಿರುವುದು. ಇದರಿಂದಾಗಿ ಪತ್ರಿಕೆ ಹಾಗೂ ಪಠ್ಯ ಪುಸ್ತಕದ ಪುಟಗಳು ಒಂದು ಹಂತದ ಬಳಿಕ ಹಳದಿ ಬಣ್ಣಕ್ಕೆ ತಿರುಗುವುದು.

Most Read:ನೀವು ಅರಿಯದೇ ಇರುವ ಹಣಗಳಿಕೆಯ 7 ಸೂತ್ರಗಳು ಇಲ್ಲಿದೆ ನೋಡಿ

ಕಾಗದದ ಬ್ಯಾಗ್ ಗಳು ಗಟ್ಟಿಮುಟ್ಟಾಗಿರುವುದು

ಕಾಗದದ ಬ್ಯಾಗ್ ಗಳು ಗಟ್ಟಿಮುಟ್ಟಾಗಿರುವುದು

ಕಂದು ಬಣ್ಣದ ಕಾಗದದ ಬ್ಯಾಗ್ ಮತ್ತು ಬಾಕ್ಸ್ ತಯಾರಿಸುವವರು ಲಿಗ್ನಿನ್ ನ ಲಾಭ ಪಡೆದುಕೊಳ್ಳುವರು. ಇದರಿಂದಾಗಿ ಕಾಗದದ ಬ್ಯಾಗ್ ತುಂಬಾ ಕಟ್ಟಿಮುಟ್ಟಾಗಿರುವುದು. ಇದನ್ನು ಬ್ಲೀಚ್ ಮಾಡದೆ ಇರುವ ಕಾರಣದಿಂದಾಗಿ ಇದು ಪತ್ರಿಕೆಗಳ ಕಾಗದಕ್ಕಿಂತ ಹೆಚ್ಚು ಕಂದು ಬಣ್ಣದಿಂದ ಕೂಡಿರುವುದು. ಇದರಿಂದಾಗಿಯೇ ಕಾಗದದ ಬ್ಯಾಗ್ ಗಳ ಗಟ್ಟಿಯಾಗಿರುವುದು. ಇಂತಹ ಇನ್ನಷ್ಟು ವಿಷಯಗಳನ್ನು ನೀವು ತಿಳಿಯಲು ಬಯಸುವಿರಾದರೆ ಆಗ ನೀವು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.

English summary

Why Do Pages Turn Yellow Over Time?

Every time you see an old book, have you ever wondered as to why the pages of the book have turned yellow? Even though the books or newspapers haven't been used for a while, the pages seem to turn yellow, and the reason for the papers to turn yellow is entirely scientific.Find out more about the reason why newspapers and pages in old books turn yellow.
X
Desktop Bottom Promotion