For Quick Alerts
ALLOW NOTIFICATIONS  
For Daily Alerts

ಯಾವ್ಯಾವ ರಾಶಿಯವರು ಪರಸ್ಪರ ಶತ್ರುಗಳಾಗಿರುತ್ತಾರೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ

|

ಪರಿಚಯ ಎನ್ನುವುದು ಆಕಸ್ಮಿಕವಾಗಿರಬಹುದು. ಅವರಲ್ಲಿ ಕೆಲವರು ಬಹಳ ಆತ್ಮೀಯ ವ್ಯಕ್ತಿಗಳಾಗಿರುತ್ತಾರೆ. ಇನ್ನೂ ಕೆಲವು ವ್ಯಕ್ತಿಗಳು ಆತ್ಮೀಯತೆಯಿಂದ ಜಾರಿ ಶತ್ರುಗಳಂತೆಯೂ ವರ್ತಿಸಬಹುದು. ಯಾರು ಯಾವ ರೀತಿಯ ಗುಣವನ್ನು ಹೊಂದಿರುತ್ತಾರೆ. ಅವರ ಗುಣಗಳೇನು? ಎನ್ನುವುದನ್ನು ಅಷ್ಟು ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗದೆ ಇರಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಚಕ್ರಗಳಿಗೆ ಅನುಗುಣವಾಗಿ ಯಾರು ಹಿತವರು ಯಾರು ಶತ್ರುಗಳು ಎಂದು ನಿರ್ಧರಿಸಬಹುದು.

ಹೌದು, ಕೆಲವು ರಾಶಿಚಕ್ರದ ಜನರು ನಕ್ಷತ್ರಗಳು ಹಾಗೂ ಗ್ರಹಗಳ ಪ್ರಭಾವದಿಂದ ಶತ್ರುಗಳಾಗಿ ಬದಲಾಗುವರು. ಕೆಲವೊಮ್ಮೆ ಅವರು ಬಹಳ ಆತ್ಮೀಯ ಸ್ನೇಹಿತರು ಅಥವಾ ಬಂಧುಗಳಾಗಿ ಪರಿಚಿತರಾಗಿದ್ದರೂ ನಂತರ ಶತ್ರುಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗುವುದು. ನಿಮಗೆ ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಯಾವ ರಾಶಿಯ ವ್ಯಕ್ತಿಗಳು ಶತ್ರುಗಳಾಗುವರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಮೇಷರಾಶಿಯ ವ್ಯಕ್ತಿಗಳಿಗೆ ಅದೇ ರಾಶಿಯ ವ್ಯಕ್ತಿಗಳು ಶತ್ರುಗಳಾಗುವರು ಎನ್ನಬಹುದು. ಏಕೆಂದರೆ ಇವರಲ್ಲಿ ಸಮಾನವಾದ ಉತ್ಸಾಹ ಹಾಗೂ ಹುರುಪಿನಿಂದ ಕೂಡಿರುತ್ತಾರೆ. ಇವರಲ್ಲಿ ನಾಯಕನಾಗುವಂತಹ ಗುಣಗಳು ನೈಸರ್ಗಿಕವಾಗಿಯೇ ಇರುತ್ತದೆ. ಹಾಗಾಗಿ ಇಬ್ಬರಲ್ಲೂ ಯುದ್ಧಗಳು ಉಂಟಾಗುವ ಸಾಧ್ಯತೆಗಳಿರುತ್ತವೆ.

 ವೃಷಭ

ವೃಷಭ

ವೃಷಭ ರಾಶಿಯವರಿಗೆ ಸಿಂಹ ರಾಶಿಯವರು ಅತ್ಯಂತ ದೊಡ್ಡ ಶತ್ರುವಾಗಿರುತ್ತಾರೆ. ವೃಷಭ ರಾಶಿಯವರಲ್ಲಿ ಸೋಮಾರಿತನ ಹೆಚ್ಚಾಗಿರುತ್ತದೆ. ಸಿಂಹ ರಾಶಿಯವರಲ್ಲಿ ಪ್ರಾಬಲ್ಯ ನೋಟವನ್ನು ಹೊಂದಿರುತ್ತಾರೆ. ವೃಷಭ ರಾಶಿಯವರು ಸಿಂಹ ರಾಶಿಯವರಿಗೆ ತದ್ವಿರುದ್ಧವಾದ ಗುಣಗಳನ್ನು ಹೊಂದಿರುತ್ತಾರೆ. ಇವರಲ್ಲಿ ಪರಸ್ಪರ ಶತ್ರುಗಳಾಗಿರುತ್ತಾರೆ.

Most Read: ಬಾಳೆ ಎಲೆಯಲ್ಲಿ ಆಹಾರವನ್ನಿಟ್ಟು ಕಾಗೆಗೆ ಉಣಬಡಿಸುವ 'ಪಿತೃ ಪಕ್ಷದ' ಮಹತ್ವ

ಮಿಥುನ

ಮಿಥುನ

ಈ ರಾಶಿಯವರು ಸಾಮಾನ್ಯವಾಗಿ ಸ್ವತಂತ್ರ, ಪ್ರಸಿದ್ಧ, ಸೂಕ್ಷ್ಮ ಹಾಗೂ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಕರ್ಕ ರಾಶಿಯವರು ಸಹ ಇವರಂತೆಯೇ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಇವರಲ್ಲಿ ಪರಸ್ಪರ ಸಂವಹನ ನಡೆಸಲು ಸಾಧ್ಯವಿಲ್ಲ. ಸಮಾನ ಗುಣಗಳು ಪರಸ್ಪರ ಇಬ್ಬರಲ್ಲೂ ಇರುವುದರಿಂದ ಹೊಂದಾಣಿಕೆ ಹಾಗೂ ಸಹಭಾಗಿತ್ವಕ್ಕೆ ತೊಂದರೆ ಉಂಟಾಗುವುದು. ಜೊತೆಗೆ ಇಬ್ಬರಲ್ಲೂ ಶತ್ರುತ್ವ ಇರುವುದು.

 ಕನ್ಯಾ

ಕನ್ಯಾ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ಮತ್ತು ಕುಂಭ ರಾಶಿಯವರು ಪರಸ್ಪರ ಶತ್ರುಗಳಾಗಿರುತ್ತಾರೆ ಎಂದು ಹೇಳಲಾಗುವುದು. ಈ ಎರಡು ರಾಶಿ ಚಕ್ರದವರು ಸ್ವಯಂ ಆಡಳಿತ ಚಿಹ್ನೆಗಳಾಗಿರುತ್ತಾರೆ. ಕನ್ಯಾ ರಾಶಿಯವರಲ್ಲಿ ಹೆಚ್ಚು ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಗುಣಗಳಿರುತ್ತವೆ. ಇಬ್ಬರಲ್ಲೂ ಸ್ಪಲ್ಪ ಪ್ರಮಾಣದ ಆಕ್ರಮಣಕಾರಿ ಹಾಗೂ ಹಠಾತ್ ಪ್ರವೃತ್ತಿಯನ್ನು ಹೊಂದಿರುವುದರಿಂದ ಪರಸ್ಪರ ಶತ್ರು ಭಾವನೆಗಳು ಇರುತ್ತವೆ.

 ತುಲಾ

ತುಲಾ

ತುಲಾ ರಾಶಿಯವರು ಹಾಗೂ ಮಕರ ರಾಶಿಯವರ ನಡುವೆ ಶತ್ರುತ್ವ ಭಾವನೆಗಳಿರುತ್ತವೆ ಎನ್ನಲಾಗುವುದು. ಇವರು ಪರಸ್ಪರ ಒಟ್ಟಾಗಿ ಕೆಲಸ ನಿರ್ವಹಿಸಲು ಕಷ್ಟವಾಗುವುದು. ಇವರು ಪ್ರಾರಂಭಿಕರು, ಸಂಪ್ರದಾಯವಾದಿಗಳು, ಮುಕ್ತವಾದ ಮನಃಸ್ಥಿತಿಯವರಾಗಿರುವುದರಿಂದ ಪರಸ್ಪರ ಕಲಹ ಉಂಟಾಗುವುದು. ತುಲಾ ರಾಶಿಯವರು ಗುಣಮಟ್ಟದ ಸಮಯವನ್ನು ಪ್ರೀತಿಸುತ್ತಾರೆ. ಮಕರ ರಾಶಿಯವರು ಸದಾ ಪರಿಶ್ರಮದಿಂದ ಇರಲು ಬಯಸುತ್ತಾರೆ. ಈ ಗುಣಗಳು ಇಬ್ಬರಲ್ಲೂ ಪರಸ್ಪರ ಅನುಮಾನ ಹಾಗೂ ಬೇರ್ಪಟ್ಟ ಗುಣಗಳಿಂದ ಕೂಡಿರುವುದರಿಂದ ಕಲಹ ಹಾಗೂ ಶತ್ರು ಭಾವನೆ ಬೆಳೆಯುವುದು.

Most Read: ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತಿನ ಲಕ್ಷಣಗಳು ಹಾಗೂ ಚಿಕಿತ್ಸೆ

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ಮತ್ತು ಕುಂಭ ರಾಶಿಯವರ ನಡುವೆ ಸಂಬಂಧವು ಹೆಚ್ಚು ಅನಿರೀಕ್ಷಿತವಾಗಿರುತ್ತದೆ. ಈ ಎರಡು ರಾಶಿಚಕ್ರದವರ ನಡುವೆ ಆಸಕ್ತಿದಾಯಕ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ. ಇಬ್ಬರಲ್ಲಿ ಉಂಟಾಗುವ ಸಣ್ಣ ಸಮಸ್ಯೆ ಅಥವಾ ಮನಃಸ್ಥಾಪವು ದೊಡ್ಡ ಶತ್ರು ಭಾವನೆಯನ್ನು ಮೂಡಿಸುವುದು. ಪರಸ್ಪರ ಇಬ್ಬರಲ್ಲೂ ತಾವು ಶ್ರೇಷ್ಠ ಎನ್ನುವ ಭಾವನೆಯು ತೀವ್ರತರಹದ ಕ್ರಮವನ್ನು ಕೈಗೊಳ್ಳುವಂತೆ ಮಾಡುವುದು.

ಧನು

ಧನು

ಧನು ಮತ್ತು ಮೀನ ರಾಶಿಯವರು ಪರಸ್ಪರ ಶತ್ರುತ್ವ ಭಾವನೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಧನುರಾಶಿಯವರ ಒರಟು ಸ್ವಭಾವವು ಮೀನ ರಾಶಿಯವರಿಗೆ ನೋವನ್ನುಂಟುಮಾಡುವುದು. ಧನು ಮತ್ತು ಮೀನ ರಾಶಿಯವರ ನಡುವೆ ಪರಸ್ಪರ ಗುಣಗಳು ವಿರುದ್ಧವಾಗಿರುತ್ತವೆ. ಜೊತೆಗೆ ಪರಸ್ಪರ ಹೊಂದಾಣಿಕೆ ಹಾಗೂ ಮುಕ್ತ ಭಾವನೆಗಳು ಇಲ್ಲದೆ ಇರುವುದರಿಂದ ಶತ್ರು ಭಾವನೆಗಳು ಹೆಚ್ಚುವುದು ಎಂದು ಹೇಳಲಾಗುತ್ತದೆ.

English summary

Which Zodiac Sign Is Your Worst Enemy?

As we go by our lives, we bond with a lot of people and make countless relationships. Few of them become best friends; many of them remain well-known acquaintances, and few of them turn into enemies as well. It’s hard to tell who’ll turn into whom, but there’s one easy way to predict who might turn out to be your worst enemy and that’s by comparing with Zodiac sign.Here we look into which Zodiac sign might be your worst enemy....
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more