Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ದುರ್ಗಾ ದೇವಿಯ ಯಾವ ರೂಪವನ್ನು ಪೂಜಿಸಬೇಕು?
ತಾಯಿ ದುರ್ಗೆಯು ಶಕ್ತಿಯ ದೇವತೆ. ಆಕೆ ತನ್ನನ್ನು ಒಳ್ಳೆಯ ಹೃದಯ ಹಾಗೂ ಭಕ್ತಿಯಿಂದ ಪೂಜಿಸುವ ಭಕ್ತರಿಗೆ ರಕ್ಷಣೆ ನೀಡುವರು. ಆಕೆ ಜ್ಞಾನದ ಬೆಳಕನ್ನು ನೀಡಿ, ಲೌಕಿಕ ಲೋಕದಲ್ಲಿ ಇರುವಂತಹ ಮೋಹವನ್ನು ನಿವಾರಣೆ ಮಾಡುವರು. ತಾಯಿ ದುರ್ಗೆಯು ಪಾರ್ವತಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ದುಷ್ಟರ ಸಂಹಾರಕ್ಕಾಗಿ ಆಕೆ ಈ ರೂಪ ತಾಳುವಳು. ಮಹಿಷಾಸುರನನ್ನು ಕೊಲ್ಲಲು ದೇವಿಯು 9 ರೂಪಗಳನ್ನು ತಳೆದಳು ಎನ್ನುವ ಪ್ರತೀತಿಯಿದೆ.

ತಾಯಿ ದುರ್ಗೆಯನ್ನು ಆರಾಧಿಸಲು ನವರಾತ್ರಿಯು ತುಂಬಾ ಪವಿತ್ರ ಸಮಯವೆಂದು ಪರಿಗಣಿಸಲಾಗಿದೆ. ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ದೇವಿಯ ಯಾವ ರೂಪವನ್ನು ಪೂಜಿಸಬೇಕು ಎಂದು ತಿಳಿಯಿರಿ. ರಾಶಿಚಕ್ರಕ್ಕೆ ಅನುಗುಣವಾಗಿ ಪೂಜಿಸಬೇಕಾದ ದೇವಿಯ ರೂಪಗಳನ್ನು ಇಲ್ಲಿ ನೀಡಲಾಗಿದೆ.

ಮೇಷ
ಮೇಷ ರಾಶಿಯವರು ಶೈಲಪುತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಬೇಕು. ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಮೇಷ ರಾಶಿಯವರು ದುರ್ಗಾ ಚಾಲೀಸ್ ಮತ್ತು ಸಪ್ತಶತಿ ಪಥ ಪಠಿಸಬಹುದು.

ವೃಷಭ
ವೃಷಭ ರಾಶಿಯವರು ತಾಯಿ ಗೌರಿಯನ್ನು ಪೂಜಿಸಬೇಕು. ಆಕೆಯನ್ನು ಲಲಿತಾ ಎಂದು ಕರೆಯಲಾಗುತ್ತದೆ ಮತ್ತು ಲಲಿತಾ ಸಹಸ್ತನಾಮ ಪಠಿಸುವ ಮೂಲಕ ವೃಷಭ ರಾಶಿಯವರು ತಾಯಿಯ ಕೃಪೆಗೆ ಪಾತ್ರರಾಗಬಹುದು. ತಾಯಿಯು ಮನಸ್ಸಿಗೆ ಶಾಂತಿ ನೀಡುವಳು. ಅವಿವಾಹಿತ ಮಹಿಳೆಯರಿಗೆ ಸೂಕ್ತ ವರ ಕರುಣಿಸುವಳು.

ಮಿಥುನ
ಮಿಥುನ ರಾಶಿಗೆ ಸಂಬಂಧಿಸಿದವರು ಬ್ರಹ್ಮಚಾರಣಿ ದೇವಿಯ ಪೂಜೆ ಮಾಡಬೇಕು. ಆಕೆ ನಿಮ್ಮ ಶೈಕ್ಷಣಿಕ ಹಾದಿಯಲ್ಲಿ ಬರುವ ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಣೆ ಮಾಡುವರು. ಭಕ್ತರು ತಾರಾ ಕವಚ ಪಠಿಸಬಹುದು.

ಕರ್ಕಾಟಕ
ಕರ್ಕಾಟಕ ರಾಶಿಯವರು ಕೂಡ ಶೈಲಪುತ್ರಿ ದೇವಿಯ ಪೂಜೆ ಮಾಡಬೇಕು. ಲಕ್ಷ್ಮೀ ಸಹಸ್ರನಾಮ ಪಠಿಸುವುದರಿಂದ ಲಾಭವಾಗುವುದು. ದೇವಿಯು ಸಮೃದ್ಧಿ ನೀಡುವ ಜತೆಗೆ ಭಯ ನಿವಾರಿಸುವಳು.

ಸಿಂಹ
ಕುಷ್ಮಾಂದ ದೇವಿಯ ರೂಪವನ್ನು ಸಿಂಹ ರಾಶಿಯವರು ಪೂಜಿಸಬೇಕು. ಆಕೆಗೆ ಸಂಬಂಧಿಸಿರುವ ಯಾವುದೇ ಮಂತ್ರವನ್ನು 505 ಸಲ ಪಠಿಸುವುದು ತುಂಬಾ ಲಾಭಕಾರಿಯಾಗಲಿದೆ. ಜೀವನದಲ್ಲಿನ ಯಶಸ್ಸಿಗಾಗಿ ಆಕೆಯನ್ನು ಪೂಜಿಸಿ.

ಕನ್ಯಾ
ಕನ್ಯಾ ರಾಶಿಯವರು ಬ್ರಹ್ಮಚಾರಿಣಿ ದೇವಿಯ ಪೂಜೆ ಮಾಡಬೇಕು. ಆಕೆಯು ಭಕ್ತರಿಗೆ ಸರಸ್ವತಿ ದೇವಿಯಂತೆ ಜ್ಞಾನ ನೀಡುವರು. ಇದರ ಹೊರತಾಗಿ ಲಕ್ಷ್ಮೀ ಮಂತ್ರವನ್ನು ಪಠಿಸಬಹುದು.

ತುಲಾ
ತುಲಾ ರಾಶಿಯಲ್ಲಿ ಹುಟ್ಟಿದವರು ಮಹಾಗೌರಿಗೆ ಪೂಜೆ ಸಲ್ಲಿಸಬೇಕು. ಆಕೆಯು ಭಕ್ತರ ವೈವಾಹಿಕ ಜೀವನ ಉತ್ತಮವಾಗಲು ಮತ್ತು ಅವಿವಾಹಿತರಿಗೆ ಒಳ್ಳೆಯ ಸಂಗಾತಿ ಸಿಗಲು ವರ ನೀಡುವರು. ದುರ್ಗಾ ಸಪ್ತಶಾತಿಯ ಪ್ರಥಮ ಸ್ತೋತ್ರ ಪಠಿಸಬೇಕು. ಮಹಾಕಾಳಿ ಸ್ತೋತ್ರ ಅಥವಾ ಕಾಳಿ ಚಾಲೀಸ ಪಠಿಸಿದರೆ ಉತ್ತಮ.

ವೃಶ್ಚಿಕ
ದುರ್ಗಾ ದೇವಿಯ ಸ್ಕಂದಮಾತಾ ರೂಪಕ್ಕೆ ವೃಶ್ಚಿಕ ರಾಶಿಯವರು ಪೂಜೆ ಮಾಡಬೇಕು. ಆಕೆಯು ಸಂತಾನಭಾಗ್ಯ ನೀಡುವರು ಮತ್ತು ಬೇರೆ ವರಗಳನ್ನು ಕೂಡ ನೀಡು ಕೇಳಬಹುದು. ದುರ್ಗಾ ಸಪ್ತಶಾತಿ ಪಠಿಸಿದರೆ ಸರಿಯಾದ ಲಾಭವಾಗಲಿದೆ.

ಧನು
ದುರ್ಗಾದೇವಿಯ ಚಂದ್ರಘಂಟಾ ರೂಪವನ್ನು ಧನು ರಾಶಿಯವರು ಪೂಜಿಸಬೇಕು. ಜಪಮಾಲೆಯೊಂದಿಗೆ ದೇವಿಯ ಮಂತ್ರವನ್ನು ಪಠಿಸಬೇಕು. ಚಂದ್ರಘಂಟಾ ದೇವಿಯನ್ನು ಪೂಜಿಸಿದರೆ ಎಲ್ಲಾ ನಕಾರಾತ್ಮಕ ಶಕ್ತಿಯು ದೂರವಾಗಿ, ಮಾನಸಿಕ ನೆಮ್ಮದಿ ಸಿಗುವುದು.

ಮಕರ
ಮಕರ ರಾಶಿಯವರು ತಾಯಿ ಕಾಲರಾತ್ರಿ ಪೂಜೆ ಮಾಡಬೇಕು. ಈಕೆ ಭಕ್ತರ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ ನಿವಾರಣೆ ಮಾಡುವರು. ಎಲ್ಲಾ ನಕಾರಾತ್ಮಕ ಶಕ್ತಿ ದೂರ ಮಾಡಿ, ದುಷ್ಟ ಶಕ್ತಿಗಳಿಂದ ಭಕ್ತರನ್ನು ಕಾಪಾಡುವರು.

ಕುಂಭ
ಕುಂಭ ರಾಶಿಯವರು ಕೂಡ ಕಾಲರಾತ್ರಿ ದೇವಿಯ ಪೂಜೆ ಮಾಡಬೇಕು. ಕುಂಭ ರಾಶಿಯವರು ದುರ್ಗಾ ಮಂತ್ರ ಮತ್ತು ದುರ್ಗಾ ದೇವಿ ಕವಚ ಪಠಿಸಬೇಕು.

ಮೀನ
ಮೀನ ರಾಶಿಯವರು ಚಂದ್ರಘಂಟಾ ದೇವಿಯ ರೂಪ ಪೂಜೆ ಮಾಡಬೇಕು. ಜೀವನದಲ್ಲಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ ಕನಸುಗಳನ್ನು ನನಸಾಗಿಸಲು ನೆರವಾಗುವುದು.ಮೀನ ರಾಶಿಯವರು ಬಾಗ್ಲಮುಖಿ ಮಂತ್ರವನ್ನು ಪಠಿಸಿ ದುರ್ಗೆಯ ಆಶೀರ್ವಾದ ಪಡೆಯಬಹುದು.



Click it and Unblock the Notifications