For Quick Alerts
ALLOW NOTIFICATIONS  
For Daily Alerts

ಗ್ಯಾಸ್ ಸಿಲಿಂಡರ್ ಮೇಲೆ ಬರೆದಿರುವ ಅಕ್ಷರ ಮತ್ತು ಸಂಖ್ಯೆಯ ಒಳಾರ್ಥವೇನು?

By Deepu
|

ಮನೆಯಲ್ಲಿರುವ ಗೃಹಿಣಿಯರಿಗೆ ತಿಂಡಿ ತಿನಿಸು ಮಾಡುವುದು ದೈನಂದಿನ ಕೆಲಸವಾದರೂ ಗ್ಯಾಸ್ ಇಲ್ಲದೆಯೇ ಈ ಕೆಲಸ ಮಾಡುವುದು ಕಷ್ಟದ ಕೆಲಸವೇ. ಒಮ್ಮೊಮ್ಮೆ ನೀವು ಅಡುಗೆ ಮಾಡುತ್ತಿರುವ ಸಮಯದಲ್ಲಿ ಗ್ಯಾಸ್ ಕೈ ಕೊಟ್ಟಲ್ಲಿ ನಿಮಗೆ ದಿಕ್ಕೇ ತೋಚದಂತಾಗುತ್ತದೆ. ಒಂದು ರೀತಿಯಲ್ಲಿ ಎಲ್‌ಪಿಜಿ ಗ್ಯಾಸ್ ನಮ್ಮ ದೈನಂದಿನ ಜೀವನದ ಒಂದು ಭಾಗವೇ ಆಗಿದೆ. ಗ್ಯಾಸ್ ಒಲೆಯನ್ನು ಬಳಸುವ ಸಮಯದಲ್ಲಿ ನೀವು ಹೆಚ್ಚುವರಿ ಎಚ್ಚರಿಕೆಯನ್ನು ಪಾಲಿಸಬೇಕು.

ಇಂದಿನ ಲೇಖನದಲ್ಲಿ ಗ್ಯಾಸ್ ಸಿಲಿಂಡರ್‌ನಲ್ಲಿ ಬರೆದಿರುವ ಅನನ್ಯ ಸಂಖ್ಯೆಯ ಬಗ್ಗೆ ನಾವು ಮಾಹಿತಿಯನ್ನು ನೀಡಲಿದ್ದೇವೆ. ಗ್ಯಾಸ್ ವಿತರಿಸುವ ವ್ಯಕ್ತಿಯಿಂದ ನೀವು ಗ್ಯಾಸ್ ಪಡೆಯುತ್ತಿದ್ದಲ್ಲಿ ಹ್ಯಾಂಡಲ್‌ಬಾರ್ ಪ್ಲೇಟ್ ಮೇಲೆ ಬರೆದಿರುವ ಸಂಖ್ಯೆಯನ್ನು ಗಮನಿಸಿದ್ದೀರಾ? ಸಿಲಿಂಡರ್ ಮೇಲೆ ಇದನ್ನು ಏಕೆ ಬರೆದಿದ್ದಾರೆ ಎಂಬುದು ನಿಮಗೆ ಗೊತ್ತೇ?

ಒಮ್ಮೊಮ್ಮೆ ಗ್ಯಾಸ್ ಸಿಲಿಂಡರ್ ಸೋರಿಕೆಯುಂಟಾಗಿ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಸಿಲಿಂಡರ್‌ನ ಹ್ಯಾಂಡಲ್ ಇರುವಲ್ಲಿ ಮೆಟಲ್ ಭಾಗದ ಮೇಲೆ ಈ ಸಂಖ್ಯೆಯನ್ನು ಬರೆದಿರುತ್ತಾರೆ. ಇದು ಅಕ್ಷರ ಸಂಖ್ಯಾಯುಕ್ತ ಫಾರ್ಮ್ಯಾಟ್‌ನಲ್ಲಿರುತ್ತದೆ. ಎ, ಬಿ, ಸಿ, ಡಿ ಮತ್ತು ಸಂಖ್ಯೆಯನ್ನು ಒಳಗೊಂಡಿರುತ್ತದೆ. ವರ್ಷದ ತ್ರೈಮಾಸಿಕವನ್ನು ಇದು ಸೂಚಿಸುತ್ತದೆ....

ಸಂಖ್ಯಾಯುಕ್ತ ಫಾರ್ಮ್ಯಾಟ್‌ (ಎ, ಬಿ, ಸಿ, ಡಿ)

ಸಂಖ್ಯಾಯುಕ್ತ ಫಾರ್ಮ್ಯಾಟ್‌ (ಎ, ಬಿ, ಸಿ, ಡಿ)

ಎ - ಜನವರಿ-ಮಾರ್ಚ್ ತ್ರೈಮಾಸಿಕ

ಬಿ - ಏಪ್ರಿಲ್ - ಜೂನ್ ತ್ರೈಮಾಸಿಕ

ಸಿ -ಜುಲೈ - ಸಪ್ಟೆಂಬರ್ ತ್ರೈಮಾಸಿಕ

ಡಿ - ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕ

ಭಾರತದಲ್ಲಿ ಬೇರೆ ಬೇರೆ ಉತ್ಪನ್ನಗಳಿಗೆ ನೀಡಿರುವ ಪ್ರಮಾಣ ಪತ್ರ

ಭಾರತದಲ್ಲಿ ಬೇರೆ ಬೇರೆ ಉತ್ಪನ್ನಗಳಿಗೆ ನೀಡಿರುವ ಪ್ರಮಾಣ ಪತ್ರ

ಕೋಡ್‌ನಲ್ಲಿ ಬರೆದ ಅಕ್ಷರವು ಪರೀಕ್ಷೆ ನಡೆಸಿದ ತಿಂಗಳನ್ನು ಮತ್ತು ಸಂಖ್ಯೆಯು ಪರೀಕ್ಷೆ ನಡೆಸಿದ ವರ್ಷವನ್ನು ತಿಳಿಸುತ್ತದೆ. ಉದಾಹರಣೆಗೆ: ಎ 18 ಎಂದು ಬರೆದಿದ್ದಲ್ಲಿ 2018 ರ ಮಾರ್ಚ್ ತಿಂಗಳಿನ ಪರೀಕ್ಷೆಗಾಗಿ ಅದನ್ನು ಬಳಸಲಾಗಿದೆ ಎಂದಾಗಿದೆ. ಸಿ 17 ಎಂದು ಸಿಲಿಂಡರ್‌ನ ಮೇಲೆ ಬರೆದಿದ್ದರೆ ಕಡ್ಡಾಯವಾಗಿ 2017 ರಲ್ಲಿ ಸಿಲಿಂಡರ್ ಪರೀಕ್ಷೆಯನ್ನು ಮಾಡಬೇಕು ಎಂದಾಗಿದೆ. ಅಂದರೆ ಜುಲೈ-ಸಪ್ಟೆಂಬರ್ ತಿಂಗಳಿನ ಒಳಗೆ.

ಬಿ 17 ಎಂದು ಬರೆದಿರುವ ಸಿಲಿಂಡರ್

ಬಿ 17 ಎಂದು ಬರೆದಿರುವ ಸಿಲಿಂಡರ್

ಬಿ 17 ಎಂದು ಬರೆದಿರುವ ಸಿಲಿಂಡರ್ ಅನ್ನು ಗ್ರಾಹಕರು ಅಕ್ಟೋಬರ್ ತಿಂಗಳಿನಲ್ಲಿ ಪಡೆದುಕೊಂಡಿದ್ದರೆ ಇದನ್ನು ಮರಳಿಸಬೇಕು ಏಕೆಂದರೆ ಕಡ್ಡಾಯ ಪರೀಕ್ಷೆಯನ್ನು ಸರಿಯಾದ ಸಮಯಕ್ಕೆ ಮಾಡಿರುವುದಿಲ್ಲ. ಈ ರೀತಿ ಬಹಳ ಅಪರೂಪವಾಗಿ ಸಂಭವಿಸುತ್ತದೆ. ಸಿಲಿಂಡರ್‌ನ ವಾಲ್ವ್ ಅನ್ನು ನಾವು ಪರಿಶೀಲಿಸಬೇಕು ಲೀಕ್ ಆಗುತ್ತದೆಯೋ ಇಲ್ಲವೋ ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳಬಹುದು.

ಗ್ಯಾಸ್ ಸಿಲಿಂಡರ್ ಅನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಹೇಗೆ ಪರಿಶೀಲಿಸಲಾಗುತ್ತದೆ

ಗ್ಯಾಸ್ ಸಿಲಿಂಡರ್ ಅನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಹೇಗೆ ಪರಿಶೀಲಿಸಲಾಗುತ್ತದೆ

ಬಿಐಎಸ್ 3196 ಪ್ರಮಾಣದ ಮೇಲೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ತಯಾರಿಸಲಾಗುತ್ತದೆ. ಬಿಐಎಸ್ ಲೈಸೆನ್ಸ್ ಅನ್ನು ಹೊಂದಿರುವ ಕಂಪನಿಗಳು ಮತ್ತು ಸಿಸಿಓಇ ಅಂದರೆ ಸ್ಫೋಟಕಗಳ ಮುಖ್ಯ ನಿಯಂತ್ರಕದಿಂದ ಅನುಮೋದನೆಯನ್ನು ಪಡೆದುಕೊಂಡಿರುವ ಸಂಸ್ಥೆಗಳು ಸಿಲಿಂಡರ್ ಅನ್ನು ತಯಾರಿಸ ಬಹುದಾಗಿದೆ. ಸಿಲಿಂಡರ್‌ಗಳನ್ನು ತಯಾರಿಸಿದ ನಂತರ ಪರೀಕ್ಷೆಯನ್ನು ನಡೆಸಲಾಗುತ್ತದೆ. ಬಿಐಎಸ್ ಕೋಡ್ ಮತ್ತು ಗ್ಯಾಸ್ ಸಿಲಿಂಡರ್ 2004 ರ ಪ್ರಕಾರ ಮಾರುಕಟ್ಟೆಯಲ್ಲಿ ಸಿಲಿಂಡರ್ ಅನ್ನು ವಿತರಿಸುವ ಮುನ್ನ ಪರೀಕ್ಷೆಯನ್ನು ನಡೆಸಬೇಕು. ಹತ್ತು ವರ್ಷಗಳ ನಂತರ ಎಲ್ಲಾ ಸಿಲಿಂಡರ್‌ಗಳನ್ನು ದೊಡ್ಡ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಪುನಃ 5 ವರ್ಷಗಳ ಪರಿಶೀಲನೆಯನ್ನು ನಡೆಸುತ್ತಾರೆ. ಒತ್ತಡ ಪರೀಕ್ಷೆಯಲ್ಲಿ ಸಿಲಿಂಡರ್‌ಗಳು ಪಾಸಾದ ನಂತರವೇ ಇದನ್ನು ಮಾರುಕಟ್ಟೆಯಲ್ಲಿ ವಿತರಣೆಗೆ ಕಳುಹಿಸಲಾಗುತ್ತದೆ.

ಸಿಲಿಂಡರ್ 15 ವರ್ಷಗಳ ಬಾಳಿಕೆ ಬರುತ್ತದೆ

ಸಿಲಿಂಡರ್ 15 ವರ್ಷಗಳ ಬಾಳಿಕೆ ಬರುತ್ತದೆ

ಸಾಮಾನ್ಯವಾಗಿ ಸಿಲಿಂಡರ್ 15 ವರ್ಷಗಳ ಬಾಳಿಕೆಯನ್ನು ಪಡೆದುಕೊಂಡಿದೆ. ಈ ಸಮಯದಲ್ಲಿ ಎರಡು ಬಾರಿ ಪರಿಶೀಲನೆಯನ್ನು ನಡೆಸುತ್ತಾರೆ. ಹೈಡ್ರೋ ಟೆಸ್ಟ್ ಸಹಾಯದಿಂದ ನೀರನ್ನು ಭರ್ತಿ ಮಾಡಲಾಗುತ್ತದೆ ಮತ್ತು ಸೋರಿಕೆ ಇದೆಯೇ ಎಂದು ಸಿಲಿಂಡರ್ ಅನ್ನು ಪರಿಶೀಲಿಸಲಾಗುತ್ತದೆ. ಪೆನ್ಯುಮೆಟಿಕ್ ಪರೀಕ್ಷೆಯನ್ನು ನಡೆಸುತ್ತಾರೆ ಮತ್ತು ಐದು ಪಟ್ಟು ಹೆಚ್ಚಿನ ಒತ್ತಡವನ್ನು ಸಿಲಿಂಡರ್‌ನ ಮೇಲೆ ಹಾಯಿಸುತ್ತಾರೆ. ಈ ಎರಡೂ ಪರೀಕ್ಷೆಗಳಲ್ಲಿ ಸಿಲಿಂಡರ್ ವಿಫಲವಾದಲ್ಲಿ ಇದನ್ನು ತಿರಸ್ಕರಿಸಲಾಗುತ್ತದೆ. ಪ್ರತೀ ದಿನ ಬಳಸಲಾಗುವ ಒಟ್ಟು ಸಿಲಿಂಡರ್‌ಗಳಲ್ಲಿ 1.25% ಅನ್ನು ಪರಿಶೀಲನೆಗೆ ಒಳಪಡಿಸುತ್ತಾರೆ ಮತ್ತು ವಿಫಲವಾದುದನ್ನು ತಿರಸ್ಕರಿಸುತ್ತಾರೆ.

ಪರೀಕ್ಷೆಗೆ ಒಳಪಟ್ಟ ನಂತರವೇ ಗ್ಯಾಸ್ ಸಿಲಿಂಡರ್ ನಮ್ಮ ಮನೆಗೆ ತಲುಪುತ್ತದೆ

ಪರೀಕ್ಷೆಗೆ ಒಳಪಟ್ಟ ನಂತರವೇ ಗ್ಯಾಸ್ ಸಿಲಿಂಡರ್ ನಮ್ಮ ಮನೆಗೆ ತಲುಪುತ್ತದೆ

ಈ ರೀತಿಯ ಪರೀಕ್ಷೆಗೆ ಒಳಪಟ್ಟ ನಂತರವೇ ಗ್ಯಾಸ್ ಸಿಲಿಂಡರ್ ನಮ್ಮ ಮನೆಗೆ ತಲುಪುತ್ತದೆ. ಗ್ಯಾಸ್ ವಿತರಿಸುವವರು ಮನೆಗೆ ಗ್ಯಾಸ್ ತಲುಪಿಸಿದ ಸಮಯದಲ್ಲಿ ಒಮ್ಮೆ ಪರಿಶೀಲನೆ ನಡೆಸುವುದರಿಂದ ಯಾವುದೇ ರೀತಿಯ ಹಾನಿ ಸಂಭವಿಸುವುದಿಲ್ಲ.

ನೆನಪಿಡಿ

ನೆನಪಿಡಿ

ಟ್ಯೂಬ್ ಮತ್ತು ರೆಗ್ಯೂಲೇಟರ್‌ಗಳು ಟ್ಯೂಬ್ ಮತ್ತು ರೆಗ್ಯೂಲೇಟರ್‌ಗಳಿಗೆ ಯಾವಾಗಲು ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ನೀಡಬೇಕು. ಏಕೆಂದರೆ ಇವು ಯಾವಾಗಲು ಸೋರಿಕೆಯಾಗುವಂತಹ ಅಪಾಯವನ್ನು ತಮ್ಮಲ್ಲಿ ಅಡಗಿಸಿಕೊಂಡಿರುತ್ತವೆ. ಹಾಗಾಗಿ ಕಾಲಕಾಲಕ್ಕೆ ಇದನ್ನು ನಿರ್ವಹಣೆ ಮಾಡುತ್ತಲೆ ಇರಬೇಕು. ಗ್ಯಾಸ್ ಸಿಲಿಂಡರ್ ಬಳಸುವವರು ಟ್ಯೂಬ್‌ಗಳನ್ನು ನಿಯಮಿತವಾಗಿ ಬದಲಾಯಿಸುತ್ತ ಇದ್ದರೆ ಸೋರಿಕೆಯನ್ನು ತಪ್ಪಿಸಬಹುದು. ಹಳೆಯ ಟ್ಯೂಬ್‍ಗಳನ್ನು ರಿಪೇರಿ ಮಾಡಿ ಬಳಸುವ ಬದಲು, ಅದನ್ನು ಬದಲಾಯಿಸಿ. ಈ ನಿಟ್ಟಿನಲ್ಲಿ ನಿಮ್ಮ ಸಿಲಿಂಡರ್ ಪೂರೈಸುವವರ ಅಥವಾ ವೃತ್ತಿಪರ ಮೆಕಾನಿಕ್‌ನ ಸಹಾಯವನ್ನು ಪಡೆಯುವುದು ಉತ್ತಮ.

English summary

what-is-the-mean-special-digits-on-gas-cylinders

LPG Gas cylinders are an important part of our daily life. It is an essential component of our kitchen which helps in cooking food. But we should be very careful while using it because it can be dangerous also. While receiving a gas cylinder from a delivery man, have you noticed about the number written inside the handlebar plate
Story first published: Wednesday, July 25, 2018, 15:47 [IST]
X
Desktop Bottom Promotion