For Quick Alerts
ALLOW NOTIFICATIONS  
For Daily Alerts

  ಜೂನ್ 18 ರಿಂದ 24ರ ವರೆಗಿನ ವಾರ ಭವಿಷ್ಯ

  By Deepu
  |

  ಸಮಯವು ಉರುಳಿದಂತೆ ದಿನಗಳು ಕಳೆದೆ ಹೋಗುತ್ತವೆ. ನಾವು ಅಂದುಕೊಂಡ ಕೆಲಸ ಕಾರ್ಯಗಳುಹಾಗೇ ಉಳಿದುಕೊಂಡು ಬಿಡುತ್ತವೆ. ಹಾಗಾಗಿ ಸಾಮಾನ್ಯವಾಗಿ ನಮ್ಮ ಬಾಯಲ್ಲಿ ಬರುವ ಸಾಮಾನ್ಯ ಶಬ್ದ ಎಂದರೆ ಸಮಯವಿಲ್ಲ ಎನ್ನುವುದು. ಸಮಯ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ.

  ಅದನ್ನು ಬಳಸಿಕೊಂಡು ಹೇಗೆ ಪ್ರಯೋಜನ ಪಡೆದುಕೊಳ್ಳುತ್ತೇವೆ ಎನ್ನುವುದು ನಮ್ಮ ಕೈಲಿರುವುದು ಎನ್ನುವುದನ್ನು ಪ್ರತಿಯೊಬ್ಬರು ತಿಳಿಯಬೇಕು. ನಿಮಗೂ ನಿಮ್ಮ ಭವಿಷ್ಯದಲ್ಲಿ ಸಮಯ ಎನ್ನುವುದು ಹೇಗೆ ಆಡಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ....

  ಮೇಷ

  ಮೇಷ

  ನೀವು ಯಾವುದೇ ಕೆಲಸ-ಕಾರ್ಯಗಳನ್ನು ಆರಂಭಿಸುವ ಮುನ್ನ ಖಚಿತಪಡಿಸಿಕೊಳ್ಳಿ. ಜೊತೆಗೆ ನಿಮ್ಮ ಸ್ಥಿತಿಯು ಹೆಚ್ಚು ಒತ್ತಡ ಅಥವಾ ಬಿಸಿಯಾದಂತಹ ಪರಿಸ್ಥಿತಿಯಿಂದ ಕೂಡಿರಬಹುದು. ಅಂತಹ ಸ್ಥಿತಿಯಲ್ಲೂ ಸ್ಥಿರವಾದ ನಿರ್ಧಾರ ಹಾಗೂ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆಯನ್ನು ಹೊಂದಿರಬೇಕು. ಈ ವಾರ ಪೂರ್ತಿ ನೀವು ನಿಮ್ಮ ಜೀವನದ ಸುಧಾರಣೆಗೆ ಸಹಾಯವಾಗುವಂತಹ ವಿಷಯಗಳನ್ನು ಪರಿಶೀಲಿಸ ಬೇಕಾಗುವುದು.

  ವೃಷಭ

  ವೃಷಭ

  ಇವರು ಈ ವಾರ ಸಾಕಷ್ಟು ಸುಖಕರವಾದ ಅನುಭವವನ್ನು ಪಡೆದುಕೊಳ್ಳುವರು. ಸ್ನೇಹಿತರು ಅಥವಾ ಕುಟುಂಬದವರ ಜೊತೆ ಪ್ರವಾಸ ಕೈಗೊಳ್ಳುವುದು ಅಥವಾ ರೆಸಾರ್ಟ್‍ಗಳಲ್ಲಿ ತಂಗುವ ಸಾಧ್ಯತೆಗಳಿವೆ. ಔತಣಕೂಟದಂತಹ ಭೋಜನವನ್ನು ಸವಿಯುವರು. ಒಟ್ಟಿನಲ್ಲಿ ಈ ವಾರ ಇವರಿಗೆ ಅತ್ಯಂತ ಸಂತೋಷದ ವಾರವಾಗಲಿದೆ.

  ಮಿಥುನ

  ಮಿಥುನ

  ಇವರು ವಾರದ ಆರಂಭದಲ್ಲಿಯೇ ಉದ್ವಿಗ್ನತೆಯನ್ನು ಹೊಂದುವ ಸಾಧ್ಯತೆಗಳಿವೆ. ಈ ವ್ಯಕ್ತಿಗಳು ನಿಧಾನವಾಗಿ ಮತ್ತು ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು. ಇನ್ನೊಂದೆಡೆ ಇವರು ಆಧ್ಯಾತ್ಮಿಕ ಚಿಂತನೆಗಳ ಕಡೆಗೆ ಚಿತ್ತವನ್ನು ಹರಿಸಬೇಕಿದೆ.

  ಕರ್ಕ

  ಕರ್ಕ

  ಇವರು ತಮ್ಮ ಸುತ್ತಲಿನಲ್ಲಿ ನಡೆಯುವ ನೈಜ ಉದ್ದೇಶಗಳ ಬಗ್ಗೆ ತಿಳಿದುಕೊಳ್ಳುವರು. ಹಿರಿಯರಿಗೆ ಅಗತ್ಯವಾದ ಸಹಾಯ ಹಾಗೂ ಸಲಹೆಯನ್ನು ನೀಡುವರು. ಇವರ ಪ್ರೀತಿಪಾತ್ರರು ಇವರಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಹಾಗೂ ಇವರೊಂದಿಗೆ ಬೆರೆಯಲು ಬಯಸುವರು.

  ಸಿಂಹ

  ಸಿಂಹ

  ಇವರು ತಮ್ಮ ಕುಟುಂಬದ ಆಯವ್ಯಯ ಹಾಗೂ ಬಜೆಟ್‍ಗಳನ್ನು ಪರಿಶೀಲಿಸಲು ಒಂದು ಪರಿಪೂರ್ಣವಾದ ವಾರವಾಗಲಿದೆ. ಹೊಸ ಜೀವನ ಶೈಲಿಗಾಗಿ ಒಂದಿಷ್ಟು ಸಿದ್ಧತೆಯನ್ನು ನಡೆಸಬೇಕು. ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವುದರಿಂದ ಒಂದಿಷ್ಟು ವಸ್ತುಗಳನ್ನು ಖರೀದಿಸಲು ಮುಂದಾಗಬಹುದು.

  ಕನ್ಯಾ

  ಕನ್ಯಾ

  ಈ ವಾರ ಏನಾದರೂ ಒಳ್ಳೆಯದು ಅಥವಾ ಹೊಸತನವನ್ನು ಅನುಭವಿಸಲು ಬಯಸುವರು. ಇವರ ಆರ್ಥಿಕ ಸ್ಥಿತಿಯ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಸಂಬಂಧ ಹಾಗೂ ಸ್ಪರ್ಧೆಯಲ್ಲಿ ಮುಖ್ಯವಾದವುಗಳನ್ನು ಇವರು ನಿರ್ಧರಿಸಬೇಕು.

  ತುಲಾ

  ತುಲಾ

  ಸಂಬಂಧಗಳ ಸುಧಾರಣೆಗೆ ಯಾವ ಬಗೆಯ ಸರಳ ದೃಷ್ಟಿಕೋನವನ್ನು ಹೊಂದಬೇಕು ಎನ್ನುವ ನಿಲುವನ್ನು ಹೊಂದುವಿರಿ. ಮನೆಯಲ್ಲಿ ನಿಮ್ಮ ಇಷ್ಟದ ವ್ಯಕ್ತಿಗಳೊಂದಿಗೆ ಸಮಯವನ್ನು ಕಳೆಯಲು ನಿಮಗೆ ಲಾಭದಾಯಕ ಎಂದು ತೋರುವುದು. ಮತ್ತೊಂದೆಡೆ ಅವರ ಆಧ್ಯಾತ್ಮಿಕ ಹಾಗೂ ಗ್ರಹಿಕೆಯ ಶಕ್ತಿಯು ಈವಾರದಲ್ಲಿ ಹೆಚ್ಚುವುದು.

  ವೃಶ್ಚಿಕ

  ವೃಶ್ಚಿಕ

  ಈ ವಾರ ಇವರು ಕೆಲವೊಂದು ಅಸಹ್ಯ ಶಕ್ತಿಯ ಹೋರಾಟವನ್ನು ಅನುಭವಿಸಬೇಕಾಗುವುದು. ಭಾವನಾತ್ಮಕವಾಗಿ ಬೆದರಿಕೆಗೆ ಒಳಗಾಗುವ ಸಾಧ್ಯತೆಗಳಿವೆ. ಅದು ಅವರಿಗೆ ಅತ್ಯಂತ ಹತ್ತಿರವಾದ ವ್ಯಕ್ತಿಗಳಿಂದಲೇ ಎಂದು ಹೇಳಲಾಗುವುದು. ಇತರರನ್ನು ತಿರಸ್ಕರಿಸುವುದು ಹಾಗೂ ಲಾಭವನ್ನು ಪಡೆಯುವ ವಿಚಾರದಲ್ಲಿ ನಿರಾಕರಣೆಯನ್ನು ತೋರುವರು. ಈ ವಾರದಲ್ಲಿ ವರ್ತನೆಯ ಬದಲಾವಣೆಯನ್ನು ಕಂಡುಕೊಳ್ಳಲು ಉತ್ತಮ ಸಮಯವಾಗಿದೆ.

  ಧನು

  ಧನು

  ಕೆಲಸದಲ್ಲಿ ಅಧಿಕಾರ ಎನ್ನುವುದು ಆಟವಾಡುತ್ತದೆ ಎಂದು ಇವರು ಕಂಡುಕೊಳ್ಳುವರು. ಇವರು ತಮ್ಮ ಶಾಂತ ಹಾಗೂ ನಿರಂತರ ಪರಿಶ್ರಮದ ಮೂಲಕ ಉತ್ತಮ ಸ್ಥಾನ ಪಡೆದುಕೊಳ್ಳುವರು. ಅತಿಯಾಗಿ ಖರ್ಚುಮಾಡುವುದರಿಂದ ಮನಃಸ್ಥಿತಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ.

  ಮಕರ

  ಮಕರ

  ಪ್ರಣಯ ಜೀವನಕ್ಕೆ ಸಂಬಂಧಿಸಿದಂತೆ ಇವರಿಗೆ ಇದು ಅತ್ಯುತ್ತಮವಾದ ವಾರವಾಗಲಿದೆ. ವಾರದ ಅಂತ್ಯದ ವೇಳೆಗೆ ಇವರು ತಮ್ಮ ಅವಕಾಶವನ್ನು ಪಡೆದುಕೊಳ್ಳುವರು. ಇವರು ಯಾರ ಬಗ್ಗೆ ಹೆಚ್ಚು ಕಳಜಿ ವಹಿಸುವರೂ ಅವರಿಂದ ಅನಿರೀಕ್ಷಿತವಾದ ಹಾಗೂ ಅಸಮಾನ್ಯವಾದ ಸಂಗತಿಗಳನ್ನು ಎದುರು ಕಾಣುವರು

  ಕುಂಭ

  ಕುಂಭ

  ಇವರು ಈ ವಾರ ಎಷ್ಟು ಕಾರ್ಯನಿರತರಾಗಿರುತ್ತಾರೆ ಎನ್ನುವುದು ಬಹುಮುಖ್ಯವಾಗಿರುತ್ತದೆ. ಇವರು ತಮ್ಮ ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಸಂಪರ್ಕ ಹೊಂದಲು ಸಾಕಷ್ಟು ಸಮಯ ತೆಗೆದು ಕೊಳ್ಳಬೇಕಾಗುವುದು. ಇವರ ಮೇಲೆ ಯಾರು ಅವಲಂಬಿತರಾಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕಾದ ಸಮಯವಾಗಿದೆ.

  ಮೀನ

  ಮೀನ

  ಮುಂದೆ ಬರಲಿರುವ ಸನ್ನಿವೇಷಗಳಿಗೆ ಹೆಚ್ಚಿನ ಪ್ರಭಾವ ಬೀರಲಾಗುವುದು. ಇವರು ಹಣಕಾಸಿನ ಹಂಚಿಕೆಯಲ್ಲಿ ಒಂದಿಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಉದಾರವಾದ ಧೋರಣೆಯನ್ನು ಉಳಿಸಿಕೊಳ್ಳುವುದರ ಕುರಿತು ಆಸಕ್ತಿ ಹೊಂದುವರು.

  English summary

  Weekly Horoscope Predictions For 18th-24th June, 2018

  With the week's start, we inform you about the weekly forecasts that you can expect for the week of June 18-24th. These predictions are based on your sun sign and reveal about the oncoming week's fortune.From being lucky in love to avoiding the oncoming hurdles as per your zodiac sign, you can check it all.
  Story first published: Tuesday, June 19, 2018, 17:10 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more