For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ 15 ರಿಂದ 21ರ ವರೆಗಿನ ವಾರ ಭವಿಷ್ಯ

|

ಓದುಗರಿಗೋಸ್ಕರ ಮತ್ತೆ ವಾರ ಭವಿಷ್ಯವನ್ನು ತಂದಿದ್ದೇವೆ. ಬೋಲ್ಡ್ ಸ್ಕೈ ವಾರಭವಿಷ್ಯ ಆರಂಭಿಸುತ್ತಿದೆ. ನಿಮ್ಮ ಈ ವಾರದ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಂಡು ಅದರಂತೆ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಬಹುದು. ಅ.15ರಿಂದ ಅ.21ರ ತನಕ ವಾರ ಭವಿಷ್ಯವನ್ನು ನಿಮ್ಮ ಮುಂದಿಡಲಾಗಿದೆ.

ಮೇಷ: ಮಾ.21-ಎ.20

ಮೇಷ: ಮಾ.21-ಎ.20

ನೀವು ಕೇವಲ ನಿಮ್ಮ ಬಗ್ಗೆ ಮಾತ್ರ ಆಲೋಚನೆ ಮಾಡಿಕೊಂಡು ಮುನ್ನಡೆಯುವುದು ಒಳ್ಳೆಯ ವಿಚಾರವಲ್ಲ. ನಿಮ್ಮನ್ನು ಅವಲಂಬಿಸಿರುವವರ ಬಗ್ಗೆ ಕೂಡ ನೀವು ಆಲೋಚಿಸಬೇಕು. ಅವರ ನಂಬಿಕೆಗೆ ದ್ರೋಹ ಮಾಡಬೇಡಿ. ನಿಮ್ಮ ವ್ಯಾಪಾರವು ಈ ವಾರ ಏರುಗತಿಯಲ್ಲಿರುವುದು. ಸರಿಯಾದ ಮಾರ್ಗದಲ್ಲಿ ಸಾಗಿ. ನಿಮ್ಮ ಪ್ರೀತಿಪಾತ್ರರು ಮತ್ತು ಕುಟುಂಬದಿಂದ ಪಡೆಯುವಂತಹ ಪ್ರೋತ್ಸಾಹವು ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಏರಿಸಲಿದೆ. ನಿಮಗೆ ಹೆಚ್ಚಿನ ಧನಲಾಭವಾಗುವ ಕಾರಣದಿಂಧ ಖರ್ಚಿನ ಬಗ್ಗೆ ಚಿಂತೆ ಮಾಡಬೇಡಿ. ಜೀವನ ಸಂಗಾತಿಯು ನಿಮ್ಮ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸದೆ ಸ್ವಲ್ಪ ನಿರಾಶೆಯಾಗಬಹುದು. ಅವರಿಗೆ ಅವರದ್ದೇ ಆಗಿರುವ ಸ್ಥಾನ ನೀಡಿ ಮತ್ತು ಅವರ ಮಾತನ್ನು ಕೇಳಿ.

ವೃಷಭ: ಎ.21-ಮೇ21

ವೃಷಭ: ಎ.21-ಮೇ21

ಈ ವಾರ ನಿಮಗೆ ಹಠಾತ್ ಆಗಿ ಕೆಲಸದ ಒತ್ತಡವು ಹೆಚ್ಚಾಗುವುದು ಹಾಗೂ ನಿಮ್ಮಿಂದ ಉತ್ತಮವಾಗಿರುವ ನಿರೀಕ್ಷೆಯಿರುವುದು. ಇದರಿಂದ ಹಿಂಜರಿಯಬೇಡಿ, ಸರಿಯಾದ ಯೋಜನೆ ಮತ್ತು ಕ್ರಮದಿಂದಾಗಿ ನೀವು ನಿಗದತಿ ಸಮಯಕ್ಕೆ ಮೊದಲೇ ಕೆಲಸವನ್ನು ಪೂರೈಸಲಿದ್ದೀರಿ. ವೈಯಕ್ತಿಕ ಜೀವನದಲ್ಲೂ ಕೆಲವು ಸಮಸ್ಯೆಗಳು ಕಾಣಿಸಬಹುದು. ನೀವು ಸಂಗಾತಿಗೆ ಸ್ವಲ್ಪ ಮಟ್ಟಿನ ಭಾವನೆ ತೋರಿಸುವ ಕಾರಣದಿಂದಾಗಿ ಅವರು ನಿಮ್ಮ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳಬಹುದು. ದೀರ್ಘಕಾಲದ ಹೂಡಿಕೆಯು ನಿಮಗೆ ಹೆಚ್ಚಿನ ಲಾಭ ತರಲಿದೆ. ನಿಮ್ಮ ಎಲ್ಲಾ ಆರ್ಥಿಕ ನಿರ್ಧಾರಗಳು ಯಶಸ್ವಿಯಾಗಲಿದೆ. ಮಧುಮೇಹಿಗಳು ಎಚ್ಚರಿಕೆ ವಹಿಸಿಕೊಳ್ಳಬೇಕು.

Most Read: ಮೊಬೈಲ್ ನಂಬರ್‌ನ್ನು 'ಸಂಖ್ಯಾಶಾಸ್ತ್ರದ ಪ್ರಕಾರ' ಆಯ್ಕೆ ಮಾಡಿ-ಅದೃಷ್ಟವಂತರಾಗಿ!

ಮಿಥುನ: ಮೇ22-ಜೂನ್ 21

ಮಿಥುನ: ಮೇ22-ಜೂನ್ 21

ಉದ್ಯೋಗದ ಕಡೆಯಲ್ಲಿ ನೀವು ಆರಂಭ ಮಾಡಲು ಇದು ಸರಿಯಾದ ಸಮಯ. ನೀವು ಮಾತನಾಡುವುದರಿಂದ ಕೇವಲ ಗುರುತಿಸಲ್ಪಡುವುದು ಮಾತ್ರವಲ್ಲದೆ, ನಿಮ್ಮ ವಿಶ್ವಾಸಾರ್ಹತೆಯನ್ನೂ ಹೆಚ್ಚಿಸುವುದು. ನಿಮ್ಮ ಮನಸ್ಸಿಗೆ ನೆಮ್ಮದಿಯಿಲ್ಲವೆಂದು ಅನಿಸುತ್ತಿದ್ದರೆ ಯಾವುದಾದರೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಶಾಂತಿ ಪಡೆಯಿರಿ. ವೈಯಕ್ತಿಕ ಬದಲು ತುಂಬಾ ಶಾಂತಿಯುತವಾಗಿರಲಿದೆ. ಆದರೆ ನೀವು ಮೂರನೇ ವ್ಯಕ್ತಿಯ ಸಲಹೆ ಪಡೆಯುವ ಮೊದಲು ಸರಿಯಾಗಿ ಆಲೋಚನೆ ಮಾಡಿ. ಯಾಕೆಂದರೆ ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಲಿದೆ. ಹಿಂದಿನ ಹೂಡಿಕೆಗಳು ನಿಮಗೆ ಒಳ್ಳೆಯ ಪ್ರತಿಫಲ ನೀಡುವ ಕಾರಣದಿಂದಾಗಿ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರಲಿದೆ. ಏಕಾಂಗಿಯಾಗಿರುವ ವ್ಯಕ್ತಿಗಳು ಸಾಮಾಜಿಕವಾಗಿ ಬೆರೆಯುವುದನ್ನು ಸ್ವಲ್ಪ ಸಮಯ ಮುಂದೂಡಿ. ಇದು ನಿಮಗೆ ಸರಿಯಾದ ಸಮಯವಲ್ಲ.

ಕರ್ಕಾಟಕ: ಜೂನ್ 22-ಜುಲೈ22

ಕರ್ಕಾಟಕ: ಜೂನ್ 22-ಜುಲೈ22

ಸಾಮಾನ್ಯ ಕೆಲಸವು ನಿಮಗೆ ಅಂತ್ಯದಲ್ಲಿ ಬೇಸರ ಮೂಡಿಸಬಹುದು. ಇದು ನಿಮ್ಮ ಕೆಲಸ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅನಿಸಿದರೆ, ಆಗ ನೀವು ಸ್ವಲ್ಪ ವಿಶ್ರಾಂತಿ ಪಡೆದು ಪ್ರವಾಸ ಕೈಗೊಳ್ಳಿ. ಈ ವಾರ ನಿಮ್ಮ ಗ್ರಹಗತಿಯಲ್ಲಿ ಪ್ರಯಾಣದ ಅವಕಾಶವಿದೆ. ತಿರಸ್ಕರಿಸಲ್ಪಡುವಂತಹ ಭೀತಿಯಿಂದ ನೀವು ಕನಸುಗಳಿಂದ ದೂರವಿರಲಿದ್ದೀರಿ. ನೀವು ಅಪಾಯ ಎದುರಿಸಬೇಕು ಮತ್ತು ಯಶಸ್ಸು ಖಂಡಿತವಾಗಿಯೂ ನಿಮ್ಮ ಕೈಸೇರಲಿದೆ. ವೈವಾಹಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಯಾಕೆಂದರೆ ಅಪಾರ್ಥವು ಸಂಬಂಧವನ್ನು ದುರ್ಬಲಗೊಳಿಸಬಹುದು. ನೀವು ಸಂಗಾತಿ ಜತೆಗೆ ಹೆಚ್ಚಿನ ಸಮಯ ಕಳೆದು ಎಲ್ಲವನ್ನು ಸರಿಪಡಿಸಿಕೊಳ್ಳಿ. ಇದರಿಂದ ಸಂಬಂಧವು ಸುಧಾರಣೆಯಾಗುವುದು. ವಯಸ್ಸಾದವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು.

Most Read: ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್

ಸಿಂಹ: ಜುಲೈ 23-ಆ.21

ಸಿಂಹ: ಜುಲೈ 23-ಆ.21

ನಿಮ್ಮ ಉದ್ಯೋಗದ ಸ್ಥಳದಲ್ಲಿ ಕ್ರಿಯಾತ್ಮಕತೆಯನ್ನು ಹೊರಹಾಕಲು ಇದು ಸರಿಯಾದ ಸಮಯ. ನಿಮಗೆ ಕಟ್ಟಿಹಾಕಿದಂತೆ ಆಗಿದ್ದರೆ ಆಗ ನೀವು ಉದ್ಯೋಗವನ್ನು ಬದಲಾಯಿಸಿ ಮತ್ತು ಕನಸಿಗೆ ರೆಕ್ಕೆ ನೀಡಬಲ್ಲಂತಹ ಕೆಲಸವನ್ನು ಹುಡುಕಿ. ವ್ಯಾಪಾರಿಗಳಿಗೆ, ವ್ಯಾಪಾರದಲ್ಲಿ ಪಾಲುದಾರರಾಗಿರುವವರಿಗೆ ಹೊಸತನ ಬರುವುದು, ನಿಮ್ಮಿಂದ ಅಗತ್ಯವಾಗಿರುವುದು ವ್ಯಾಪಾರಕ್ಕೆ ಬೇಕಾಗಿರುವುದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಆದರೆ ಉಳಿಕೆ ಮತ್ತು ಖರ್ಚನ್ನು ನಿಭಾಯಿಸಬೇಕು. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಅದಾಗ್ಯೂ, ಪ್ರೀತಿಯಲ್ಲಿ ತೊಡಗಿರುವವರ ಸಂಬಂಧದಲ್ಲಿ ಇದು ಸಮಸ್ಯೆ ಉಂಟು ಮಾಡಬಹುದು. ಆದರೆ ಸಂಬಂಧ ಕೊನೆಗೊಳಿಸುವುದು ಪರಿಹಾರವಲ್ಲ. ನೀವು ಪ್ರತಿನಿತ್ಯ ವ್ಯಾಯಾಮ ಮಾಡಿ, ಕ್ರಿಯಾತ್ಮಕವಾಗಿರಿ.

ಕನ್ಯಾ: ಆ.22-ಸೆ.23

ಕನ್ಯಾ: ಆ.22-ಸೆ.23

ಉದ್ಯೋಗದ ಕಡೆಯಲ್ಲಿ ನಿಮ್ಮ ತಂತ್ರ ಯೋಜನೆಯು ದೊಡ್ಡ ಮಟ್ಟದಲ್ಲಿ ಪರೀಕ್ಷೆಯನ್ನು ಎದುರಿಸಲಿದೆ. ನೀವು ತುಂಬಾ ಕಠಿಣ ಪರಿಸ್ಥಿತಿ ಎದುರಿಸಲಿದ್ದೀರಿ ಮತ್ತು ರಾಜತಾಂತ್ರಿಕವಾಗಿ ನೀವು ಕೆಲಸ ಮಾಡುವುದರಿಂದ ಎಲ್ಲವೂ ನಿವಾರಣೆಯಾಗುವುದು. ವ್ಯಾಪಾರಿಗಳು ಕೆಲವು ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗುವರು. ಇದು ಅವರ ವ್ಯಾಪಾರವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಿದೆ. ನೀವು ಪ್ರೀತಿಪಾತ್ರರ ಬಗ್ಗೆ ಹೆಚ್ಚಿನ ಗಮನಹರಿಸುವುದು ಅತೀ ಅಗತ್ಯ. ಯಾಕೆಂದರೆ ಅವರಿಗೆ ಪ್ರೀತಿ ಹಾಗೂ ಬೆಂಬಲ ಬೇಕಾಗಿದೆ. ವಿವಾಹಿತರಿಗೆ ತುಂಬಾ ಸಮಯದಿಂದ ನಿರೀಕ್ಷೆಯಲ್ಲಿ ಶುಭಸುದ್ಧಿ ಈ ವಾರ ಬರಲಿದೆ. ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದನ್ನು ನೀವು ನಂಬಿದ್ದೀರಿ ಮತ್ತು ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಗೊಳಿಸಲಿದೆ. ಆರೋಗ್ಯವು ಉತ್ತಮವಾಗಿರಲಿದೆ.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ಉದ್ಯೋಗದ ಕಡೆ ನೀವು ತುಂಬಾ ಆರಾಮದಾಯಕ ಹಾಗೂ ಸುರಕ್ಷಿತ ಭಾವನೆಯಾಗುವ ಕಾರಣದಿಂದ ಇದು ನಿಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರುವುದು. ಅದಾಗ್ಯೂ, ಈ ವಾರವು ನಿಮ್ಮ ವೈಯಕ್ತಿಕ ಜೀವನದ ಮೇಲೆ ಹೆಚ್ಚು ಗಮನಹರಿಸಬೇಕು. ಯಾಕೆಂದರೆ ಇಲ್ಲಿ ಕೆಲವು ಒತ್ತಡ ವಿಚಾರಗಳ ಕಡೆ ಗಮನಹರಿಸಬೇಕು. ಕುಟುಂಬದ ಸದಸ್ಯರೊಂದಿಗೆ ಮನೋರಂಜನಾ ಪ್ರವಾಸಕ್ಕೆ ಹೋಗುವುದರಿಂದ ಪ್ರತಿಯೊಬ್ಬರ ಮನಸ್ಥಿತಿ ಬದಲಾಗುವುದು ಮಾತ್ರವಲ್ಲದೆ, ನಿಮಗೂ ಸ್ವಲ್ಪ ಆರಾಮವೆನಿಸುವುದು. ನಿಮಗೆ ಈ ವಾರ ಧನಲಾಭವು ಅಧಿಕವಾಗಿರಲಿದೆ. ಇದನ್ನು ಖರ್ಚು ಮಾಡುವ ಬದಲು ಉಳಿಸಲು ಪ್ರಯತ್ನಿಸಿ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಬೇಕೆಂದು ನಿರ್ಧರಿಸುವಂತಹ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಹವಾಮಾನ ಬದಲಾವಣೆಯಿಂದಾಗಿ ಸೋಂಕಿನ ಸಮಸ್ಯೆ ನಿಮಗೆ ಎದುರಾಗಬಹುದು.

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ಈ ವಾರ ನಿಮ್ಮ ಉದ್ಯೋಗದ ಸ್ಥಳದಲ್ಲಿ ಸಾಮರ್ಥ್ಯ ತೋರಿಸಲು ಸರಿಯಾದ ಸಮಯವಾಗಿದೆ. ನೀವು ಹೆಚ್ಚು ಜನಪ್ರಿಯತೆ ಪಡೆಯಲು ನಿಮ್ಮ ಆಲೋಚನೆಗಳನ್ನು ಮುಂದಿಡುವುದು ಸರಿಯಾಗಿರುವುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವು ಹೀಗೆ ಮಾಡದೆ ಇದ್ದರೆ ಆಗ ಹಿಂದೆ ಬೀಳುವಿರಿ. ಸಂಬಂಧವು ಸರಿಯಾದ ಹಾದಿಯಲ್ಲಿಲ್ಲವೆಂದು ನಿಮಗೆ ಅನಿಸಬಹುದು. ಇದಕ್ಕಾಗಿ ನೀವು ಹೆಚ್ಚಿನ ಕಾಳಜಿ ಹಾಗೂ ಪ್ರೀತಿ ತೋರಿಸಬೇಕು. ಇದರಿಂದಾಗಿ ಪ್ರೀತಿಯು ಮರಳಿ ಬರುವುದು. ಆದಾಯದ ಹೊಸ ಮೂಲಗಳು ಕಂಡುಬರುವುದು, ಆರ್ಥಿಕ ಸ್ಥಿತಿಯು ಸ್ಥಿರವಾಗಿರುವುದು. ನಿಮ್ಮ ದೇಹದ ಆರೈಕೆಗೆ ಹೆಚ್ಚಿನ ಸಮಯ ನೀಡಿ ಮತ್ತು ವ್ಯಸ್ತ ಬದುಕಿನಿಂದ ನೀವು ಹೊರಬಂದು ಆರೋಗ್ಯದ ಕಡೆ ಕೂಡ ಗಮನಹರಿಸಿ.

Most Read: ಅಂಗೈಯಲ್ಲಿ ತ್ರಿಕೋನವಿದ್ದರೆ ಅವರ ಅದೃಷ್ಟವೇ ಬದಲಾಗಲಿದೆ!

ಧನು: ನ.23-ಡಿ.22

ಧನು: ನ.23-ಡಿ.22

ಮರೆತುಬಿಡುವಂತಹ ನಿಮ್ಮ ಜಾಯಮಾನವು ಕೆಲವೊಂದು ಸಮಸ್ಯೆಗಳನ್ನು ಉಂಟು ಮಾಡುವುದು. ನೀವು ಕೆಲವೊಂದು ವಿಷಯಗಳನ್ನು ಬರೆದಿಟ್ಟುಕೊಂಡರೆ ಅದರಿಂದ ನೆನಪು ಮಾಡಿಕೊಳ್ಳಲು ಸಾಧ್ಯವಾಗುವುದು. ಒಂದು ಡೈರಿಯನ್ನು ಇದಕ್ಕಾಗಿ ಇಟ್ಟುಕೊಳ್ಳಿ. ವ್ಯಾಪಾರಿಗಳು ತುಂಬಾ ಜಾಗೃತೆಯಿಂದ ತಮ್ಮ ವ್ಯಾಪಾರದ ಒಪ್ಪಂದ ಮಾಡಿಕೊಳ್ಳಬೇಕು. ಒಪ್ಪಂದದಲ್ಲಿ ಬರೆದಿರುವ ಪ್ರತಿಯೊಂದನ್ನು ಸರಿಯಾಗಿ ಓದಬೇಕು. ಕುಟುಂಬದ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳು ಬರಬಹುದು. ನೀವು ಕೋಪಗೊಳ್ಳದೆ, ಶಾಂತಿಯಿಂದ ಎಲ್ಲವನ್ನು ನಿಭಾಯಿಸಬೇಕು. ವೈವಾಹಿಕ ಜೀವನವು ಉತ್ತಮವಾಗಿರಲಿದೆ. ಏಕಾಂಗಿಯಾಗಿರುವರಿಗೆ ಕೆಲವರು ಆಸಕ್ತಿ ಮೂಡಿಸಬಹುದು. ಆದರೆ ಇವರೊಂದಿಗೆ ಬದ್ಧತೆ ಪ್ರದರ್ಶಿಸುವ ಮೊದಲು ನೀವು ಸರಿಯಾಗಿ ಆಲೋಚಿಸಿ. ಧನವು ನಿಧಾನವಾಗಿ ಹರಿದುಬರಲಿದ್ದು, ಖರ್ಚಿನ ಕುದುರೆಗೆ ಲಗಾಮು ಹಾಕಬೇಕು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಆಗ ನೀವು ಉಪ್ಪಿನಾಂಶ ಅಧಿಕವಾಗಿರುವ ಆಹಾರದಿಂದ ದೂರವಿರಿ.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಉದ್ಯೋಗದ ಜಾಗದಲ್ಲಿ ನೀವು ಈ ವಾರ ಯಾರನ್ನೂ ನಂಬದೇ ಇರುವುದು ಉತ್ತಮ. ಯಾಕೆಂದರೆ ಅವರ ಉದ್ದೇಶವು ಬೇರೆಯೇ ಆಗಿರಬಹುದು. ನೀವು ತಂಡದೊಂದಿಗೆ ಕೆಲಸ ಮಾಡುವವರಾದರೆ, ಆಗ ಏಕಾಂಗಿಯಾಗಿ ಕೆಲಸ ಮಾಡುವುದು ಸ್ವಲ್ಪ ಕಷ್ಟದ ವಿಚಾರ. ಇದಕ್ಕಾಗಿ ಏಕಾಂಗಿಯಾಗಿ ಹೆಚ್ಚು ಸಂಶೋಧನೆ ಮಾಡಬೇಕಾಗಬಹುದು. ವ್ಯಾಪಾರಿಗಳು ಪ್ರಯಾಣವನ್ನು ಸ್ವೀಕರಿಸಿಕೊಂಡು ಮುನ್ನಡೆಯಿರಿ, ಇದರಿಂದ ದೀರ್ಘಕಾಲಕ್ಕೆ ನಿಮಗೆ ನೆರವಾಗುವುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದು. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳಿ. ಸಂಗಾತಿಯ ಆರೋಗ್ಯವು ಚಿಂತೆ ಉಂಟು ಮಾಡಬಹುದು. ಅವರಿಗೆ ಹೆಚ್ಚಿನ ಸಮಯ ನೀಡಿ, ಆರೈಕೆ ಮಾಡಿ.

ಕುಂಭ: ಜ.21-ಫೆ.19

ಕುಂಭ: ಜ.21-ಫೆ.19

ಉದ್ಯೋಗದ ಸ್ಥಳದಲ್ಲಿ ನೀವು ಈ ವಾರ ಹೆಚ್ಚಿನ ಗಮನಹರಿಸಬೇಕು. ನಿಮಗೆ ಕೆಲಸವು ಹೆಚ್ಚಾಗಿ, ಕಡಿಮೆ ಸಂಬಳ ಸಿಗುತ್ತಿದೆ ಎನ್ನುವ ಭಾವನೆ ಮೂಡಬಹುದು. ನಿಮ್ಮ ಕಠಿಣ ಪರಿಶ್ರಮವನ್ನು ಹಿರಿಯ ಸಹೋದ್ಯೋಗಿಗಳು ಗುರುತಿಸಿಕೊಳ್ಳುವರು ಮತ್ತು ಇದು ನಿಮಗೆ ಖಂಡಿತವಾಗಿಯೂ ಪ್ರತಿಫಲ ನೀಡಲಿದೆ. ನಿಮ್ಮ ಕೆಲಸದ ಸಮಸ್ಯೆಗಳಿಂದ ಕುಟುಂಬವು ನಿಮಗೆ ಸಮಾಧಾನ ಹಾಗೂ ಖುಷಿ ನೀಡಲಿದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಮತ್ತು ತಮಾಷೆ ಮಾಡುವುದು ನಿಮ್ಮ ಒತ್ತಡ ಕಡಿಮೆ ಮಾಡಲಿದೆ. ಹಠಾತ್ ಆಗಿ ಬರುವಂತಹ ಖರ್ಚಿನಿಂದ ನೀವು ಉಳಿತಾಯವನ್ನು ಬಳಸಿಕೊಳ್ಳಬೇಕಾಗಿ ಬರಬಹುದು. ಇದು ಒಂದು ತಾತ್ಕಾಲಿಕ ಸಮಸ್ಯೆ ಮತ್ತು ಖಂಡಿತವಾಗಿಯೂ ಪರಿಹಾರವಾಗಲಿದೆ. ಆರೋಗ್ಯವಾಗಿರಬೇಕಾದರೆ ನೀವು ಆಹಾರದ ಕಡೆ ಹೆಚ್ಚಿನ ಗಮನಹರಿಸಿ.

ಮೀನ: ಫೆ.20-ಮಾ.20

ಮೀನ: ಫೆ.20-ಮಾ.20

ಕ್ರಿಯಾತ್ಮಕ ಶಕ್ತಿಯು ಇಂದು ಹರಿದುಬರುವ ಕಾರಣದಿಂದಾಗಿ ಈ ವಾರ ನೀವು ಅತ್ಯುತ್ಸಾಹದಲ್ಲಿರಲಿದ್ದೀರಿ. ಗ್ರಹಗತಿಯು ನಿಮಗೆ ಸರಿಯಾದ ವೇದಿಕೆಯನ್ನು ಒದಗಿಸಿಕೊಡಲಿದೆ. ನಿಮಗೆ ಯಾವುದೇ ಚಿಂತೆಯಿದ್ದರೆ ಅದನ್ನು ಬದಿಗಿಟ್ಟು ಮುಂದಕ್ಕೆ ಸಾಗುವುದು ಒಳ್ಳೆಯದು. ವ್ಯಾಪಾರಿಗಳು ತಾವು ಭೇಟಿಯಾಗುವ ಪ್ರತಿಯೊಬ್ಬರನ್ನು ನಂಬಬಾರದು. ಯಾರೊಂದಿಗಾದರೂ ನೀವು ವ್ಯಾಪಾರ ಕುದುರಿಸುವ ಮೊದಲು ಸರಿಯಾಗಿ ಅವರ ಹಿನ್ನೆಲೆ ನೋಡಿಕೊಳ್ಳಿ. ವೈಯಕ್ತಿಕ ಜೀವನದಲ್ಲಿ ಎಲ್ಲವೂ ಸರಿಯಾಗಿರಲಿದೆ. ಕುಟುಂಬ ಮತ್ತು ಜೀವನ ಸಂಗಾತಿಯ ನಡುವೆ ಆಯ್ಕೆ ಮಾಡುವಂತಹ ಪರಿಸ್ಥಿತಿ ನಿಮಗೆ ಬರಬಹುದು. ಈ ವೇಳೆ ನೀವು ಯಾವುದೇ ಒಂದು ಪಕ್ಷದ ಬಗ್ಗೆ ಮಾತನಾಡಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯದ ವಿಚಾರದಲ್ಲಿ ನೀವು ಅನಾರೋಗ್ಯಕರವಾಗಿರುವುದನ್ನು ತಿನ್ನುವುದನ್ನು ಬಿಡಬೇಕು.

English summary

Weekly Horoscope: 15 October 2018-21 October 2018

We are back again with your weekly dose of future. Find out everything you need to know about your week in our horoscope for October 15th to October 21st 2018 below
Story first published: Monday, October 15, 2018, 12:50 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more