For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 10ರಿಂದ 16ರ ತನಕದ ವಾರ ಭವಿಷ್ಯ-ನಿಮ್ಮದೂ ಪರಿಶೀಲಿಸಿಕೊಳ್ಳಿ

By Hemanth
|

ಸಪ್ಟೆಂಬರ್ 10ರಿಂದ 16ನೇ ವಾರ ಭವಿಷ್ಯದ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.

ಈ ವಾರ ನಿಮ್ಮ ಗ್ರಹಗತಿ ಹೇಗಿದೆ ಎಂದು ತಿಳಿದು, ಅದರ ಪ್ರಕಾರ ಕಾರ್ಯನಿರ್ವಹಿಸಲು ಮುಂದಾಗಿ.

ಮೇಷ: ಮಾ.21-ಎ.20

ಮೇಷ: ಮಾ.21-ಎ.20

ಈ ವಾರದಲ್ಲಿ ನಿಮ್ಮ ಜೀವನದಲ್ಲಿ ಹಲವಾರು ರೀತಿಯ ಧನಾತ್ಮಕ ಬದಲಾವಣೆಗಳನ್ನು ನೋಡಲಿದ್ದೀರಿ. ಇದಕ್ಕೆ ಪ್ರಮುಖ ಕಾರಣ ವಾರದ ಆರಂಭದಲ್ಲಿ ಹೊಸ ಚಂದ್ರನ ಪ್ರಭಾವ. ನೀವು ಹಾಕಿಕೊಂಡಿರುವ ಯೋಜನೆಗಳೆಲ್ಲವೂ ಸಕಾಲಿಕವಾಗಿ ಪೂರ್ಣಗೊಳ್ಳಲಿದೆ. ಆದರೆ ನೀವು ಬದಲಾವಣೆ ಬಗ್ಗೆ ಹೆಚ್ಚು ಸಂಭ್ರಮಿಸುವುದು ಬೇಡ. ವಾರದ ಮಧ್ಯಭಾಗದಲ್ಲಿ ಕುಟುಂಬದ ಸದಸ್ಯರೊಂದಿಗೆ ಸಣ್ಣ ಮಟ್ಟದ ವಾಗ್ವಾದ ಉಂಟಾಗಬಹುದು. ಇದರ ಬಗ್ಗೆ ನೀವು ಹೆಚ್ಚೇನು ಮಾಡಲು ಸಾಧ್ಯವಿಲ್ಲವಾದರೂ ಇದರಿಂದ ದೂರವಿರಲು ಪ್ರಯತ್ನಿಸಿ. ಸಂಗಾತಿ ಜತೆಗೆ ಇದುವರೆಗೆ ಹೆಚ್ಚಿನ ಸಮಯವಿಲ್ಲದೆ ಇದ್ದರೆ ಈಗ ನೀವು ಅವರೊಂದಿಗೆ ರೋಮ್ಯಾಂಟಿಕ್ ಆಗಿ ಹೊರಗಡೆ ಸುತ್ತಾಡಲು ಹೋಗಿ. ಮನೆಯಲ್ಲಿನ ಕೆಲವೊಂದು ನಕಾರಾತ್ಮಕತೆಯಿಂದಾಗಿ ನಿಮ್ಮ ಆರೋಗ್ಯದ ಕಡೆ ಗಮನಹರಿಸುವುದು ಅತೀ ಅಗತ್ಯ.

ವೃಷಭ: ಎಪ್ರಿಲ್ 21- ಮೇ 21

ವೃಷಭ: ಎಪ್ರಿಲ್ 21- ಮೇ 21

ವೃತ್ತಿಯಲ್ಲಿ ನಿಮಗೆ ಈ ವಾರ ಕೆಲವು ಏಳುಬೀಳುಗಳು ಉಂಟಾಗಲಿದೆ. ನಿಮಗೆ ಆಸಕ್ತಿ ಇಲ್ಲದೆ ಇರುವಂತಹ ಯೋಜನೆಯನ್ನು ನಿಮಗೆ ಒಪ್ಪಿಸಬಹುದು. ಆದರೆ ನೀವು ಇದಕ್ಕೆ ಅತ್ಯುತ್ತಮವಾಗಿರುವುದನ್ನು ನೀಡಲು ಪ್ರಯತ್ನಿಸಿ. ಎಲ್ಲವೂ ನಿಮ್ಮ ಪರವಾಗಿ ಆಗುತ್ತಿದೆ ಎನ್ನುವ ಭಾವನೆಯು ನಿಮ್ಮಲ್ಲಿ ಮೂಡುವುದು. ಸಂಗಾತಿಯು ನಿಮಗೆ ನೀಡುವಂತಹ ಬೆಂಬಲದಿಂದಾಗಿ ನೀವು ಹೆಚ್ಚಿನ ಯಶಸ್ಸನ್ನು ಪಡೆಯುವುದು ಖಚಿತ. ವ್ಯಾಪಾರಿಗಳು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಬೇರೆ ರೀತಿಯ ವಿಧಾನಗಳನ್ನು ಹುಡುಕಬೇಕು. ಇದರಿಂದಾಗಿ ಗ್ರಾಹಕರ ನಂಬಿಕೆ ಪಡೆಯಬಹುದು. ವಿದ್ಯಾರ್ಥಿಗಳಿಗೆ ಕಲಿಕೆ ಕಡೆ ಗಮನಹರಿಸಲು ಸುಲಭವಾಗಲಿದೆ. ಏಕಾಂಗಿಯಾಗಿರುವವರಿಗೆ ವಿಶೇಷವಾಗಿರುವವರನ್ನು ಭೇಟಿಯಾಗಲು ಇದು ಒಳ್ಳೆಯ ಸಮಯ. ನೀವು ಅವರೊಂದಿಗೆ ಪ್ರಾಮಾಣಿಕವಾಗಿರಬೇಕಷ್ಟೇ. ಯಾಕೆಂದರೆ ನೀವು ಅವರನ್ನು ಆಕರ್ಷಿಸಲು ದೊಡ್ಡ ಮಟ್ಟದಲ್ಲಿ ಪ್ರಯತ್ನಿಸುವುದು ಬೇಡ. ಅವರಿಗೆ ಸರಳವಾಗಿರುವುದು ಇಷ್ಟ. ಆರೋಗ್ಯದ ವಿಚಾರದಲ್ಲಿ ಒಳ್ಳೆಯ ಆಹಾರ ಮತ್ತು ವ್ಯಾಯಾಮವು ನೆರವಾಗಲಿದೆ.

ಮಿಥುನ: ಮೇ 21- ಜೂನ್ 21

ಮಿಥುನ: ಮೇ 21- ಜೂನ್ 21

ನಿಮ್ಮ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅದಕ್ಕೆ ಮೊದಲೇ ನೀವು ಭೇಟಿಯಾಗುವ ಬಗ್ಗೆ ಯೋಚನೆ ಮಾಡಿದರೆ ಆಗ ನಿಮಗೆ ತುಂಬಾ ಪರಿಣಾಮಕಾರಿ ಫಲಿತಾಂಶ ಲಭ್ಯವಾಗುವುದು. ಇದು ನಿಮ್ಮ ಬಾಸ್ ನ್ನು ಆಕರ್ಷಿಸುವುದು ಮಾತ್ರವಲ್ಲದೆ, ಭಡ್ತಿ ಕೂಡ ನೀಡುವುದು. ಆರ್ಥಿಕ ಸ್ಥಿತಿಯು ಉತ್ತಮ ಮತ್ತು ಇದು ವ್ಯವಸ್ಥಿತವಾಗಿರುವುದು. ತುಂಬಾ ದುಬಾರಿ ಬಟ್ಟೆ ಖರೀದಿಸಬೇಕೆಂಬ ನಿಮ್ಮ ಇಚ್ಛೆಯನ್ನು ತಡೆದಿಟ್ಟುಕೊಳ್ಳುವ ಕಾರಣದಿಂದಾಗಿ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮವಾಗದು. ಎಲ್ಲಾ ಗ್ರಹಗಳು ನಿಮ್ಮ ಪರಿವಾಗಿರುವ ಕಾರಣದಿಂದಾಗಿ ಹೂಡಿಕೆ ಬಗ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ನಿಮಗೆ ನೆರವಾಗಲಿದೆ. ವೈವಾಹಿಕ ಜೀವನದಲ್ಲಿ ಸ್ವಲ್ಪ ಅಡೆತಡೆಗಳು ಬರಲಿದೆ. ಆರೋಗ್ಯದ ವಿಚಾರದಲ್ಲಿ ನೀವು ಮಧುಮೇಹಿಗಳಾಗಿದ್ದರೆ ಸಿಹಿಯಿಂದ ಆದಷ್ಟು ದೂರವಿರಿ. ವಾರಾಂತ್ಯವು ನಿಮಗೆ ಉತ್ತಮವಾಗಿರುವುದು.

ಕರ್ಕಾಟಕ: ಜೂನ್ 22- ಜುಲೈ 22

ಕರ್ಕಾಟಕ: ಜೂನ್ 22- ಜುಲೈ 22

ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ನಿಮ್ಮ ಮುಂದಿದೆ. ಗ್ರಹಗತಿಗಳಿಂದಾಗಿ ನಿಮಗೆ ಎಲ್ಲಾ ರೀತಿಯ ಅದೃಷ್ಟ ಮತ್ತು ಸಂತೋಷವು ಸಿಗಲಿದೆ. ನಿಮ್ಮ ಗುರಿ ಸಾಧಿಸುವುದು ತುಂಬಾ ಸುಲಭವಾಗಿರಲಿದೆ. ನಿಮ್ಮ ಯಶಸ್ಸನ್ನು ಸಂಭ್ರಮಿಸಲು ಕುಟುಂಬದವರು ಮತ್ತು ಸ್ನೇಹಿತರು ಜತೆಯಾಗಿರುವರು. ನಿಮ್ಮ ಸಂಬಂಧಿಕರೊಬ್ಬರು ನಿಮ್ಮ ಸಂಭ್ರಮದ ಪಾಲುದಾರರಾಗಲ್ಲ ಮತ್ತು ಎಲ್ಲವನ್ನು ನಿಮ್ಮಿಂದ ಕಿತ್ತುಕೊಳ್ಳಲು ಪ್ರಯತ್ನಿಸುವರು. ಇಂತಹ ಜನರನ್ನು ಕಡೆಗಣಿಸುವುದು ಒಳ್ಳೆಯದು. ಯಾಕೆಂದರೆ ದೇವರು ಅವರಿಗೆ ಬುದ್ಧಿ ಕಲಿಸುತ್ತಾನೆ. ಸಂಗಾತಿಗೆ ಕೆಲಸಕ್ಕಿಂತ ಹೆಚ್ಚಿನ ಸಮಯ ನೀಡುತ್ತಿಲ್ಲವೆಂದು ಬೇಸರಿಸಿಕೊಳ್ಳಬಹುದು. ಈ ವಾರ ನೀವು ಅವರೊಂದಿಗೆ ತುಂಬಾ ಅನ್ಯೋನ್ಯವಾಗಿ ವರ್ತಿಸಿ. ಸಣ್ಣ ಆರೋಗ್ಯ ಸಮಸ್ಯೆಗೆ ನೀವು ಒಳ್ಳೆಯ ವೈದ್ಯರನ್ನು ಭೇಟಿಯಾಗಿ. ಯಾಕೆಂದರೆ ಇದನ್ನು ಕಡೆಗಣಿಸಿದರೆ ದೊಡ್ಡ ಮಟ್ಟದ ಸಮಸ್ಯೆಯಾಗಬಹುದು. ಆರ್ಥಿಕವಾಗಿ ದೀರ್ಘಕಾಲದ ಹೂಡಿಕೆಗಳು ನಿಮಗೆ ನೆರವಾಗುವುದು.

ಸಿಂಹ: ಜುಲೈ 23- ಆ.21

ಸಿಂಹ: ಜುಲೈ 23- ಆ.21

ನಿಮ್ಮ ಜೀವನದಲ್ಲಿ ಸಾಮಾಜಿಕ ಜೀವನವನ್ನು ತುಂಬಾ ಮಹತ್ವದ ಸ್ಥಾನವನ್ನು ಪಡೆದುಕೊಳ್ಳಲಿದೆ. ಹೊರಗಡೆ ಹೋಗುವುದು, ಹೊಸ ಸ್ನೇಹಿತರನ್ನು ಭೇಟಿಯಾಗುವುದು ಮತ್ತು ತುಂಬಾ ಸಾಹಸಮಯವಾಗಿ ಏನಾದರೂ ಮಾಡುವುದುರಿಂದ ಜೀವನದ ಆನಂದ ಪಡೆಯಬಹುದು. ಗ್ರಹಗತಿಗಳು ಒಳ್ಳೆಯ ಸ್ಥಾನದಲ್ಲಿರುವ ಕಾರಣದಿಂದಾಗಿ ಆರ್ಥಿಕ ಸ್ಥಿತಿ ಬಗ್ಗೆ ನೀವು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಲವಾರು ವರ್ಷಗಳ ಹಿಂದ ಮಾಡಿರುವಂತಹ ಹೂಡಿಕೆಯಿಂದಾಗಿ ನಿಮಗೆ ಒಳ್ಳೆಯ ಹಣದ ಹರಿವು ಉಂಟಾಗಲಿದೆ. ಕುಟುಂಬದೊಂದಿಗೆ ಸಮಯ ಕಳೆದು, ಅವರೊಂದಿಗಿನ ಭಾಂದವ್ಯ ಹೆಚ್ಚಿಸಬಹುದು. ನಿಮ್ಮ ಅಧಿಕಾರ ಸಾಧಿಸುವ ಗುಣವು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಿ. ಋತುಮಾನದ ಕೆಲವೊಂದು ಅಲರ್ಜಿ ಸಮಸ್ಯೆ ಬಿಟ್ಟರೆ ನಿಮ್ಮ ಆರೋಗ್ಯವು ಉತ್ತಮವಾಗಿರಲಿದೆ.

ಕನ್ಯಾ: ಆ.22-ಸೆ.23

ಕನ್ಯಾ: ಆ.22-ಸೆ.23

ಉದ್ಯೋಗದ ಕೆಲವೊಂದು ವಿಷಯಗಳು ತುಂಬಾ ಸರಾಸರಿಯಾಗಿರಲಿದೆ. ಆದರೆ ನಿಮ್ಮ ಸುತ್ತಲು ಏನಾಗುತ್ತಿದೆ ಎನ್ನುವ ಕಡೆ ಗಮನಹರಿಸುವುದು ಅತೀ ಅಗತ್ಯವಾಗಿದೆ. ಯಾಕೆಂದರೆ ನೀವು ಸಹೋದ್ಯೋಗಿಗಳಿಂದ ತಮಾಷೆಗೀಡಾಗುವಂತಹ ಸಂಭವವು ಇದೆ. ಕುಟುಂಬದೊಂದಿಗೆ ಸಂಭ್ರಮದ ಪ್ರವಾಸವನ್ನು ಆಯೋಜಿಸಿದರೆ ಅದರಿಂದ ನಿಮ್ಮ ಮನೆಯಲ್ಲಿ ಉಂಟಾಗಿರುವಂತಹ ಅಶಾಂತಿಯೂ ದೂರವಾಗಿ, ಪರಸ್ಪರ ಬೆಸೆದುಕೊಳ್ಳಲು ನೆರವಾಗುವುದು. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದಾಗಿ ನಿಮ್ಮ ವ್ಯಾಪಾರವು ಉತ್ತಮವಾಗಿರುವುದು. ಒಳ್ಳೆಯ ಮಾರುಕಟ್ಟೆ ತಂತ್ರವು ನಿಮ್ಮ ವ್ಯಾಪಾರವನ್ನು ಮತ್ತಷ್ಟು ವೃದ್ಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಖರ್ಚು ಕೂಡ ಹೆಚ್ಚಾಗಿ ನಿಮಗೆ ಸಮಸ್ಯೆಯಾಗಬಹುದು. ಆರ್ಥಿಕ ಸ್ಥಿರತೆಗಾಗಿ ನಿಮ್ಮ ನೆಚ್ಚಿನ ವಿಷಯವನ್ನು ಬಿಟ್ಟುಬಿಡಬೇಕಾಗಬಹುದು. ಆರೋಗ್ಯದ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ತುಂಬಾ ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡಬೇಡಿ.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ಈ ವಾರವು ನಿಮ್ಮ ಬುದ್ಧಿಯು ಅತಿಯಾಗಿ ಕೆಲಸ ಮಾಡಲಿದೆ. ಯಾಕೆಂದರೆ ನೀವು ಯಶಸ್ಸು ಪಡೆಯಲು ಸಲುವಾಗಿ ಹೊಸ ತಂತ್ರ ಹಾಗೂ ಯೋಜನೆ ರೂಪಿಸುವಿರಿ. ಕಠಿಣ ಪರಿಶ್ರಮ ಮತ್ತು ಬದ್ಧತೆಯು ಯಶಸ್ಸಿಗೆ ಮೂಲಮಂತ್ರವೆಂದು ನೀವು ಕಲಿತುಕೊಳ್ಳಬೇಕು. ದೊಡ್ಡ ಮಟ್ಟದಲ್ಲಿ ಹಣದ ಹರಿವು ನಿಮ್ಮ ಪರವಾಗಿ ಬರಲಿರುವ ಕಾರಣ ಆರ್ಥಿಕ ಸ್ಥಿತಿ ಬಲಿಷ್ಠವಾಗಲಿದೆ. ಮನೆಯಲ್ಲಿ ವಾತಾವರಣವು ಉತ್ತಮವಾಗಿರಲಿದೆ. ಕುಟುಂಬ ಸದಸ್ಯರ ಬೇಡಿಕೆಗಳನ್ನು ಈಡೇರಿಸಲು ಹೆಚ್ಚು ಜಿಪುಣತನ ಮಾಡಬೇಡಿ. ಯಾಕೆಂದರೆ ಅವರ ಸಂತೋಷ ಮತ್ತು ಸಂಗಾತಿಯ ಆಶೀರ್ವಾದವು ನಿಮಗೆ ಸಂತೋಷ ತರಲಿದೆ. ನಿಮ್ಮ ಪ್ರೀತಿಯ ಜೀವನದಲ್ಲಿ ಸಂಗಾತಿ ಮತ್ತು ನಿಮ್ಮ ಮಧ್ಯೆ ಸಮಾನತೆ ಕಾಣಿಸದೆ ಕೆಲವೊಂದು ಅಡೆತಡೆಗಳು ಕಾಣಿಸುವುದು. ಇದು ನಿಮ್ಮ ಭಿನ್ನಮತಕ್ಕೆ ದೊಡ್ಡ ಕಾರಣವಾಗಬಹುದು. ಸಂಗಾತಿಯು ಈ ಸಂಬಂಧವನ್ನು ಕಡಿದೊಕೊಳ್ಳಲು ಬಯಸುತ್ತಾರೆಯಾ ಎನ್ನುವುದನ್ನು ತಿಳಿಯಲು ನೀವು ಪ್ರಯತ್ನಿಸಿ.

ವೃಶ್ಚಿಕ: ಅ.24- ನ.22

ವೃಶ್ಚಿಕ: ಅ.24- ನ.22

ನಿಮ್ಮ ಉದ್ಯೋಗದ ಕಡೆ ಎಲ್ಲವೂ ತುಂಬಾ ನಿಧಾನವಾಗಿರಲಿದೆ. ಅದಾಗ್ಯೂ, ನೀವು ಉದ್ಯೋಗ ಬದಲಾವಣೆ ಬಗ್ಗೆ ಯೋಚನೆ ಮಾಡಿದ್ದರೆ ಆಗ ನಿಮಗೆ ಅವಕಾಶಗಳು ಒದಗಿ ಬರಲಿದೆ. ಪ್ರಭಾವಿ ಪರಿಚಯಗಳು ನಿಮ್ಮ ಪರವಾಗಿ ಕೆಲಸ ಮಾಡಲಿವೆ. ನೀವು ಅವರಿಂದ ಯಾವುದೇ ನೆರವು ಕೇಳಲು ಹಿಂಜರಿಯಬೇಡಿ. ಯಾಕೆಂದರೆ ಇದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಳಿವು ಉಳಿವಿನ ಪ್ರಶ್ನೆಯಾಗಿದೆ. ನೀವು ಅತಿಯಾಗಿ ಖರ್ಚು ಮಾಡುವ ಸ್ವಭಾವದವರಾಗಿರುವ ಕಾರಣದಿಂದಾಗಿ ನಿಮ್ಮ ಖರ್ಚು ಹೆಚ್ಚಾಗಿರಲಿದೆ. ಆದಾಯ ಮತ್ತು ಖರ್ಚಿನ ಕಡೆ ಹೆಚ್ಚಿನ ಸಮತೋಲನದ ಅಗತ್ಯವಿದೆ. ಇಲ್ಲವಾದಲ್ಲಿ ನಿಮ್ಮ ಆರ್ಥಿಕ ಜೀವನದಲ್ಲಿ ದೊಡ್ಡ ಬಿರುಗಾಳಿ ಬರಬಹುದು. ಸಂಗಾತಿಯಿಂದ ಆರ್ಥಿಕ ವಿಚಾರದ ಬಗ್ಗೆ ಸಲಹೆ ಪಡೆದರೆ ತುಂಬಾ ಒಳ್ಳೆಯದು. ನಿಮ್ಮ ಅಹಂನ್ನು ದೂರವಿರಿಸಿ ಮತ್ತು ಆರ್ಥಿಕ ವಿಚಾರವನ್ನು ಅವರಿಗೆ ಬಿಟ್ಟುಕೊಡಿ. ಇದು ನೀವು ಮಾಡುವಂತಹ ಒಳ್ಳೆಯ ನಿರ್ಧಾರವಾಗಲಿದೆ.

 ಧನು: ನ.23- ಡಿ.22

ಧನು: ನ.23- ಡಿ.22

ಉದ್ಯೋಗದ ಕಡೆ ನಿಮಗೆ ಒಲ್ಳೆಯ ಅನುಭವವಾಗಲಿದೆ. ಆದರೆ ವಾರಾಂತ್ಯದಲ್ಲಿ ಸ್ವಲ್ಪ ಬೇಸರ ಮೂಡಿಸಬಹುದು. ಕಳೆದ ವಾರದಿಂದ ನೀವು ಪಡುತ್ತಿರುವಂತಹ ಕಠಿಣ ಪರಿಶ್ರಮಕ್ಕೆ ಒಳ್ಳೆಯ ಪ್ರಶಂಸೆ ಪಡೆಯಲಿದ್ದೀರಿ. ನಿಮಗೆ ಯಶಸ್ಸು ಪಡೆಯಲು ಇದು ಅತ್ಯುತ್ತಮ ವಾರ. ನಿಮ್ಮ ನಿರ್ಲಕ್ಷ್ಯ ಭಾವನೆಯಿಂದಾಗಿ ಕುಟುಂಬ ಸದಸ್ಯರು ತುಂಬಾ ಬೇಸರಗೊಳ್ಳಬಹುದು. ಆದರೆ ನಿಮಗೆ ಈಗ ಉದ್ಯೋಗದಲ್ಲಿ ಒಳ್ಳೆಯದಾಗಿರುವ ಕಾರಣದಿಂದ ಅವರ ಬೇಡಿಕೆ ಕಡೆ ಗಮನಹರಿಸಿ. ಇದು ಹೂಡಿಕೆಗೆ ಸರಿಯಾದ ಸಮಯವಲ್ಲದ ಕಾರಣದಿಂದಾಗಿ ನೀವು ಆರ್ಥಿಕ ತಜ್ಞರ ಮಾತನ್ನು ಕಡೆಗಣಿಸಿ. ಸ್ಥಿರವಾಗಿರುವ ಹಣದ ಹರಿವು ಇರುವ ಕಾರಣ ಯಾವುದೇ ಚಿಂತೆ ಮಾಡಬೇಕಿಲ್ಲ. ಜೀವನ ಸಂಗಾತಿಯಿಂದ ಟೀಕೆಗಳನ್ನು ಕೇಳುವ ಬದಲು ವೈವಾಹಿಕ ಜೀವನದಲ್ಲಿ ನೀವು ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕು.

ಮಕರ: ಡಿ.23-ಜ.20

ಮಕರ: ಡಿ.23-ಜ.20

ಉದ್ಯೋಗದ ಕಡೆ ನಿಮ್ಮ ಯಶಸ್ಸನ್ನು ಸಹಿಸದೆ ಇರುವಂತಹ ಸಹೋದ್ಯೋಗಿ ಅಥವಾ ಬಾಸ್, ಯೋಜನೆಯಲ್ಲಿ ನಿಮಗೆ ದ್ರೋಹ ಮಾಡಬಹುದು. ಇದು ನಿಮ್ಮ ವೃತ್ತಿಯಲ್ಲಿ ತುಂಬಾ ಪರಿಣಾಮ ಬೀರಲಿದೆ ಮತ್ತು ಅವರ ದ್ವೇಷದ ಭಾವನೆಯು ನಿಮ್ಮನ್ನು ಹೆಚ್ಚಾಗಿ ಕಾಡುತ್ತಲಿರುವುದು. ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಏನು ಪಡೆಯಲು ಬಯಸುವರೋ ಅದನ್ನು ಅವರು ಪಡೆಯಲು ಇದು ಸಕಾಲವಾಗಿದೆ. ವಿದೇಶದ ವಿಶ್ವವಿದ್ಯಾನಿಲಯಗಳಿಗೆ ನೀವು ಅರ್ಜಿ ಸಲ್ಲಿಸಿದ್ದರೆ ಇದು ಸ್ವೀಕೃತವಾಗಲಿದೆ. ವೈವಾಹಿಕ ಜೀವನದಲ್ಲಿ ಹೊಸತನ ಮತ್ತು ಶಕ್ತಿ ಬರಲಿದೆ. ಸಂಗಾತಿಯೊಂದಿಗೆ ಹೊಸ ವಿಚಾರಗಳನ್ನು ಅನುಭವಿಸಿ, ಇದು ನಿಮ್ಮಿಬ್ಬರ ಸಂಬಂಧ ಮತ್ತಷ್ಟು ಬಲಪಡಿಸುವುದು.

ಕುಂಭ: ಜ.21-ಫೆ.19

ಕುಂಭ: ಜ.21-ಫೆ.19

ನೀವು ಹೊಸ ಹೊಸ ಜಾಗಗಳನ್ನು ಈ ವಾರ ನೋಡಲಿರುವಿರಿ. ಇದು ನಿಮ್ಮ ಸ್ವಭಾವಕ್ಕೆ ತುಂಬಾ ಹೊಸತಾಗಿರುವ ಕಾರಣದಿಂದ ನೀವು ಹರಿವಿನೊಂದಿಗ ಹೋಗಲು ಸಲಹೆ ನೀಡಲಾಗುತ್ತದೆ. ನಿಮ್ಮಲ್ಲಿ ಶಕ್ತಿ ಮತ್ತು ಅತ್ಯುತ್ಸಾಹ ತುಂಬಿರಲಿದೆ. ಇದರಿಂದಾಗಿ ಜೀವನದಲ್ಲಿ ಯಶಸ್ಸು ಪಡೆಯಲು ನೆರವಾಗುವುದು. ಕುಟುಂಬದವರು ಮತ್ತು ಸ್ನೇಹಿತರು ನಿಮ್ಮ ಸಂತೋಷವನ್ನು ಮತ್ತಷ್ಟು ಹೆಚ್ಚಿಸುವರು. ಯಾಕೆಂದರೆ ಅವರ ಒಳ್ಳೆಯ ಪ್ರಾರ್ಥನೆಯು ನಿಮಗೆ ವಿಶೇಷ ಭಾವನೆಯುಂಟು ಮಾಡಲಿದೆ. ಆರ್ಥಿಕತೆ ಬಗ್ಗೆ ನೀವು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಕಡಿಮೆ ಅವಧಿಯ ಹೂಡಿಕೆ ಕಡೆ ಗಮನಹರಿಸಬೇಡಿ. ಯಾಕೆಂದರೆ ಇದರಿಂದಾಗಿ ನಿಮಗೆ ತುಂಬಾ ನಷ್ಟವಾಗಬಹುದು ನಿಮ್ಮ ಆರೋಗ್ಯವು ಉತ್ತಮವಾಗಿರಲಿದೆ. ಆದರೆ ಸಂಗಾತಿಯ ಆರೋಗ್ಯದ ಕಡೆ ಗಮನಹರಿಸಬೇಕು.

ಮೀನ: ಫೆ. 20-ಮಾ.20

ಮೀನ: ಫೆ. 20-ಮಾ.20

ವೃತ್ತಿ ಜೀವನದಲ್ಲಿ ಈ ವಾರ ಹಲವಾರು ರೀತಿಯ ವಿಚಾರಗಳು ನಡೆಯಲಿದೆ. ನೀವು ಕಠಿಣವಾಗಿ ಕೆಲಸ ಮಾಡಿ ಮತ್ತು ಹರಿವಿನಂತೆ ಹೋಗಿ. ಆರ್ಥಿಕವಾಗಿ ನೀವು ಸಾಲ ನೀಡಿರುವಂತಹ ಹಣವು ಮರಳಿ ಬಂದಿರುವ ಕಾರಣದಿಂದಾಗಿ ಇದು ಹೂಡಿಕೆಗೆ ಸರಿಯಾದ ಸಮಯವಾಗಿರಲಿದೆ. ಇದು ಭವಿಷ್ಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲಪಡಿಸಲಿದೆ. ಮಕ್ಕಳಿಂದಾಗಿ ನೀವು ತುಂಬಾ ಹೆಮ್ಮೆ ಪಟ್ಟುಕೊಳ್ಳಬಹುದು ಮತ್ತು ತುಂಬಾ ಸಂಭ್ರಮಿಸುವಿರಿ. ಈ ವಾರ ನಿಮ್ಮ ಕೆಲಸವು ಹೆಚ್ಚಿನ ಆದ್ಯತೆ ಪಡೆದರೂ, ಸಂಗಾತಿಯನ್ನು ನೀವು ಕಡೆಗಣಿಸಬಾರದು. ವ್ಯಾಯಾಮ ಮತ್ತು ಆರೋಗ್ಯಕರವಾಗಿರುವುದನ್ನು ತಿನ್ನುವ ಮೂಲಕ ನೀವು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ನಿವಾರಿಸಿಕೊಳ್ಳಬಹುದು.

English summary

Weekly Horoscope: 10 Sept'18- 16 Sept'18

Weekly predictions seem to be the most important thing for those who start their weekday by checking the weekly horoscope.These weekly predictions based on the sun sign reveal about the oncoming events for the whole week. Aries, Taurus, Gemini, Cancer, Leo and Pisces are said to have a good week!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more