For Quick Alerts
ALLOW NOTIFICATIONS  
For Daily Alerts

ಪಿಯಾನೋ ಸಂಗೀತಕ್ಕೆ ಮೈಮರೆತು ನರ್ತಿಸಿದ ಅಂಧ ಆನೆ!

By Hemanth
|

ಗಜರಾಜನನ್ನು ಪ್ರೀತಿಸದವರ ಕಡಿಮೆ ಎನ್ನಬಹುದು. ಯಾಕೆಂದರೆ ದೇಹ ದೊಡ್ಡದಾದರೂ ಗಜರಾಜನ ಹೃದಯ ಮಾತ್ರ ತುಂಬಾ ಮೃದು ಹಾಗೂ ದಯೆ ಹೊಂದಿರುವುದು. ಇದರಿಂದಾಗಿಯೇ ಮನುಷ್ಯರು ಕೂಡ ಆನೆಗಳತ್ತ ಆಕರ್ಷಿತರಾಗುವುದು. ಕಣ್ಣು ಕಾಣದೆ ಇರುವ ಆನೆಯೊಂದು ತನ್ನ ಜೀವನದಲ್ಲಿ ಎಂದೂ ಮರೆಯದೆ ಇರುವಂತಹ ಕ್ಷಣಗಳು ಈ ಹೊಸ ವಿಡಿಯೋದಲ್ಲಿದೆ. ಸಹೃದಯಿ ಶಾಸ್ತ್ರೀಯ ಪಿಯೋನ್ ವಾದಕನೊಬ್ಬ ಪರ್ವತ ಪ್ರದೇಶದಲ್ಲಿ ಆಕೆಗಾಗಿ ಸಂಗೀತ ನುಡಿಸಲು ನಿರ್ಧರಿಸಿದ್ದಾರೆ.

ಮನಮಿಡಿಯುವ ಈ ವಿಡಿಯೋದಲ್ಲಿ ಬ್ರಿಟನ್ ನ ಪಿಯಾನೋ ವಾದಕ ಪೌಲ್ ಬಾರ್ಟನ್ ಮರಗಳ ಮಧ್ಯೆ ಪಿಯಾನೋ ನುಡಿಸುತ್ತಿರುವಾದ ಲಮ್ ಡುವಾನ್ ಎನ್ನುವ ಆನೆಯು ಇದನ್ನು ಮೈಮರೆತು ಆಲಿಸುತ್ತಿದೆ. ಆನೆಗೆ ಈ ಸಂಗೀತವು ಎಷ್ಟು ಇಷ್ಟವಾಯಿತೆಂದರೆ ಮಧುರ ಸಂಗೀತ ಕೇಳಿ ಎಡ ಹಾಗೂ ಬಲಕ್ಕೆ ಕುಣಿಯಲು ಆರಂಭಿಸಿತು. ಯಾವಾಗಲು ಇಂಗ್ಲೆಂಡಿನಲ್ಲಿ ನಡೆಯುವ ಕನ್ಸರ್ಟ್ ಗಳಲ್ಲಿ ಪಿಯಾನೋ ನುಡಿಸುವ ಬಾರ್ಟನ್, ಆನೆಯು ತನ್ನ ಪಿಯಾನೋ ಸಂಗೀತವನ್ನು ಆಲಿಸಿ ಸಂಭ್ರಮಿಸಿರುವುದನ್ನು ನೋಡಿ ತುಂಬಾ ಖುಷಿಪಟ್ಟ.

Elephant’s

ಇತರ ಧ್ವನಿತರಂಗಗಳಿಂದ ಸಂಗೀತವು ಪ್ರತ್ಯೇಕಿಸಲ್ಪಟ್ಟಿದ್ದರೂ ಇದು ಪರಿಸರದಲ್ಲಿರುವ ಪ್ರತಿಯೊಂದು ಜೀವಿಗಳ ಮೇಲೆ ಪರಿಣಾಮ ಬೀರುವುದು. ಮನುಷ್ಯರಂತೆ ಪ್ರಾಣಿಗಳು ಕೂಡ ಸಂಗೀತವನ್ನು ಹೆಚ್ಚು ಇಷ್ಟಪಡುತ್ತವೆ ಎನ್ನುವುದು ಸಾಬೀತಾಗಿದೆ. ಇದು ಪ್ರಾಣಿಗಳ ಮನಸ್ಸಿಗೆ ಮುದ ನೀಡುವುದು ಮತ್ತು ಇಲ್ಲಿ ಅಂಧ ಆನೆಯು ಪೌಲ್ ನುಡಿಸುವ ಪಿಯಾನೋವನ್ನು ತುಂಬಾ ಆನಂದಿಸುತ್ತಿರುವುದು ಕಂಡುಬರುತ್ತಿದೆ.

ಪೌಲ್ ಬಾರ್ಟನ್ ಪ್ರಕಾರ ಆತ ಕೇವಲ ಒಬ್ಬರು ಕೇಳುಗರಿಗಾಗಿ ಮಾತ್ರ ಇದನ್ನು ಪ್ರಾಯೋಗಿಕವಾಗಿ ನುಡಿಸಿದ್ದ. 62ರ ಹರೆಯದ ಲಮ್ ಎನ್ನುವ ಆನೆಯು ಈ ಸಂಗೀತಕ್ಕೆ ಮನಸೋತಿದೆ ಮತ್ತು ಅದನ್ನು ಸರಿಯಾಗಿ ಆಲಿಸಿದೆ.
ಒಬ್ಬ ಸಂಗೀತಕಾರನಾಗಿ ತನ್ನ ವೃತ್ತಿಯಲ್ಲಿ ಇದುವರೆಗೆ ಆತನಿಗೆ ಒಳ್ಳೆಯ ಕೇಳುಗರು ಸಿಕ್ಕಿರಲಿಲ್ಲವಂತೆ! ಆದರೆ ನಾವು ಇದನ್ನು ಒಪ್ಪಿಕೊಳ್ಳಲಾಗದು. ಈ ಸಲ ಪ್ರಾಯೋಗಿಕವಾಗಿ ಆತ ಶಾಸ್ತ್ರೀಯ ಶೈಲಿಯಲ್ಲಿ ಪಿಯಾನೋ ನುಡಿಸಿದ್ದಾನೆ ಮತ್ತು ಅಲ್ಲಿದ್ದ ಪ್ರೇಕ್ಷಕರು ಬೇರಾರೂ ಅಲ್ಲ, ಆನೆಗಳು! ಪೌಲ್ ಗೆ ಇದರ ಬಳಿಕ ಆನೆಗಳ ಮೇಲೆ ಎಷ್ಟು ಪ್ರೀತಿ ಮೂಡಿದೆಯೆಂದರೆ ಆತ ಥಾಯ್ಲೆಂಡ್ ನಲ್ಲಿ ತನ್ನ ಪತ್ನಿ ಜತೆಗೆ ಆನೆಗಳ ಜಗತ್ತಿನಲ್ಲಿ ವಾಸಿಸುತ್ತಿದ್ದಾನೆ ಮತ್ತು ಅವರಿಬ್ಬರು ಜತೆಯಾಗಿ ಸುಮಾರು 28 ಪ್ರಾಣಿಗಳ ಆರೈಕೆ ಮಾಡುತ್ತಿರುವರು.

2012ರಲ್ಲಿ ಲಮ್ ನ್ನು ನೋಡಿದ್ದಾಗ 57ರ ಹರೆಯದ ಪೌಲ್ ಗೆ ಹೃದಯ ಕರಗಿತ್ತು. ಆಗ ಲಮ್ ಗೆ ವಿಶ್ರಾಂತಿಯೇ ಇರಲಿಲ್ಲ. ಆದರೆ ಈಗ ಅದು ಸಂಗೀತ ಕೇಳಿ ತುಂಬಾ ಶಾಂತವಾಗಿ ಪ್ರತಿಕ್ರಿಯಿಸುವುದು ಮತ್ತು ಡ್ಯಾನ್ಸ್ ಮಾಡುವುದು. ಈ ವಿಡಿಯೋದ ಬಗ್ಗೆ ನಿಮ್ಮ ಅನಿಸಿಕೆಯೇನು? ಕಣ್ಣಿಲ್ಲದ ಆನೆಯ ವಿಡಿಯೋ ನೋಡಿ ಖಂಡಿತವಾಗಿಯೂ ನಿಮ್ಮ ಮನಸ್ಸು ಕರಗಿರಬಹುದು. ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ಇದು ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಲು ಮರೆಯಬೇಡಿ. ಇನ್ನಷ್ಟು ವಿಡಿಯೋಗಳಿಗಾಗಿ ಇದೇ ಸೆಕ್ಷನ್ ನೋಡುತ್ತಲಿರಿ.

English summary

Video Of Blind Elephant’s Reaction On Hearing A Man Playing A Piano

Most of us know that elephants are kind, wise and graceful animals. Even though they seem to be thick-skinned, they are tender at heart, and this is something that makes humans get attracted to them! A recent video has been doing its viral rounds where a blind elephant had a moment that she will never forget. A kindhearted classical pianist opted to play Bach to her in her natural mountainous surroundings.
Story first published: Wednesday, August 8, 2018, 17:20 [IST]
X
Desktop Bottom Promotion