For Quick Alerts
ALLOW NOTIFICATIONS  
For Daily Alerts

ಈ ವಾಸ್ತು ಟಿಪ್ಸ್ ಬಳಸಿ ಶ್ರೀಮಂತಿಕೆ ನಿಮ್ಮದಾಗಿಸಿ

|
ಶ್ರೀಮಂತರಾಗಲು ಸರಳ ವಸ್ತು ಟಿಪ್ಸ್ ನಿಮಗಾಗಿ | Oneindia Kannada

ಐಶ್ವರ್ಯದ ಅಧಿಪತಿ ಕುಬೇರ ದೇವರನ್ನು ಯಾವಾಗಲೂ ಸಂತೃಪ್ತಿಯಾಗಿಡುವುದು ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳುವ ಒಂದು ಮಾರ್ಗವಾಗಿದೆ. ಸಂಪತ್ತಿನ ವಾಸ್ತು ಅಧಿಪತಿಯನ್ನು ಖುಷಿಯಾಗಿಟ್ಟರೆ ಆತ ನಿಮ್ಮ ಮೇಲೆ ಶ್ರೀಮಂತಿಕೆಯ ಮಳೆಗರೆಯುವನು. ಹೀಗಾಗಿ ಮನೆ ಅಥವಾ ನಿಮ್ಮ ಕಚೇರಿಯ ವಾಸ್ತು ಕುಬೇರನ ಕೃಪಾಕಟಾಕ್ಷ ಆಗುವಂತೆ ಸೂಕ್ತವಾಗಿ ಇರಬೇಕು.

ಪ್ರತಿಯೊಂದು ಮನೆ ಅಥವಾ ಕಚೇರಿಯು ವಾಸ್ತು ಪ್ರಕಾರ ಶಾಸ್ತ್ರಬದ್ಧವಾಗಿದ್ದರೆ ಆ ಮನೆಯವರ ವ್ಯಾಪಾರ, ವ್ಯವಹಾರಗಳು ವೃದ್ಧಿ ಹೊಂದುವುವು ಎಂಬ ನಂಬಿಕೆ ನಮ್ಮಲ್ಲಿದೆ. ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡದೆಯೇ ಕೆಲ ಚಿಕ್ಕ ಪುಟ್ಟ ವಾಸ್ತು ವಿಧಾನಗಳನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಎಂಬುದು ಗೊತ್ತಿರಲಿ. ಹೀಗಾಗಿ ಜೀವನದಲ್ಲಿ ಸಂಪತ್ತು ವೃದ್ಧಿಗೆ ಯಾವೆಲ್ಲ ವಾಸ್ತು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ...

 ಆರ್ಥಿಕ ವಾಸ್ತು ಟಿಪ್-1

ಆರ್ಥಿಕ ವಾಸ್ತು ಟಿಪ್-1

ಮನೆ, ಆಫೀಸು ಅಥವಾ ಯಾವುದೇ ಕಟ್ಟಡದ ನೈಋತ್ಯ ಮೂಲೆಯಲ್ಲಿ ಭೂಮಿಗಿಂತ ಕೆಳಮಟ್ಟದ ಈಜುಕೊಳ ಅಥವಾ ನೀರಿನ ಸಂಗ್ರಹದ ಟ್ಯಾಂಕ್ ಕಟ್ಟಿಸಬಾರದು.

 ಆರ್ಥಿಕ ವಾಸ್ತು ಟಿಪ್ -2

ಆರ್ಥಿಕ ವಾಸ್ತು ಟಿಪ್ -2

ಹಣದ ತಿಜೋರಿ ಅಥವಾ ಕಪಾಟನ್ನು ಅದರ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ದಕ್ಷಿಣ ಅಥವಾ ನೈಋತ್ಯ ಗೋಡೆಗೆ ಹತ್ತಿರವಾಗಿಡಿ. ಉತ್ತರ ದಿಕ್ಕು ಕುಬೇರನ ದಿಕ್ಕು ಆಗಿದ್ದು, ಆ ದಿಕ್ಕಿನಲ್ಲಿ ಬಾಗಿಲು ತೆರೆಯುವುದರಿಂದ ಕುಬೇರನು ಮತ್ತೆ ಮತ್ತೆ ನಿಮ್ಮ ಹಣದ ಖಜಾನೆಯನ್ನು ತುಂಬಿಸುತ್ತಾನೆ. ಈ ದಿಕ್ಕುಗಳನ್ನು ಬಿಟ್ಟು ಬೇರೆ ದಿಕ್ಕುಗಳಲ್ಲಿ ಹಣದ ಲಾಕರ್ ಇಡುವುದು ಪ್ರಶಸ್ತವಲ್ಲ.

ಆರ್ಥಿಕ ವಾಸ್ತು ಟಿಪ್ -3

ಆರ್ಥಿಕ ವಾಸ್ತು ಟಿಪ್ -3

ಯಾವುದೇ ಪರಿಸ್ಥಿತಿಯಲ್ಲಿಯೂ ಛಾವಣಿಯ ತೊಲೆಯ ಕೆಳಗಡೆ ಹಣದ ತಿಜೋರಿಯನ್ನು ಇಡಬಾರದು. ತೊಲೆಯ ಕೆಳಗಡೆ ತಿಜೋರಿ ಇಡುವುದರಿಂದ ಕುಟುಂಬ ಅಥವಾ ವ್ಯಾಪಾರದ ಮೇಲೆ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ.

 ಆರ್ಥಿಕ ವಾಸ್ತು ಟಿಪ್ -4

ಆರ್ಥಿಕ ವಾಸ್ತು ಟಿಪ್ -4

ನಿಮ್ಮ ಹಣದ ಲಾಕರ್ ಎದುರಿಗೆ ಲಾಕರ್‌ನ ಪ್ರತಿಬಿಂಬ ಬೀಳುವಂತೆ ಒಂದು ಕನ್ನಡಿಯನ್ನು ಅಳವಡಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಇದು ನಿಮ್ಮಲ್ಲಿನ ಸಂಪತ್ತನ್ನು ದ್ವಿಗುಣಗೊಳಿಸಬಲ್ಲ ಸಂಕೇತವಾಗಿದೆ.

 ಆರ್ಥಿಕ ವಾಸ್ತು ಟಿಪ್ -5

ಆರ್ಥಿಕ ವಾಸ್ತು ಟಿಪ್ -5

ಮನೆಯ ಈಶಾನ್ಯ ಭಾಗವನ್ನು ವಿಪರೀತ ಸಾಮಾನುಗಳಿರದಂತೆ ಹಾಗೂ ಮುಕ್ತವಾಗಿರುವಂತೆ ಇಟ್ಟುಕೊಳ್ಳುವುದರಿಂದ ಐಶ್ವರ್ಯ ನಿಮ್ಮತ್ತ ಹರಿದು ಬರುತ್ತದೆ. ಈ ದಿಕ್ಕಿನಲ್ಲಿ ಮೆಟ್ಟಿಲು ಮುಂತಾದುವುಗಳನ್ನು ನಿರ್ಮಿಸಬಾರದು. ಹಾಗೆಯೇ ಯಂತ್ರೋಪಕರಣಗಳು ಮತ್ತು ಇನ್ನಿತರ ಭಾರವಾದ ವಸ್ತುಗಳನ್ನು ಈಶಾನ್ಯ ದಿಕ್ಕಿನ ಮೂಲೆಯಲ್ಲಿ ಇಡಬಾರದು.

ಆರ್ಥಿಕ ವಾಸ್ತು ಟಿಪ್ -6

ಆರ್ಥಿಕ ವಾಸ್ತು ಟಿಪ್ -6

ನಿವೇಶನ ಅಥವಾ ಮನೆ ಖರೀದಿಸುವಾಗ ಅದರ ಈಶಾನ್ಯ ದಿಕ್ಕಿನಲ್ಲಿ ಗಗನಚುಂಬಿ ಕಟ್ಟಡ ಅಥವಾ ದೇವಾಲಯ ಇದ್ದರೆ ಅಂಥ ನಿವೇಶನ, ಮನೆ ಖರೀದಿಸಬೇಡಿ. ಇಂಥ ಆಸ್ತಿಗಳನ್ನು ಹೊಂದುವುದರಿಂದ ಸಂಪತ್ತು ನಷ್ಟ ಉಂಟಾಗುತ್ತದೆ. ಆದಾಗ್ಯೂ ನಿಮ್ಮ ಮನೆ ಅಥವಾ ನಿವೇಶನದ ಸುತ್ತ ಎತ್ತರದ ಕಟ್ಟಡ, ದೇವಾಲಯ ಇದ್ದಲ್ಲಿ ಅದರ ನೆರಳು ನಿವೇಶನ ಅಥವಾ ಮನೆಯ ಮೇಲೆ ಬೀಳದಂತೆ ನೋಡಿಕೊಳ್ಳಿ.

 ಆರ್ಥಿಕ ವಾಸ್ತು ಟಿಪ್ -7

ಆರ್ಥಿಕ ವಾಸ್ತು ಟಿಪ್ -7

ನಿಮ್ಮ ಮನೆಯ ನೈಋತ್ಯ ದಿಕ್ಕಿನ ಮೇಲ್ಛಾವಣಿಯು ಈಶಾನ್ಯ ಭಾಗಕ್ಕಿಂತ ಎತ್ತರವಾಗಿರುವಂತೆ ನೋಡಿಕೊಳ್ಳಿ. ಅಂದರೆ ಕಟ್ಟಡದ ಮೇಲ್ಛಾವಣಿ ನೈಋತ್ಯ ದಿಂದ ಈಶಾನ್ಯ ದಿಕ್ಕಿನೆಡೆಗೆ ಇಳಿಜಾರಾಗಿರಬೇಕು.

ಆರ್ಥಿಕ ವಾಸ್ತು ಟಿಪ್ -8

ಆರ್ಥಿಕ ವಾಸ್ತು ಟಿಪ್ -8

ನಿಮ್ಮ ಮನೆ ಅಥವಾ ನಿವೇಶನದ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನ ಗೋಡೆ, ಆವರಣಗಳು ಉತ್ತರ ಹಾಗೂ ಪೂರ್ವ ದಿಕ್ಕಿನ ಗೋಡೆಗಳಿಗಿಂತ ದಪ್ಪವಾಗಿರುವಂತೆ ನಿರ್ಮಿಸಿಕೊಳ್ಳಿ.

 ಆರ್ಥಿಕ ವಾಸ್ತು ಟಿಪ್ -9

ಆರ್ಥಿಕ ವಾಸ್ತು ಟಿಪ್ -9

ರಸ್ತೆಗಿಂತ ಮೇಲ್ಮಟ್ಟದಲ್ಲಿರುವ ಅಥವಾ ಕನಿಷ್ಠ ರಸ್ತೆಯ ಮಟ್ಟದಲ್ಲಿರುವ ನಿವೇಶನಗಳನ್ನು ಮಾತ್ರ ಖರೀದಿಸಿ. ನಿವೇಶನ ಎದುರಿನ ರಸ್ತೆಗಿಂತ ಕೆಳಮಟ್ಟದ ನಿವೇಶನವನ್ನು ಯಾವತ್ತೂ ಖರೀದಿಸಬೇಡಿ.

ಆರ್ಥಿಕ ವಾಸ್ತು ಟಿಪ್ -10

ಆರ್ಥಿಕ ವಾಸ್ತು ಟಿಪ್ -10

ಹಣಕಾಸು ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ನಿವೇಶನದ ನೈಋತ್ಯ ದಿಕ್ಕಿನಲ್ಲಿ ವಿಶಾಲವಾದ ಅಥವಾ ಎತ್ತರದ ಮರಗಳನ್ನು ಬೆಳೆಸುವುದರಿಂದ ನಿಮ್ಮ ಜೀವನದಲ್ಲಿ ಹಣಕಾಸು ಸ್ಥಿರತೆ ಲಭಿಸುತ್ತದೆ. ಇದು ನಿಮ್ಮ ಕುಟುಂಬಕ್ಕೆ ಅಥವಾ ವ್ಯಾಪಾರಕ್ಕೆ ಸಂಭವಿಸಬಹುದಾದ ದುರಾದೃಷ್ಟ ಅಥವಾ ಅಪಘಾತಗಳನ್ನು ನಿವಾರಿಸುತ್ತದೆ.

 ಆರ್ಥಿಕ ವಾಸ್ತು ಟಿಪ್ -11

ಆರ್ಥಿಕ ವಾಸ್ತು ಟಿಪ್ -11

ನಿಮ್ಮ ಮನೆಯ ಮಧ್ಯ ಭಾಗವನ್ನು ಯಾವಾಗಲೂ ಮುಕ್ತವಾಗಿರಿಸಿ. ಈ ಭಾಗ ಬ್ರಹ್ಮನ ಆವಾಸ ಸ್ಥಾನವಾಗಿರುವುದರಿಂದ ಇಲ್ಲಿ ದೇವಾಲಯ ಬಿಟ್ಟರೆ ಮತ್ತೇನನ್ನೂ ನಿರ್ಮಿಸಕೂಡದು.

ಆರ್ಥಿಕ ವಾಸ್ತು ಟಿಪ್ -12

ಆರ್ಥಿಕ ವಾಸ್ತು ಟಿಪ್ -12

ಸಂಪತ್ತಿನ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವುದೇ ಸೋರುವ ನಲ್ಲಿ (ಟ್ಯಾಪ್) ಅಥವಾ ಪೈಪ್‌ಗಳು ಇರಬಾರದು. ಇಂಥ ಸೋರುವಿಕೆ ಕಂಡು ಬಂದಲ್ಲಿ ತಕ್ಷಣ ದುರಸ್ತಿ ಮಾಡಿಸಬೇಕು. ನೀರು ಸೋರುವಿಕೆಯು ಹಣಕಾಸು ನಷ್ಟ ಹಾಗೂ ಹಾನಿಯನ್ನು ಸೂಚಿಸುತ್ತದೆ.

 ಆರ್ಥಿಕ ವಾಸ್ತು ಟಿಪ್ -13

ಆರ್ಥಿಕ ವಾಸ್ತು ಟಿಪ್ -13

ಮನೆಯ ಈಶಾನ್ಯ ದಿಕ್ಕಿನಲ್ಲಿ ನೀರಿನ ಕಾರಂಜಿ ನಿರ್ಮಿಸುವುದು ಶುಭಕರವಾಗಿರುತ್ತದೆ. ಆದರೆ ಈ ಕಾರಂಜಿಯಲ್ಲಿ ನೀರು ಸದಾ ಚಿಮ್ಮುತ್ತಿರಬೇಕು. ನೀರಿನ ಚಲನೆಯು ಸಕಾರಾತ್ಮಕ ಶಕ್ತಿಯನ್ನು ಹಾಗೂ ಸಂಪತ್ತನ್ನು ಪ್ರತಿನಿಧಿಸುತ್ತದೆ ಎಂಬುದು ಗೊತ್ತಿರಲಿ.

 ಆರ್ಥಿಕ ವಾಸ್ತು ಟಿಪ್ -14

ಆರ್ಥಿಕ ವಾಸ್ತು ಟಿಪ್ -14

ನಿಮ್ಮ ವಾಸದ ಕೋಣೆಯ ಅಥವಾ ಮನೆಯ ಹಾಲ್‌ನ ಈಶಾನ್ಯ ದಿಕ್ಕಿನಲ್ಲಿ ಮೀನಿನ ಅಕ್ವೇರಿಯಂ ಸ್ಥಾಪಿಸುವುದು ಐಶ್ವರ್ಯ ವೃದ್ಧಿಗೆ ಸಹಕಾರಿಯಾಗಿದೆ. ಆದರೆ ಅಕ್ವೇರಿಯಂ ಅನ್ನು ಯಾವಾಗಲೂ ಶುದ್ಧವಾಗಿ ಹಾಗೂ ಗಾಳಿಯಾಡುವಂತೆ ನೋಡಿಕೊಳ್ಳಬೇಕು.

 ಆರ್ಥಿಕ ವಾಸ್ತು ಟಿಪ್ -15

ಆರ್ಥಿಕ ವಾಸ್ತು ಟಿಪ್ -15

ಸಮೃದ್ಧಿ ಹಾಗೂ ಸಂಪತ್ತು ನಿಮ್ಮ ಮನೆಯನ್ನು ಕಂಡು ಹಿಡಿದು ಒಳಗೆ ಬರುವಂತಾಗಲು ನಿಮ್ಮ ಮನೆಯ ಮುಖ್ಯ ದ್ವಾರವನ್ನು ವಿಶೇಷವಾಗಿ ಸಿಂಗರಿಸಿ. ಅದರಲ್ಲೂ ಮನೆಯ ಹೆಸರಿನ ಫಲಕ ಹಾಗೂ ಸಂಖ್ಯಾ ಫಲಕಗಳನ್ನು ಸಿಂಗರಿಸುವುದು ಮರೆಯಬೇಡಿ. ಮುಖ್ಯ ದ್ವಾರದ ಪ್ರದೇಶದಲ್ಲಿ ಪ್ರಕಾಶಮಾನವಾದ ಬೆಳಕು ಇರುವಂತೆ ನೋಡಿಕೊಳ್ಳಿ ಹಾಗೂ ಸುಂದರವಾಗಿ ಪೇಂಟಿಂಗ್ ಮಾಡಿಸಿ.

 ಆರ್ಥಿಕ ವಾಸ್ತು ಟಿಪ್ -16

ಆರ್ಥಿಕ ವಾಸ್ತು ಟಿಪ್ -16

ನೇರಳೆ ಬಣ್ಣವು ಸಂಪತ್ತನ್ನು ಸೂಚಿಸುವ ಬಣ್ಣವಾಗಿದೆ. ಹೀಗಾಗಿ ನಿಮ್ಮ ಮನೆಯಲ್ಲಿ ಯಾವುದಾದರೊಂದು ನೇರಳೆ ಬಣ್ಣದ ಗಿಡವನ್ನು ಇಟ್ಟುಕೊಳ್ಳುವುದು ಬಹಳಷ್ಟು ಶ್ರೇಯಸ್ಕರ. ಒಂದು ವೇಳೆ ನೇರಳೆ ಬಣ್ಣದ ಗಿಡ ಸಿಗದಿದ್ದರೆ ನೇರಳೆ ಬಣ್ಣದ ಪಾಟ್‌ನಲ್ಲಿ ಮನಿ ಪ್ಲ್ಯಾಂಟ್ ಬೆಳೆಸಿ.

English summary

Vastu tips for getting rich

According to traditional belief, each house has its own energy type. Once a person starts living in a house, he comes under the influence of a specific energy field. These energies, in turn, start influencing him in some way or the other. Indian Vaastu science has several remedies to ensure that you become wealthy. Here are a few of them…
X
Desktop Bottom Promotion