For Quick Alerts
ALLOW NOTIFICATIONS  
For Daily Alerts

ಏನಾಶ್ಚರ್ಯ! ಈ ಮಹಿಳೆ ದಿನಕ್ಕೆ ನೂರು ಸಲ ವಾಂತಿ ಮಾಡುತ್ತಾಳಂತೆ!

|

ವ್ಯಕ್ತಿಯೊಬ್ಬ ದಿನದಲ್ಲಿ ಎಷ್ಟು ಸಲ ವಾಂತಿ ಮಾಡಿಕೊಳ್ಳಬಹುದು. ಊಹಿಸುವುದು ಕಷ್ಟ. ಯಾಕೆಂದರೆ ಒಂದೆರಡು ಸಲ ವಾಂತಿ ಮಾಡಿಕೊಂಡರೆ ಆಗ ಸಂಪೂರ್ಣ ದೇಹವೇ ನಿರ್ಜಲೀಕರಣದಿಂದ ಬಳಲಿ, ನಿಶ್ಯಕ್ತಿ ಉಂಟಾಗಬಹುದು. ವಾಂತಿ ಬಂದರೆ ಆಗ ನಮ್ಮ ದೈನಂದಿನ ಚಟುವಟಿಕೆಗಳು ಎಲ್ಲಾ ಬುಡಮೇಲು ಆಗುವುದು. ಇಲ್ಲೊಬ್ಬಳು ಮಹಿಳೆ ಮಾತ್ರ ದಿನಕ್ಕೆ ಸುಮಾರು ನೂರು ಸಲ ವಾಂತಿ ಮಾಡಿಕೊಳ್ಳುತ್ತಲಿರುವರು.

Rebecca Griffiths

ಆಕೆಯ ಪರಿಸ್ಥಿತಿಯನ್ನು ನಮಗೆ ಊಹಿಸಲು ಕಷ್ಟ. ಇದೊಂದು ತುಂಬಾ ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ವೈದ್ಯರು ಹೇಳುತ್ತಲಿದ್ದರೂ ಆಕೆ ಜೀವನ ಮಾತ್ರ ಸ್ತಬ್ಧವಾಗಿದೆ. ರೆಬೆಕಾ ಗ್ರಿಫಿತ್ಸ್ ಎನ್ನುವ ಮಹಿಳೆಯೇ ಈ ಸಮಸ್ಯೆಯಿಂದ ಬಳಲುತ್ತಿರುವುದು. ಇದನ್ನು ವೈದ್ಯರು ಸೈಕ್ಲಿಕಲ್ ವಾಮಿಟಿಂಗ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯಿಂದಾಗಿ ಆಕೆ ಪ್ರತಿನಿತ್ಯ ಸುಮಾರು ನೂರು ಸಲ ವಾಂತಿ ಮಾಡಿಕೊಳ್ಳುವರು.

ಕಳೆದ ಐದು ವರ್ಷಗಳಿಂದ ಆಕೆಗೆ ಈ ಸಮಸ್ಯೆಯಿದೆ

ಕಳೆದ ಐದು ವರ್ಷಗಳಿಂದ ಆಕೆಗೆ ಈ ಸಮಸ್ಯೆಯಿದೆ

ರೆಬೆಕಾ ಗ್ರಿಫಿತ್ಸ್ 31ರ ಹರೆಯದ ಮಹಿಳೆ ಮತ್ತು ಆಕೆಗೆ ಕಳೆದ ಐದು ವರ್ಷಗಳಿಂದ ನಿಯಂತ್ರಣಕ್ಕೆ ಬಾರದಂತೆ ವಾಂತಿ ಆರಂಭವಾಗಿದೆ. ಇದಕ್ಕೆ ಮೊದಲು ಆಕೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿರಲಿಲ್ಲ. ಸಾಮಾನ್ಯ ಮಹಿಳೆಯರಂತೆ ಆಕೆಯ ಜೀವನ ಕೂಡ ಸಾಗುತ್ತಲಿತ್ತು. ಆದರೆ ವೈದ್ಯರಲ್ಲಿ ಪರೀಕ್ಷೆ ಮಾಡಿದ ಆಕೆಗೆ ಆಘಾತ ಕಾದಿತ್ತು. ಯಾಕೆಂದರೆ ಅವಳಿಗೆ ತುಂಬಾ ಅಪರೂಪದ ಸೈಕ್ಲಿಕಲ್ ವೊಮಿಟಿಂಗ್ ಸಿಂಡ್ರೋಮ್ ಕಾಡಿತ್ತು.

Most Read: ಅಚ್ಚರಿ ಜಗತ್ತು: ತಲೆ ಇಲ್ಲದೆ 18 ತಿಂಗಳು ಬದುಕುಳಿದ ಕೋಳಿ!

ಸೈಕ್ಲಿಕಲ್ ವೊಮಿಟಿಂಗ್ ಸಿಂಡ್ರೋಮ್ ಬಗ್ಗೆ…

ಸೈಕ್ಲಿಕಲ್ ವೊಮಿಟಿಂಗ್ ಸಿಂಡ್ರೋಮ್ ಬಗ್ಗೆ…

ಸೈಕ್ಲಿಕಲ್ ವೊಮಿಟಿಂಗ್ ಸಿಂಡ್ರೋಮ್ ಎನ್ನುವುದು ತುಂಬಾ ಅಪರೂಪದ ಕಾಯಿಲೆಯಾಗಿದ್ದು, ಇದರಿಂದ ರೋಗಿಯು ಪದೇ ಪದೇ ವಾಂತಿ ಮಾಡುವುದು ಮತ್ತು ವಾಕರಿಕೆ ಬಂದಂತೆ ಆಗುವುದು. ಈ ಪರಿಸ್ಥಿತಿಯು ಸುಮಾರು 25,000 ಜನರಲ್ಲಿ ಒಬ್ಬರಿಗೆ ಬರುವುದು. ಈ ಪರಿಸ್ಥಿತಿಯು ಬಾಲ್ಯದಲ್ಲಿ ಬರುವುದು ಮತ್ತು ಇದರ ಲಕ್ಷಣಗಳು ವಯಸ್ಸಾದಂತೆ ಕಾಡುವುದು.

ಆಕೆಯ ಜೀವನ ಸ್ತಬ್ದಗೊಂಡಿತು

ಆಕೆಯ ಜೀವನ ಸ್ತಬ್ದಗೊಂಡಿತು

ಈ ಪರಿಸ್ಥಿತಿಯಿಂದಾಗಿ ಆಕೆ ತುಂಬಾ ನಿಶ್ಯಕ್ತಿಗೆ ಒಳಗಾದಳು. ಯಾವಾಗಲೂ ಸೋಪಾದಲ್ಲಿ ಮಲಗಿಕೊಂಡು, ತನ್ನ ಬದಿಯಲ್ಲಿ ಒಂದು ಪಾತ್ರೆಯನ್ನು ಇಟ್ಟುಕೊಳ್ಳುತ್ತಿದ್ದ ರೆಬೆಕಾ ಜೀವನವು ತುಂಬಾ ದುಸ್ಥರವಾಯಿತು. ಈ ಸಮಸ್ಯೆಯಿಂದ ಹೊರಬರಲು ಆಕೆ ಒಂದು ಶಸ್ತ್ರಚಿಕಿತ್ಸೆಗೆ ಒಳಗಾದಳು.

ಈಗ ಆಕೆಯ ಪರಿಸ್ಥಿತಿ ಸುಧಾರಣೆಯಾಗಿದೆ

ಈಗ ಆಕೆಯ ಪರಿಸ್ಥಿತಿ ಸುಧಾರಣೆಯಾಗಿದೆ

ಜರ್ಮನಿಯಲ್ಲಿ ರೆಬೆಕಾ ಒಂದು ಶಸ್ತ್ರಚಿಕಿತ್ಸೆಗೆ ಒಳಗಾದಳು. ಅಲ್ಲಿ ತಜ್ಞ ವೈದ್ಯರು ಆಕೆಗೆ ಒಂದು ಮಹತ್ವದ ಶಸ್ತ್ರಚಿಕಿತ್ಸೆ ಮಾಡಿದರು. ಇದರ ಬಳಿಕ ಆಕೆಯ ವಾಂತಿ ಮಾಡಿಕೊಳ್ಳುವ ಸಮಸ್ಯೆಯು ಕಡಿಮೆಯಾಗಿದೆ ಮತ್ತು ಆಕೆ ಭವಿಷ್ಯದ ಬಗ್ಗೆ ಎದುರುನೋಡುತ್ತಿರುವಳು.

ಚೇತರಿಸಿಕೊಳ್ಳುತ್ತಿದ್ದರೂ ಆಕೆಗೆ ಚಿಕಿತ್ಸೆ ಬೇಕಾಗಿದೆ…

ಚೇತರಿಸಿಕೊಳ್ಳುತ್ತಿದ್ದರೂ ಆಕೆಗೆ ಚಿಕಿತ್ಸೆ ಬೇಕಾಗಿದೆ…

ಆಕೆ ಶಸ್ತ್ರಚಿಕಿತ್ಸೆ ಬಳಿಕ ಚೇತರಿಕೆ ಕಂಡುಕೊಂಡಿರುವಳು. ಆದರೆ ಆಕೆಗೆ ಈಗಲೂ ಚಿಕಿತ್ಸೆ ಮಾತ್ರ ಬೇಕಿರುವುದು. ಚಿಕಿತ್ಸೆಯಿಂದ ಆಕೆಗೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಲಿದೆ ಮತ್ತು ಜರ್ಮನಿಗೆ ತೆರಳಿ ಆಕೆ ಚಿಕಿತ್ಸೆ ಪಡೆಯುತ್ತಲಿರುವಳು. ಆಕೆ ಆದಷ್ಟು ಬೇಗ ಸಂಪೂರ್ಣವಾಗಿ ಗುಣಮುಖರಾಗಿ ಮತ್ತೆ ತನ್ನ ಸಾಮಾನ್ಯ ಜೀವನ ಸಾಗಿಸಲು ಎಂದು ಬೋಲ್ಡ್ ಸ್ಕೈ ಹಾರೈಸುತ್ತದೆ. ಇಂತಹ ಸುದ್ದಿಗಳಿಗಾಗಿ ನೀವು ಇದೇ ವಿಭಾಗದಲ್ಲಿ ಓದುತ್ತಲಿರಿ.

English summary

This women Vomits 100 Times In A Single Day!

Rebecca Griffiths has been suffering from a rare condition of a severe case of cyclical vomiting syndrome. She got this syndrome five years ago, and since then her life has been just lying on the sofa with a bowl with her all the time. Recently, she went through a 'make or break' surgery to ease the disorder.
X
Desktop Bottom Promotion