For Quick Alerts
ALLOW NOTIFICATIONS  
For Daily Alerts

ಈ ಹೋಟೆಲ್‌ನಲ್ಲಿ ನಾಯಿಮರಿ ಆಕಾರದ ಐಸ್ ಕ್ರೀಮ್ ಸಿಗುತ್ತದೆಯಂತೆ

By
|

ಐಸ್ ಕ್ರೀಮ್ ನ್ನು ಪ್ರತಿಯೊಬ್ಬರು ಇಷ್ಟಪಡುವರು. ಆದರೆ ಕೆಲವೊಂದು ಸಲ ಐಸ್ ಕ್ರೀಮ್ ನ್ನು ವಿವಿಧ ವಿನ್ಯಾಸಗಳಲ್ಲಿ ಮಾಡುವರು. ಅದರಲ್ಲೂ ಪ್ರಾಣಿ, ಪಕ್ಷಿಗಳ ಆಕೃತಿಯಲ್ಲಿದ್ದಾಗ ಇದನ್ನು ತಿನ್ನಲು ನಾವು ಹಿಂದೆ ಮುಂದೆ ನೋಡಬೇಕಾಗುತ್ತದೆ.

ಇಂತಹದ್ದೇ ಘಟನೆಯೊಂದು ಥೈವಾನ್ ನ ಕಾವೊಶಿಂಗ್ ನಗರದ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ. ಇಲ್ಲಿ ಶಾರ್ ಪೀ ನಾಯಿಮರಿಗಳ ಆಕಾರದಲ್ಲಿ ಐಸ್ ಕ್ರೀಮ್ ಅನ್ನು ನೀಡಲಾಗುತ್ತದೆ. ಮೆನುವಿನಲ್ಲಿ ಕೂಡ ಈ ನಾಯಿಮರಿಯ ಹೆಸರಿದೆ ಮತ್ತು ಗ್ರಾಹಕರು ಇಲ್ಲಿಗೆ ಬಂದು ಇದರೊಂದಿಗೆ ಫೋಟೊ ತೆಗೆಸಿಕೊಳ್ಳಬಹುದು.

ಈ ಐಸ್ ಕ್ರೀಮ್ ನಾಯಿಮರಿಯು ನಿಜವಾಗಿರುವ ನಾಯಿಮರಿಯಂತೆ ಕಂಡುಬರುವುದು. ಇದನ್ನು ಚಾಕಲೇಟ್, ಹಾಲು ಹಾಕಿದ ಚಾ ಮತ್ತು ನೆಲಕಡಲೆ ಸುವಾಸನೆಯುಕ್ತ ಐಸ್ ಕ್ರೀಮ್ ನಿಂದ ತಯಾರಿಸಲಾಗಿದೆ. ಇದಕ್ಕೆ ನೈಜತೆ ನೀಡುವ ದೃಷ್ಟಿಯಿಂದ ಈ ನಾಯಿಗೆ ಕೂದಲಿನಂತೆಯೇ ಮಾಡಲಾಗಿದೆ.

Dog Ice cream

ಇದನ್ನು 30 ಡಿಗ್ರಿ ಸೆಲ್ಸಿಯಸ್‌ನಲ್ಲಿಟ್ಟು ಘನೀಕರಿಸಲಾಗಿದೆ. ಇದರಿಂದ ಐಸ್ ಕ್ರೀಮ್ ಈ ಆಕಾರಕ್ಕೆ ಬಂದಿದೆ. ಚಾಕಲೇಟ್ ಸಾಸ್ ಬಳಸಿಕೊಂಡು ನಾಯಿಗಳ ಕಣ್ಣುಗಳಿಗೆ ಬಣ್ಣ ನೀಡಲಾಗಿದೆ. ಇದನ್ನು ನಾಯಿಯು ಕರಗುವ ಮೊದಲು ಮಾಡಲಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆದ ಕಾರಣದಿಂದಾಗಿ ಈ ರೆಸ್ಟೋರೆಂಟ್ ಈಗ ದಿನಕ್ಕೆ 100 ಐಸ್ ಕ್ರೀಮ್ ಮಾಡುತ್ತಲಿದೆ. ಇದನ್ನು ನೀವು ತಿನ್ನಲು ಇಷ್ಟಪಡುವಿರಾ? ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ಕಳುಹಿಸಿ. ಇದೇ ಸೆಕ್ಸನ್ ನಲ್ಲಿ ಇನ್ನಷ್ಟು ಕುತೂಹಲಕಾರಿ ವಿಷಯಗಳಿಗಾಗಿ ಓದುತ್ತಲಿರಿ.

English summary

This Puppy Ice Cream Is 'Too Real' To Eat

Ice creams are something that you would love to relish and enjoy eating. But what happens when the ice creams are shaped in some of the cute shapes and structures? Would you dare to eat them? One such is this case of a restaurant in the southern city of Kaohsiung, Taiwan where the customers are served ice cream in the shape of Shar-Pei puppies. These puppies are on the menu at a restaurant in Taiwan, and it makes customers take pictures and tuck into the life-like ice cream.
X
Desktop Bottom Promotion