For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: ಹಣೆಗೆ ನಾಲಿಗೆ ತಾಗಿಸುವ ನೇಪಾಳದ ವ್ಯಕ್ತಿ!

|

ಹೆಚ್ಚಾಗಿ ಸಣ್ಣ ಮಕ್ಕಳು ಸುಳ್ಳು ಹೇಳಿದಾಗ ನಾಲಗೆಯನ್ನು ಮೂಗಿಗೆ ಮುಟ್ಟಿಸಿ ಸತ್ಯ ಹೇಳು ದೊಡ್ಡವರು ಹೇಳುವರು. ಮೂಗಿನ ತುದಿಗೆ ನಾಲಗೆ ಸ್ಪರ್ಶಿಸಲು ಸಾಧ್ಯವಿಲ್ಲವೆಂದು ತಿಳಿದಿದೆ. ಇದೇ ಕಾರಣದಿಂದಾಗಿ ಹೀಗೆ ಹೇಳುವರು. ಆದರೆ ನಿರಂತರ ಅಭ್ಯಾಸದಿಂದಾಗಿ ಮೂಗಿನ ತುದಿಗೆ ನಾಲಗೆ ಸ್ಪರ್ಶಿಸಬಹುದು. ಅದೇ ರೀತಿಯಾಗಿ ಮುಂಗೈಗೆ ಬೆಲ್ಲ ಸವರುವುದು ಎನ್ನುವ ಮಾತು ಇದೆ.

ಮುಂಗೈಯನ್ನು ನೆಕ್ಕಲು ತುಂಬಾ ಕಷ್ಟ ಎನ್ನುವ ಮಾತಿದೆ. ಆದರೆ ಈ ಲೇಖನದಲ್ಲಿ ನಿಮಗೆ ಹೇಳಲು ಹೊರಟಿರುವುದು ವ್ಯಕ್ತಿಯೊಬ್ಬ ತನ್ನ ಹಣೆಯನ್ನು ನೆಕ್ಕುವ ಬಗ್ಗೆ. ಮೂಗಿನ ತುದಿಗೆ ನಾಲಗೆ ತಾಗಿಸುವಂತೆ ಇದು ಕೂಡ ತುಂಬಾ ವಿಶೇಷ ಪ್ರತಿಭೆಯೆಂದರೂ ತಪ್ಪಾಗದು. ಇಂತಹ ಹಲವಾರು ಮಂದಿಯನ್ನು ನಾವು ನೋಡಿದ್ದೇವೆ. ತನ್ನ ಹಣೆಯನ್ನೇ ನೆಕ್ಕಿದ ವ್ಯಕ್ತಿಯು ತನ್ನ ಅತೀ ಉದ್ದಗಿನ ನಾಲಗೆಯಿಂದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನ್ನು ಮುರಿದಿದ್ದಾನೆ. ಯಾಗ್ಯ ಬಹದೂರ್ ಕತುವಾಲ್ ನ ವಿಶೇಷ ಪ್ರತಿಭೆ ಬಗ್ಗೆ ನೀವು ಓದಿಕೊಳ್ಳಿ.

35ರ ಹರೆಯದ ಕತುವಾಲ್

35ರ ಹರೆಯದ ಕತುವಾಲ್

ಯಾಗ್ಯ ಬಹದೂರ್ ಕತುವಾಲ್ 35ರ ಹರೆಯದ ವ್ಯಕ್ತಿ. ಆತ ತನ್ನ ಅತೀ ಉದ್ದದ ನಾಲಗೆಯಿಂದ ತನ್ನ ಹಣೆಯನ್ನು ನೆಕ್ಕಬಲ್ಲನು. ನೇಪಾಳದಲ್ಲಿ ಶಾಲಾ ಬಸ್ ನ ಚಾಲಕನಾಗಿರುವ ಈತ ವಿಶ್ವದಲ್ಲಿ ಅತೀ ಉದ್ದದ ನಾಲಗೆ ಇರುವುದಾಗಿ ಹೇಳುತ್ತಿದ್ದಾನೆ.

ಸೆಕೆಂಡುಗಳಲ್ಲಿ ತನ್ನ ಮುಖವನ್ನು ರಬ್ಬರ್ ತರಹ ಮಾಡುವನು!

ಸೆಕೆಂಡುಗಳಲ್ಲಿ ತನ್ನ ಮುಖವನ್ನು ರಬ್ಬರ್ ತರಹ ಮಾಡುವನು!

ಯಾಗ್ಯ ಬಹದೂರ್ ಕತುವಾಲ್ ತನ್ನ ಮುಖವನ್ನು ರಬ್ಬರ್ ನಂತೆ ತಿರುಗಿಸುವಲ್ಲಿ ತುಂಬಾ ನಿಪುಣನಾಗಿದ್ದಾನೆ. ಆತನ ಒಂದು ಹಲ್ಲು ಮಾತ್ರ ಬಾಯಿಯಲ್ಲಿ ಇದೆ. ಇದರಿಂದಾಗಿ ಆತ ಕೆಲವೇ ಸೆಕೆಂಡುಗಳಲ್ಲಿ ರಬ್ಬರ್ ನ ಮುಖವನ್ನು ಮಾಡಬಲ್ಲನು. ತನಗೆ ಮುಖ ತೊಳೆಯುವ ವೇಳೆ ನಾಲಗೆಯನ್ನು ಸ್ವಚ್ಛ ಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಯಾಕೆಂದರೆ ಅದು ಸಾಮಾನ್ಯ ನಾಲಗೆಗಿಂತ ಅತೀ ಉದ್ದವಿದೆ ಎಂದು ಆತ ಹೇಳುತ್ತಾನೆ.

Most Read: ಈತನಿಗೆ ಪ್ರತೀ ದಿನವೂ ಊಟಕ್ಕೆ 'ಹಲ್ಲಿಗಳು' ಬೇಕಂತೆ!!

ಈತನ ವಿಚಿತ್ರ ಹಾವಭಾವ

ಈತನ ವಿಚಿತ್ರ ಹಾವಭಾವ

ಈತನ ಈ ವಿಚಿತ್ರ ಹಾವಭಾವದಿಂದಾಗಿ ಶಾಲಾ ಬಸ್ಸಿನಲ್ಲಿ ತೆರಳುವ ಮಕ್ಕಳನ್ನು ಭೀತಿಗೊಳಿಸುವ ಕಾರಣದಿಂದಾಗಿ ಆತನಿಗೆ ಬಸ್ ನಲ್ಲಿ ಇದನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿಲ್ಲ. ತನ್ನ ವಿಚಿತ್ರ ಹಾವಭಾವದಿಂದಾಗಿ ಮಕ್ಕಳು ಚಡ್ಡಿಯಲ್ಲೇ ಸೂಸೂ ಮಾಡಿಕೊಂಡಿರುವರು ಮತ್ತು ದೊಡ್ಡವರು ಕೂಡ ತುಂಬಾ ಭೀತಿಗೊಳಗಾಗಿದ್ದಾರೆ.

ಫೇಸ್ ಬುಕ್ ನಲ್ಲಿ ವಿಡಿಯೋ

ಫೇಸ್ ಬುಕ್ ನಲ್ಲಿ ವಿಡಿಯೋ

ಆತನ ಗೆಳೆಯ ಫೇಸ್ ಬುಕ್ ನಲ್ಲಿ ವಿಡಿಯೋ ಹಾಕಿದ ಯಾಗ್ಯ ಬಹದೂರ್ ಕತುವಾಲ್ ನ ಗೆಳೆಯನೊಬ್ಬ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ ಬಳಿಕ ಬಹದೂರ್ ಈಗ ತನ್ನ ಊರಿನಲ್ಲಿ ದೊಡ್ಡ ಸೆಲೆಬ್ರಿಟಿಯಾಗಿದ್ದಾನೆ. ಆತ ಹಣೆಯನ್ನು ನೆಕ್ಕಿಕೊಳ್ಳುವ ವಿಡಿಯೋವನ್ನು ಫೇಸ್ ಬುಕ್ ಗೆ ಹಾಕಲಾಗಿದೆ. ಯಾಗ್ಯ ಸಣ್ಣ ವಯಸ್ಸಿನಲ್ಲೇ ತನ್ನಲ್ಲಿರುವಂತಹ ಪ್ರತಿಭೆಯನ್ನು ಗುರುತಿಸಿಕೊಂಡಿದ್ದ ಮತ್ತು ಮುಖವನ್ನು ವಿಚಿತ್ರವಾಗಿ ತಿರುಗಿಸಲು ಆತನಿಗೆ ಯಾವುದೇ ಹಿಂಜರಿಕೆಯಾಗುತ್ತಿಲ್ಲ.

Most Read: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇಂತಹ ಹಕ್ಕಿಗಳು ಮತ್ತು ಪ್ರಾಣಿಗಳು ಮನೆಯ ಒಳಗೆ ಪ್ರವೇಶಿಸಬಾರದಂತೆ

ಜನರು ಏನು ಬೇಕಾದರೂ ಹೇಳಿಕೊಳ್ಳಲಿ, ಈತನಿಗೆ ಅದು ಕ್ಯಾರೇ ಇಲ್ಲ!

ಜನರು ಏನು ಬೇಕಾದರೂ ಹೇಳಿಕೊಳ್ಳಲಿ, ಈತನಿಗೆ ಅದು ಕ್ಯಾರೇ ಇಲ್ಲ!

ಯಾಗ್ಯ ಬಹದೂರ್ ಕತುವಾಲ್ ಹೆಚ್ಚಿನ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯಾಗಿದ್ದಾನೆ. ಇದರಿಂದಾಗಿ ಬೇರೆಯವರು ಏನೇ ಟೀಕೆ ಮಾಡಿದರೂ ಇದು ಆತನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆತ ತುಂಬಾ ಸುಂದರವಾಗಿ ಕಾಣಿಸುತ್ತಾನೆ ಮತ್ತು ತನ್ನ ಸುತ್ತಲು ಇರುವಂತಹ ಜನರನ್ನು ಮನರಂಜಿಸಲು ಆತನಿಗೆ ಇಷ್ಟವಂತೆ. ಈ ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.

Read more about: fact
English summary

This Man Can Lick His Own Forehead

Yagya Bahadur Katuwal is a 35-year old man who can touch his own forehead with his tongue. The school bus driver who is from Nepal has claimed that he has got the longest tongue in the world. He revealed that his 'scary' trick has made children wet their pants and even adults faint as well.This Man Can Lick His Own Forehead
Story first published: Tuesday, December 11, 2018, 16:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X