For Quick Alerts
ALLOW NOTIFICATIONS  
For Daily Alerts

ಪರಾಕಾಷ್ಠೆಯಷ್ಟೇ ಸೆಕ್ಸ್ ಸುಖ ನೀಡುವ ಇತರ ಕೆಲಸಗಳು!

|

ಸೆಕ್ಸ್ ಅನುಭವ ಪಡೆಬೇಕಾದರೆ ಆಗ ಪರಾಕಾಷ್ಠೆ ತಲುಪಬೇಕು ಎನ್ನುವುದು ಸಹಜವಾಗಿ ಪ್ರತಿಯೊಬ್ಬರು ತಿಳಿದಿರುವಂತಹದ್ದಾಗಿದೆ. ಇದಕ್ಕೆ ಸಂಗಾತಿ ಜತೆಗೆ, ಏಕಾಂಗಿಗಳು ಹಸ್ತಮೈಥುನ ಅಥವಾ ಇಂದಿನ ದಿನಗಳಲ್ಲಿ ಬೇರೆ ವಿಧಾನಗಳ ಮೂಲಕವಾಗಿ ಸೆಕ್ಸ್ ಸುಖವನ್ನು ಪಡೆದುಕೊಳ್ಳಬಹುದು. ಈ ಸುಖವು ಕೇವಲ ಸೆಕ್ಸ್ ನಿಂದ ಮಾತ್ರ ಸಿಗುವುದು ಎಂದು ಹೆಚ್ಚಿನ ಜನರ ಭಾವನೆ. ಆದರೆ ಇಂತಹ ಸುಖವನ್ನು ಬೇರೆ ರೀತಿಯಿಂದಲೂ ಪಡೆಯಬಹುದು ಎಂದು ಹೇಳಲಾಗುತ್ತದೆ. ಇದು ಹೇಗೆಂದು ನಿಮಗೆ ಅಚ್ಚರಿಯಾಗಬಹುದು.

ಆದರೆ ಇದು ನಿಜವೆನ್ನುವುದು ಕೆಲವೊಂದು ಅಧ್ಯಯನಗಳಿಂದಲೂ ದೃಢಪಟ್ಟಿದೆ. ಇತರ ಕೆಲವು ವಿಧಾನಗಳು ಕೂಡ ದೇಹದ ಮೇಲೆ ಇದೇ ರೀತಿಯ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಇದು ಹೇಗೆಂದು ತಿಳಿಯಲು ನಿಮ್ಮ ಕುತೂಹಲವೂ ಇನ್ನಷ್ಟು ಹೆಚ್ಚಿರಬಹುದು. ಇದನ್ನು ತಿಳಿಯಲು ನೀವು ಮುಂದೆ ಓದುತ್ತಾ ಸಾಗಿ...

ಧ್ಯಾನ ಕೂಡ ಮೆದುಳಿನ ಮೇಲೆ ಅದೇ ಪರಿಣಾಮ ಬೀರುವುದು

ಧ್ಯಾನ ಕೂಡ ಮೆದುಳಿನ ಮೇಲೆ ಅದೇ ಪರಿಣಾಮ ಬೀರುವುದು

ಧ್ಯಾನ ಮತ್ತು ಪರಾಕಾಷ್ಠೆಯು ಒಂದಕ್ಕೊಂದು ಹೆಚ್ಚು ಅಂತರದಲ್ಲಿಲ್ಲ. ಆಧ್ಯಾತ್ಮಿಕ ಗುರುಗಳ ಪ್ರಕಾರ, ಎರಡೂ ಶಾಂತಿ ನೀಡುವುದು ಮತ್ತು ಪರಾಕಾಷ್ಠೆಯು ಕೇವಲ ಲೈಂಗಿಕ ಅನುಭವ ಮಾತ್ರವಲ್ಲ, ಆಧ್ಯಾತ್ಮಿಕ ಕೂಡ. ಸೆಕ್ಸ್ ಹಾಗೂ ಧ್ಯಾನ ಮೆದುಳಿನ ಮೇಲೆ ಸಮಾನ ಪ್ರಭಾವ ಬೀರುತ್ತದೆ ಎಂದು ಸಂಶೋಧನೆಗಳು ಕಂಡುಕೊಂಡಿವೆ. ಎರಡು ಸಂದರ್ಭದಲ್ಲಿ ರಕ್ತ ಬಲ ಪ್ರಿಫ್ರಂಟಲ್ ಕಾರ್ಟೆಕ್ಸ್ ಗೆ ಧಾವಿಸುತ್ತದೆ. ಎರಡು ಕೂಡ ನಮ್ಮ ಆಲೋಚನೆಗಳಿಂದ ದೂರ ಮಾಡುತ್ತದೆ. ಸೈಂಟಿಫಿಕ್ ಅಮೆರಿಕನ್ ನಲ್ಲಿ ಪ್ರಕಟವಾಗಿರುವ ಲೇಖನವೊಂದರ ಪ್ರಕಾರ ಧ್ಯಾನ ಮತ್ತು ಪರಾಕಾಷ್ಠೆಯು ಆನಂದ ಉಂಟುಮಾಡುವುದು, ಸ್ವಪ್ರಜ್ಞೆ ಕಡಿಮೆ ಮಾಡುವುದು, ದೈಹಿಕ ಗ್ರಹಿಕೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ನೋವನ್ನು ಕಡಿಮೆ ಮಾಡುವುದು. ಇದರಿಂದ ಸೆಕ್ಸ್ ಮತ್ತು ಧ್ಯಾನವು ಸಮಾನ ಸುಖವನ್ನು ನೀಡುವುದು ಎಂದು ಹೆಚ್ಚಿನವರು ಪರಿಗಣಿಸಿದ್ದಾರೆ.

Most Read: ಮಹಿಳೆಯರ ಸೆಕ್ಸ್ ಪರಾಕಾಷ್ಠೆ ಬಗ್ಗೆ ಇರುವ ಅಚ್ಚರಿಯ ವೈಜ್ಞಾನಿಕ ಸತ್ಯಗಳು

ಕೋರ್ಗಮ್ಸ್ ಒಂದು ವಿಚಾರ

ಕೋರ್ಗಮ್ಸ್ ಒಂದು ವಿಚಾರ

ವ್ಯಾಯಾಮದಿಂದಲೂ ನೀವು ಪರಾಕಾಷ್ಠೆ ಪಡೆಯಬಹುದು. ಅಧ್ಯಯನದ ಪ್ರಕಾರ ಶೇ.40ರಷ್ಟು ಮಹಿಳೆಯರು ಕೋರ್ಗಮ್ಸ್ ಪಡೆದಿರುವರು. ಇವರು ಕ್ರಂಚ್ ಮತ್ತು ಪ್ಲಾಂಕ್ಸ್ ವೇಳೆ ಪರಾಕಾಷ್ಠೆ ಹೊಂದಿರುವರು ಎಂದು ತಿಳಿದುಬಂದಿದೆ. ಶೇ.20ರಷ್ಟು ಮಹಿಳೆಯರಿಗೆ ಯೋಗದ ವೇಳೆ ಇದು ಆಗಿದೆ. ವೆಯ್ಟ್ ಲಿಫ್ಟಿಂಗ್, ಸ್ವಿಮ್ಮಿಂಗ್ ಮತ್ತು ಸೈಕ್ಲಿಂಗ್ ವೇಳೆ ಕೆಲವು ಮಂದಿ ಪರಾಕಾಷ್ಠೆ ತಲುಪಿರುವುದಾಗಿ ಅಧ್ಯಯನವು ಹೇಳಿದೆ. ಯೋನಿ ಭಾಗಕ್ಕೆ ಹೆಚ್ಚಿನ ರಕ್ತಸಂಚಾರ ಮತ್ತು ಶ್ರೋಣಿಯ ಸ್ನಾಯುಗಳನ್ನು ಹೆಚ್ಚಾಗಿ ವ್ಯಾಯಾಮದ ವೇಳೆ ಬಳಸಲ್ಪಡುವುದರಿಂದಾಗಿ ಹೀಗೆ ಆಗಿರಬಹುದು.

ಸಾಮಾನ್ಯ ಹೆರಿಗೆ ನೋವನ್ನು ಪರಾಕಾಷ್ಠೆಯು ಕಡಿಮೆ ಮಾಡುವುದು

ಸಾಮಾನ್ಯ ಹೆರಿಗೆ ನೋವನ್ನು ಪರಾಕಾಷ್ಠೆಯು ಕಡಿಮೆ ಮಾಡುವುದು

ಮಗುವಿಗೆ ಸಾಮಾನ್ಯ ಹೆರಿಗೆ ಮೂಲಕ ಜನ್ಮ ನೀಡುವುದು ತುಂಬಾ ನೋವಿನ ವಿಚಾರ. ಆದರೆ ಇದನ್ನು ಸುಖದ ಮೂಲವಾಗಿ ಕಡಿಮೆ ಮಾಡಿಕೊಳ್ಳಬಹುದು. 2009ರಲ್ಲಿ ಡಾಕ್ಯುಮೆಂಟರಿ `ಆರ್ಗಸ್ಮಿಕ್ ಬರ್ತ್: ದಿ ಬೆಸ್ಟ್-ಕೆಪ್ಟ್ ಸೀಕ್ರೆಟ್'ಪ್ರಕಟಗೊಂಡ ಬಳಿಕ ಇದರ ಬಗ್ಗೆ ತುಂಬಾ ಚರ್ಚೆಗಳು ನಡೆದಿದೆ.

ಸ್ವಪ್ನ ಸ್ಖಲನಕ್ಕೆ ಕೆಟ್ಟ ಕನಸು ಬೀಳಬೇಕೆಂದಿಲ್ಲ!

ಸ್ವಪ್ನ ಸ್ಖಲನಕ್ಕೆ ಕೆಟ್ಟ ಕನಸು ಬೀಳಬೇಕೆಂದಿಲ್ಲ!

ಪುರುಷರಿಗೆ ಸ್ವಪ್ನ ಸ್ಖಲನವಾಗುವುದು ಹೊಸ ಸಂಗತಿಯೇನಲ್ಲ. ಕೆಲವೊಂದು ಸಲ ನಿದ್ರೆಯಲ್ಲಿ ಉದ್ರೇಕಗೊಂಡು ಸ್ಖಲನವಾಗುವುದು. ಈ ವಿಚಾರದಲ್ಲಿ ಮಹಿಳೆ ಕೂಡ ಸಮಾನವಾಗಿರುವಳು. ನಿದ್ರೆಯ ವೇಳೆ ಮಹಿಳೆಯ ಯೋನಿಯ ಭಾಗಕ್ಕೆ ಅಥವಾ ಶ್ರೋಣಿಯ ಸ್ನಾಯುಗಳಿಗೆ ಹೆಚ್ಚಿನ ರಕ್ತಸಂಚಾರವಾದರೆ ಅದರಿಂದ ಪರಾಕಾಷ್ಠೆ ತಲುಪುವ ಸಾಧ್ಯತೆಗಳು ಇವೆ. ನಿದ್ರೆಯ ಸಂದರ್ಭದಲ್ಲಿ ಮೆದುಳು ಸಂಪೂರ್ಣವಾಗಿ ಸ್ತಬ್ಧವಾಗಿರುವುದು. ಇದರಿಂದ ವಿವರಣೆ ಕೂಡ ಸಿಗುವುದು. ಪುರುಷರಂತೆ ಮಹಿಳೆಯರು ಅಶ್ಲೀಲವಾಗಿ ಯೋಚಿಸಬೇಕೆಂದಿಲ್ಲ ಅಥವಾ ಜನನೇಂದ್ರೀಯವನ್ನು ಸ್ಪರ್ಶಿಬೇಕೆಂದಿಲ್ಲ. ಒಂದು ಅಧ್ಯಯನದ ಪ್ರಕಾರ ಮಹಿಳೆಯರಲ್ಲಿ ಜನನೇಂದ್ರೀಯದ ಉತ್ತೇಜನವು ಕೈಗಳಿಂದ ಆಗುವುದಲ್ಲ, ಮೆದುಳಿನಿಂದ ಎಂದು ಹೇಳಿದೆ. ಇದನ್ನು ಸಾಬೀತುಪಡಿಸುವ ಬಲವಾದ ಸಾಕ್ಷ್ಯವಾಗಿ ಶೇ.37ರಷ್ಟು ಮಹಿಳೆಯರಿಗೆ ನಿದ್ರೆಯಲ್ಲಿ ಪರಾಕಾಷ್ಠೆ ತಲುಪಲು ಸಾಧ್ಯವಾಗಿರುವುದು ಎಂದು 1953ರಲ್ಲಿ ಪ್ರಕಟಗೊಂಡಿರುವ ವರದಿಯು ಹೇಳಿದೆ.

Most Read: ಪುರುಷರ ಸೆಕ್ಸ್ ಪರಾಕಾಷ್ಠೆ: ನಿಮಗೆ ಇಂತಹ 7 ಸಂಗತಿಗಳು ತಿಳಿದಿದೆಯಾ?

ಯುಟೂಬ್ ವೀಡಿಯೋ ವೀಕ್ಷಣೆಯಿಂದಲೂ ಮೆದುಳು ಪರಾಕಾಷ್ಠೆ ಅನುಭವಿಸುವುದು

ಯುಟೂಬ್ ವೀಡಿಯೋ ವೀಕ್ಷಣೆಯಿಂದಲೂ ಮೆದುಳು ಪರಾಕಾಷ್ಠೆ ಅನುಭವಿಸುವುದು

ಹೆಚ್ಚಿನ ಮಹಿಳೆಯರು ದೈಹಿಕವಾಗಿ ಪರಾಕಾಷ್ಠೆ ತಲುಪುವುದು ಹೆಚ್ಚು ಎಂದು ವರದಿಗಳು ಕೂಡ ಹೇಳಿವೆ. ಕೆಲವೊಂದು ವೀಡಿಯೋಗಳು ಕೂಡ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ಇದು ಕೂಡ ಮೆದುಳಿಗೆ ಪರಾಕಾಷ್ಠೆ ಅನುಭವ ನೀಡಬಹುದು. ಇದನ್ನು ಎಎಸ್ ಎಂಆರ್ ಅಥವಾ ಅಟೋನೊಮಸ್ ಸೆನ್ಸರಿ ಮೆರಿಡಿಯನ್ ರೆಸ್ಪಾನ್ಸ್ ಎಂದು ಕರೆಯಲಾಗುತ್ತದೆ. ವೀಡಿಯೋಗಳು ಮಾತ್ರ ನಿಮ್ಮ ಮೆದುಳಿಗೆ ಪರಾಕಾಷ್ಠೆಯ ಅನುಭವ ನೀಡುವುದಲ್ಲ. ದ ಅಟ್ಲಾಂಟಿಕ್ ವರದಿ ಮಾಡುವ ಪ್ರಕಾರ ಕೂದಲು ಕತ್ತರಿಸುವಾಗ, ಕಿವಿಯ ಪರೀಕ್ಷೆ ಅಥವಾ ಶಾಲೆಯಲ್ಲಿ ಹೇನು ಹುಡುಕುವುದು ಕೂಡ ಎಎಸ್ ಎಂಆರ್ ನ್ನು ಉಂಟು ಮಾಡಬಹುದು. ಇದು ತುಂಬಾ ನಿಕಟವಾಗಿರುವ ಆಕರ್ಷಣೆಯೇ ಕಾರಣವಾಗಿದೆ. ದೊಡ್ಡ ಮಟ್ಟ ಕಚಗುಳಿಯು ನಿಮಗೆ ಪರಾಕಾಷ್ಠೆಯಂತಹ ಅನುಭವವನ್ನು ಉಂಟು ಮಾಡುವ ಸಾಧ್ಯತೆಯು ಇದೆ ಎಂದು ಅಟ್ಲಾಂಟಿಕದ ಮರಿಯಾ ಹೇಳಿರುವರು.

Most Read: ಅಶ್ಲೀಲ ಚಿತ್ರಗಳನ್ನು 'ನೀಲಿ ಚಿತ್ರ' ಎಂದೇಕೆ ಕರೆಯುತ್ತಾರೆ?

ಸೀನುವುದು ಕೂಡ ಪರಾಕಾಷ್ಠೆಗೆ ಸಮಾನವಾಗಿರುವುದು

ಸೀನುವುದು ಕೂಡ ಪರಾಕಾಷ್ಠೆಗೆ ಸಮಾನವಾಗಿರುವುದು

ಕೆಲವರು ನಿರಂತರವಾಗಿ ಸೀನುವರರು. ಸೀನುಬರುವುದು ಎಂದರೆ ಅದೊಂದು ಒಳ್ಳೆಯ ಭಾವನೆಯನ್ನು ಮೂಡಿಸುವುದು. ಇದರಿಂದ ಮೆದುಳಿಗೆ ಕೂಡ ಪರಿಣಾಮವಾಗುವುದು. ಇದನ್ನು ಕೂಡ ಪರಾಕಾಷ್ಠೆಗೆ ಸಮಾನವೆಂದು ಹೇಳಲಾಗಿದೆ. ಇದು ಕೂಡ ಒಂದು ರೀತಿಯಲ್ಲಿ ನಿಲ್ಲಿಸಿದ ಬಳಿಕ ಬಿಡುಗಡೆಯಾಗುವುದು. ಆದರೆ ಇದು ಸೆಕ್ಸ್ ನ ಪರಾಕಾಷ್ಠೆಯಷ್ಠೆ ಪ್ರಮಾಣದಲ್ಲಿರುವುದು ಎಂದು ಹೇಳಲಾಗದು. ವೈಜ್ಞಾನಿಕ ಕಾರಣಗಳು ಕೆಲವೊಂದು ಸಂದರ್ಭದಲ್ಲಿ ವಿಚಿತ್ರವಾಗಿರುವುದು. ಇದರಿಂದ ಸೀನು ಎಂದರೆ ನಾವು ಪರಾಕಾಷ್ಠೆಯೆಂದು ಪರಿಗಣಿಸಲಾಗದು. ಇದರಲ್ಲಿ ಸಮಾನತೆಗಳು ಇರಬಹುದು. ಪರಾಕಾಷ್ಠೆಯಂತೆ ಸೀನು ಕೂಡ ಎಂಡ್ರೋಫಿನ್ಸ್ ನ್ನು ಬಿಡುಗಡೆ ಮಾಡುವುದು ಮತ್ತು ಮೂಗು ಹಾಗೂ ಜನನೇಂದ್ರೀಯಗಳಲ್ಲಿ ಉದ್ರೇಕದ ಅಂಗಾಂಶಗಳು ಇರುವುದು ಎಂದು ವೈಜ್ಞಾನಿಕ ವರದಿಗಳು ಹೇಳಿವೆ.

ಶಾಪಿಂಗ್ ಕೂಡ ಹಾಗೆ ಅಂತೆ…!

ಶಾಪಿಂಗ್ ಕೂಡ ಹಾಗೆ ಅಂತೆ…!

ನೀವು ಅತಿಯಾಗಿ ಶಾಪಿಂಗ್ ಮಾಡಿದರೂ ನಿಮಗೆ ಸೆಕ್ಸ್ ನಿಂದ ಸಿಗುವಂತಹ ಪರಾಕಾಷ್ಠೆಯ ಸುಖವು ಸಿಗುವದಂತೆ. ಹೌದು, ಹೆಚ್ಚು ಶಾಪಿಂಗ್ ಮಾಡಿದಂತೆ ನಿಮ್ಮ ಸೆಕ್ಸ್ ಸುಖ ಸಿಗುವುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಮಿಚಿಗನ್ ಯೂನಿವರ್ಸಿಟಿ ಈ ಬಗ್ಗೆ ನಡೆಸಿರುವಂತಹ ಅಧ್ಯಯನಗಳ ಪ್ರಕಾರ ನೀವು ಹೆಚ್ಚಿಗೆ ಶಾಪಿಂಗ್ ಮಾಡಿದರೆ ಆಗ ಪರಾಕಾಷ್ಠೆಯ ಸುಖದ ಭಾವನೆ ಮೂಡುವುದಂತೆ!

English summary

Things Besides Sex that will give same feeling as an orgasm

There are several things better than sex that can make one feel good. Though this sounds confusing, when you go through the list of things that can give you immense pleasure, you will understand what we mean. According to research, consuming chocolate can release chemicals in your brain that can make you feel like having an orgasm. But this is not the only thing that can make you feel good.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more