For Quick Alerts
ALLOW NOTIFICATIONS  
For Daily Alerts

ಈ ಐದು ರಾಶಿಚಕ್ರದವರು ಬಹುಬೇಗ ಗೊಂದಲಕ್ಕೆ ಒಳಗಾಗುವರು

|

ಒಂದು ವಿಷಯದ ಬಗ್ಗೆ ಸ್ಪಷ್ಟವಾದ ಮಾಹಿತಿ ಅಥವಾ ಜ್ಞಾನವಿಲ್ಲದೆ ಹೋದರೆ ಗೊಂದಲ ಸೃಷ್ಟಿಯಾಗುತ್ತದೆ. ಕೆಲವೊಮ್ಮೆ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ತಿಳಿದಿದ್ದರೂ ಒತ್ತಡಕ್ಕೆ ಅಥವಾ ಭಯಕ್ಕೆ ಒಳಗಾದಾಗ ವಿಷಯದ ಬಗ್ಗೆ ಗೊಂದಲ ಉಂಟಾಗುವುದು. ಇಲ್ಲವೇ ಮಾನಸಿಕವಾಗಿ ಎಲ್ಲವೂ ಮರೆತಂತೆ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಗೊಂದಲ ಎನ್ನುವುದು ಸಾಮಾನ್ಯವಾದ ಸಂವೇದನೆ. ಯಾರಲ್ಲಿ ತಕ್ಷಣಕ್ಕೆ ಭಯ, ಮುಜುಗರ ಮತ್ತು ಒತ್ತಡ ಉಂಟಾಗುವುದೋ ಅಂತಹವರಿಗೆ ಬಹುಬೇಗ ಗೊಂದಲವು ಉಂಟಾಗುವುದು ಎಂದು ಹೇಳಲಾಗುತ್ತದೆ.

ಕೆಲವರಿಗೆ ಮಾಡುತ್ತಿರುವ ಕೆಲಸ ಅಥವಾ ತಿಳಿದುಕೊಂಡ ವಿಷಯದಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡುವುದು. ಅಂತಹ ಸಮಯದಲ್ಲಿ ಯಾವ ನಿರ್ಧಾರ ಕೈಗೊಳ್ಳುವುದರಿಂದ ವಿಷಯವನ್ನು ಬಗೆಹರಿಸಬಹುದು ಎನ್ನುವುದು ಬಹುಬೇಗ ಮನಸ್ಸಿಗೆ ಹೊಳೆಯುವುದಿಲ್ಲ. ಬದಲಿಗೆ ಗೊಂದಲುವು ಕಾಡುವುದು. ಆಗ ಕೈಗೊಂಡ ಕೆಲಸ ಅಥವಾ ಯೋಜನೆಗಳು ಸರಿಯಾದ ಮುಕ್ತಾಯವನ್ನು ಕಾಣದೆ ಹೋಗುವುದು. ಇಂತಹ ಸಮಸ್ಯೆ ಉಂಟಾಗಲು ವ್ಯಕ್ತಿಯ ವ್ಯಕ್ತಿತ್ವವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಲಾಗುತ್ತದೆ.

ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ಗೊಂದಲ ಕಾಡುವುದು ಸಹಜ. ಕೆಲವರು ತಮಗೆ ಗೊಂದಲವಾಗುತ್ತಿರುವುದನ್ನು ಮರೆಮಾಚುವ ಪ್ರಯತ್ನವನ್ನು ಮಾಡುವರು. ಆಗ ಉದ್ರಿಕ್ತತೆ, ಕೋಪ ಅಥವಾ ಅಳು ಹೀಗೆ ಅನೇಕ ಅಸಹಾಯಕ ವರ್ತನೆಯನ್ನು ತೋರಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆ, ಆರೋಗ್ಯ ಮತ್ತು ವರ್ತನೆ ಎಲ್ಲವೂ ಅವರವರ ರಾಶಿಚಕ್ರಗಳಿಗೆ ಅನುಗುಣವಾಗಿ ಇರುತ್ತದೆ. ಗ್ರಹಗತಿಗಳ ಪ್ರಭಾವದ ಮೇರೆಗೆ ಕೆಲವು ವರ್ತನೆಗಳು ಮಹತ್ತರವಾದ ಬದಲಾವಣೆಯನ್ನು ಪಡೆದುಕೊಳ್ಳುವುದು. ಐದು ರಾಶಿಚಕ್ರದವರಲ್ಲಿ ಅತಿಯಾದ ಗೊಂದಲದ ವರ್ತನೆ ಕಂಡುಬರುವುದು ಎಂದು ಹೇಳಲಾಗುತ್ತದೆ. ನೀವು ಗೊಂದಲದ ವ್ಯಕ್ತಿಯೇ? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಅನುರಾಗ ಮತ್ತು ಆಸೆಯ ವಿಷಯದಲ್ಲಿ ಮೇಷ ರಾಶಿಯವರು ಮೊದಲಿಗರು ಎಂದು ಹೇಳಲಾಗುವುದು. ಇವರು ತಾವು ಹೊಂದುವ ಬಯಕೆಗಳನ್ನು ಈಡೇರಿಸಲು ಅಥವಾ ಪಡೆದುಕೊಳ್ಳಲು ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಅವುಗಳ ಸಾಧನೆ ಅಥವಾ ಅದಕ್ಕನ್ವಯಿಸಿದ ವಿಚಾರದಲ್ಲಿ ಅವಸರಕ್ಕೆ ಒಳಗಾಗಿ ಗೊಂದಲಕ್ಕೆ ಒಳಗಾಗಬಹುದು. ಇದು ಎಲ್ಲರಿಗಿಂತ ಸಂಪೂರ್ಣವಾಗಿ ವಿಭಿನ್ನ ಪುಟದಲ್ಲಿದೆ ಎಂದು ಹೇಳಲಾಗುವುದು. ಇಂತಹ ವಿಷಯದಲ್ಲಿ ಬಹುಬೇಗ ಗೊಂದಲಕ್ಕೆ ಒಳಗಾಗುವ ಇವರು ಗೊಂದಲವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು ಎಂದರೆ ಕೆಲವು ಪ್ರಮುಖ ವಿಚಾರಗಳಿಗೆ ಪ್ರಮುಖವಾದ ಸಮಯವನ್ನು ಮೀಸಲಿಡಬೇಕು ಎಂದು ಸಲಹೆ ನೀಡಲಾಗುವುದು.

Most Read:ಈ ರಾಶಿಚಕ್ರದವರು ಪ್ರಚಂಡ ಮಾತುಗಾರರು... ಒಮ್ಮೆ ಮಾತನಾಡಲು ಪ್ರಾರಂಭಿಸಿದರೆ ಸಾಕು ಎಂದರೂ ನಿಲ್ಲಿಸದವರು!

ಕರ್ಕ

ಕರ್ಕ

ಕರ್ಕ ರಾಶಿಯವರು ಬಹುತೇಕ ಸಂದರ್ಭದಲ್ಲಿ ತಮ್ಮ ಭಾವನೆಗಳನ್ನು ಅತ್ಯುತ್ತಮವಾಗಿ ಇರಬೇಕು ಎಂದು ಬಯಸುತ್ತಾರೆ. ಹೀಗೆ ಭಾವನೆಗಳ ಘರ್ಷಣೆ ಉಂಟಾಗುವುದರ ಮೂಲಕ ಗೊಂದಲವನ್ನು ಅನುಭವಿಸುವರು. ಇವರಲ್ಲಿ ಗೊಂದಲ ಎನ್ನುವುದು ಕೇಂದ್ರದ ಹಂತದಲ್ಲಿ ಇರುತ್ತದೆ ಎಂದು ಹೇಳಲಾಗುವುದು. ಇವರು ಯಾವುದೇ ವಿಷಯವಾಗಿ ಇತರರೊಂದಿಗೆ ವ್ಯವಹರಿಸುವಾಗ ಸಂಗತಿಗಳನ್ನು ನೇರವಾಗಿ ಇರಿಸಿಕೊಳ್ಳಬೇಕು. ಆಗ ನಮಗೆ ಬೇಕಾಗಿರುವುದು ಸಿಗುವುದು. ಇವರು ಬೇಕೆನಿಸಿದ್ದನ್ನು ಅವಸರವಾಗಿ ಪಡೆಯುವುದು ಮತ್ತು ಅದು ಸರ್ವಕಾಲಿಕವಾಗಿ ಇರಬೇಕು ಎಂದು ಬಯಸುವುದರಿಂದ ಗೊಂದಲ ಕಾಡುವುದು.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರು ಸಾಮಾನ್ಯವಾಗಿ ಸಂಶಯಕ್ಕೆ ಒಳಗಾಗುತ್ತಾರೆ. ಇವರು ಏನನ್ನಾದರು ಪಡೆದುಕೊಳ್ಳುವ ಮೊದಲು ಸಂಶಯಕ್ಕೆ ಒಳಗಾಗುವುದರಿಂದ ಮಾನಸಿಕವಾಗಿ ಹೆಚ್ಚು ಗೊಂದಲಕ್ಕೆ ಒಳಗಾಗುವರು. ಹಾಗಾಗಿ ಎಂತಹ ವಿಷಯವೇ ಆದರೂ ಇವರಿಗೆ ಬಹುಬೇಗ ನಿರ್ಣಯ ತೆಗೆದುಕೊಳ್ಳಲು ಕಷ್ಟವಾಗುವುದು. ಸೂಕ್ತ ನಿರ್ಧಾರ ಕೈಗೊಳ್ಳುವ ಮೊದಲು ಒಂದಿಷ್ಟು ಗೊಂದಲ ಇವರನ್ನು ಕಾಡುವುದು. ಇವರು ಸಾಮಾನ್ಯವಾಗಿ ಸತ್ಯದ ವಿಚಾರ ಹಾಗೂ ತಕ್ಷಣ ಕೈಗೊಳ್ಳಬೇಕಾದ ನಿರ್ಧಾರಗಳ ವಿಷಯದಲ್ಲಿ ಹೆಚ್ಚು ಗೊಂದಲಕ್ಕೆ ಒಳಗಾಗುವರು.

ಧನು

ಧನು

ಈ ರಾಶಿಯವರು ಹುಡುಗಿಯರನ್ನು ಕಂಡ ತಕ್ಷಣ ಹೆಚ್ಚು ಪ್ರಚೋದಕವಾಗಿ ಇರುತ್ತಾರೆ. ಇವರು ಯಾವುದೇ ವಿಷಯದಲ್ಲಿ ಊಹೆಯ ಮೂಲಕ ನಿರ್ಧಾರವನ್ನು ಕೈಗೊಳ್ಳಲು ಬಯಸುವುದಿಲ್ಲ. ತೆರೆದ ಮಾಹಿತಿಯ ಮೂಲಕ ನಿರ್ಧಾರ ಕೈಗೊಳ್ಳುವರು. ನಿರ್ದಿಷ್ಟವಾದ ವಿಷಯಗಳ ಬಗ್ಗೆ ಪರಿಹಾರವನ್ನು ಕೈಗೊಳ್ಳಲು ಸಾಧ್ಯವಾಗದೆ ಇರುವಾಗ ಸಾಕಷ್ಟು ಗೊಂದಲಕ್ಕೆ ಒಳಗಾಗುವರು. ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳಿಗೆ ಇವರು ಬಹುಬೇಗ ಗೊಂದಲಕ್ಕೆ ಒಳಗಾಗುವರು. ಅತಿಯಾದ ಲೆಕ್ಕಾಚಾರಕ್ಕೆ ಒಳಗಾಗದೆ, ಕೆಲವು ವಿಷಯಗಳಿಗೆ ಒಂದಿಷ್ಟು ಸಮಯವನ್ನು ನೀಡುವುದರಿಂದ ಗೊಂದಲಕ್ಕೆ ಒಳಗಾಗುವುದನ್ನು ಇವರು ತಪ್ಪಿಸಬಹುದು.

Most Read: ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ- ದೇಹದ ತೂಕ ಇಳಿಸಬಹುದು!

ಮೀನ

ಮೀನ

ಈ ರಾಶಿಯವರು ಸಾಮಾನ್ಯವಾಗಿ ತಾವು ಎಲ್ಲೆಡೆ ಇರಬೇಕು ಮತ್ತು ಇತರರಿಂದ ಆಕರ್ಷಣೆಗೆ ಒಳಗಾಗಬೇಕು ಎಂದು ಬಯಸುತ್ತಾರೆ. ಇವರ ಅತಿಯಾದ ಚಿಂತನೆಯೇ ಇವರಿಗೆ ಒಂದಿಷ್ಟು ಗೊಂದಲವನ್ನು ಸೃಷ್ಟಿಮಾಡುವುದು. ಇವರು ತಮ್ಮ ಹಾಸಿಗೆ ಇದ್ದಷ್ಟು ಕಾಲು ಚಾಚುವ ಪ್ರವೃತ್ತಿಯವರಲ್ಲ. ತಮ್ಮ ಸೀಮೆಗೆ ಮೀರಿದಂತಹ ಕನಸನ್ನು ಹಾಗೂ ಆಸೆಯನ್ನು ಹೊಂದಿರುತ್ತಾರೆ. ಇವರ ಆಸೆಯ ಹಿಂದೆ ಸಾಗುವುದರಿಂದ ತಾವು ಕೈಗೊಳ್ಳುವ ಕೆಲಸದಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸುವರು. ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳುವ ಪ್ರವೃತ್ತಿ ಇಲ್ಲದೆ ಇರುವುದರಿಂದಲೂ ಸಾಕಷ್ಟು ಗೊಂದಲ ಉಂಟಾಗುವುದು ಎಂದು ಹೇಳಲಾಗುತ್ತದೆ.

English summary

These Zodiac Signs Get Easily Confused About Every thing

Then there's your love life confusion. What exactly did your significant other mean when they said that they don't feel like seeing a movie tonight? Was that "The Relationship Talk"? Did you just define your relationship? Because, if you did, you just totally missed that moment and are probably more confused than ever.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more