For Quick Alerts
ALLOW NOTIFICATIONS  
For Daily Alerts

ನೀವು ಯಾರೊಂದಿಗೂ ಹಂಚಿಕೊಳ್ಳಲೇಬಾರದ ಕೆಲವೊಂದು ವಸ್ತುಗಳು ಹಾಗೂ ಸಂಗತಿಗಳು

|

ಹಂಚಿಕೊಳ್ಳುವುದು ತುಂಬಾ ಒಳ್ಳೆಯ ವಿಚಾರ. ನಮ್ಮ ಹಿರಿಯರು ಕೂಡ ಹಂಚಿಕೊಂಡು ತಿನ್ನಬೇಕು, ಅದರಿಂದ ರುಚಿ ಹೆಚ್ಚಾಗುವುದು ಎಂದು ನೀತಿಪಾಠ ಮಾಡಿದ್ದಾರೆ. ಆಪ್ತ ಸ್ನೇಹಿತರು ಪ್ರತಿಯೊಂದನ್ನು ಹಂಚಿಕೊಳ್ಳುವರು. ಇನ್ನು ಮನೆಯಲ್ಲಿ ಸೋದರರು, ಸೋದರಿಯರ ಮಧ್ಯೆ ಈ ಹಂಚಿಕೊಳ್ಳುವಿಕೆ ಎನ್ನುವುದು ನಡೆಯುವುದು. ಹಂಚಿಕೊಳ್ಳುವುದು ಎನ್ನುವುದು ಕೇವಲ ಆಹಾರದ ವಿಚಾರವಲ್ಲ. ಇದು ಬಟ್ಟೆಬರೆ, ನಾವು ಬಳಸುವಂತಹ ಸಾಮಗ್ರಿಗಳು ಹೀಗೆ ಪಟ್ಟಿ ಬೆಳೆಯುವುದು. ಆದರೆ ಕೆಲವೊಂದು ವಿಚಾರದಲ್ಲಿ ನಾವು ಒಳ್ಳೆಯವರಾದರೆ ಆಗ ನಮಗೆ ಅದರಿಂದ ಸಮಸ್ಯೆಗಳು ಕೂಡ ಕಂಡುಬರುವುದು.

ಯಾಕೆಂದರೆ ಕೆಲವೊಂದು ವಸ್ತುಗಳನ್ನು ಹಂಚಿಕೊಂಡರೆ ಅದರಿಂದ ನಿಮಗೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಸ್ತುಗಳನ್ನು ಹಂಚಿಕೊಳ್ಳುವಾಗ ಭಾವನಾತ್ಮಕವಾಗಿ ನೀವು ವರ್ತಿಸುವ ಬದಲು ನಿಮ್ಮ ಆರೋಗ್ಯದ ಕಡೆಗೂ ಗಮನ ನೀಡಿದರೆ ಆಗ ಮುಂದೆ ಬರುವಂತಹ ಆರೋಗ್ಯ ಸಮಸ್ಯೆ ನಿವಾರಣೆ ಮಾಡಬಹುದು. ಕೇವಲ ವಸ್ತುಗಳು ಮಾತ್ರವಲ್ಲದೆ ನಿಮ್ಮ ಜೀವನದ ಕೆಲವೊಂದು ವಿಚಾರಗಳನ್ನು ಕೂಡ ಹಂಚಿಕೊಳ್ಳಬಾರದು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವಂತಹ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನೀವು ಹಂಚಿಕೊಳ್ಳಬಾರದ ಕೆಲವೊಂದು ವಸ್ತುಗಳ ಪಟ್ಟಿ ಮಾಡಿದೆ. ಇದನ್ನು ಓದಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ...

ಸ್ಲಿಪ್ಪರ್

ಸ್ಲಿಪ್ಪರ್

ಮನೆಗೆ ಅತಿಥಿಗಳು ಬಂದಾಗ ಮೊದಲಾಗಿ ಹಂಚಿಕೊಳ್ಳುವುದು ಸ್ಲಿಪ್ಪರ್. ನಿಮ್ಮ ಮನೆಗೆ ಬಂದಿರುವಂತಹ ವ್ಯಕ್ತಿಯು ಶೌಚಾಲಯದ ಒಳಗಡೆ ಸ್ಲಿಪ್ಪರ್ ಗಳನ್ನು ಹಾಕಿಕೊಂಡು ಹೋಗುವರು. ಅದಾಗ್ಯೂ, ಸ್ಲಿಪ್ಪರ್ ಗಳು ಶಿಲೀಂಧ್ರ ಬೆಳವಣಿಗೆಗೆ ದೊಡ್ಡ ಪ್ರದೇಶ. ಇದರಿಂದ ನಿಮ್ಮ ಅತಿಥಿಗಳಿಗೆ ಹೊಸ ಸ್ಲಿಪ್ಪರ್ ಅಥವಾ ನೀವು ಬಳಸದೆ ಇರುವಂತಹ ಸ್ಲಿಪ್ಪರ್ ನೀಡಿದರೆ ತುಂಬಾ ಒಳ್ಳೆಯದು.

ಲಿಪ್ ಗ್ಲೊಸ್ ಅಥವಾ ಲಿಪ್ ಸ್ಟಿಕ್

ಲಿಪ್ ಗ್ಲೊಸ್ ಅಥವಾ ಲಿಪ್ ಸ್ಟಿಕ್

ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದೆ. ಮನೆಯಲ್ಲಿ ತುಂಬಾ ಜನ ಸೇರಿರುವರು. ಆಗ ಮೇಕಪ್ ಮಾಡಿಕೊಳ್ಳುವ ವೇಳೆ ಮಹಿಳೆಯರು ಸಾಮಾನ್ಯವಾಗಿ ಲಿಪ್ ಸ್ಟಿಕ್ ನ್ನು ಹಂಚಿಕೊಳ್ಳುವರು. ಹುಡುಗಿಯರು ಕಾಲೇಜು ಹಾಗೂ ಕಚೇರಿಗಳಲ್ಲೂ ಹೀಗೆ ಮಾಡುವರು. ಇದು ತುಂಬಾ ಅಪಾಯಕಾರಿ. ಯಾಕೆಂದರೆ ನಿಮ್ಮ ಸ್ನೇಹಿತೆಗೆ ಹರ್ಪಿಸ್ ಇರಬಹುದು. ಇದು ಲಿಪ್ ಸ್ಟಿಕ್ ಮೂಲಕ ಹರಡಬಹುದು.

Most Read: ಈ ಮಹಿಳೆಗೆ 37ರ ಹರೆಯ, ಅಚ್ಚರಿಯಂದ್ರೆ ಆಕೆ ಈಗ 38 ಮಕ್ಕಳ ತಾಯಿ!

ಕಾಸ್ಮೆಟಿಕ್

ಕಾಸ್ಮೆಟಿಕ್

ಹೈಶ್ಯಾಡೋ, ಕಾಜಲ್, ಮುಖದ ಪೌರ್ ಇತ್ಯಾದಿ ಕಾಸ್ಮೆಟಿಕ್ ಗಳನ್ನು ಹಂಚಿಕೊಳ್ಳುವುದರಿಂದ ನೀವು ಆದಷ್ಟು ಮಟ್ಟಿಗೆ ದೂರವಿರಬೇಕು. ನೀವು ಯಾವುದೇ ಬ್ಯೂಟಿ ಪಾರ್ಲರ್ ಗೆ ಹೋದರೆ ಆಗ ಅವರು ಸರಿಯಾದ ಸ್ವಚ್ಛತಾ ಕ್ರಮವನ್ನು ಅಳವಡಿಸಿಕೊಂಡಿದ್ದಾರೆಯಾ ಎಂದು ತಿಳಿಯಿರಿ. ಬೇರೆಯವರ ಚರ್ಮದಲ್ಲಿರುವಂತಹ ಬ್ಯಾಕ್ಟೀರಿಯಾವು ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂದು ನಿಮಗೆ ತಿಳಿಯದು.

ಟವೆಲ್

ಟವೆಲ್

ಚರ್ಮದ ಸೋಂಕು ಹೆಚ್ಚಾಗಿ ಬೇರೆಯವರ ಟವೆಲ್ ಬಳಸುವುದರಿಂದ ಬರುವುದು. ಇದರಿಂದಾಗಿ ನೀವು ಸ್ಮಿಮ್ಮಿಂಗ್ ಕ್ಲಬ್ ಅಥವಾ ಬೇರೆ ಯಾವುದೇ ಕ್ರೀಡಾ ಕ್ಲಬ್ ಗಳಲ್ಲಿ ಬೇರೆಯವರ ಟವೆಲ್ ಬಳಸುವುದರಿಂದ ದೂರವಿರಿ. ಇದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಹರಡುವುದು. ಬೆವರು ಕೀಟಾಣುಗಳಿಗೆ ಬೆಳೆಯಲು ಒಳ್ಳೆಯ ಜಾಗವಾಗಿರುವುದು.

ಕೂದಲಿನ ಸಾಮಗ್ರಿಗಳು

ಕೂದಲಿನ ಸಾಮಗ್ರಿಗಳು

ಹೇನು ಮತ್ತು ತಲೆಹೊಟ್ಟು ಬೇರೆಯವರ ಕೂದಲಿನ ಸಾಮಗ್ರಿಗಳನ್ನು ಬಳಸುವುದರಿಂದ ಬರಬಹುದು. ಹೇರ್ ಬ್ಯಾಂಡ್, ಕ್ಲಿಪ್ ಅಥವಾ ಬ್ರಷ್ ಗಳನ್ನು ಬಳಸುವುದರಿಂದ ಹೇನು ಮತ್ತು ತಲೆಹೊಟ್ಟು ಹರಡಬಹುದು.

ಹೆಡ್ ಫೋನ್

ಹೆಡ್ ಫೋನ್

ಕಚೇರಿಗಳಲ್ಲಿ ಹೆಚ್ಚಾಗಿ ಸಹೋದ್ಯೋಗಿಗಳ ಹೆಡ್ ಫೋನ್ ಬಳಸುತ್ತೇವೆ. ಇದು ತುಂಬಾ ಕೆಟ್ಟ ಅಭ್ಯಾಸ. ಯಾಕೆಂದರೆ ಕೆಲವೊಂದು ರೀತಿಯ ಬ್ಯಾಕ್ಟೀರಿಯಾಗಳು ನಮ್ಮ ಕಿವಿಯ ಮೇಣದಲ್ಲಿ ಇರುವುದು. ನೀವು ಬೇರೆಯವರ ಹೆಡ್ ಫೋನ್ ಬಳಸಿದರೆ ಆಗ ಕಿವಿಯ ಸೋಂಕು ಬರಬಹುದು.

Most Read: ವೃತ್ತಿ ಜೀವನದ ಯಶಸ್ಸನ್ನು ಸೂಚಿಸುವ ಅಂಗೈ ರೇಖೆಗಳು!- ನಿಮ್ಮದೂ ಪರಿಶೀಲಿಸಿಕೊಳ್ಳಿ

ಡಿಯೋಡ್ರೆಂಟ್ ಮತ್ತು ರೋಲ್ ಆನ್ ಗಳು

ಡಿಯೋಡ್ರೆಂಟ್ ಮತ್ತು ರೋಲ್ ಆನ್ ಗಳು

ಚರ್ಮದ ಸಂರ್ಪಕಕ್ಕೆ ಬಂದಾಗ ಡಿಯೋಡ್ರೆಂಟ್ ಮತ್ತು ರೋಲ್ ಆನ್ ಗಳ ಮೇಲ್ಭಾಗದಲ್ಲಿ ಬ್ಯಾಕ್ಟೀರಿಯಾಗಳು ಕಂಡುಬರಬಹುದು. ಬೇರಯವರು ಇದನ್ನು ಬಳಸಿದರೆ ಆಗ ಅವರಿಗೆ ಬ್ಯಾಕ್ಟೀರಿಯಾ ಹರಡಬಹುದು.

ಚರ್ಮದ ಆರೈಕೆ ಸಾಧನಗಳು

ಚರ್ಮದ ಆರೈಕೆ ಸಾಧನಗಳು

ಚರ್ಮದ ಆರೈಕೆ ಸಾಧನಗಳಾಗಿರುವಂತಹ ಸ್ಪಾಂಜ್, ಬ್ರಷ್ ಗಳು, ಮಸಾಜ್ ರೋಲರ್ ಸತ್ತ ಚರ್ಮದ ಕೋಶಗಳಿಂದ ಬ್ಯಾಕ್ಟೀರಿಯಾವನ್ನು ಪಡೆಯಹುದು. ಇದನ್ನು ಬೇರೆಯವರೊಂದಿಗೆ ಹಂಚಿಕೊಂಡಾಗ ಅದು ಚರ್ಮದ ಮೇಲೆ ಪರಿಣಾಮ ಬಿರಬಹುದು. ಮೊಡವೆ ಅಥವಾ ಬೊಕ್ಕೆಯ ಸಮಸ್ಯೆಯಾಗಿರುವ ಚರ್ಮವಾಗಿದ್ದರೆ ಆಗ ಬ್ಯಾಕ್ಟೀರಿಯಾ ಕಾಣಿಸಬಹುದು.

ನಿಮ್ಮ ಗುರಿಗಳು ಮತ್ತು ದೀರ್ಘಕಾಲದ ಯೋಜನೆಗಳು

ನಿಮ್ಮ ಗುರಿಗಳು ಮತ್ತು ದೀರ್ಘಕಾಲದ ಯೋಜನೆಗಳು

ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವಂತಹ ವ್ಯಕ್ತಿಗಳು ಪ್ರಮುಖವಾಗಿ ಯಾವುದೇ ರೀತಿಯ ಯೋಜನೆ ಹಾಗೂ ಗುರಿಯನ್ನು ಹಂಚಿಕೊಳ್ಳದೆ ಇರುವುದು. ನೀವು ಯಾವುದೇ ಯೋಜನೆ ಬಗ್ಗೆ ಸದ್ಯೋಭವಿಷ್ಯತ್ತಿನಲ್ಲಿ ಕೆಲಸ ಮಾಡುವಿರೆಂದಾದರೆ ಆಗ ನೀವು ಮುಖ್ಯವಾಗಿ ಇದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದನ್ನು ನಿಲ್ಲಿಸಬೇಕು. ಯಾಕೆಂದರೆ ಇದನ್ನು ತುಂಬಾ ಗೌಪ್ಯವಾಗಿಡುವುದು ಅತೀ ಅಗತ್ಯವಾಗಿರುವುದು. ನಿಮ್ಮ ಭವಿಷ್ಯದ ಯೋಜನೆಯು ತುಂಬಾ ಮೌಲ್ಯಯುತವಾದದ್ದು ಮತ್ತು ಇದನ್ನು ಯಾರೊಂದಿಗೂ ಹಂಚಲು ಹೋಗಬೇಡಿ.

ವೈಯಕ್ತಿಕ ಬದುಕು

ವೈಯಕ್ತಿಕ ಬದುಕು

ನಿಮ್ಮ ಆಪ್ತ ಸ್ನೇಹಿತನ ಜತೆಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಆದರೆ ನೀವು ವೈಯಕ್ತಿಕ ವಿಚಾರವನ್ನು ನೀವು ಬೇರೆಯವರೊಂದಿಗೆ ಹಂಚಿಕೊಂಡರೆ ಆಗ ಅದು ದೊಡ್ಡ ಮಟ್ಟದ ತಪ್ಪು. ಯಾಕೆಂದರೆ ಅವರು ನಿಮ್ಮ ಬಗ್ಗೆ ಒಂದು ತೀರ್ಪು ಅಥವಾ ಟೀಕೆ ಮಾಡಬಹುದು. ನೀವು ಇದಕ್ಕೆ ತಯಾರಾಗಿರಬೇಕು. ಯಾಕೆಂದರೆ ನೀವೇ ಅವರನ್ನು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಕರೆದಿರುವುದು. ಅವರ ವೈಯಕ್ತಿಕ ಜೀವನದ ಬಗ್ಗೆ ಎಲ್ಲವನ್ನು ಹಂಚಿಕೊಳ್ಳುತ್ತಾರೆಯಾ? ಇಲ್ಲವಲ್ಲ, ಹಾಗಾದರೆ ನೀವು ಕೂಡ ಯಾವುದೇ ರೀತಿಯಲ್ಲೂ ವೈಯಕ್ತಿಕ ಜೀವನದ ವಿಚಾರವನ್ನು ಹಂಚಿಕೊಳ್ಳಲು ಹೋಗಬೇಡಿ.

 ಕೌಟುಂಬಿಕ ಕಲಹಗಳು

ಕೌಟುಂಬಿಕ ಕಲಹಗಳು

ಎಲ್ಲರ ಮನೆಯ ದೋಸೆ ಕೂಡ ತೂತೆ ಎನ್ನುವ ಗಾದೆಯಿದೆ. ಅದೇ ರೀತಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಜಗಳವೆನ್ನುವುದು ಇದ್ದೇ ಇರುವುದು. ಇದಕ್ಕೆ ಯಾರೂ ಹೊರತಾಗಿಲ್ಲ. ಯಾರು ಪರಿಪೂರ್ಣ ಕುಟುಂಬವನ್ನು ಹೊಂದಿರಲ್ಲ. ಆದರೆ ನೀವು ಇದನ್ನು ಸರಿಯಾಗಿ ಸಾಗಿಸುವ ಬಗ್ಗೆ ಶ್ರಮ ವಹಿಸಬೇಕು. ಕುಟುಂಬದಲ್ಲಿ ನಡೆದಿರುವ ಯಾವುದೇ ವಿಚಾರದ ಬಗ್ಗೆ ನೀವು ತುಂಬಾ ನಕಾರಾತ್ಮಕವಾಗಿ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೀರಾ? ಅವರು ಕೂಡ ಇದಕ್ಕೆ ನಕಾರಾತ್ಮಕವಾಗಿರುವಂತಹ ಹೇಳಿಕೆ ನೀಡಿರುವರೇ? ಹಾಗಾದರೆ ನೀವು ಮೊದಲು ಇಂತಹ ವಿಚಾರಗಳನ್ನು ಹಂಚಿಕೊಳ್ಳಲು ಹೋಗಲೇಬಾರದು.

Most Read: ಶ್ರೀಲಂಕಾದ ಗುಹೆಯೊಂದರಲ್ಲಿ ರಾವಣನ ದೇಹವು ಇಂದಿಗೂ ಇದೆ ಎನ್ನುವ ವದಂತಿ ಇದೆ!

ಸಂಬಂಧದ ಸಮಸ್ಯೆಗಳು

ಸಂಬಂಧದ ಸಮಸ್ಯೆಗಳು

ಸಂಬಂಧದಲ್ಲೂ ಹಲವಾರು ಸಮಸ್ಯೆಗಳು ಪ್ರತಿಯೊಬ್ಬರಲ್ಲೂ ಇರುವುದು. ನೀವು ಒಂದು ಕುಟುಂಬ ಹೊಂದಿದ್ದೀರಿ ಮತ್ತು ಸಂಬಂಧದಲ್ಲಿ ನೀವು ಹೊಸಬರಾಗಿದ್ದರೆ, ಆಗ ನೀವು ಸಮಸ್ಯೆಗಳನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ಆಗ ನಿಮಗೆ ದೊಡ್ಡ ಮಟ್ಟದಲ್ಲಿ ಹಾನಿಯುಂಟ ಮಾಡಬಹುದು. ಇದನ್ನು ಕೇಳಲು ಬಯಸದೆ ಇರುವಂತಹ ವ್ಯಕ್ತಿಗಳೊಂದಿಗೆ ನೀವು ಇಂತಹ ವಿಚಾರಗಳನ್ನು ಹಂಚಿಕೊಂಡಾಗ ಅವರು ಇದನ್ನು ತುಂಬಾ ನಕಾರಾತ್ಮಕವಾಗಿ ನೋಡಲಿರುವರು. ಇದರಿಂದ ವಿಷಯವು ಮತ್ತಷ್ಟು ಬಿಗಡಾಯಿಸುವುದು.

ಜೀವನಶೈಲಿ ಬದಲಾವಣೆಗಳು

ಜೀವನಶೈಲಿ ಬದಲಾವಣೆಗಳು

ನಿಮಗೆ ಯಾವುದೇ ರೀತಿಯ ಆದಾಯ ಹೆಚ್ಚಾಗುವುದು ಅಥವಾ ಬೇರೆ ರೀತಿಯ ಬದಲಾವಣೆಗಳನ್ನು ನೀವು ಹಂಚಿಕೊಳ್ಳಲು ಹೋಗಬೇಡಿ. ಅವರು ಇದನ್ನು ನಿಮ್ಮ ವಿರುದ್ಧವಾಗಿ ಬಳಸಿಕೊಳ್ಳಬಹುದು. ಜೀವನದಲ್ಲಿ ಏನೇ ಬದಲಾವಣೆಯಾದರೂ ಅದು ನಿಮಗೆ ಮಾತ್ರ. ಇದನ್ನು ಹಾಗೆ ಇಡಿ. ಆಪ್ತ ಸ್ನೇಹಿತರು ಮತ್ತು ನೀವು ನಂಬುವಂತಹ ಕುಟುಂಬ ಸದಸ್ಯರನ್ನು ಈ ಪಟ್ಟಿಯಿಂದ ಹೊರಗಿಡಬಹುದು. ಆರೋಗ್ಯಕರವಾಗಿರುವ ಜೀವನ ಸಾಗಿಸಲು ನಮಗೆ ಯಾರೊಂದಿಗಾದರೂ ವಿಚಾರಗಳನ್ನು ಹಂಚಿಕೊಳ್ಳುವುದು ಅಗತ್ಯವಾಗಿರುವುದು. ಆದರೆ ಪ್ರತಿಯೊಬ್ಬರು ಇದಕ್ಕೆ ಅರ್ಹರಾಗಿರುವುದಿಲ್ಲವೆನ್ನುವುದನ್ನು ನೀವು ಗಮನಿಸಬೇಕು.

English summary

these things you should never share with anyone!

While 'sharing is caring' is a nice concept, it needs to be implemented in the right places. This is because sharing certain things can lead to serious health issues for you. Here is a list of things you should prefer keeping just to yourself:
Story first published: Friday, October 26, 2018, 17:46 [IST]
X
Desktop Bottom Promotion