For Quick Alerts
ALLOW NOTIFICATIONS  
For Daily Alerts

ಮಹಿಳೆಯರು ಸೆಕ್ಸ್ ವಿಚಾರದ ಬಗ್ಗೆ ಕೇಳಲು ಮುಜುಗರ ಪಡುವ ಪ್ರಶ್ನೆಗಳು

|

ಸೆಕ್ಸ್ ವಿಚಾರಕ್ಕೆ ಬಂದರೆ ಪುರುಷರಕ್ಕಿಂತ ಮಹಿಳೆಯರು ಹೆಚ್ಚು ನಾಚಿಗೆ ಸ್ವಭಾವದವರು ಹಾಗೂ ಮುಜುಗರಕ್ಕೆ ಈಡಾಗುವವರು ಎಂದು ಹೇಳಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಸೆಕ್ಸ್ ಗೆ ಸಂಬಂಧಿಸಿರುವಂತಹ ಕೆಲವೊಂದು ಪ್ರಶ್ನೆಗಳನ್ನು ಕೇಳಲು ಮಹಿಳೆಯರು ತುಂಬಾ ಮುಜುಗರಕ್ಕೆ ಒಳಗಾಗುವರು. ಯಾಕೆಂದರೆ ಇದರಿಂದಾಗಿ ತಮ್ಮ ಬಗ್ಗೆ ಇರುವಂತಹ ಮನೋಭಾವವು ಬದಲಾಗುತ್ತದೆ ಎನ್ನುವ ಭೀತಿ.

sex-related question women are too embarrassed to ask

ಆದರೆ ಸೆಕ್ಸ್ ಬಗ್ಗೆ ಇರುವ ಪ್ರಶ್ನೆಗಳನ್ನು ಕೇಳಲು ಯಾವುದೇ ಮುಜುಗರ ಪಡಬೇಕಾಗಿಲ್ಲ. ಯಾಕೆಂದರೆ ನಿಮ್ಮ ತಲೆಯಲ್ಲಿ ಇರುವಂತಹ ಪ್ರಶ್ನೆಗಳು ಸೆಕ್ಸ್ ನಷ್ಟೇ ಮುಖ್ಯವಾಗಿರುವಂತದ್ದಾಗಿದೆ. ನಾಚಿಗೆ ಸ್ವಭಾವದ ಮಹಿಳೆಯರಿಗಾಗಿಯೇ ಈ ಲೇಖನವನ್ನು ಮೀಸಲಿಡಲಾಗಿದೆ. ಯಾಕೆಂದರೆ ಈ ಲೇಖನದಲ್ಲಿ ಮಹಿಳೆಯರು ಕೇಳಲು ಹಿಂಜರಿಯುವಂತಹ ಸೆಕ್ಸ್ ಸಂಬಂಧಿತ ಪ್ರಶ್ನೆಗಳ ಬಗ್ಗೆ ಹೇಳಲಾಗಿದೆ ಮತ್ತು ಅದಕ್ಕೆ ಉತ್ತರವನ್ನೂ ನೀಡಲಾಗಿದೆ.

ನನ್ನ ಸಂಗಾತಿಯು ಸುಳ್ಳು ಪರಾಕಾಷ್ಠೆ ತಲುಪಬಹುದೇ? ಇದು ಸಾಮಾನ್ಯವೇ?

ನನ್ನ ಸಂಗಾತಿಯು ಸುಳ್ಳು ಪರಾಕಾಷ್ಠೆ ತಲುಪಬಹುದೇ? ಇದು ಸಾಮಾನ್ಯವೇ?

ಕೇವಲ ಮಹಿಳೆಯರು ಮಾತ್ರ ಪರಾಕಾಷ್ಠೆ ತಲುಪಿರುವ ಬಗ್ಗೆ ಸುಳ್ಳು ಹೇಳುತ್ತಾರೆ ಎಂದು ನಾವು ನಂಬಿಕೊಂಡಿದ್ದೇವೆ. ಆದರೆ ಪುರುಷರು ಕೂಡ ಹೀಗೆ ಮಾಡಬಲ್ಲರು ಎಂದು ನಾವು ಯೋಚನೆ ಮಾಡಿರಲೇ ಇಲ್ಲ. 2016ರಲ್ಲಿ ಜರ್ನಲ್ ಸೆಕ್ಸೂವಲ್ ಆ್ಯಂಡ್ ರಿಲೇಷನ್ ಶಿಪ್ ಥೆರಪಿಯಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಶೇ.30ರಷ್ಟು ಉತ್ತರ ಅಮೆರಿಕಾದ ಪುರುಷರು ಕೆಲವೊಂದು ಸಲ ಪರಾಕಾಷ್ಠೆ ಬಗ್ಗೆ ಸುಳ್ಳು ಹೇಳುತ್ತಾರೆ. ಪುರುಷರು ತಮ್ಮ ಲೈಂಗಿಕ ಪರಾಕಾಷ್ಟೆ ಬಗ್ಗೆ ಸುಳ್ಳು ಹೇಳಲು ಮಹಿಳೆಯರಂತೆ ಸಮಾನ ಕಾರಣಗಳನ್ನು ಹೊಂದಿರುವರು. ಆಲ್ಕೋಹಾಲ್, ಆಯಾಸ, ಒತ್ತಡ ಅಥವಾ ಕೆಲವೊಂದು ಔಷಧಿಗಳಿಂದ ಹೀಗೆ ಮಾಡುವರು. ಪರಾಕಾಷ್ಠೆ ಇಲ್ಲವೆಂದರೆ ಅದು ಒಳ್ಳೆಯ ಸೆಕ್ಸ್ ಅಲ್ಲವೆಂದು ಅರ್ಥವಲ್ಲ.

Most Read: ಮಹಿಳೆಯರ ಸೆಕ್ಸ್ ಪರಾಕಾಷ್ಠೆ, ಕುತೂಹಲ ಕೆರಳಿಸುವ ಅಚ್ಚರಿಯ ಸಂಗತಿಗಳು

ನನಗೆ ಯೋನಿ ಸೆಕ್ಸ್ ಗಿಂತ ಗುದ ಸೆಕ್ಸ್ ಒಳ್ಳೆಯದು. ಇದು ಸಾಮಾನ್ಯವೇ?

ನನಗೆ ಯೋನಿ ಸೆಕ್ಸ್ ಗಿಂತ ಗುದ ಸೆಕ್ಸ್ ಒಳ್ಳೆಯದು. ಇದು ಸಾಮಾನ್ಯವೇ?

ಹೌದು, ಇದು ಖಂಡಿತವಾಗಿಯೂ ಸಾಮಾನ್ಯವಾಗಿರುವಂತದ್ದಾಗಿದೆ. ಅಚ್ಚರಿ ವಿಚಾರವೆಂದರೆ ಗುದದ ಸೆಕ್ಸ್ ನಲ್ಲಿ ಪಾಲ್ಗೊಳ್ಳುವಂತೆ ಮಹಿಳೆಯರು ಇತರ ಮಹಿಳೆಯರಿಗಿಂತ ಹೆಚ್ಚಿನ ಲೈಂಗಿಕ ಪರಾಕಾಷ್ಠೆ ಪಡೆಯುವರು. ಇದಕ್ಕೆ ಕಾರಣವೆಂದರೆ ಈ ಭಾಗದಲ್ಲಿ ದೇಹದ ಕೆಲವೊಂದು ಸೂಕ್ಷ್ಮ ನರಗಳು ಕೊನೆಗೊಳ್ಳುವುದು. ಈ ಭಾಗವು ಅದ್ಭುತವಾಗಿರುವಂತಹ ಪರಾಕಾಷ್ಠೆ ಉಂಟು ಮಾಡುವುದು ಎಂದು ಹೇಳಲಾಗುತ್ತದೆ. ನಿಮಗೆ ಇದರ ಅನುಭವವಾಗಿದ್ದರೆ ಆಗ ನೀವು ಯೋನಿ ಸೆಕ್ಸ್ ಬದಲು ಗುದ ಸೆಕ್ಸ್ ನ್ನು ಆಯ್ಕೆ ಮಾಡುವಿರಿ.

ಸಂಗಾತಿಗೆ ನನ್ನ ಕಾಯಿಲ್ ನ ಭಾವನೆಯಾಗುವುದು ಸಾಮಾನ್ಯವೇ?

ಸಂಗಾತಿಗೆ ನನ್ನ ಕಾಯಿಲ್ ನ ಭಾವನೆಯಾಗುವುದು ಸಾಮಾನ್ಯವೇ?

ಇದರಲ್ಲಿ ಯಾವುದೇ ರೀತಿಯ ಸಮಸ್ಯೆ ಅಥವಾ ಅಪಾಯವು ಇಲ್ಲ. ಆದರೆ ನಿಮ್ಮ ಹಾಗೂ ಸಂಗಾತಿಯ ಆರಾಮಕ್ಕಾಗಿ ನೀವು ವೈದ್ಯರಲ್ಲಿ ತೆರಳಿ ಇದನ್ನು ಮರಳಿ ಜೋಡಿಸುವಂತೆ ಹೇಳಬಹುದು. ಕಾಯಿಲ್ ನ್ನು ಸರಿಯಾಗಿ ಜೋಡಣೆ ಮಾಡಿಲ್ಲವೆಂದು ನಿಮ್ಮ ಸಂಗಾತಿಗೆ ಭಾವನೆಯಾದರೆ ಆಗ ನೀವು ಹೀಗೆ ಮಾಡಿ. ನಿಮ್ಮ ಸಂಗಾತಿಯ ಶಿಶ್ನವು ತುಂಬಾ ಸೂಕ್ಷ್ಮವಾಗಿದ್ದರೆ ಆಗ ಇದರ ಅವಕಾಶಗಳು ಹೆಚ್ಚಾಗಿರುವುದು.

ಯೋನಿಯು ಶಬ್ಧ ಮಾಡಿದರೆ ಯಾವುದೇ ಸಮಸ್ಯೆಯಿದೆಯಾ?

ಯೋನಿಯು ಶಬ್ಧ ಮಾಡಿದರೆ ಯಾವುದೇ ಸಮಸ್ಯೆಯಿದೆಯಾ?

ಯೋನಿಯಿಂದ ಬರುವಂತಹ ಶಬ್ಧವನ್ನು ಯೋನಿಯ ಊಸು ಎಂದು ಕರೆಯಲಾಗುತ್ತದೆ. ಇದು ಖಂಡಿತವಾಗಿಯೂ ಸಾಮಾನ್ಯವಾಗಿರುವಂತದ್ದಾಗಿದೆ. ಯೋನಿ ಸೆಕ್ಸ್ ವೇಳೆ ನೀವು ಇದನ್ನು ಯಾವುದೇ ರೀತಿಯಿಂದಲೂ ಕಡೆಗಣಿಸಲು ಆಗದು. ಯೋನಿಯಿಂದ ಬರುವಂತಹ ಶಬ್ಧಕ್ಕೆ ಕಾರಣವೆಂದರೆ ಸೆಕ್ಸ್ ವೇಳೆ ಗಾಳಿಯು ಯೋನಿಯೊಳಗೆ ತಳ್ಳಲ್ಪಡುವುದು. ಇದು ಒತ್ತಾಯಪೂರ್ವಕವಾಗಿ ಹೊರಗೆ ಬರುವುದು. ಇದು ಸಾಮಾನ್ಯ ಸಂಗತಿ. ಇದರ ಬಗ್ಗೆ ನೀವು ಮುಜುಗರಕ್ಕೆ ಒಳಗಾಗಬೇಕಿಲ್ಲ.

Most Read: ಸೆಕ್ಸ್ ಬಗ್ಗೆ ಇರುವ ಇಂತಹ ವಿಚಿತ್ರ ಸತ್ಯಗಳು ನಿಮಗೆ ಗೊತ್ತಿರಲಾರವು !

ವಾರಕ್ಕೆ ಐದು ಸಲ ಹಸ್ತಮೈಥುನ ಮಾಡಿಕೊಳ್ಳುವುದು ಸಾಮಾನ್ಯವೇ?

ವಾರಕ್ಕೆ ಐದು ಸಲ ಹಸ್ತಮೈಥುನ ಮಾಡಿಕೊಳ್ಳುವುದು ಸಾಮಾನ್ಯವೇ?

ಇದು ಸಾಮಾನ್ಯ ಮಾತ್ರವಲ್ಲದೆ ಆರೋಗ್ಯಕಾರಿ ಕೂಡ. ನಾವು ಪುರುಷರು ಮಾತ್ರ ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ಕೇಳಿದ್ದೇವೆ. ಆದರೆ ಮಹಿಳೆಯರು ಇದನ್ನು ಮಾಡುವುದಿಲ್ಲವೆಂದಲ್ಲ ಮತ್ತು ಮಾಡಲೇಬಾರದು ಎಂದೇನಿಲ್ಲ. 2009ರಲ್ಲಿ ಇಂಡಿಯಾನಾ ಯೂನಿವರ್ಸಿಟಿಯು ಪ್ರಕಟಗೊಳಿಸಿರುವ ನ್ಯಾಶನಲ್ ಸರ್ವೇ ಆಫ್ ಸೆಕ್ಸೂವಲ್ ಹೆಲ್ತ್ ಆ್ಯಂಡ್ ಬಿಹೇವಿಯರ್(ಎನ್ ಎಸ್ ಎಸ್ ಎಚ್ ಬಿ) ಪ್ರಕಾರ, ಶೇ.3ರಷ್ಟು ಮಹಿಳೆಯರು ವಾರದಲ್ಲಿ ಮೂರು ಸಲ ಹಸ್ತಮೈಥುನ ಮಾಡಿಕೊಳ್ಳುವರು. ಆದರೆ ಪುರುಷರಕ್ಕಿಂತ ಮಹಿಳೆಯರು ಹಸ್ತಮೈಥುನ ಕಡಿಮೆ ಯಾಕೆ ಮಾಡುವುದು ಎಂದು ತಿಳಿದಿಲ್ಲ. ಹಸ್ತಮೈಥುನದಿಂದ ಮನಸ್ಥಿತಿಯು ಸುಧಾರಣೆಯಾಗುವುದು ಮತ್ತು ಯೋನಿಯ ಬಲವು ಹೆಚ್ಚಾಗುವುದು.

ನಾನು ಸಲಿಂಗಿಯಲ್ಲದೆ ಇದ್ದರೂ ಸಲಿಂಗಿಗಳ ನೀಲಿಚಿತ್ರ ನೋಡುತ್ತೇನೆ

ನಾನು ಸಲಿಂಗಿಯಲ್ಲದೆ ಇದ್ದರೂ ಸಲಿಂಗಿಗಳ ನೀಲಿಚಿತ್ರ ನೋಡುತ್ತೇನೆ

ನೀಲಿಚಿತ್ರಗಳನ್ನು ನೋಡುವುದು ಮಹಿಳೆಯರಲ್ಲಿರುವ ಗುಪ್ತವಾಗಿ ಅಡಗಿರುವಂತಹ ಲೈಂಗಿಕ ಆಕಾಂಕ್ಷೆಗಳನ್ನು ನಿರೂಪಿಸಿದಂತಲ್ಲ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಟೊರಂಟೊ ಯೂನಿವರ್ಸಿಟಿಯ ಸೆಂಟರ್ ಫಾರ್ ಅಡಿಕ್ಷನ್ ಆ್ಯಂಡ್ ಮೆಂಟಲ್ ಹೆಲ್ತ್ ನ ವರದಿಯ ಪ್ರಕಾರ, ಪುರುಷರಲ್ಲಿನ ಪ್ರಚೋದನೆಯು ಅವರಲ್ಲಿನ ಲೈಂಗಿಕ ಆಕಾಂಕ್ಷೆಯನ್ನು ಸೂಚಿಸುತ್ತದೆ. ಆದರೆ ಇದೇ ವಿಚಾರವನ್ನು ಮಹಿಳೆಯರ ಬಗ್ಗೆ ಹೇಳುವಂತಿಲ್ಲ. ತಮ್ಮ ಲೈಂಗಿಕತೆಯ ಹೊರತಾಗಿ ಮಹಿಳೆಯರು ಭಿನ್ನಲಿಂಗಿಯ ಸೆಕ್ಸ್ ನ ನೀಲಿಚಿತ್ರ ಹಾಗೂ ಸಲಿಂಗಿ ನೀಲಿಚಿತ್ರದಿಂದ ಪ್ರಚೋದನೆಗೆ ಒಳಗಾಗುವರು.

English summary

these sex-related question women are too embarrassed to ask

We are sure most of the women out there must have many of their sex questions unanswered still, because of being too embarrassed to ask them. But hey, there's no need to feel embarrassed before asking questions related to sex, well because they are as important as sex itself. So, all you shy girls, here's some help at hand. We bring to you six sex-related issues for women with their answers.
Story first published: Friday, November 30, 2018, 17:29 [IST]
X
Desktop Bottom Promotion