For Quick Alerts
ALLOW NOTIFICATIONS  
For Daily Alerts

ಈ ನಾಲ್ಕು ರಾಶಿಚಕ್ರದವರು, ಸಂಬಂಧಗಳ ವಿಷಯದಲ್ಲಿ ಅತಿಯಾಗಿ ನಾಟಕ ಮಾಡುತ್ತಾರಂತೆ!

|

ಪ್ರತಿಯೊಬ್ಬರು ಪ್ರತಿ ದಿನ ತಮ್ಮ ಸಂಬಂಧಗಳಿಗೆ ಅನುಗುಣವಾಗಿ ಪಾತ್ರವನ್ನು ಬದಲಾಯಿಸುತ್ತಲೇ ಇರುತ್ತಾರೆ. ತಂದೆಯಾಗಿ, ಮಕ್ಕಳಾಗಿ, ತಾಯಿಯಾಗಿ, ಅಜ್ಜ-ಅಜ್ಜಿಯ ರೂಪದಲ್ಲಿ, ಸಹೋದರ ಸಹೋದರಿಯರಾಗಿ ಹಾಗೂ ಸ್ನೇಹಿತರಾಗಿ ಹೀಗೆ ಪಾತ್ರಗಳು ಮುಂದುವರಿಯುತ್ತಲೇ ಹೋಗುತ್ತವೆ. ಆದರೆ ಆ ಸಂಬಂಧಗಳಿಗೆ ನೀಡುವ ವರ್ತನೆ ಅಥವಾ ಪ್ರೀತಿ-ವಿಶ್ವಾಸಗಳು ದ್ರೋಹ ಎಸಗುವಂತಿರಬಾರದು ಅಥವಾ ಉತ್ಪ್ರೇಕ್ಷೆಯನ್ನು ಕೊಡಬಾರದು. ಆಗ ಸಂಬಂಧಗಳ ನಡುವೆ ವೈಮನಸ್ಸು ಹಾಗೂ ದ್ವೇಷ ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಬದಲಿಗೆ ಜೀವನವೂ ದುಃಖದಿಂದ ಸಾಗುವುದು.

ಸಾಮಾನ್ಯವಾಗಿ ಪತಿ-ಪತ್ನಿಯರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಉದ್ಭವಿಸುತ್ತವೆ. ಅಂತಹ ಸಂದರ್ಭದಲ್ಲಿ ಸೂಕ್ತ ರೀತಿಯ ನಿರ್ವಹಣೆ ಹಾಗೂ ಅದನ್ನು ಸಹಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿ ಇರಬೇಕು. ಆಗಲೇ ಸಂಬಂಧ ಸುಲಲಿತವಾಗಿ ಸಾಗುವುದು. ಆದರೆ ಕೆಲವರು ಬಹಳ ವಿಶ್ವಾಸ ತೋರುವ ವ್ಯಕ್ತಿಗಳಂತೆ ನಾಟಕ ಮಾಡುವರು.

ಇದರಿಂದ ತಿಳಿಯದೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ವ್ಯಕ್ತಿಗಳು ಸಂಬಂಧಗಳ ವಿಚಾರದಲ್ಲಿ ಅತಿಯಾದ ನಾಟಕ ಸ್ವಭಾವವನ್ನು ತೋರುವರು. ಅದು ಅವರು ತೋರಿಸುವ ಪ್ರೀತಿ ಹೆಚ್ಚಾಗಿದೆ ಎನ್ನುವ ಕಾರಣಕ್ಕೂ ಆಗಿರಬಹುದು. ಅವೆಲ್ಲವೂ ವ್ಯಕ್ತಿಯ ಗ್ರಹಗತಿಗಳ ಪ್ರಭಾವ ಹಾಗೂ ರಾಶಿಚಕ್ರದ ಪರಿಣಾಮದಿಂದ ಕೂಡಿರುತ್ತವೆ ಎನ್ನಲಾಗುವುದು. ನಿಮಗೆ ಈ ವಿಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲವಿದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ....

ಕರ್ಕ

ಕರ್ಕ

ಚಂದ್ರನ ಆಳ್ವಿಕೆಯ ಅಡಿಯಲ್ಲಿ ಬರುವ ರಾಶಿಚಕ್ರ ಇದು. ಹಾಗಾಗಿ ಇವರು ಭಾವನಾತ್ಮಕ ಜೀವಿಗಳು ಎನ್ನಬಹುದು. ಇದು ಅವರ ಸಂಬಂಧಗಳ ವಿಚಾರದಲ್ಲೂ ಹೆಚ್ಚು ಪ್ರಭಾವ ಬೀರುವುದು. ಇವರ ಭಾವನೆಗಳು ಸಂಬಂಧಗಳ ಮೇಲೆ ಅತಿಯಾದ ಒತ್ತಡ ಸೃಷ್ಟಿಸುವ ಸಾಧ್ಯತೆಗಳು ಇರುತ್ತವೆ.

Most Read: ಶ್ರೀಲಂಕಾದ ಗುಹೆಯೊಂದರಲ್ಲಿ ರಾವಣನ ದೇಹವು ಇಂದಿಗೂ ಇದೆ ಎನ್ನುವ ವದಂತಿ ಇದೆ!

ಕರ್ಕ

ಕರ್ಕ

ಸಂಗಾತಿಯೊಂದಿಗೆ ಅತಿಯಾದ ವಿನಯತೆಯ ನಾಟಕವನ್ನು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಇವರು ಮೊದಲು ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಹಾಗೂ ಅದನ್ನು ಶೋಧಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇದರಿಂದ ಸಂಬಂಧಗಳ ನಡುವೆ ನಾಟಕ ಮಾಡುವುದನ್ನು ತಪ್ಪಿಸಬಹುದು.

ಸಿಂಹ

ಸಿಂಹ

ಸಿಂಹ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಗಾಢವಾದ ಹಾಗೂ ಒರಟಾದ ಭಾವನೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಇವರು ತಮ್ಮ ಭಾವನೆಗಳನ್ನು ಆನಂದಿಸುತ್ತಾರೆ. ಹಾಗೆಯೇ ತಮ್ಮ ಪಾತ್ರ ನಿರ್ವಹಣೆಯನ್ನು ಸಹ ಅಷ್ಟೇ ಸುಲಭವಾಗಿ ನಿರ್ವಹಿಸುವರು. ಆದರೆ ಕೆಲವೊಮ್ಮೆ ತಮ್ಮ ಸಂಬಂಧಗಳ ನಡುವೆ ಅತಿಯಾದ ನಾಟಕವನ್ನು ಮಾಡುವರು. ಅದು ಇತರರಿಗೆ ಅಥವಾ ಸಂಗಾತಿಗೆ ತಪ್ಪಾದ ಮಾಹಿತಿಯನ್ನು ನೀಡುವುದು.

ಸಿಂಹ

ಸಿಂಹ

ಸಂಬಂಧದಲ್ಲಿ ಇರುವಾಗ ಕವನಗಳನ್ನು ಬರೆದು ಹೆಚ್ಚು ಉತ್ಪ್ರೇಕ್ಷೆ ಮಾಡುವುದರ ಮೂಲಕ ಗಮನ ಸೆಳೆಯುವರು. ಇವರು ತಮ್ಮ ಸಂಗಾತಿಯೊಂದಿಗೆ ನಾಟಕ ಮಾಡುವುದನ್ನು ನಿಲ್ಲಿಸಬೇಕು. ಬದಲಿಗೆ ಸಂಗಾತಿಯೊಂದಿಗೆ ಒಂದಿಷ್ಟು ಸಮಯವನ್ನು ಕಳೆಯುವ ಅಭ್ಯಾಸ ರೂಢಿಸಿಕೊಂಡರೆ ಸಂಬಂಧ ಉತ್ತಮವಾಗಿರುತ್ತದೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ವ್ಯಕ್ತಿಗಳು ಭಾವೋದ್ರಿಕ್ತ, ನಾಟಕೀಯ ಮತ್ತು ತೀಕ್ಷ್ಣವಾದ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಮಾಡುವ ನಾಟಕದಿಂದಾಗಿ ಸಂಗಾತಿಯು ಹೆಚ್ಚು ಉತ್ಸಾಹದಲ್ಲಿ ಇರುವ ಸಾಧ್ಯತೆಗಳಿರುತ್ತವೆ. ಈ ರಾಶಿಯ ವ್ಯಕ್ತಿಗಳು ಎಲ್ಲಾ ವಿಚಾರದಲ್ಲೂ ತಮ್ಮದೇ ಬಲವಾದ ನಿಯಂತ್ರಣ ಇರಬೇಕು ಎಂದು ಬಯಸುತ್ತಾರೆ.

Most Read: ಈ 7 ರಾಶಿಚಕ್ರದವರು ಕೋಪ ಮಾಡಿಕೊಳ್ಳುವುದು ಜಾಸ್ತಿ-ಆದಷ್ಟು ಇದನ್ನು ನಿಯಂತ್ರಿಸಿದರೆ ಒಳ್ಳೆಯದು

ವೃಶ್ಚಿಕ

ವೃಶ್ಚಿಕ

ಹಾಗಾಗಿ ಸಂಬಂಧಗಳಲ್ಲಿ ಅತಿಯಾದ ನಾಟಕವನ್ನು ಕೈಗೊಳ್ಳುವರು. ಇವರು ನಾಟಕವನ್ನು ಮಾಡದೆಯೇ ಸಂಬಂಧದಲ್ಲಿ ಪ್ರೀತಿ-ವಿಶ್ವಾಸವನ್ನು ಗೆಲ್ಲಬಹುದು ಎನ್ನುವುದನ್ನು ಅರಿತಾಗ ಜೀವನ ಸುಂದರವಾಗಿರುವುದು.

 ಧನು

ಧನು

ಈ ರಾಶಿಯ ವ್ಯಕ್ತಿಗಳು ತಮ್ಮದೇ ಆದ ನಾಟಕದ ವರ್ತನೆಯನ್ನು ಮಾಡುತ್ತಾರೆ. ಇವರು ಕೆಲವೊಮ್ಮೆ ತಮ್ಮ ನಾಟಕದಿಂದಲೇ ಕೆಲವು ವಿಚಾರಗಳ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳುವರು ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸುತ್ತಾರೆ. ಇವರು ಸಂಬಂಧಗಳಲ್ಲಿ ಒಮ್ಮೆ ಪರಿಪೂರ್ಣತೆಯನ್ನು ತೋರಿಸುವ ನಾಟಕ ಮಾಡಬಹುದು. ಅದೇ ಮರು ಕ್ಷಣದಲ್ಲಿಯೇ ಎಲ್ಲವನ್ನೂ ಬದಲಾದ ರೀತಿಯಲ್ಲೂ ತೋರಿಸುವ ಸಾಧ್ಯತೆಗಳಿರುತ್ತವೆ.

ಧನು

ಧನು

ಇವರು ಒಂದೇ ಸ್ಥಳದಲ್ಲಿ ಉಳಿಯುವುದು ಹಾಗೂ ಪಾಲುದಾರರ ಮೇಲೆ ಭರವಸೆಯನ್ನು ನೀಡುವುದರಿಂದ ನಾಟಕ ಮಾಡುವುದನ್ನು ತಪ್ಪಿಸಬಹುದು. ಆಗ ಆರೋಗ್ಯ ಪೂರ್ಣ ಸಂಬಂಧವನ್ನು ಹೊಂದುವರು. ಕೆಲವು ಸುಧಾರಣೆಯೊಂದಿಗೆ ಜೀವನದ ಆನಂದವನ್ನು ಪಡೆದುಕೊಳ್ಳುವರು.

English summary

These four Zodiac Signs That Are Most Over dramatic In Relationships

When it comes to relationships, it can sometimes be tricky to keep things into perspective. For example, arguments over where to go to dinner for date night are minuscule when looking at the bigger picture. However, it can be difficult for some people to remember this, and certain individuals may struggle with too much drama in a relationship, which may be due to their zodiac sign.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more