For Quick Alerts
ALLOW NOTIFICATIONS  
For Daily Alerts

ಈ 5 ರಾಶಿಚಕ್ರದವರು ಸಣ್ಣ-ಸಣ್ಣ ವಿಚಾರಕ್ಕೂ ತುಂಬಾನೇ ವಾದ ಮಾಡುತ್ತಾರಂತೆ!

|

ಸ್ವಾಭಿಮಾನ ಎನ್ನುವುದು ಕೆಲವರಿಗೆ ಅತಿಯಾಗಿ ಇರುತ್ತದೆ. ಅವರು ಸದಾ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಅವರು ತಾವು ಹೇಳುವ ವಿಚಾರವನ್ನು ಹೊರತು ಪಡಿಸಿ ಉಳಿದವರು ಹೇಳುವ ಸಂಗತಿಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಹಾಗೊಮ್ಮೆ ತಮ್ಮ ಅನಿಸಿಕೆ ಅಥವಾ ಅಭಿಪ್ರಾಯಕ್ಕೆ ಅನುಗುಣವಾಗಿ ಸಂಗತಿಗಳು ಹೋಗುತ್ತಿಲ್ಲ ಎಂದಾದರೆ ಬಹುಬೇಗ ಸಿಟ್ಟಿಗೆ ಅಥವಾ ಅತಿರೇಕದ ವರ್ತನೆ ತೋರಬಹುದು. ಒಟ್ಟಿನಲ್ಲಿ ತಮ್ಮ ವಾದ ಹಾಗೂ ಹಠಕ್ಕೆ ಪೂರ್ಣವಿರಾಮ ನೀಡುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದ ಕೆಲವು ರಾಶಿಚಕ್ರದ ವ್ಯಕ್ತಿಗಳ ವರ್ತನೆಗಳು ಹಾಗೆಯೇ ಇರುತ್ತವೆ. ಕಾರಣ ಅವರ ರಾಶಿಚಕ್ರಗಳನ್ನು ಆಳುವ ಗ್ರಹಗತಿಗಳ ಪ್ರಭಾವ ಇರುತ್ತವೆ. ಅವು ವ್ಯಕ್ತಿಯ ಭಾವನಾತ್ಮಕ ಗುಣ ಹಾಗೂ ವರ್ತನೆಗಳ ಆಧಾರದ ಮೇಲೆ ಪ್ರಭಾವ ಬೀರುತ್ತವೆ ಎನ್ನಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ವಾದದ ಸ್ವಭಾವ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ಅತಿ ಹೆಚ್ಚು ವಾದ ಮಾಡುವ ವ್ಯಕ್ತಿಗಳು ಎಂದು ಹೇಳಬಹುದು. ಇವರ ಪರವಾಗಿ ಯಾರಾದರೂ ಒಬ್ಬರು ನಿಂತಿದ್ದಾರೆ ಎಂದಾದರೆ ಇವರು ಆಂತರಿಕವಾಗಿ ಹೆಚ್ಚು ಹೆಮ್ಮೆಯನ್ನು ಪಡೆದುಕೊಳ್ಳುವುದರ ಮೂಲಕ ವಾದವನ್ನು ಮುಂದುವರಿಸುತ್ತಲೇ ಹೋಗುತ್ತಾರೆ. ತಾವು ಮಾತನಾಡುವ ಪರಿ ಅಥವಾ ವಿಚಾರ ಸೂಕ್ತವಾಗಿದೆಯೇ? ಇಲ್ಲವೇ? ಎನ್ನುವುದರ ಕುರಿತು ಕಿಂಚಿತ್ತೂ ಚಿಂತಿಸುವುದಿಲ್ಲ.

ವೃಶ್ಚಿಕ

ವೃಶ್ಚಿಕ

ಎದುರಿಗೆ ಮಾತನಾಡುವವರಿಗೆ ನೋವನ್ನುಂಟು ಮಾಡಿಯಾದರೂ ತಮ್ಮ ಮಾತುಗಳೇ ಅಥವಾ ವಾದಗಳೇ ಸೂಕ್ತವಾಗಿದೆ ಎಂದು ಮಾತನಾಡುತ್ತಾರೆ. ಹಾಗೊಮ್ಮೆ ಇವರ ವಾದ ಸೂಕ್ತ ವಾಗಿದ್ದು, ಎದುರಿಗಿರುವವರ ರೀತಿ ತಪ್ಪಾಗಿದೆ ಎಂದಾದರೆ ಅವರನ್ನು ಅಷ್ಟು ಬೇಗ ಕ್ಷಮಿಸುವುದಿಲ್ಲ ಎನ್ನಲಾಗುವುದು.

ವೃಷಭ

ವೃಷಭ

ಇವರು ಸ್ವಭಾವತಹ ಜಗಳಗಂಟರಲ್ಲ. ಇವರಿಗೆ ಇತರರೊಂದಿಗೆ ಜಗಳ ಅಥವಾ ವೈಮನಸ್ಸು ಹೊಂದಿವುದು ಎಂದರೆ ಅಷ್ಟು ಇಷ್ಟವಾಗದ ವಿಚಾರ ಎಂತಲೇ ಹೇಳಬಹುದು. ಆದರೆ ಇವರೊಂದಿಗೆ ಭಿನ್ನಾಭಿಪ್ರಾಯಗಳು ಎದುರಾದಾಗ ಸಾಕಷ್ಟು ವಾದ ಮಾಡುತ್ತಾರೆ.

Most Read:ನಿಮಗೆ ಗೊತ್ತೇ? ಮಶ್ರೂಮ್‌ನ್ನು ಔಷಧಿಗಳಲ್ಲಿಯೂ ಬಳಸುತ್ತಾರಂತೆ!

ವೃಷಭ

ವೃಷಭ

ತಾವು ಹೇಳಿದ ವಿಚಾರದಂತೆಯೇ ಸಂಗತಿಗಳು ಇರುತ್ತವೆ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ತಮ್ಮ ಮಾತು ಹಾಗೂ ನಂಬಿಕೆಗಳ ವಿಚಾರದಲ್ಲಿ ಬಹಳಷ್ಟು ಅಭಿಮಾನ ಹಾಗೂ ವಿಶ್ವಾಸವನ್ನು ಹೊಂದಿರುತ್ತಾರೆ. ಹಾಗಾಗಿ ಅದನ್ನು ಅವರು ಮುರಿಯದಂತೆ ವಾದಗಳನ್ನು ಮುಂದುವರಿಸುತ್ತಾರೆ.

ಸಿಂಹ

ಸಿಂಹ

ಈ ರಾಶಿಯ ವ್ಯಕ್ತಿಗಳ ವ್ಯಕ್ತಿತ್ವ ಬಹಳ ತೀಕ್ಷ್ಣವಾಗಿರುತ್ತದೆ. ಇವರು ಇತರರೊಂದಿಗೆ ಬಹುಬೇಗ ಸ್ನೇಹವನ್ನು ಗಳಿಸುವರು. ವಾದದ ವಿಚಾರ ಎದುರಾದಾಗ ಅವರು ದೊಡ್ಡ ಎದುರಾಳಿಯ ರೀತಿಯಲ್ಲಿ ವರ್ತಿಸಬಹುದು. ಭಿನ್ನಾಭಿಪ್ರಾಯಗಳು ಎದುರಾದಾಗ ಸುಲಭವಾಗಿ ಪರಿಹಾರ ಕಾಣದು.

ಸಿಂಹ

ಸಿಂಹ

ಇವರು ತೀವ್ರವಾದ ಪ್ರಚೋದನೆಗೆ ಒಳಗಾಗುವುದರ ಮೂಲಕ ವಾದವನ್ನು ಮುಂದುವರಿಸುತ್ತಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಮೂಲಕ ವಾದವನ್ನು ಮಂಡಿಸುತ್ತಾರೆ. ಕೆಲವೊಮ್ಮೆ ತಾವು ಹೇಳುವ ಸಂಗತಿಗೆ ಇತರರು ಬದ್ಧರಾಗಿರಬೇಕೆಂದು ಸಾಕಷ್ಟು ಪ್ರಯತ್ನ ಮಾಡುವರು.

ಕರ್ಕ

ಕರ್ಕ

ಈ ರಾಶಿಯ ವ್ಯಕ್ತಿಗಳು ಸ್ತಬ್ಧ ಮತ್ತು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಇವರ ಭಾವನೆಗಳು ಆಂತರಿಕವಾಗಿರುತ್ತವೆ. ಆದ್ದರಿಂದ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತದೆ. ಇವರು ಮೊಂಡುತನದ ವಾದವನ್ನು ಮಾಡುವರು. ತಮ್ಮ ಮಾತು ಕೇವಲ ತಮ್ಮ ಚಿಂತನೆಯ ಆವೃತ್ತಿಯಲ್ಲಿರುತ್ತವೆ ಎನ್ನುವುದನ್ನು ಲೆಕ್ಕಿಸದೆ ಮಾತನಾಡುತ್ತಲೇ ಇರುತ್ತಾರೆ.

Most Read:ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್

ಕರ್ಕ

ಕರ್ಕ

ಇತರರ ಬಗ್ಗೆ ಉತ್ತಮ ಕಾಳಜಿ ಹಾಗೂ ಸಹಾಯ ಮಾಡುವ ಪ್ರವೃತ್ತಿ ಇವರದ್ದಾದರೂ ವಾದಗಳ ವಿಚಾರಕ್ಕೆ ಬಂದರೆ ಅದು ಅತಿರೇಕದ ವಾದವಾಗಿರುತ್ತದೆ. ಹಾಗಾಗಿ ಇವರೊಂದಿಗೆ ವಾದ ಮಾಡುವ ಮುಂಚೆ ಸಾಕಷ್ಟು ಯೋಚಿಸಿ ವಾದಕ್ಕೆ ಇಳಿಯಬೇಕು.

ಮಿಥುನ

ಮಿಥುನ

ಈ ರಾಶಿಯ ವ್ಯಕ್ತಿಗಳು ಜಗಳಗಂಟರಲ್ಲ. ಆದರೆ ಇವರೊಂದಿಗೆ ಜಗಳ ಅಥವಾ ವಾದಕ್ಕೆ ಬಂದರೆ ಮಾತ್ರ ಸುಮ್ಮನೆ ಬಿಡುವ ವ್ಯಕ್ತಿಗಳಾಗಿರುವುದಿಲ್ಲ. ಅವರ ಮನಃಸ್ಥಿತಿಗೆ ಅನುಗುಣವಾಗಿ ತಮ್ಮ ಮಾತನ್ನು ಮುಂದುವರಿಸುತ್ತಾರೆ. ಹೆಚ್ಚು ಆತ್ಮವಿಶ್ವಾಸ ಹೊಂದಿರುವ ಈ ವ್ಯಕ್ತಿಗಳ ವಾದಗಳು ಎರಡು ಬಗೆಯ ತಿರುವನ್ನು ತೆಗೆದುಕೊಳ್ಳಬಹುದು. ಅವು ಇವರು ಯಾವ ರೀತಿಯಲ್ಲಿ ಚಿಂತಿಸುತ್ತಾರೋ ಆ ರೀತಿಯಲ್ಲಿಯೇ ಇರುತ್ತವೆ ಎಂದು ಹೇಳಬಹುದು.

ಮಿಥುನ

ಮಿಥುನ

ಇವರು ಸ್ನೇಹಿತರನ್ನು ಅಥವಾ ಬಂಧುಗಳೊಂದಿಗೆ ಬಹಳ ಆತ್ಮೀಯವಾದ ಸಂಬಂಧವನ್ನು ಹೊಂದಿರಬಹುದು. ಆದರೆ ವಾದಗಳ ವಿಚಾರ ಎದುರಾದರೆ ಅವರ ಮಾತುಗಳು ಹಾಗೂ ವಾದಗಳೇ ಮೇಲುಗೈ ಸಾಧಿಸುವುದು. ಅವರ ಚಿಂತನೆಗಳ ಪ್ರಕಾರ ವಾದ ತಿರುವನ್ನು ಪಡೆಯುವವರೆಗೂ ವಾದವನ್ನು ಮುಂದುವರಿಸುತ್ತಲೇ ಇರುತ್ತದೆ.

English summary

These five Zodiac Signs You're Arguing more

There are certain people in your life who you can talk to about anything, and then there are other people in your life who can make you feel like you're walking on eggshells when you're around them. You're not quite sure what to say when you're talking to them, because you know they have a tendency to be explosive, and no matter how much time you spend with them, you can't seem to put your finger on what their trigger is.
X
Desktop Bottom Promotion