For Quick Alerts
ALLOW NOTIFICATIONS  
For Daily Alerts

ಈ ಐದು ರಾಶಿಚಕ್ರದವರು ಹೆಚ್ಚು ಮೋಸ ಮಾಡುವ ಸಾಧ್ಯತೆಗಳಿರುತ್ತವೆಯಂತೆ!!

|

ಸಾಮಾನ್ಯವಾಗಿ ಎಲ್ಲರಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇದ್ದೇ ಇರುತ್ತವೆ. ಆದರೆ ಕೆಲವರು ತಮ್ಮಲ್ಲಿರುವ ಕೆಟ್ಟ ಗುಣಗಳಿಂದಲೇ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ಅದರಿಂದ ಇತರರಿಗೆ ನೋವುಂಟಾಗಬಹುದು ಎನ್ನುವ ಭಾವನೆಯನ್ನು ಹೊಂದಿರುವುದಿಲ್ಲ. ಅವರಿಗೆ ಕೇವಲ ತಮ್ಮ ಕೆಲಸವನ್ನು ಮಾಡಿಕೊಂಡರೆ ಸಾಕು ಎನ್ನುವಂತಹ ಮನಃಸ್ಥಿತಿ ಇರುತ್ತದೆ. ಹಾಗಾಗಿ ಮೋಸ ಮಾಡುವುದು ಎಂದರೆ ಅವರಿಗೆ ಒಂದು ಕಡ್ಡಿಯನ್ನು ಎತ್ತಿದಷ್ಟು ಸುಲಭದ ಸಂಗತಿಯಾಗಿರುತ್ತದೆ.

ಮೋಸ ಎನ್ನುವುದು ಸಾಮಾನ್ಯ ಸಂಗತಿಗಳಿಗೆ ಆದರೆ ವ್ಯಕ್ತಿ ಅಷ್ಟೇನು ಚಿಂತೆ ಮಾಡುವುದಿಲ್ಲ. ಆದರೆ ಸಂಬಂಧಗಳಲ್ಲಿ, ಲೈಂಗಿಕ ವಿಚಾರದಲ್ಲಿ ಮೋಸ ಮಾಡಿದರೆ ಅಥವಾ ಭಾವನೆಗಳೊಂದಿಗೆ ಆಟವಾಡಿದರೆ ಮನಸ್ಸಿಗೆ ಅತಿಹೆಚ್ಚು ನೋವುಂಟಾಗುವುದು. ಇಂತಹ ಕೃತ್ಯ ಅತ್ಯಂತ ಕೆಟ್ಟದ್ದು ಎಂದು ಹೇಳಬಹುದು. ಕೆಲವರು ಅತಿಯಾದ ಸ್ನೇಹ ಅಥವಾ ಡೇಟಿಂಗ್ ವಿಚಾರದಲ್ಲಿ ಸಂದೇಹ ಕಳಿಸುವುದರ ಮೂಲಕವೂ ಮೋಸ ಮಾಡುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅತಿಯಾಗಿ ಮೋಸ ಮಾಡುತ್ತಾರೆ. ಅದರಲ್ಲೂ ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದಂತೆ ಅವರು ಸಂದೇಶಗಳನ್ನು ಕಳುಹಿಸುವುದು, ಭಾವನೆಗಳೊಂದಿಗೆ ಆಟ ಆಡುವುದು ಅವರಿಗೊಂದು ಸಾಮಾನ್ಯ ಸಂಗತಿಯಂತಿರುತ್ತದೆ. ಅದನ್ನು ಅವರು ಬಲು ಸುಲಭವಾಗಿ ನಿರ್ವಗಹಿಸಬಲ್ಲರು. ಅವರಿಗೆ ಮೋಸ ಮಾಡುತ್ತಿದ್ದೇವೆ ಎನ್ನುವ ಯಾವುದೇ ಅಪರಾಧದ ಭಾವನೆ ಇರುವುದಿಲ್ಲ ಎಂದು ಹೇಳಬಹುದು. ಹಾಗಾದರೆ ಆ ರಾಶಿಚಕ್ರದವರು ಯಾರು? ಎನ್ನುವುದರ ಕುರಿತು ತಿಳಿದುಕೊಳ್ಳುವ ಕುತೂಹಲ ವಿದ್ದರೆ ಲೇಖನದ ಮುಂದಿನ ಭಾಗವನ್ನು ಓದಿ...

ಮಕರ

ಮಕರ

ಮಕರ ರಾಶಿಚಕ್ರದವರು ಭೂಮಿಯ ಚಿಹ್ನೆಯನ್ನು ಒಳಗೊಂಡಿರುತ್ತಾರೆ. ಇವರು ಮಹತ್ವಾಕಾಂಕ್ಷೆ ಉಳ್ಳವರು, ಶ್ರಮಜೀವಿಗಳು ಮತ್ತು ನಿಷ್ಠಾವಂತರು ಆಗಿರುತ್ತಾರೆ. ಇವರು ತಮ್ಮ ಕೆಲವು ಭಾವನೆಗಳ ಮೇಲೆ ಸ್ಥಿರತೆಯನ್ನು ಹೊಂದಿರಬೇಕಾಗುತ್ತದೆ. ಸಂಬಂಧಗಳ ವಿಚಾರದಲ್ಲಿ ವಾಡಿಕೆಯ ಅಗತ್ಯವಿದೆ ಎಂದು ಹೇಳಬಹುದು. ಇವರು ಒಳ್ಳೆಯ ಸಂಬಂಧಗಳನ್ನು ಸಾಂಪ್ರದಾಯಿಕವಾಗಿ ಕಾಣುತ್ತಾರೆ. ಮೇಲ್ನೋಟಕ್ಕೆ ಇವರು ನಿಷ್ಠಾವಂತರಂತೆ ಇರುತ್ತಾರೆ. ಆದರೆ ಇವರು ಅನೇಕ ವ್ಯಕ್ತಿಗಳೊಂದಿಗೆ ಡೇಟಿಂಗ್ ಹಾಗೂ ಸಂದೇಶ ರವಾನೆಗಳಂತ ಕೆಲಸದಲ್ಲಿ ದೊಡಗಿ, ಮೋಸ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎನ್ನಲಾಗುವುದು. ಈ ಕುರಿತಂತೆ ಕೆಲವು ಸಂಶೊಧನೆಗಳು ದೃಢಪಡಿಸಿವೆ.

Most Read: ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ದುರ್ಗಾ ದೇವಿಯ ಯಾವ ರೂಪವನ್ನು ಪೂಜಿಸಬೇಕು?

ಕುಂಭ

ಕುಂಭ

ಈ ರಾಶಿಯ ವ್ಯಕ್ತಿಗಳು ಅತ್ಯಂತ ಸ್ವತಂತ್ರರಾಗಿರಲು ಬಯಸುವರು. ಇವರ ಕೆಲಸ ಹಾಗೂ ನಿರ್ಧಾರಗಳ ಮೇಲೆ ಯಾವುದೇ ನಿಬರ್ಂಧಗಳನ್ನು ಹೊಂದಲು ಬಯಸುವುದಿಲ್ಲ. ಅದು ಸಂಬಂಧಗಳ ವಿಚಾರಕ್ಕೂ ಅನ್ವಯವಾಗುವುದು. ಸಂಬಂಧಗಳಲ್ಲೂ ನಿಖರವಾಗಿ ಕಟ್ಟಿಹಾಕಲು ಇಷ್ಟಪಡುವುದಿಲ್ಲ. ಹಾಗಾಗಿ ಇವರು ಅಧಿಕ ಮಂದಿಯೊಂದಿಗೆ ಭಾವನಾತ್ಮಕ ಸಂದೇಶ ಹಾಗೂ ಡೇಟಿಂಗ್ ಹೊಂದುವುದರ ಮೂಲಕ ಮೋಸ ಮಾಡುವ ಸಾಧ್ಯತೆಗಳು ಹೆಚ್ಚು ಎನ್ನಲಾಗುವುದು.

ಮೀನ

ಮೀನ

ಈ ರಾಶಿಯ ವ್ಯಕ್ತಿಗಳು ಪ್ರಣಯ ಪೂರಕ ಕನಸುಗಾರರು ಎಂದು ಹೇಳಲಾಗುವುದು. ಇವರು ತಮ್ಮ ಮನಸ್ಸಿನಲ್ಲಿ ನಿರ್ಮಿಸಿಕೊಂಡ ಬಣ್ಣದ ಲೋಕದಲ್ಲಿ ವಾಸಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ರಹಸ್ಯವಾದ ಸಂಬಂಧವನ್ನು ಹೊಂದುವುದರ ಮೂಲಕ ತಮ್ಮ ಬಣ್ಣದ ಲೋಕದಲ್ಲಿ ಮಿನುಗುವವರು. ಅದು ಸಂಬಂಧದಲ್ಲಿ ಮೋಸದ ದಾರಿಯಾಗಬಹುದು ಎಂದು ಹೇಳಲಾಗುವುದು. ಹಾಗಾಗಿ ಇತರರಿಗೆ ಭಾವನಾತ್ಮಕವಾಗಿ ಮೋಸ ಮಾಡುವ ವ್ಯಕ್ತಿಗಳ ಸಾಲಲ್ಲಿ ಇವರು ನಿಲ್ಲುವರು.

Most Read: ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ದುರ್ಗಾ ದೇವಿಯ ಯಾವ ರೂಪವನ್ನು ಪೂಜಿಸಬೇಕು?

ವೃಷಭ

ವೃಷಭ

ಹೆಚ್ಚು ಬಯಕೆಗಳನ್ನು ಹೊಂದಿರುವ ರಾಶಿಚಕ್ರದವರಲ್ಲಿ ಇವರು ಒಬ್ಬರಾಗಿರುತ್ತಾರೆ. ಇವರು ಸಹ ಭೂಮಿಯ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಪಾಲುದಾರರ ಜೊತೆ ಅಥವಾ ಸಂಬಂಧಗಳಲ್ಲಿ ನಿಷ್ಠ ಮತ್ತು ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಸತ್ಯದ ಹೊರತಾಗಿಯೂ ಇತರ ಸಂಬಂಧಗಳ ಜೊತೆ ಕೈ ಜೋಡಿಸುವ ರಾಶಿಚಕ್ರಗಳ ಸಾಲಿನಲ್ಲಿ ನಿಲ್ಲುತ್ತಾರೆ. ಇವರು ಭಾವನೆ ಹಾಗೂ ಸಂಬಂಧಗಳ ವಿಚಾರದಲ್ಲಿ ಇತರರಿಗೆ ಮೋಸ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು.

ಕರ್ಕ

ಕರ್ಕ

ಭಾವನಾತ್ಮಕ ವ್ಯಕ್ತಿಗಳು ಹಾಗೂ ಇತರರ ಕಷ್ಟವನ್ನು ಬಹುಬೇಗ ಅರ್ಥ ಮಾಡಿಕೊಳ್ಳುವ ವ್ಯಕ್ತಿಗಳು. ಇವರು ತಮ್ಮ ಕುಟುಂಬ ಹಾಗೂ ಸಂಗಾತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವರು. ಆದರೆ ಕೆಲವೊಮ್ಮೆ ಇವೆಲ್ಲದಕ್ಕೂ ವಿರುದ್ಧವಾಗಿ ಆಶ್ಚರ್ಯ ಮೂಡಿಸುವಂತಹ ಕೃತ್ಯವನ್ನು ಎಸಗಬಲ್ಲರು. ವೃಶ್ಚಿಕ ಮತ್ತು ಮಿಥುನ ರಾಶಿಯ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಂಬಂಧ ಹೊಂದಿರುತ್ತಾರೆ. ಇವರು ಇತರೊಂದಿಗೆ ಭಾವನಾತ್ಮಕ ಸಂಬಂಧ ಹಾಗೂ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎನ್ನಲಾಗುವುದು.

English summary

These Are The 5 Zodiac Signs Most Likely To Cheat

Many of us get tempted to cheat, but who's likely to actually go through with it? Whether you're into astrology or not, a person's zodiac sign can be very telling when it comes to everything from their career to their favorite sex position. And according to a new survey by Ashley Madison, the dating site for extramarital affairs, there are five zodiac signs who more likely to cheat over anyone else.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more