For Quick Alerts
ALLOW NOTIFICATIONS  
For Daily Alerts

ಈ 7 ರಾಶಿಚಕ್ರದವರು ಕೋಪ ಮಾಡಿಕೊಳ್ಳುವುದು ಜಾಸ್ತಿ-ಆದಷ್ಟು ಇದನ್ನು ನಿಯಂತ್ರಿಸಿದರೆ ಒಳ್ಳೆಯದು

|

ಕೋಪ ಎನ್ನುವುದು ಮನುಷ್ಯನ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಅತಿಯಾದ ಕೋಪಕ್ಕೆ ಒಳಗಾಗುವುದರಿಂದ ಮಾನಸಿಕ ನೆಮ್ಮದಿ ಹಾಗೂ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚೆಂದು ಹೇಳಲಾಗುವುದು. ಆದರೂ ವ್ಯಕ್ತಿ ಒಮ್ಮೆ ಕೋಪಕ್ಕೆ ಒಳಗಾದ ಎಂದರೆ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಕೋಪಕ್ಕೆ ಬಲಿಯಾದ ಎಂದರೆ ತಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡುವನು. ಸಾಮಾನ್ಯವಾಗಿ ಸಿಟ್ಟಿಗೆ ಒಳಗಾದ ವ್ಯಕ್ತಿ ಇತರರಿಗೆ ಕೆಟ್ಟದ್ದನ್ನೇ ಮಾಡುವನು.

ಕೋಪ ಬಂದಾಗ ಅದನ್ನು ನಿಯಂತ್ರಿಸುವ ಸಾಮರ್ಥ್ಯ ನಮ್ಮಲ್ಲಿ ಇರಬೇಕು. ಆದರೆ ಅದು ಬೆರಳೆಣಿಕೆಯ ಜನರಲ್ಲಿ ಇರುತ್ತದೆ ಎನ್ನಲಾಗುವುದು. ಶೀಘ್ರವಾಗಿ ಕೋಪಕ್ಕೆ ಒಳಗಾಗುವುದು ಎಂದರೆ ವ್ಯಕ್ತಿ ಬಹುಬೇಗ ನಿರಾಶೆಗೆ ಒಳಗಾಗುವುದು ಎಂದರ್ಥ. ರಾಶಿಚಕ್ರದ ಪ್ರಕಾರ ಕೆಲವು ರಾಶಿ ಚಕ್ರದವರು ಕೆಟ್ಟ ಉದ್ವೇಗ/ಸಿಟ್ಟಿಗೆ ಒಳಗಾಗುತ್ತಾರೆ ಎನ್ನಲಾಗುವುದು. ಅವರು ಸಿಟ್ಟಿಗೆ ಹೆಸರುವಾಸಿಯಾದ ವ್ಯಕ್ತಿಗಳಾಗಿರುತ್ತಾರೆ.

These 7 Zodiac Signs Are The Most Likely To Have Bad Tempers

ವ್ಯಕ್ತಿ ತನ್ನ ಸಿಟ್ಟಿನಿಂದಲೇ ಕೆಟ್ಟದ್ದನ್ನು ಮಾಡಿಕೊಳ್ಳುತ್ತಾನೆ. ಅವನ ಅತಿಯಾದ ಉದ್ವೇಗವು ಸುತ್ತಲಿನ ಜನರ ಮೇಲೆ ಪ್ರಭಾವ ಬೀರುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಳು ರಾಶಿಚಕ್ರದ ವ್ಯಕ್ತಿಗಳು ಅತಿಯಾದ ಕೆಟ್ಟ ಕೋಪವನ್ನು ಹೊಂದಿರುತ್ತಾರೆ. ಅವರ ಕೋಪವು ಅವರ ನಿಯಂತ್ರಣವನ್ನು ತಪ್ಪಿರುತ್ತದೆ. ಇವರು ಯಾವುದೇ ಸಂಗತಿಯ ಬಗ್ಗೆಯಾದರೂ ಸೂಕ್ತ ಚಿಂತನೆ ನಡೆಸಬೇಕು. ಆರೋಗ್ಯಕರ ರೀತಿಯಲ್ಲಿ ಹೇಗೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎನ್ನುವುದನ್ನು ಅರಿಯಬೇಕು. ಆಗ ಹೆಚ್ಚಿನ ನೆಮ್ಮದಿ ಹೊಂದಲು ಸಾಧ್ಯ. ಹಾಗಾದರೆ ಆ ಏಳು ರಾಶಿಚಕ್ರಗಳು ಯಾವವು? ಅವರ ಕೋಪದ ಸ್ಥಿತಿ ಹೇಗಿರುತ್ತವೆ? ಅದರ ನಿಯಂತ್ರಣಕ್ಕೆ ಹೇಗೆ ಸಿದ್ಧರಾಗಬೇಕು? ಎನ್ನುವುದನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಓದಿ...

ಮೇಷ

ಮೇಷ

ಈ ರಾಶಿಯ ವ್ಯಕ್ತಿಗಳು ಅತಿಯಾದ ಕೋಪವನ್ನು ಒಳಗೊಂಡಿರುತ್ತಾರೆ. ಇವರ ಕೋಪಕ್ಕೆ ಪ್ರಮುಖ ಕಾರಣ ಅವರನ್ನು ಆಳುವ ಗ್ರಹಗಳು ಎನ್ನಬಹುದು. ಮಂಗಳ ಗ್ರಹದ ಆಳ್ವಿಕೆಯನ್ನು ಹೊಂದಿರುವುದರಿಂದ ಭಾವನೆಗಳಲ್ಲಿ ಉದ್ವೇಗ ಅತಿಯಾಗಿ ಇರುತ್ತವೆ. ಈ ಗ್ರಹವನ್ನು ಯುದ್ಧದ ಗ್ರಹ ಎಂದು ಸಹ ಕರೆಯಲಾಗುವುದು. ಮೇಷ ರಾಶಿಯವರು ಪ್ರತಿಸ್ಪಂದಕ ಗುಣದೊಂದಿಗೆ ಸದಾ ಬಿಸಿಯಾದ ಸ್ವಭಾವದಲ್ಲಿಯೇ ಇರುತ್ತಾರೆ.

Most Read: ಈ 5 ರಾಶಿಚಕ್ರದವರು ಎರಡು ಬಗೆಯ ಚಿಂತನೆ ಕೈಗೊಳ್ಳುತ್ತಾರೆ, ಹಾಗೂ ತುಂಬಾನೇ ಸ್ವಾರ್ಥಿಗಳಾಗಿರುತ್ತಾರೆ!

ಮೇಷ

ಮೇಷ

ಇನ್ನು ಈ ರಾಶಿಯವರು ಸಿಟ್ಟಿಗೆ ಒಳಗಾದರೆ ಎದುರಿಗಿದ್ದ ವಸ್ತುಗಳನ್ನು ಹಳು ಮಾಡುವ ಸ್ವಭಾವ ಇವರದ್ದಾಗಿರುತ್ತದೆ. ಇವರು ತಮ್ಮ ದೌರ್ಬಲ್ಯ ಅಥವಾ ಸಿಟ್ಟಿನ ಸಂಗತಿಗಳನ್ನು ಅರಿತುಕೊಂಡರೆ ಉಂಟಾಗುವ ಅನಾಹುತಗಳನ್ನು ತಡೆಯಬಹುದು. ತಕ್ಷಣದಲ್ಲಿ ಪ್ರತಿಕ್ರಿಯಿಸುವ ಮೊದಲು ಚಿಂತನೆ ನಡೆಸಿ ತೀರ್ಮಾನ ಕೈಗೊಂಡರೆ ಸಿಟ್ಟು ನಿಯಂತ್ರಣದಲ್ಲಿ ಇರುತ್ತದೆ. ಅಲ್ಲದೆ ತಂಪಾದ ಭಾವನೆಯನ್ನು ಹೊಂದಲು ಇದು ಸುಲಭ ಮಾರ್ಗ ಇವರಿಗೆ ಎನ್ನಬಹುದು.

ವೃಷಭ

ವೃಷಭ

ಇವರು ಶಾಂತ ಮತ್ತು ಸ್ನೇಹಪರ ವರ್ತನೆಗೆ ಹೆಸರುವಾಸಿಯಾದ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಅದು ನಿಯಂತ್ರಣದಲ್ಲಿ ಇರುವುದಿಲ್ಲ. ಕೆಟ್ಟ ಕೋಪವನ್ನು ವ್ಯಕ್ತಪಡಿಸಬಲ್ಲರು. ಇವರ ಕೋಪವನ್ನು ಚಂಡಮಾರುತದ ರೀತಿಗೆ ಹೋಲಿಸಬಹುದು. ತಮ್ಮ ನಿರೀಕ್ಷೆ ಅಥವಾ ಭಾವನೆಗೆ ವಿರುದ್ಧವಾದ ಸಂಗತಿಗಳು ಉದ್ಭವಿಸಿದರೆ ಇವರ ಕೋಪ ಇವರ ನಿಯಂತ್ರಣದಲ್ಲಿ ಇರುವುದಿಲ್ಲ.

ವೃಷಭ

ವೃಷಭ

ಇವರಲ್ಲಿ ತಮ್ಮ ಸ್ವಭಾವವನ್ನು ತಾವೇ ಗುರುತಿಸಿಕೊಳ್ಳುವ ಸಾಮಥ್ರ್ಯವಿದೆ. ಇವರು ಸಾಮಾನ್ಯವಾಗಿ ಯಾವುದೇ ಕೆಲಸ ಕೈಗೊಳ್ಳುವ ಮೊದಲು ಚಿಂತನೆ ನಡೆಸುತ್ತಾರೆ. ಸಿಟ್ಟಿನ ವಿಚಾರದಲ್ಲೂ ಇದೇ ಪ್ರಕ್ರಿಯೆಯನ್ನು ಅನುಸರಿಸಿದರೆ ಸಾಕಷ್ಟು ಶಾಂತವಾದ ಸನ್ನಿವೇಶವನ್ನು ಎದುರಿಸಬಲ್ಲರು.

ಮಿಥುನ

ಮಿಥುನ

ಅವಳಿ ವ್ಯಕ್ತಿತ್ವವನ್ನು ಸೂಚಿಸುವ ಈ ಚಿಹ್ನೆಯ ವ್ಯಕ್ತಿಗಳು ತೀವ್ರವಾದ ಉದ್ವೇಗ/ಸಿಟ್ಟನ್ನು ಹೊಂದಿರುತ್ತಾರೆ ಎನ್ನಬಹುದು. ಇವರು ಸಿಟ್ಟಿಗೆ ಒಳಗಾದಾಗ ಅದು ಸಾಕಷ್ಟು ಹಾನಿಕಾರಕ ಹಾಗೂ ಚಿಂತನೀಯ ಸ್ಥಿತಿಯನ್ನು ಸೃಷ್ಟಿಸಬಹುದು.

ಮಿಥುನ

ಮಿಥುನ

ಒಂದು ಹಂತದಲ್ಲಿ ಅವರ ಚಿಂತನೆ ಹಾಗೂ ಭಾವನೆಗಳ ನಿಯಂತ್ರಣವು ಅಂಕೆಯನ್ನು ಮೀರಿರುತ್ತವೆ. ಇವರು ತಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಲು ಮಾರ್ಗವೆಂದರೆ ಸಿಟ್ಟಿಗೆ ಒಳಗಾದಾಗ ಆದಷ್ಟು ಹಾಸ್ಯಾಸ್ಪದ ವಿಚಾರಗಳಲ್ಲಿ ತೆರೆದುಕೊಳ್ಳುವುದು ಮತ್ತು ಪ್ರೀತಿ ಪಾತ್ರರೊಂದಿಗೆ ತಮಾಷೆ ಕೈಗೊಳ್ಳುವುದು ಉತ್ತಮ. ಇದು ಅವರ ಮನಸ್ಸಿಗೆ ಹೆಚ್ಚಿನ ಶಾಂತಿ ನೀಡುವುದು.

ಸಿಂಹ

ಸಿಂಹ

ಇವರು ಅಸಮಧಾನಕ್ಕೆ ಒಳಗಾದಾಗ ಆಶ್ಚರ್ಯಕರವಾದ ರೀತಿಯಲ್ಲಿ ಉದ್ವೇಗಕ್ಕೆ ಒಳಗಾಗುತ್ತಾರೆ. ಒಂದು ಹಂತದಲ್ಲಿ ಇವರು ಮೃದು ಹಾಗೂ ಸೌಮ್ಯವಾದ ವರ್ತನೆಯನ್ನು ತೋರುತ್ತಾರೆ. ಪರಿಸ್ಥಿತಿ ಅವರ ವಿರುದ್ಧವಾಗಿದೆ ಎಂದಾಗ ಬಹುಬೇಗ ಸಿಟ್ಟಿಗೆ ಒಳಗಾಗುವರು.

ಸಿಂಹ

ಸಿಂಹ

ಇವರು ತಮ್ಮ ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಕಷ್ಟು ವಿರಾಮವನ್ನು ಕೈಗೊಳ್ಳಬೇಕು. ವಿಷಯಗಳನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಬೇಕು. ಸಿಟ್ಟಿಗೆ ಒಳಗಾಗುವ ವಿಷಯಗಳು ಎದುರಾದಾಗ ಅದನ್ನು ನಿಭಾಯಿಸುವ ಸಾಮಥ್ರ್ಯವನ್ನು ಹೊಂದಿರಬೇಕು. ಆಗ ಪರಿಸ್ಥಿತಿಯನ್ನು ಸುಲಭವಾದ ರೀತಿಯಲ್ಲಿ ನಿರ್ವಹಿಸಬಲ್ಲರು. ಇನ್ನುತಾಳ್ಮೆಯಲ್ಲಿ ಇರಲು ಸಿಂಹ ರಾಶಿಯವರಿಗೆ ತುಂಬಾ ಸಮಸ್ಯೆಯಾಗುವುದು. ಇವರು ತುಂಬಾ ಜೋರು ಮತ್ತು ತೀವ್ರವಾಗಿರುವರು. ಸಣ್ಣ ಸಣ್ಣ ವಿಚಾರಗಳು ಇವರನ್ನು ಕೋಪಗೊಳಿಸುವುದು. ಉದಾಹರಣೆಗೆ ಸ್ನೇಹಿತರನೊಬ್ಬ ಸಿಂಹ ರಾಶಿಯವನಿಂದ ಶರ್ಟ್ ತೆಗೆದುಕೊಂಡು ಮರಳಿ ನೀಡುವಾಗ ಅದರಲ್ಲಿ ಸಣ್ಣ ಕಲೆ ಮಾಡಿದ್ದರೂ ಸಿಂಹ ರಾಶಿಯವರು ದೊಡ್ಡ ಮಟ್ಟದಲ್ಲಿ ಜಗಳವಾಡುವರು. ಸಾರ್ವಜನಿಕ ಸ್ಥಳದಲ್ಲೂ ಸಿಂಹ ರಾಶಿಯವರು ಸಣ್ಣ ವಿಚಾರವನ್ನು ದೊಡ್ಡದು ಮಾಡುವರು. ಇನ್ನು ಈ ರಾಶಿಚಕ್ರದವರು ತುಂಬಾ ಸಿಡಿದುಬೀಳುವವರು. ಇವರು ನಿಮ್ಮ ಗೆಳೆಯರಾಗಿದ್ದರೂ ಸಹಿತ ಒಂದು ವಿಧದಲ್ಲಿ ಇವರು ನಿಮ್ಮ ಶತ್ರುಗಳಾಗಿರುವರು. ನಿಮಗೆ ಅವರೊಂದಿಗೆ ಯಾವುದೇ ರೀತಿಯ ಮನಸ್ತಾಪವಿದ್ದರೆ, ಅದನ್ನು ಸುಲಭವಾಗಿ ಪರಿಹರಿಸ ಬಹುದಾಗಿದ್ದರೂ ಈ ರಾಶಿಯವರು ಮಾತ್ರ ಅದನ್ನು ಬಹುದೊಡ್ಡ ವಿಷಯವೆಂದು ವಾದಿಸುವರು.

ಕನ್ಯಾ

ಕನ್ಯಾ

ಇವರ ಸಿಟ್ಟು ಲೆಕ್ಕಾಚಾರದ ರೀತಿಯಲ್ಲಿ ಇರುವುದು. ಇವರು ತಮ್ಮ ಮಾತಿನಿಂದ ಇತರರಿಗೆ ಟೀಕೆ ಮಾಡುವುದು ಹಾಗೂ ಅವರು ತಲೆತಗ್ಗಿಸುವಂತೆ ಮಾಡುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಅಲ್ಲದೆ ಇತರರಿಗೆ ಆಳವಾದ ನೋವನ್ನುಂಟು ಮಾಡುವ ಶಕ್ತಿಯನ್ನು ಹೊಂದಿರುತ್ತಾರೆ. ಶಿಸ್ತು ಬದ್ಧರಾದ ಇವರು ಎಲ್ಲಾ ಸಂಗತಿಗೂ ಪ್ರತಿಕ್ರಿಯಿಸುವ ಅಗತ್ಯವಿರುವುದಿಲ್ಲ.

ಕನ್ಯಾ

ಕನ್ಯಾ

ಆದರೆ ಕೆಲವು ಸಂದರ್ಭದಲ್ಲಿ ಶೀಘ್ರ ಕೋಪಕ್ಕೆ ಒಳಗಾಗುತ್ತಾರೆ. ಇವರು ತಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಲು ಸಾಕಷ್ಟು ಕ್ರಮವನ್ನು ಕೈಗೊಳ್ಳಬೇಕು. ವಿಷಯಗಳನ್ನು ಸೂಕ್ತ ರೀತಿಯಲ್ಲಿ ಮರುಪರಿಶೀಲನೆ ಮಾಡುವ ಸ್ವಭಾವವನ್ನು ರೂಢಿಸಿಕೊಳ್ಳಬೇಕು. ಆಗ ಕನ್ಯಾ ರಾಶಿಯ ವ್ಯಕ್ತಿಗಳು ಹೆಚ್ಚು ಶಾಂತತೆಯಿಂದ ಉಳಿಯಬಹುದು. ಜೊತೆಗೆ ಸಂಬಂಧಗಳಲ್ಲಿ ಅಪಾರವಾದ ಸುಧಾರಣೆಯನ್ನು ಕಾಣಬಹುದು.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ವ್ಯಕ್ತಿಗಳು ಹೆಚ್ಚು ಕೋಪಕ್ಕೆ ಒಳಗಾಗುವ ಸ್ವಭಾವವದವರು. ಆದರೆ ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಈ ರಾಶಿಚಕ್ರದವರು ನಿಷ್ಕ್ರಿಯ ಆಕ್ರಮಣಕಾರಿ ವರ್ತನೆಯನ್ನು ತೋರುವ ವ್ಯಕ್ತಿಗಳು ಎಂದು ಹೇಳಲಾಗುವುದು. ಇವರು ತಮ್ಮ ಸ್ವಭಾವವನ್ನು ನೇರವಾಗಿ ತೋರಿಸದೆ ಇರಬಹುದು.

ವೃಶ್ಚಿಕ

ವೃಶ್ಚಿಕ

ಆದರೆ ಸಿಟ್ಟಿಗೆ ಒಳಗಾದರೆ ಅದರ ಪರಿಣಾಮ ಅತಿರೇಕವಾಗಿರುತ್ತದೆ. ಹಾಗಾಗಿ ಇವರು ತಮ್ಮ ಉದ್ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಸ್ವಂತ ಜೀವನಕ್ಕೆ ಸಂಪೂರ್ಣವಾದ ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು. ಸಿಟ್ಟಿನ ಸನ್ನಿವೇಶದಿಂದ ಹೊರ ಬರುವ ಪ್ರಯತ್ನ ಮಾಡಿದರೆ ಸಾಕಷ್ಟು ನಮಃಶಾಂತಿ ದೊರೆಯುವುದು.

ಮೀನ

ಮೀನ

ಸದಾ ಕನಸಿನ ಲೋಕದಲ್ಲಿ ಇರುವ ಈ ರಾಶಿಚಕ್ರದವರು ಕೆಟ್ಟ ಉದ್ವೇಗ/ಸಿಟ್ಟನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಅತೀಂದ್ರಿಯ, ಶಾಂತ ಮತ್ತು ಭಾವಪೂರ್ಣ ವ್ಯಕ್ತಿಗಳು. ಆದರೆ ಕೋಪದ ವಿಚಾರದಲ್ಲಿ ವೇಗದ ಸಂಕೇತವನ್ನು ಹೊಂದಿದ್ದಾರೆ. ಇವರ ನಿರೀಕ್ಷೆಯಂತೆ ವಿಷಯಗಳು ಸಾಗದೆ ಇದ್ದರೆ ಮತ್ತು ತಮ್ಮ ಅನಿಸಿಕೆಯಂತೆ ಕೆಲಸಗಳು ಪೂರ್ಣವಾಗದೆ ಇದ್ದರೆ ಅತಿಯಾದ ಕೋಪಕ್ಕೆ ಒಳಗಾಗುತ್ತಾರೆ.

ಮೀನ

ಮೀನ

ಇವರು ತಮ್ಮ ಸೂಕ್ಷ್ಮ ಭಾವನೆಗಳಿಗೆ ಹಾನಿಯುಂಟಾಗದಂತೆ ನೋಡಿಕೊಳ್ಳುವುದರಿಂದ ಕೋಪದ ನಿಯಂತ್ರಣವನ್ನು ಹೊಂದಬಹುದು. ಮಂತ್ರಗಳ ಪಠಣೆ, ಧ್ಯಾನ ಹಾಗೂ ಸನ್ನಿವೇಶಗಳಿಂದ ಬದಲಾವಣೆ ಕಾಣುವರು. ಇದು ಅವರಿಗೆ ಮಾನಸಿಕ ಸ್ಥಿತಿಯನ್ನು ಶಾಂತ ರೂಪದಲ್ಲಿ ಇಡಲು ಸಹಾಯ ಮಾಡುವುದು.

English summary

These 7 Zodiac Signs Are The Most Likely To Have Bad Tempers

When it comes to astrology, there are definitely a few zodiac signs that are known for their calm, level-headed demeanors, as well as a few signs that have surprisingly bad tempers. These are the folks who are quick to anger, who get frustrated easily, and who may say a thing or two they don't really mean, all in the heat of the moment.We're all entitled to a bad day — when it feels like everyone's rubbing us the wrong way, and we're super cranky as a result — but the signs with ongoing anger issuesmay want to look into ways to calm down; not only for their sake, but for everyone else's.
X
Desktop Bottom Promotion