For Quick Alerts
ALLOW NOTIFICATIONS  
For Daily Alerts

ನವೆಂಬರ್ ತಿಂಗಳ ಮುಂದಿನ ವಾರದಲ್ಲಿ ಈ 3 ರಾಶಿಚಕ್ರದವರಿಗೆ ಎಲ್ಲವೂ ಒಳ್ಳೆಯದಾಗಲಿದೆ!

|

ನವಂಬರ್ ತಿಂಗಳು ಎಂದರೆ ವರ್ಷದ ಅಂತಿಮ ಸಮಯಕ್ಕೆ ಕಾಲಿಡುತ್ತಿದ್ದೇವೆ ಎಂದರ್ಥ. ಸಾಮಾನ್ಯವಾಗಿ ಎಲ್ಲರೂ ಒಂದು ವರ್ಷದ ಅವಧಿಗೆ ಹಾಕಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಹೊಸ ವರ್ಷಕ್ಕೆ ಯಾವೆಲ್ಲಾ ಯೋಜನೆಯನ್ನು ಹೊಂದಬೇಕು ಎನ್ನುವ ಚಿಂತನೆಯಲ್ಲಿ ತೊಡಗಿರುತ್ತಾರೆ. ಸೂಕ್ತ ಯೋಜನೆ ಹಾಗೂ ಚಿಂತನೆಗಳನ್ನು ಹೊಂದಿದ್ದರೂ ಸಹ ಕೆಲವೊಮ್ಮೆ ನಮಗೆ ಕಾಡುವ ಅಡೆತಡೆಗಳು ಅಥವಾ ಅನಿರೀಕ್ಷಿತ ತೊಂದರೆಗಳಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಈ ಕಾರಣಗಳ ಹಿನ್ನೆಲೆಯಲ್ಲಿಯೇ ನಮ್ಮ ಯೋಜನೆಗಳು ಅಪೂರ್ಣಗೊಳ್ಳುವ ಸಾಧ್ಯತೆಗಳು ಇರುತ್ತವೆ.

ಒಂದರ್ಥದಲ್ಲಿ ನಾವು ಏನೇ ಯೋಜನೆ ಅಥವಾ ನಿರೀಕ್ಷೆಯನ್ನು ಹೊಂದಿದ್ದರೂ ಸಹ ಅದು ನಮ್ಮ ಎಣಿಕೆಯಂತೆ ಆಗುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಬಹುದು. ಏಕೆಂದರೆ ಪ್ರಪಂಚದ ಸೃಷ್ಟಿ ಹಾಗೂ ಸನ್ನಿವೇಶಗಳ ಆಗು ಹೋಗುಗಳು ನಮ್ಮ ಕಲ್ಪನೆಗೂ ಮೀರಿದ ಶಕ್ತಿಯಿಂದ ನಡೆಯುತ್ತದೆ ಎನ್ನುವುದು. ನಮ್ಮ ಗ್ರಹಗತಿಗಳು ಹಾಗೂ ನಕ್ಷತ್ರಗಳ ಚಲನೆಯ ಪ್ರಭಾವದ ಪರಿಣಾಮವಾಗಿ ನಾವು ಧನಾತ್ಮಕ ಹಾಗೂ ಋಣಾತ್ಮಕ ಫಲಿತಾಂಶವನ್ನು ಅನುಭವಿಸಬೇಕಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳು ಅಂದರೆ 2018ರ ನವೆಂಬರ್ ತಿಂಗಳ, ಮುಂದಿನ ವಾರದಲ್ಲಿ ಕೆಲವು ರಾಶಿಚಕ್ರದವರಿಗೆ ಸಾಕಷ್ಟು ಅನುಕೂಲಕರವಾದ ಪರಿಸ್ಥಿತಿ ಎದುರಾಗುವುದು. ಅವರು ಕೈಗೊಳ್ಳುವ ಕೆಲಸ ಕಾರ್ಯಗಳಿಗೆ ಯಾವುದೇ ಪರಿಶ್ರಮಕ್ಕೆ ಒಳಗಾಗದೆಯೇ ಯಶಸ್ಸು ದೊರೆಯುವುದು. ಅಲ್ಲದೆ ಹೊಸ ವರ್ಷದ ಯೋಜನೆಗಳಿಗೆ ಚಾಲನೆ ನೀಡಲು ಅಥವಾ ಸಿದ್ಧತೆ ಮಾಡಿಕೊಳ್ಳಲು ಸಹ ಸೂಕ್ತವಾದ ಸಮಯ. ಈ ಗಾಗಲೇ ಪೂರ್ಣಗೊಳಿಸಬೇಕಾಗಿರುವ ಕೆಲಸ ಕಾರ್ಯಗಳು ಅಥವಾ ಶುಭ ಕಾರ್ಯಗಳಿಗೆ ಉತ್ತಮವಾದ ಫಲಿತಾಂಶ ದೊರೆಯುವುದು. ಇರುವ ಹನ್ನೆರಡು ರಾಶಿಚಕ್ರಗಳಲ್ಲಿ ಕೇವಲ ಮೂರು ರಾಶಿಚಕ್ರದವರಿಗೆ ಈ ತಿಂಗಳು ಅತ್ಯುತ್ತಮವಾದ ಸಮಯ ಎನ್ನಲಾಗುವುದು. ಹಾಗಾದರೆ ಆ ಮೂರು ರಾಶಿಚಕ್ರದವರು ಯಾರು? ಅವರಿಗೆ ಯಾವೆಲ್ಲಾ ಬಗೆಯ ಅದೃಷ್ಟ ದೊರೆಯುವುದು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಕರ್ಕ

ಕರ್ಕ

ಈ ರಾಶಿಯವರಿಗೆ ಈ ತಿಂಗಳು/ನವೆಂಬರ್ ತಿಂಗಳು ದಿನದಿಂದ ದಿನಕ್ಕೆ ಅತ್ಯುತ್ತಮ ಸಮಯವನ್ನು ತಂದೊಡ್ಡುವುದು. ಸೂರ್ಯನು ವೃಶ್ಚಿಕ ರಾಶಿಯಲ್ಲಿ ಇರುವುದರಿಂದ ಮೋಜು, ಪ್ರೇಮ, ಮನೆ, ಸೃಜನಶೀಲತೆ ಸೇರಿದಂತೆ ಇನ್ನಿತರ ಕೆಲವು ಪ್ರಮುಖ ವಿಚಾರಗಳಲ್ಲಿ ಅತ್ಯುತ್ತಮ ಬೆಳಕು ಚೆಲ್ಲುವುದು. ನವೆಂಬರ್ 8 ರಂದು ಗುರುವು ಧನು ರಾಶಿಯನ್ನು ಪ್ರವೇಶಿಸುವನು.

ಕರ್ಕ

ಕರ್ಕ

ನಿಮ್ಮ ಪ್ರಾಯೋಗಿಕ ಮನೆಯಾದ ಆರೋಗ್ಯ, ಜವಾಬ್ದಾರಿಯ ವಿಚಾರ, ದೈನಂದಿನ ದಿನಚರಿ ಸೇರಿದಂತೆ ಇನ್ನಿತ ರಕೆಲಸ ಕಾರ್ಯಗಳಲ್ಲಿ ಸಮೃದ್ಧಿ ದೊರೆಯುವುದು. ಬುಧ ಗ್ರಹವು ಹಿಮ್ಮುಖ ಚಲನೆಯನ್ನು ಪಡೆದುಕೊಳ್ಳುವುದರಿಂದ ಅತ್ಯುತ್ತಮ ಅದೃಷ್ಟವನ್ನು ಪಡೆದುಕೊಳ್ಳುವಿರಿ. ಈ ತಿಂಗಳಲ್ಲಿ ಪ್ರಮುಖ ಗ್ರಹಗತಿಗಳು ಅತ್ಯುತ್ತಮ ಫಲಿತಾಂಶವನ್ನು ನೀಡುವುದರಿಂದ ತಿಂಗಳ ಪೂರ್ತಿ ಕರ್ಕ ರಾಶಿಯವರು ಅತ್ಯುತ್ತಮ ಅನುಭವ ಹಾಗೂ ಯಶಸ್ಸನ್ನು ಪಡೆದುಕೊಳ್ಳುವಿರಿ.

Most Read: ಎಲ್ಲಾ ವಿಚಾರದಲ್ಲೂ ಅತಿಯಾಗಿ ಚಿಂತನೆ ನಡೆಸುವ ರಾಶಿಯವರು

ಸಿಂಹ

ಸಿಂಹ

ಈ ತಿಂಗಳಲ್ಲಿ ಇವರು ಭಾವಿಸಿದಂತೆಯೇ ಎಲ್ಲವನ್ನೂ ಪಡೆದುಕೊಳ್ಳುವರು. ಗುರು ಗ್ರಹವು ಧನು ರಾಶಿಗೆ ಪ್ರವೇಶ ಪಡೆಯುವುದರಿಂದ ಐದನೇ ಮನೆಗೆ ಸಂಬಂಧಿಸಿದಂತೆ ವಿನೋದ, ಪ್ರಣಯ, ಸೃಜನ ಶೀಲತೆಯ ವಿಷಯದಲ್ಲಿ ಅತ್ಯುತ್ತಮ ಅನುಭವ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವರು. ನವೆಂಬರ್ 8ರ ನಂತರದ ದಿನದಲ್ಲಿ ಆಶ್ಚರ್ಯಕರ ಅನುಭವಗಳು ಹಾಗೂ ಯಶಸ್ಸನ್ನು ಸಹ ಪಡೆದುಕೊಳ್ಳುವರು.

ಸಿಂಹ

ಸಿಂಹ

ಗುರುವು ಅತ್ಯುತ್ತಮ ಪ್ರಭಾವ ನೀಡುವುದರಿಂದ ಗುರುವಿನ ಆಶೀರ್ವಾದಕ್ಕೆ ಪಾತ್ರರಾಗುವರು. ಕೆಲಸಕಾರ್ಯಗಳಲ್ಲಿ ಶಕ್ತಿಯನ್ನು ತೋರಿಸುವುದು ಹಾಗೂ ಉತ್ತಮ ಗುಣಮಟ್ಟದ ಫಲಿತಾಂಶವನ್ನು ಪ್ರದರ್ಶನ ಮಾಡುವಂತಹ ಸಾಮಥ್ರ್ಯ ಇವರಿಗೆ ದೊರೆಯುವುದು. ಕಲಾ ಕ್ಷೇತ್ರದಲ್ಲಿ ಸಾಧನೆ ಮತ್ತು ಯೋಜನೆ ಕೈಗೊಳ್ಳುವವರಿಗೆ ಅತ್ಯುತ್ತಮ ಸಮಯ ಇದು. ವರ್ಷದ ಅಂತ್ಯದ ವರೆಗೂ ಸೃಜನಾತ್ಮಕ ರಸವು ಇವರಲ್ಲಿ ತುಂಬಿರುತ್ತವೆ. ಅನಿರೀಕ್ಷಿತ ಯಶಸ್ಸು ಹಾಗೂ ಅದೃಷ್ಟವು ಜೀವನಕ್ಕೆ ಬೆಳಕನ್ನು ನೀಡುವುದು.

ಧನು

ಧನು

ಗುರು ಗ್ರಹವು ಇವರೊಂದಿಗೆ ಇರುವುದರಿಂದ ಇವರ ಸಾಕಷ್ಟು ಕನಸುಗಳು ಹಾಗೂ ಪ್ರಯಾಣದ ಯೋಜನೆಗಳು ಸರಳ ಹಾಗೂ ಸೊಗಸಾಗಿ ನೆರವೇರುವುದು. ಆಡಳಿತ ಗ್ರಹವಾದ ಗುರುವು ಧನುರಾಶಿಯಲ್ಲಿಯೇ ಇರುವುದರಿಂದ ಈ ತಿಂಗಳು ಅತ್ಯಂತ ಅದೃಷ್ಟ ಹಾಗೂ ಸಂತೋಷವನ್ನು ತಂದುಕೊಡುವ ಸಮಯ ಇದಾಗಿದೆ ಎನ್ನಲಾಗುವುದು. ಮುಂದಿನ 13 ತಿಂಗಳುಗಳ ಕಾಲ ಅದೃಷ್ಟ, ಸಮೃದ್ಧಿ ಮತ್ತು ವಿಸ್ತರಣೆಯನ್ನು ಗ್ರಹವು ಅನಂತವಾಗಿ ಆಶೀರ್ವಾದ ನೀಡುವುದು.

Most Read: ಈ ಮೂರು ರಾಶಿಚಕ್ರದವರು ತಮ್ಮ ನೋವು ಅಥವಾ ದುಃಖವನ್ನು ಪರರಿಗೆ ತಿಳಿಸಲು ಬಯಸುವುದಿಲ್ಲ!

ಧನು

ಧನು

ನಿಮಗೆ ಅಗತ್ಯವಾದ ವಿಚಾರದಲ್ಲಿ ಅಥವಾ ಕೆಲಸ-ಕಾರ್ಯಗಳಲ್ಲಿ ಯಶಸ್ಸು ಒದಗುವುದು. ನವೆಂಬರ್ 22ರ ಒಳಗೆ ಇವರು ಪ್ರಯಾಣ ಕೈಗೊಳ್ಳುವ ಯೋಜನೆಗಳಿದ್ದರೆ ಅದನ್ನು ಮುಂದುವರಿಸಬೇಕು. ನಂತರದ ದಿನದಲ್ಲಿ ಬುಧ ಗ್ರಹವು ಹಿಮ್ಮುಖ ಚಲನೆಯನ್ನು ಪಡೆದುಕೊಳ್ಳುವುದರಿಂದ ಪ್ರಯಾಣ ಕೈಗೊಳ್ಳುವ ಹವಣಿಕೆ ಇದ್ದರೆ 2-3 ಬಾರಿ ಯೋಚಿಸಿ ಕೈಗೊಳ್ಳಬೇಕಾಗುವುದು.

English summary

These 3 Zodiac Signs Will Have The Best November month in next week

November. Is that really you? Wow. we really can't help but feel like the last few months of 2018 are flying by; however, for those of you wondering, these three zodiac signs will have the best November 2018: Cancer, Leo, and Sagittarius. Now, by no means we upset to say goodbye to this brutal AF year, and we pretty sure we are not alone here. we kid you not, the amount of anxiety we had last year on New Year's Eve was beyond overwhelming.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more